Category: ರಹಮತ್ ತರೀಕೆರೆ ಬರೆಯುತ್ತಾರೆ

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.

ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

ಅಂಕಣ ಬರಹ ಏಕತಾರಿ ಕಣ್ಮರೆ ಹಲವು ವರುಷಗಳಿಂದ ತತ್ವಪದ ಗಾಯಕರನ್ನು ಭೇಟಿಮಾಡುತ್ತ, ಅವರು ಹಾಡುವ ಪದಗಳನ್ನು ಕೇಳುತ್ತ ತಿರುಗಾಡುತ್ತಿದ್ದೇನೆ. ಈ ಗಾಯನದಲ್ಲಿ ಜೀವಾಳದಂತೆ ಬಳಕೆಯಾಗುತ್ತಿದ್ದ ಏಕತಾರಿ ಮರೆಯಾಗುತ್ತಿರುವುದು ಕಾಣುತ್ತಿದೆ. ಯಾಕಿರಬಹುದು? ಇದರ ಪರಿಣಾಮ ಏನಾಗಿದೆ? ವಿಚಾರ ಮಾಡಬೇಕಿನಿಸಿತು. ತಾಡಿಸಿದರೆ ನುಡಿವ ತೊಗಲಿನ ತಮಟೆ, ಡೋಲು, ಮೃದಂಗ, ಢಕ್ಕೆ, ಹಲಗೆ, ದಮಡಿ, ದಪ್ಪು, ಉರುಮೆಗಳಿವೆ; ಗಾಳಿ ವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಶಹನಾಯಿಗಳಿವೆ; ಮೀಟಿದರೆ ನಾದ ಹೊರಡಿಸುವ ವೀಣೆ, ಕಿನ್ನರಿ, ಚೌಡಿಕೆ, ಏಕತಾರಿ, ಸಾರಂಗಿಯಂತಹ ತಂತಿವಾದ್ಯಗಳೂ ಇವೆ. ಇವುಗಳಲ್ಲಿ ಏಕತಾರಿಯದೇ […]

ಅಂಕಣ ಬರಹ ಅಂಕಣ ಬರಹ ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು: “ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ […]

ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು […]

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು […]

ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? […]

ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು […]

ಅಂಕಣ ಬರಹ ಬಾಗದ ಬದುಕು ನಾನು ಶಿವಮೊಗ್ಗೆಯಲ್ಲಿದ್ದ ದಿನಗಳಲ್ಲಿ ಹಲವು ತಲೆಮಾರಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಮಾಜವಾದಿಗಳು ಬೀದಿಯಲ್ಲಿ ಓಡಾಡಿಕೊಂಡಿದ್ದನ್ನು ಕಾಣುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ಲೋಹಿಯಾರ ವ್ಯಕ್ತಿತ್ವ ಅಥವಾ ಚಿಂತನೆಯ ಭಾವಕ್ಕೆ ಸಿಕ್ಕು ಬದುಕಿನ ಹಾದಿ ರೂಪಿಸಿಕೊಂಡವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಯಾರ ಹೆಸರೂ ಚಾಲ್ತಿಯಲ್ಲಿರುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರು ಮಲೆನಾಡಿನ ಮಳೆಗಾಲದಲ್ಲಿ ಮೋಡಗಳ ಮರೆಯಿಂದ ತಟ್ಟನೆ ಕಾಣಿಸಿಕೊಂಡು ಬೆಳಗುವ ಸೂರ್ಯನಂತೆ ಸನ್ನಿವೇಶ ಬಂದಾಗ ಪ್ರತ್ಯಕ್ಷವಾಗುತ್ತಿದ್ದರು. […]

Back To Top