Category: ಅಂಕಣ

ಅಂಕಣ

ಕೃಷ್ಣಮೂರ್ತಿ ಹೆಗಡೆ ಪ್ರತಿಷ್ಠಿತ “ಶಿಂತ್ರಿ ಬಿಲ್ಡಿಂಗ್” ನಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದ. ಇತರ ಬ್ರಾಹ್ಮಣ ಹುಡುಗರು ಸಪ್ತಾಪುರ ಇತ್ಯಾದಿ ಕಡೆಗಳಲ್ಲಿ ರೂಮು ಪಡೆದಿದ್ದರು. ಒಮ್ಮೆಯಂತೂ ಅವರಲ್ಲಿ ಯಾರೋ ತನ್ನ ಕುರಿತು ಸಲ್ಲದ ಮಾತನಾಡಿದರೆಂದು ಕೋಪಗೊಂಡ ಕೃಷ್ಣಮೂರ್ತಿ ಹೆಗಡೆ ರಾತ್ರಿ ವೇಳೆ ಅವರ ರೂಮಿಗೆ ಹೋಗಿ ರಂಪ ಮಾಡಿದ ಸಂಗತಿ ಮರುದಿನ ಕನ್ನಡ ವಿಭಾಗದಲ್ಲಿಯೇ ಚರ್ಚೆಯ ಸಂಗತಿಯಾಗಿತ್ತು!

ಯಾರ ಬದುಕೂ ಮತ್ತೊಬ್ಬರದರಂತೆ ಇರಲು ಸಾಧ್ಯವಿಲ್ಲ. ನಾವು ಅವರಂತಾಗಬೇಕು, ಇವರಂತಿರಬೇಕೆಂದು ಒದ್ದಾಡುವುದು ಏಕೆ? ನಮಗೆ ದೊರೆತ ಬದುಕನ್ನು ಚೆಂದ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತದೆ.

ದಿನ ದಿನವೂ ಏಕವ್ಯಕ್ತಿ, ಬಹಪಾತ್ರ. ನಾಟಕದ ರಂಗದಲ್ಲಿ, ಪ್ರೀತಿ, ನೋವು, ಮಮತೆ, ಕಷ್ಟ, ಸಂಘರ್ಷ ಎಲ್ಲವನ್ನೂ ಅನುಭವಿಸಿ, ಹಣ್ಣಾಗುವ ಹಣ್ಣಿನ ಸಿಹಿ ಮಾತ್ರ ಹಂಚುವ ಸ್ತ್ರೀ ಜನ್ಮಕ್ಕೆ ಮಾತ್ರ ‘ಸಿರಿ’ಯಾಗಲು ಸಾಧ್ಯ. ಅದು ಆಕೆಗೆ ನಿಜಜೀವನದಷ್ಟೇ ಸಹಜ.

ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—34 ಆತ್ಮಾನುಸಂಧಾನ ಹಾಸ್ಟೆಲ್ ಊಟದಲ್ಲಿ ಮೈತುಂಬಿಕೊಂಡೆ ‘ಶಾಲ್ಮಲಾ ಹಾಸ್ಟೆಲ್‌ನ ಊಟದ ವ್ಯವಸ್ಥೆ ತುಂಬ ಸೊಗಸಾಗಿತ್ತು. ದಿನವೂ ಒಂದೊಂದು ಬಗೆಯ ಕಾಳು-ಕಡಿಯ ಬಾಜಿ, ಸೊಪ್ಪಿನ ಪಲ್ಯ, ಹಸಿ ತರಕಾರಿಯ ಕೋಸಂಬರಿ, ದಿನಕ್ಕೊಂದು ವಿಧದ ಚಟ್ನಿ, ಕೆನೆ ಮೊಸರು, ರೊಟ್ಟಿ ಇಲ್ಲವೆ ಚಪಾತಿ, ಬಯಸಿದಷ್ಟೂ ಅನ್ನ…. ಇತ್ಯಾದಿಗಳಿಂದ ಊಟವು ಸಮೃದ್ಧವಾಗಿರುತ್ತಿತ್ತು. ರವಿವಾರದಂದು ವಿಶೇಷ ಸಿಹಿ ತಿನಿಸು ಪೂರೈಕೆಯಾಗುತ್ತಿತ್ತು.                 ಇತರ ವಿದ್ಯಾರ್ಥಿಗಳ ಮಾತು ಅಂತಿರಲಿ, ನನಗೂ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಇಲ್ಲಿನ ಊಟದ […]

ಇಲ್ಲಿರುವ ಮಾತೃರೂಪೀ ಸಂಸ್ಕೃತಿ, ಕುಟುಂಬ ರಚನೆ ಹೆಣ್ಣಿನ ಅನನ್ಯತೆಗೆ ದೊಡ್ಡ ಕೊಡುಗೆ ನೀಡಿದೆ. ಅವೆಲ್ಲವೂ ಈ ಪಾಡ್ದನಗಳಲ್ಲಿ ಹರಡಿಕೊಂಡಿದೆ. ಹೆಚ್ಚಿನ ಪಾಡ್ದನಗಳು ದುರಂತ ವಸ್ತುವನ್ನು ಹೊಂದಿರುತ್ತದೆ. ಎಲ್ಲವೂ ತುಳುವರಿಗೆ ಬಲು ಆಪ್ತ. ಇವೆಲ್ಲದರಿಂದ ” ಸಿರಿ” ಎಂಬ ಪದವೇ ನನ್ನೊಳಗೊಂದು ಆಕರ್ಷಣೆಯ ಮೂಲ ಬೀಜಮಂತ್ರವಾಗಿ ಅರಿವಿನ ಕ್ಷೇತ್ರ ವಿಸ್ತರಿಸುವ ಮುನ್ನವೇ ಬಿತ್ತನೆಯಾಗಿತ್ತು

ಒಬ್ಬ ವೃದ್ಧರು ಹಣ್ಣಿನ ಸಸಿ ನೆಡುವಾಗ, ‘ಇದು ಮರವಾಗಿ ಫಲ ಬಿಡುವಾಗ ತಿನ್ನಲು ನೀವೇ ಇರುವುದಿಲ್ಲವಲ್ಲ ಮತ್ತೇಕೆ ಶ್ರಮ?!’ ಎಂದು ಕೇಳಿದವರಿಗೆ, ‘ನಾನು ಫಲ ತಿಂದ ಮರಗಳನ್ನೂ ಸಹ ಯಾರೋ ಹಿರಿಯರು ನೆಟ್ಟಿದ್ದು’ ಎಂದು ಉತ್ತರಿಸಿದ ಆ ಹಿರಿಯರ ಸಂಯಮದ ತಿಳುವಳಿಕೆ ನಮ್ಮದಾಗಬೇಕು. ಶ್ರದ್ಧೆ ಸಂಯಮವು ಬಾಳಿನ ಸಮತೋಲನಕ್ಕೆ ಮಾರ್ಗವಾಗಬೇಕು… ತಾಳ್ಮೆ ಸಕಾರಾತ್ಮಕ ಬೆಳಕಾಗಿ ದಾರಿ ತೋರಬೇಕು.

ಇದ್ದ ಬದ್ದ ವಸ್ತ್ರ, ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ ನಿಂತು ನಾನು ಹೋಗಿ ಸೇರಿಕೊಳ್ಳಬೇಕಾದ ಮೊದಲ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯ “ಶಾಲ್ಮಲಾ ಹಾಸ್ಟೆಲ್” ಯಾವ ದಿಕ್ಕಿನಲ್ಲಿದೆ? ಎಂಬುದನ್ನು ಅಲ್ಲಿಯೇ ನಿಂತಿರುವ ವಿದ್ಯಾರ್ಥಿಗಳ್ಲಿ ಕೇಳಿ ತಿಳಿದುಕೊಂಡೆ.

ಕರತಾಡನದ ಸುರಿಮಳೆ. ಏಳಲು ಬಲವಿಲ್ಲದಂತೆ.. ಎದ್ದೆ. ಸಭಾಂಗಣ ಪೂರ್ತಿ ನನ್ನ ನೋಡುತ್ತಿದೆ. ಎದ್ದು ನಿಂತು ಚಪ್ಪಾಳೆ ಸುರಿಯುತ್ತಿದೆ. ನಶೆಯಲ್ಲಿದ್ದಂತೆ ನಡುಗುವ ಕಾಲುಗಳನ್ನು ಎಳೆಯುತ್ತ ನಡೆದೆ. ಅಪ್ರತಿಮ ಕಲಾವಿದರಾದ ಪ್ರಕಾಶ್ ರಾಜ್ ಅವರಿಂದ ಪ್ರಶಸ್ತಿ ಸ್ವೀಕರಿಸಿದೆ. ಮಾತನಾಡಿದೆ

ಜನರ ನಡುವೆಯೇ ಇರುವ, ಅವರಿಂದ ಉಪಕೃತರಾಗುವ ಅವರಿಗೂ ಉಪಕರಿಸುವ ಶಾಸಕಾಂಗ ರಚನಕಾರರಾದ ಮಂತ್ರಿ- ಮಹೋದಯರು ಜನಪ್ರಿಯತೆಯ ಹಿಂದೆ ಬಿದ್ದರೆ ಮತದಾನ ಪ್ರಕ್ರಿಯೆಯಲ್ಲಿ ಅವರಿಗೆ ಅಗತ್ಯ ಇರಬಹುದು ಎಂದು ಒಂದು ಪಕ್ಷ ಒಪ್ಪಬಹುದೇನೋ.. ಆದರೆ ಶಾಸನಗಳನ್ನು ನ್ಯಾಯವಾಗಿ ಜಾರಿಗೊಳಿಸಿ ಪಾಲಿಸಬೇಕಾದ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಹೀಗೆ ಜನಪ್ರಿಯತೆಯ ಬೆನ್ನು ಹಿಡಿದರೆ, ಅವರಿಂದ ನಿಷ್ಪಕ್ಷಪಾತ ಸೇವೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವೇ?

Back To Top