ಸ್ವಾತ್ಮಗತ

ನಾಳೆ ಬಪ್ಪುದು

Black and White Abstract Painting - Abstract Painting | Free ...

ಕೆ.ಶಿವುಲಕ್ಕಣ್ಣವರ

ಹಲವಾರು ಪಲ್ಲಟಗಳನ್ನು ಹೊಂದಿರುವ ‘ನಾಳೆ ಬಪ್ಪುದು’ ಎಂಬ ಹನುಮಂತ ಹಾಲಿಗೇರಿಯವರ ನಾಟಕವೂ..!

ಸಾಹಿತಿ ಹನುಮಂತ ಹಾಲಿಗೇರಿಯವರು ತಮ್ಮ ‘ಏಪ್ರಿಲ್ ಫೂಲ್’ ಕಥೆಗಳ‌ ಸಂಕಲನದ ‘ಏಪ್ರಿಲ್ ಪೂಲ್’ ಕಥೆಯನ್ನು ಆಧರಿಸಿ ‘ನಾಳೆ ಬಪ್ಪುದು’ ಎಂಬ ನಾಟಕವನ್ನು ಬರೆದಿದ್ದಾರೆ…

ಈ ನಾಟಕವನ್ನು ಓದುತ್ತಿದ್ದಂತೆ, ಇದು ಮುಖ್ಯವಾಗಿ ನಾಟಕಕಾರ ಹನುಮಂತ ಹಾಲಿಗೇರಿಯವರ ಫ್ಯಾಂಟಸಿ ನಾಟಕದಂತೆ ನನಗೆ‌ ಭಾಸಾವಾಯಿತು…
ಯಾರಿಗೆ ಗೊತ್ತು ಇದು ಮುಂದೆ ವಾಸ್ತವವಾಗಲೂಬಹುದು. ಇರಲಿ. ಮುಂದೆ ಈ ನಾಟಕದ ಹಂದರ ನೋಡೋಣ…

ಇಲ್ಲಿ ಮುಖ್ಯವಾಗಿ ನನಗೆ ಮೈತ್ರಿರಾವ್, ಈಕೆಯ ಗಂಡ ರಾಮು, ಮೈತ್ರಿರಾವ್ ಮಗಳು ಭೂಮಿರಾವ್, ‌ಮೈತ್ರಿರಾವ್ ಮಗ ದೀಪು ಮತ್ತು ಮೈತ್ರಿರಾವ್ ಸೊಸೆಯಾಗುವವಳು ಶರ್ಮಿಳಾರಾವ್ ಗಳ ಪಾತ್ರ ಮುಖ್ಯವಾಗಿ ಕಂಡವು. ಈ ಪಾತ್ರಗಳೇ ಈ ನಾಟಕದಲ್ಲಿ ಮುಖ್ಯವಾದವು ಮತ್ತು ಇವುಗಳ ಜೊತೆಗೆ ಅನೇಕಾನೇಕ ಪಾತ್ರಗಳೂ ಇಲ್ಲಿ ಬರುತ್ತವೆ…

ಇಲ್ಲಿ ಬರುತ್ತಿರುವ ಪಾತ್ರಗಳು ಒಂದು ಕಾಲದಲ್ಲಿ ಅಂದರೆ ಪ್ರಸ್ತುತ ಕಾಲದಲ್ಲೂ ಪುರುಷ ಪ್ರಧಾನ ಸಮಾಜದಲ್ಲಿ ಮುಖ್ಯವಾಗಿ ಕನಸ್ಸು ಕಾಣುತ್ತಿರುವುದು ಹನುಮಂತ ಹಾಲಿಗೇರಿಯವರ ಸ್ತ್ರೀ ಸಮಾನಾಂತರ ಸಮಾಜವನ್ನು.
ಪುರುಷರಿಗೆ ಸ್ತ್ರೀಯರು ಸಮಾನವಾಗಿ ಎಲ್ಲಾ ವಿಧದಲ್ಲೂ ಕಾಣಬೇಕೆನ್ನುವ ನಿಟ್ಟಿನಲ್ಲಿ ಹನುಮಂತ ಹಾಲಿಗೇರಿಯವರು ಈ ‘ನಾಳೆ ಬಪ್ಪುದು’ ಎಂಬ ನಾಟಕ ಹೆಣೆದಿದ್ದಾರೆ…

ಇಲ್ಲಿ ಬರುವ ಪಾತ್ರಗಳು ಮುಖ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಪುರುಷರು ಅದು ಹೇಗೆ ಸ್ತ್ರೀಯನ್ನು ಅಸಮವಾಗಿ ಕಾಣುತ್ತಾರೋ ಹಾಗೆಯೇ ನಾಳೆಯ ದಿನಗಳಲ್ಲಿ ಸ್ತ್ರೀಯರು ಪುರುಷರನ್ನು ಅಸಮವಾಗಿ ಕಾಣುವ ದೃಶ್ಯಗಳನ್ನು ನಾವು ಅಂದರೆ ನಾಟಕಕಾರ ಕಾಣುವ ಸಮಾಜವನ್ನೂ ಅಲ್ಲಗಳೆಯಲಾಗದು. ಅಂದರೆ ಇಲ್ಲಿ ಪುರುಷ ಮುಂದೊಂದು ದಿನ ಸ್ತ್ರೀಯೂ ಕಾಲಚಕ್ರದಲ್ಲಿ ಬದಲಾಗಿ ಈ ಪುರುಷರನ್ನು ಹಿಮ್ಮೆಟ್ಟಿಸಿ ಮುನ್ನಡೆಯಬಹದು‌ ಎಂಬ ಸಂದೇಶವನ್ನು ಪರೋಕ್ಷವಾಗಿ ಕೊಡುತ್ತಾರೆ…

ಇಲ್ಲಿ ಮುಂದೊಂದು ಕಾಲದಲ್ಲಿ ಬರುವ ಮತ್ತೊಂದು ಮುಖ್ಯ ಪಾತ್ರವಾದ ಬಾಪಣ್ಣ ಎಂಬ ಪುರುಷ ರಕ್ಷಣಾ ವೇದಿಕೆ ಅಧ್ಯಕ್ಷನದು. ಹೆಂಡತಿ ಮತ್ತು ಅತ್ತೆಯಿಂದ ಸಾಕಷ್ಟು ಶೋಷಣೆಗೆ ಒಳಗಾಗಿ ಮನೆಯಿಂದ ಹೊರಗೆ ದಬ್ಬಲ್ಪಟ್ಟ ನಂತರ ಅವರು ಸದರಿ ಸಂಘಟನೆ ಕಟ್ಟಿಕೊಂಡು ಪುರುಷನೇ ಈ ಪ್ರಕೃತಿಗೆ ಪ್ರಧಾನ ಎಂದು ವೇದ ಕಾಲದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕಾಲ ಬದಲಾದಂತೆ ಮಹಿಳೆಯರೇ ಅಧಿಕಾರ ಚುಕ್ಕಾಣಿ ಹಿಡಿದುಕೊಂಡು ಅಮಾಯಕ ಪುರುಷರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಎಲ್ಲ ಚರ ಮತ್ತು ಸ್ಥಿರಾಸ್ತಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ನಮ್ಮ ಪೂರ್ವಜ ಪುರುಷರು ಮಾಡಿದ ತಪ್ಪಗೆ ಸ್ತ್ರೀಯರು ಸಮಾಜದ ಎಲ್ಲ ಪುರುಷರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆಂಬಲ್ಲಿಯಿಂದ ಹಿಡಿದು ಒಟ್ಟಾರೆ ಸಮಾಜದಲ್ಲಿ ಸ್ತ್ರೀಯರು ಪುಷರನ್ನು ಹಿಂಸಿಸಿಸುತ್ತಿದ್ದಾರೆಂಬಲ್ಲಿಯ ವರೆಗೆ ಬಾಪಣ್ಣ ಹೇಳುತ್ತಾನೆ ಮತ್ತು ವೇದ ಕಾಲದ ಗುಣಗಾನ ಮಾಡುತ್ತಾನೆ. ಅಲ್ಲದೇ ಸ್ತ್ರೀ ಕಾಲವನ್ನು ದೂಷಿಸುತ್ತಾನೆ…

ಬಾಪಣ್ಣನದು ಒಂದು ಮನವಿ ಇದೆ. ಅದೆಂದರೆ ಹೆಂಗಸರಿಗೆ ಸಮಾನವಾಗಿ ಪುರುಷರಿಗೆ ಶಿಕ್ಷಣ ಹಕ್ಕು, ಆಸ್ತಿ ಹಕ್ಕು ಇತ್ಯಾದಿ ಹಕ್ಕುಗಳನ್ನು ನೀಡುವವರೆಗೆ ತಮ್ಮ ಹೋರಾಟ ನಡೆದಿರುತ್ತದೆ ಎಂಬುದು ಬಾಪಣ್ಣನ ಹಕ್ಕೊತ್ತಾಯವಾಗಿರುತ್ತದೆ…
ಹೀಗೆಯೇ ಪುರುಷರ ಕಾಲದ ಕನಸಿನ ಮನವರಿಕೆಯ ಹಕ್ಕೊತ್ತಾಯವೂ ಆಗಿರುತ್ತದೆ

ಮತ್ತದೇ ಮುಂದೊಂದು ಕಾಲದಲ್ಲಿ ಈ ಸ್ತ್ರೀಯರ ಕಾಲವನ್ನು ಮೈತ್ರಿರಾವ್ ಕನಸ್ಸಿನಲ್ಲಿ ಕಂಡವರಂತೆ ಶಿರಸಾವಸಿ ಪಾಲಿಸಿಕೊಂಡು ಬಂದವಳು. ಮತ್ತು ಅಂತೆಯೇ ತನ್ನ ಜೀವನದಲ್ಲೂ ಅಳವಡಿಸಿಕೊಂಡವಳು. ತನ್ನ ಗಂಡ ರಾಮುನನ್ನು ತನ್ನ ಅಂಕೆಯಲ್ಲೇ ಇಟ್ಟುಕೊಂಡು, ಸ್ತ್ರೀ ದಬ್ಬಾಳಿಕೆಯನ್ನು ನಡೆಸುತ್ತಲೇ ಬಂದವಳು. ಅಂತೆಯೇ ಮೈತ್ರಿರಾವ್ ತನ್ನ ಮಗಳು ಭೂಮಿರಾವ್ ಳನ್ನೂ ಬೆಳೆಸಿದವಳು.
ಮಗ ದೀಪು ತನ್ನಪ್ಪ ರಾಮುನಂತೆಯೇ ಇಲ್ಲಿ ಸ್ತ್ರೀ ಪ್ರಧಾನ ಸಮಯದಲ್ಲಿ ದೀಪು ಕೂಡ ಸ್ತ್ರೀ ದಬ್ಬಾಳಿಕೆ ಅನುಭವಿಸಿದನು.
ಮೈತ್ರಿರಾವ್ ಮಗಳು ಭೂಮಿರಾವ್ ಮಾತ್ರ ತನ್ನ ತಾಯಿ ಮೈತ್ರಿರಾವ್ ಳಂತೆ ಬೆಳೆದವಳು ಮತ್ತು ಸ್ತ್ರೀ ಪ್ರಧಾನವಾಗಿ ಈ ಸಮಾಜವನ್ನು ನೋಡುವವಳು.
ಮೈತ್ರಿರಾವ್ ಸೊಸೆಯಾಗುವವಳು ಶರ್ಮಿಳಾರಾವ್ ಕೂಡ ಮೈತ್ರಿರಾವ್ ಳಂತೆಯೇ ಇರಬೇಕೆಂಬುದು ಮೈತ್ರಿರಾವ್ ಕನಸ್ಸು…

ಹೀಗೆ ಸಾಗುವ ಈ ನಾಟಕ ಹಂದರ ಒಂದು ಕನಸ್ಸನ್ನು ಹುಟ್ಟು ಹಾಕುತ್ತದೆ. ಈ ಸುಂದರ ಭೂಮಿಯಲ್ಲಿ ಗಂಡು-ಹೆಣ್ಣು ಸಮವಾಗಿ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯು ಒಡಮೂಡಿಸುತ್ತದೆ.
ಗಂಡು-ಹೆಣ್ಣು ಸಮವಾಗಿ ಬದಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಏಳುಸುತ್ತದೆ.
ಅದು ಸಾಧ್ಯವಿದೆ ಆದರೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ‘ಮನುವಾದ’ವಾದದ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪುರುಷ ಪ್ರಾಧಾನ್ಯತೆಯ ಮನವರಿಕೆ ಆಗಿ ಹೆಣ್ಣು-ಗಂಡು ಸಮವಾಗಿ ಬಾಳಿದರೆ ಮಾತ್ರ ಎಂಬ ಅರಿವನ್ನು ಈ ನಾಟಕ ಮೂಡಿಸುತ್ತದೆ…

ಅನಾದಿ ಕಾಲದಿಂದ ಹೆಣ್ಣು ಹುಟ್ಟಿದಾಗ ತಂದೆಯ ಆಶ್ರಯದಲ್ಲಿ, ದೊಡ್ಡವಳಾಗಿ ಮದುವೆ ಆಗುತ್ತಿದಂತೆ ಗಂಡನ ನೆರಳಲ್ಲಿ, ಮುದುಕೆಯಾಗುತ್ತಿದ್ದಂತೆ ಮಕ್ಕಳ ಆಶ್ರಯದಲ್ಲಿ ಬದುಕು ಸಾಗಿಸಬೇಕೆಂಬ ಅನ್ನುವ ದುರಾಲೋಚನೆಯ ಗಂಡಸರು ಮನುಶ್ಯಾಸ್ತ್ರ, ವೇದ, ಉಪನಿಷತ್ತು, ಪುರಾಣಗಳಲ್ಲಿ ಹೇಳುತ್ತಲೇ ಬಂದವು‌ ಸ್ಬಾರ್ಥ ಈ ಗಂಡು ಪ್ರಧಾನ ಗ್ರಂಥಗಳು.
ಹೆಣ್ಣನ್ನು ಕಪಟಿ, ಮೋಸಗಾತಿ, ಮಾಯೆ, ಅಬಲೆ ಎಂಬ ಋಣಾತ್ಮಕತೆಯನ್ನು ಅಂಟಿಸಿಬಿಟ್ಟವು ಆ ಮನುವಿನ ಮಕ್ಕಳು. ಹೆಣ್ಣು ಒಂದು ವೇಳೆ ಬೀದಿಪಾಲಾದರೆ ಆ ಹೆಣ್ಣಿನ ಪರಿಸ್ಥಿತಿಯಂತೂ ಊಹಿಸಲೂ ಆಗದು…

ಹಾಗಾಗಿಯೇ ಹೆಣ್ಣು ಬಾಯಿ ಮುಚ್ಚಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ಬದುಕಬೇಕಾಗಿತ್ತು. ಆದರೆ ಕಾಲ ಚಕ್ರ ಬದಲಾ ಒಂದೇ ತರಹವಿರುದಿಲ್ಲ. ಈ ಕಾಲ ಚಕ್ರ ಉರುಳುತ್ತಿದ್ದಂತೆ ಬದಲಾಯಿತು ಸಮಾಜ. ಹೆಣ್ಣು ಗಟ್ಟಿಯಾದ ಧ್ವನಿಯಲ್ಲಿ ಪ್ರಶ್ನಿಸತೊಡಗಿದಳು ಈ ಮೊದಲಿನ ಸಮಾಜವನ್ನು. ಅಕ್ಷರಾಭ್ಯಾಸ ಮಾಡತೊಡಗಿದಳು. ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಡತೊಡಗಿದಳು.


ಹಾಗೆಯೇ ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಂಡಳು. ಪರಿಣಾಮವಾಗಿ ಬಿಬಿಪಿ ಪಕ್ಷ ಕಟ್ಟಿಕೊಂಡು ಆ ಮುಖೇನ ರಾಜಕಾರಣಕ್ಕೂ ಇಳಿದಳು.ಕಾಲಕ್ರಮೇಣ ಬದಲಾಯಿತು ಸಮಾಜ. ಮಹಿಳೆಯರು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದಂತೇ ಈ ಮಹಿಳೆಯರಿಗೂ ಮದವೇರಿತು ಪುರುಷರನ್ನು ಕಾಲಕಸ ಮಾಡಿಕ್ಕೊಂಡನಾಟಕ ಈ ಮಹಿಳಾ ಮಣಿಗಳ ಪಿತ್ತವೂ ನೆತ್ತಿಗೇರಿದಂತೆ ಮೈತ್ರಿರಾವ್ ಪಾತ್ರ ಕುಣಿಯಲಾರಂಭಿಸಿತು…

ಹೀಗೆ ಈ ನಾಟಕ ‘ನಾಳೆ ಬಪ್ಪುದು’ ಎಂಬುದನ್ನು ಸಾಹಿತಿ ಹನುಮಂತ ಹಾಲಿಗೇರಿಯವರು ಸಾಧರಪಡಿಸುತ್ತಾರೆ….

ಹೀಗೆ ಶಿಲಾಯುಗ, ವೇದಕಾಲ, ವರ್ತಮಾನ ಕಾಲ ಮತ್ತು ಭವಿಷ್ಯದ ಹೊಳವನ್ನು ಹೊಂದಿರುವ ಮಹಿಳೆಯರ ಕಾಲದ ಪಲ್ಲಟಗಳಿಂದ ಈ ನಾಟಕ ಕೂಡಿದೆ…

*******

Leave a Reply

Back To Top