ನನ್ನ ದನಿ
ವೀಣಾ ನಿರಂಜನ
‘ನಿನ್ನನ್ನು
ಬಂಧಿಸಲು ಆಜ್ಞೆಯಾಗಿದೆ.
ನೀನು ಯಾರು?’ ಕೇಳಿದರವರು
‘ನಾನು ಕವಿತೆ’ ಎಂದೆ.
ಅವರೆಂದರು –
‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’
ನಾನು ತಣ್ಣಗೆ ‘ಉಸಿರು’
ಎಂದೆ.
ಅವರು ಮತ್ತೆ
ನಿನ್ನ ಕತ್ತು ಹಿಸುಕಬೇಕು’ ಎಂದರು
ನನ್ನುಸಿರು ಗಾಳಿಯಲ್ಲಿ
ಬೆರೆತು ಹೋಗಿದೆ’ ಎಂದೆ!
ಅವರೀಗ ಗಾಳಿಯ ಜೊತೆ
ಗುದ್ದಾಡುತ್ತಿದ್ದಾರೆ !!
ಎಲ್ಲೋ ದೂರದಲ್ಲಿ
ಯಾರೋ ಅಳುವ ದನಿ
ನಾನು ತಟ್ಟಿ ಮಲಗಿಸುತ್ತಿದ್ದೇನೆ
ನನ್ನ ಮಗುವನ್ನು
ಎದೆಯ ಬೇಗುದಿಗೆ
ಸಾಂತ್ವನ ಹೇಳಬೇಕಿತ್ತಲ್ಲ!
**
ನಾನು ಮೌನಿಯಾಗಿದ್ದೆ.
ಅವರು ನನ್ನನ್ನು ಹೇಡಿ ಎಂದರು !
ನಾನು ಮಾತಾಡ ತೊಡಗಿದೆ
ಈಗ ಅವರು ನನ್ನನ್ನು
ದ್ರೋಹಿ ಎನ್ನುತ್ತಿದ್ದಾರೆ !!
ವೀಣಾ ನಿರಂಜನ
ತುಂಬಾ ಚೆನ್ನಾದ ಕವಿತೆ ವೀಣಾ
Very nice
ಕವಿತೆಯ ನಾಲಿಗೆ ಇನ್ನಷ್ಟು ಉಸುರಲಿ.
ಗಜಲ್
ಪ್ರಿಯೆ ನೀನಿಲ್ಲದಿದ್ದರೂ ನಾನು ಬದುಕಬಲ್ಲೆ
ಬದುಕೆಂಬ ವಿಷವ ಗಟಕ್ಕನೆ ಕುಡಿಯಬಲ್ಲೆ.
ಜನನಿಂದೆಗೆ ನೀನು ಕುಂದುವುದ ನೋಡಲೊಲ್ಲೆ
ವಿರಹದ ನೋವ ಸಂತಸದಿ ನಾನು ಸಹಿಸಬಲ್ಲೆ.
ದೂರದ ಮನೆಯಲಿದ್ದರೂ ಪ್ರೀತಿಯ ದೂರಲೊಲ್ಲೆ
ಬಾಳುವೆ ನಿನಗಾಗಿ ನಾನು ನೆನಪುಗಳ ಚಪ್ಪರದಲ್ಲೆ.
ವಿರಹ ದಳ್ಳುರಿಯಿಂದ ನೀನು ನನ್ನ ಸುಡಬಹುದು
ನಂದಿಸಿಬಿಡುವೆನದನು ಕಣ್ಣೀರ ಸಿಂಚನದಲ್ಲೆ.
ಅಂದದ ಕಣ್ಣುಗಳ ನೋಡುವಾಸೆ ಸಾಯಬಹುದು
ಖಾಸೀಮನ ಎದೆಯಲಿ ನೀನೇ ತುಂಬಿರುವೆಯಲ್ಲೆ.
ಎಸ್ಕೆ.