ಅಂಕಣ ಬರಹ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ

ಹನ್ಸಾ ಜೀವರಾಜ್ ಮೆಹ್ತಾ(1897-1995)

ಶಿಕ್ಷಣ ತಜ್ಞೆ, ಸ್ವಾತಂತ್ರ್ಯ ಹೋರಾಟಗಾರ್ತಿ,ಬರಹಗಾರ್ತಿ

ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು 

ಹನ್ಸಾ ಮೆಹ್ತಾರವರು ಜುಲೈ 3, 1897 ರಂದು ಜನಿಸಿದರು. ಇವರ ತಂದೆ ದಿವಾನ್ ಮನುಬಾಯ್ ಮೆಹ್ತಾ ಪ್ರಥಮ ಬಾರಿಗೆ ಗುಜರಾತಿಯಲ್ಲಿ ಕಾಬಂಬರಿಗಳನ್ನು ಬರೆದ ನಂದಶಂಕರ ಮೆಹ್ತಾರವರ ಮೊಮ್ಮಗಳು ಹನ್ಸಾ ಮೆಹ್ತಾ. ಹನ್ಸಾ ಮೆಹ್ತಾರವರು 1918ರಲ್ಲಿ ಫಿಲಾಸಫಿ ಪದವಿಯನ್ನು ಪಡೆದರು. ಹನ್ಸಾ ಮೆಹ್ತಾ ಸಮಾಜಶಾಸ್ತ್ರ ಮತ್ತು ಪತ್ರಿಕೋದ್ಯಮವನ್ನು ಇಂಗ್ಲೆಂಡ್‍ನಲ್ಲಿ ಮುಗಿಸಿದರು. 1918ರಲ್ಲಿ ಸರೋಜಿನಿ ನಾಯ್ಡುರವರನ್ನು ಭೇಟಿ ಮಾಡಿದ್ದರು. 1922ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಪ್ರಸಿದ್ಧ ವೈದ್ಯರು ಮತ್ತು ಆಡಳಿತಗಾರರಾದ ಜೀವರಾಜ್ ನಾರಾಯಣ ಮೆಹ್ತಾರವರನ್ನು  ಹನ್ಸಾರವರು ವಿವಾಹವಾದರು.

ಹನ್ಸಾರವರು ಮಹಾತ್ಮಗಾಂಧಿಯವರ ಸಲಹೆಯಂತೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ವಿದೇಶಿ ಬಟ್ಟೆ ಮತ್ತು ಮಧ್ಯ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ  ಭಾಗವಹಿಸಿದ ಹನ್ಸಾರವರನ್ನು 1932ರಲ್ಲಿ ಪತಿಯೊಂದಿಗೆ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋದರು. ನಂತರ ಇವರು ಬಾಂಬೆ ಶಾಸಕಾಂಗ ಬ್ರಿಟೀಷ್ ಮಂಡಳಿಗೆ ಆಯ್ಕೆಯಾದರು

ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆಯಲ್ಲಿ 15 ಮಹಿಳೆಯರು ಭಾಗವಹಿಸಿದವರಲ್ಲಿ ಹನ್ಸಾರವರು ಕೂಡ ಒಬ್ಬರು. ಹನ್ಸಾರವರು ಮೂಲಭೂತ ಹಕ್ಕುಗಳ ಸಲಹಾ ಸಮಿತಿ ಮತ್ತು ಉಪ ಸಮಿತಿಯ ಸದಸ್ಯರಾಗಿದ್ದರು. ಭಾರತದಲ್ಲಿ ಮಹಿಳೆಯರಿಗೆ ಸಮಾನತೆ ಮತ್ತು ನ್ಯಾಯ ದೊರಕಬೇಕು ಎಂದು ಪ್ರತಿಪಾದಿಸಿದರು.

1926ರಲ್ಲಿ ಬಾಂಬೆ ಶಾಲೆಗಳ ಸಮಿತಿಗೆ ಆಯ್ಕೆಯಾದರು. 1945-46 ರಲ್ಲಿ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾದರು. ಈ ಸಮ್ಮೇಳನವು ಹೈದ್ರಾಬಾದ್‍ನಲ್ಲಿ ನಡೆಯಿತು. ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹನ್ಸಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳಾ ಹಕ್ಕುಗಳ ಪ್ರತಿಪಾದನೆಯನ್ನು ಪ್ರಸ್ತಾಪಿಸಿದರು.

1945 ರಿಂದ 1960 ರವರೆಗೆ ಭಾರತದಲ್ಲಿ ಹನ್ಸಾರವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ ಇವರು, ಎಸ್,ಎನ್,ಡಿ,ಟಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿದ್ದರು. ಅಖಿಲ ಭಾರತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಸದಸ್ಯರಾಗಿದ್ದರು. ಇಂಟರ್ ಯೂನಿವರ್ಸಿಟಿ ಬೋರ್ಡ್ ಆಫ್ ಇಂಡಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬರೋಡದ ಮಹಾರಾಜ ಸೈಯಾಜಿರಾವ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. 

1946 ರಲ್ಲಿ ನಡೆದ ‘ಮಹಿಳೆಯರ ಸ್ಥಿತಿಗತಿ’ ಕುರಿತು ಪರಮಾಣು ಉಪಸಮಿತಿಯಲ್ಲಿ ಹನ್ಸಾರವರು ಭಾರತವನ್ನು ಪ್ರತಿನಿಧಿಸಿದರು. 1947-48 ರಲ್ಲಿ ಯು.ಎನ್ ಮಾನವ ಹಕ್ಕುಗಳ ಆಯೋಗದ ಭಾರತೀಯ ಪ್ರತಿನಿಧಿಯಾಗಿದ್ದುಕೊಂಡು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಿ ಬಳಕೆಯಾದ  “ALL MEN ARE CREATED EQUAL” ಎಂಬ ವ್ಯಾಖ್ಯವನ್ನು ಬದಲಿಸಿ  “ALL HUMEN BEING EQUAL”  ಎಂಬುದಾಗಿ ಆಗಬೇಕು ಎಂಬ ಹೊಣೆಗಾರಿಕೆಯನ್ನು ಹೊಂದಿದ್ದರು. ನಂತರ 1950ರಲ್ಲಿ ಹನ್ಸಾರವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಉಪಾಧ್ಯಕ್ಷರಾಗಿದ್ದರು. ಹಾಗಯೇ ಯುನೆಸ್ಕೋದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರು ಕೂಡ ಆಗಿದ್ದರು.

ಹನ್ಸಾರವರು ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಗುಜರಾತಿ ಭಾಷೆಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಕೆಲವು: ‘ಅರುಣ್ ಅದೂತ್ ಸ್ವಪ್ನಾ’ ‘ಬಾಬ್ಲಾನ ಪರಾಕ್ರಮೊ’ ‘ಬಲ್ಟರ್ತವಾಲಿ’ ಭಾಗ 1-2 ಬರೆದಿರುವರು. ಹಾಗೇ ವಾಲ್ಮೀಕಿ ರಾಮಾಯಣದ ಕೆಲವು ಪುಸ್ತಕಗಳನ್ನು ಅನುವಾದಿಸಿದ್ದಾರೆ. ‘ಅರಣ್ಯಕಂಡ’. ‘ಬಾಲಕಂಡ’ ಮತ್ತು ‘ಸುಂದರಕಂಡಗಳನ್ನು’ ಅನುವಾದಿಸಿದ್ದಾರೆ. ಮತ್ತೆ ‘ಗಲಿವರ್ಸ್ ಟ್ರಾವೆಲ್ಸ್’ ಸೇರಿದಂತೆ ಅನೇಕ ಇಂಗ್ಲೀಷ್ ಕಥೆಗಳನ್ನು ಅನುವಾದಿಸಿದ್ದಾರೆ. ಹಾಗೆಯೇ ಸೆಕ್ಸ್‍ಪಿಯರ್‍ನ ಕೆಲವು ನಾಟಕಗಳನ್ನು ಅನುವಾದಿಸಿ ಕೆಟ್ಲಾಕ್ ಲೇಖೋ ಎಂದು 1978 ರಲ್ಲಿ ಪ್ರಕಟಿಸಿದ್ದಾರೆ. 1995 ರಲ್ಲಿ ವಿಧಿವಶರಾದ ಹನ್ಸಾರವರಿಗೆ 1959 ರಲ್ಲಿ ಹನ್ಸಾರವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

**********************

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

One thought on “

  1. ಅಭಿನಂದನೆಗಳು ಸುರೇಖಾ….ಚೆನ್ನಾಗಿ ಸಂಗ್ರಹಿಸಿ ವಿವರಿಸಿದ್ದಿರಿ

Leave a Reply

Back To Top