Category: ಅಂಕಣ

ಅಂಕಣ

ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ….             ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ     – ಅಕ್ಕ ಮಹಾದೇವಿ.   ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—48 ಮತ್ತೆ ಮರುದನಿಗೊಂಡ ಅಸ್ಪೃಶ್ಯತೆ ನೋವುಗಳು…… ನನ್ನ ವಿವಾಹವೇನೋಸಹಜ ಪ್ರಕ್ರಿಯೆಯಂತೆ ನಿರಾತಂಕವಾಗಿ ನಡೆಯಿತು. ಹಲವರು ಶುಭಹಾರೈಕೆಗಳಿಂದ ನಮ್ಮ ನಿಲುವುಗಳನ್ನು ಬೆಂಬಲಿಸಿದರು. ಕೆಲವರು ನೇರ ನನ್ನ ಕಿವಿಗೂ ಕೇಳಿಸುವಂತೆ ಟೀಕಾಸ್ತ್ರಗಳ ಬಳುವಳಿಯನ್ನೂ ಕೊಡಮಾಡಿದರು. ಬಹುತೇಕ ನಮ್ಮ ಜಾತಿಯ ಬಂಧುಗಳಿಗೆ ನಾನು ಅಂತರ್ಜಾತಿಯ ವಿವಾಹ ಮಾಡಿಕೊಂಡದ್ದು ಸಮಂಜಸವೆನಿಸಲಿಲ್ಲ. “ಉತ್ತಮ ಶಿಕ್ಷಣ ಪಡೆದು ಒಂದು ಒಳ್ಳೆಯ ಉದ್ಯೋಗದಲ್ಲಿ ಇದ್ದವನು ಸ್ವಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಸ್ವಜಾತಿಯ ಹುಡುಗಿಯೊಬ್ಬಳಿಗೆ ಬದುಕು ನೀಡಬಹುದಿತ್ತು. ಓದಿದ ಮತ್ತು ಉತ್ತಮ […]

ಗಜಲ್ ಎಂಬುದು ಆತ್ಮದ ಪಿಸುಮಾತು. ಹೃದಯದ ಮಾತುಗಳು ಜೀವಕಾರುಣ್ಯದಿಂದ ಸ್ನಿಗ್ಧವಾಗಿರುತ್ತವೆ. ಸಕಲ ಜೀವಿಗಳೊಂದಿಗಿನ ಪ್ರೇಮಭಾವದಿಂದ ಮಾಧುರ್ಯವನ್ನು ಪಡೆಯುತ್ತವೆ

ಅಂಕಣ ಬರಹ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ […]

ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ […]

“ಬಕ್ಕಳರ ಗಝಲ್ ಗಳು” ಎಂಬ ಸಂಕಲನ ಪ್ರಕಟಿಸುವುದಕ್ಕಿಂತಲೂ ಮುಂಚೆ ‘ಮಣ್ಣ ನೆನಪಿನ ಮೇಲೆ’ ಎಂಬ ಕವನ ಸಂಕಲನದಲ್ಲಿಯೂ ಬಕ್ಕಳ ಅವರು ತಮ್ಮ ಕೆಲವು ಗಜಲ್ ಗಳನ್ನು ಪ್ರಕಟಿಸಿದ್ದಾರೆ.

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.
ಸಮಾಜ ಕಾರ್ಯಕರ್ತೆ “ಡಾರ್ಲಿಂಗ್ ಆಫ್ ದಿ ಆರ್ಮಿ” ಮೇರಿ ಕ್ಲಬ್‍ವಾಲಾ ಜಾಧವ್(1909-1975

ಅಂಕಣ ಬರಹ ತೊರೆಯ ಹರಿವು ‘ವ್ಯಾಕುಲತೆಯವ್ಯವಕಲನ’ ಆ ಕರು,‘ಅಂಬಾ…’ ಎಂದುಹೊಟ್ಟೆಯಿಂದರಾಗಕಡೆಸಿಮುಖತುಸುಮೇಲೆತ್ತಿಕೂಗುತ್ತಿದ್ದರೆ, ಅದುಮಾಮೂಲಿಕೂಗಿನಂತೆಕೇಳಲಿಲ್ಲ. ಅಡ್ಡರಸ್ತೆನಡುರಸ್ತೆಗಳಲ್ಲಿಗಾಬರಿಬಿದ್ದು, ಬೀದಿನಾಯಿಹಿಂಡಿನಬೊಗಳುವಿಕೆಗೆಬೆದರಿ, ಕಂಗಾಲಾಗಿಓಡುತ್ತಾ, ದೈನೇಸಿತನದಿಂದಕೂಗಿಡುತ್ತಿದ್ದರೆ, ಹೃದಯವಂತರುನಿಂತುನೋಡಿಕರಗುತ್ತಿದ್ದರು. ಜೊತೆಯಿದ್ದಮಕ್ಕಳು, ಕೈಗಟ್ಟಿಹಿಡಿದುಕೊಂಡುಅವರಮನದಅವ್ಯಕ್ತಭಯ-ವೇದನೆಯನ್ನುನನಗೆವರ್ಗಾಯಿಸಿದರು.ಸಂಜೆಸರಿದು, ಇರುಳುನಿಧಾನಕಾಲಿಡುತ್ತಿತ್ತು.ಕಚೇರಿಹಾಗೂಇತರೆಕೆಲಸಮುಗಿಸಿಮನೆಗೆಮರಳುತ್ತಿದ್ದುದರಿಂದಜನರಹಾಗೂವಾಹನಗಳಓಡಾಟತುಸುಜಾಸ್ತಿಯೇಇತ್ತು.ಪದೇಪದೇ‘ಅಂಬಾಅಂಬಾ…’ಎಂದುಕೂಗುತ್ತಿದ್ದಅತ್ತಕರುವೂಅಲ್ಲದಇತ್ತಬೆಳೆದುದೊಡ್ಡದಾಗಿರುವಹಸುವೂಅಲ್ಲದಆಕಳು ತನ್ನಗುಂಪಿನಸಂಪರ್ಕವನ್ನುಎಲ್ಲಿ,ಹೇಗೆಕಳೆದುಕೊಂಡಿತ್ತೋಏನೋಬಹಳಆತಂಕಪಡುತ್ತಾನೋಡುಗರನ್ನುಕಂಗೆಡಿಸಿತ್ತು. ಎಷ್ಟುಕಳವಳವಾಗುತ್ತದೆಏನನ್ನಾದರೂಕಳೆದುಕೊಂಡರೆ! ತುಂಬಾಪ್ರೀತಿಪಾತ್ರವಕ್ತಿ, ವಸ್ತುಗಳನ್ನುಕಳೆದುಕೊಂಡರೆಆಗುವಸಂಕಟವನ್ನುಬಣ್ಣಿಸುವಬಗೆತಿಳಿಯುವುದಿಲ್ಲ. ‘ಅರವತ್ತಕ್ಕೆಅರಳುಮರಳು’ಎನ್ನುವುದುಒಂದುರೂಢಿ.ವಯಸ್ಸುದಾಟಿದಂತೆ,ಸ್ಮೃತಿಕಳೆದುಕೊಳ್ಳುವುದುʼವಯೋಸಹಜಕಾಯಿಲೆʼಎನ್ನುವವೈದ್ಯವಿಜ್ಞಾನಈಗೀಗಹರೆಯದವರಲ್ಲಿಯೂನೆನಪಿನಶಕ್ತಿಕ್ಷೀಣಿಸುತ್ತಿರುವಬಗ್ಗೆಕಳವಳವ್ಯಕ್ತಪಡಿಸುತ್ತದೆ..ಆದರೆ, ಅಧಿಕಒತ್ತಡ, ಅಸಮತೋಲನದಆಹಾರ, ಯಂತ್ರೋಪಕರಣಗಳಮೇಲಿನಅತಿಯಾದಅವಲಂಬನೆ,ಪದೇಪದೇಬದಲಾಗುವದೈನಂದಿನರೂಢಿಗಳು, ನಿದ್ರಾಹೀನತೆಮೊದಲಾದವುಯುವಜನಾಂಗದಚುರುಕುನೆನಪನ್ನೂಮಾಸಲುಮಾಡುತ್ತವೆಏಕೆಎಂದುಸಂಶೋಧನೆಗಳುಚರ್ಚಿಸುತ್ತವೆ.ಅಲ್ಜೈಮರ್ಎನ್ನುವಮರೆವಿನ ಈ ಕಾಯಿಲೆಯುಯಾವರೀತಿಆಘಾತಗಳನ್ನುತರುತ್ತವೆನ್ನುವುದನ್ನೂಅಷ್ಟುಸುಲಭವಾಗಿಮರೆಯುವಂತಿಲ್ಲ. ಕೆಲವುಬಾರಿಕಹಿನೆನಪನ್ನುಕಳೆದುಕೊಳ್ಳುವುದುತುಂಬಾಸಹಕಾರಿ.ʼಸವಿನೆನಪುಗಳುಬೇಕು, ಸವೆಯಲೀಬದುಕು..ʼ, ಮರೆವುಅಥವಾಕಳೆದುಕೊಳ್ಳುವುದುಕೆಲವೊಮ್ಮೆವರದಾನವೂಹೌದು.ತೀರಾಬುದ್ಧಿವಂತರುಜಾಣಮರೆವಿನಮೊರೆಹೊಕ್ಕುಹಲವುಬಾಧೆಗಳನ್ನುಸುಲಭವಾಗಿಕಳೆದುಕೊಳ್ಳುತ್ತಾರೆ. ಬಾಲ್ಯದಲ್ಲಿಕಳೆದುಕೊಳ್ಳುವುದುಒಂದುರೀತಿಅಭ್ಯಾಸವೇಆಗಿಬಿಟ್ಟರುತ್ತದೆ.‘ಸ್ಲೇಟುಬಳಪಪಿಡಿದೊಂದ್ದಗ್ಗಳಿಕೆ’ (ಕುಮಾರವ್ಯಾಸನದ್ದುಹಲಗೆಬಳಪವಪಿಡಿಯದೊಂದ್ದಗಳಿಕೆ)ಯಕಾಲಮಾನದವರಾದನಾವುಮನೆಪಾಠಬರೆಯಲಾಗದೆ, ಉರುಹೊಡೆದುಪಾಠ/ಪದ್ಯಒಪ್ಪಿಸಲಾರದೆ, ಮೇಷ್ಟ್ರುಕೈಯಿಂದಬೀಳುವಏಟುತಪ್ಪಿಸಿಕೊಳ್ಳಲುಬೇಕಂತಲೇಬಳಪ, ಸ್ಲೇಟು, ಪುಸ್ತಕಗಳನ್ನುಕಳೆದುಕೊಳ್ಳುತ್ತಿದ್ದಅತೀಬುದ್ಧಿವಂತರು!ಸದಾಆಟದಮೇಲೆಗಮನಇಟ್ಟುಎಲ್ಲಿಬಿಟ್ಟಿದ್ದೆವೆಂಬುದನ್ನೇಮರೆತುಆಗಾಗ್ಗೆಹೊಚ್ಚಾನಹೊಸಚಪ್ಪಲಿಕಳೆದುಕೊಳ್ಳುವುದು, ಅಂಗಡಿಯಿಂದಪದಾರ್ಥತರಲುಕೊಟ್ಟಕಾಸನ್ನುಕಳೆದುಕೊಳ್ಳುವುದು,  ಅಮ್ಮ, ಅಪ್ಪ, ಅಕ್ಕ, ಅಣ್ಣಹೀಗೆಯಾರೋಹೇಳಿಕಳಿಸಿದ್ದಸಂದೇಶವನ್ನುಯಥಾಪ್ರಕಾರಆಟದನೆಪದಲ್ಲಿಮರೆತುನೆನಪುಕಳೆದುಕೊಂಡದ್ದು… ಹೀಗೆ, ಒಂದೇಎರಡೇ!? ಆದರೆ, ಆನ್‌ಲೈನ್‌ ಪಾಠಕಲಿಯುವಈಗಿನಮಕ್ಕಳು, ಈಮೇಲ್‌ ನೋಟ್ಕಳೆದುಹೋಯ್ತೆಂದುನಾಟಕಆಡುವಂತಿಲ್ಲ. ಏಕೆಂದರೆ,ಕಳೆದುದುರೀಸೈಕಲ್‌ ಬಿನ್ನಲ್ಲಿಕುಳಿತುಕಣ್ಣುಮಿಟುಕಿಸುತ್ತಿರುತ್ತದೆ. ವರ್ಷಂಪ್ರತಿಸಾವಿರಾರುಮೈಲುದೂರದಿಂದಹಾರಿಬರುವಆಲ್‌ ಬಟ್ರಾಸ್ಎಂಬಕಡಲಹಕ್ಕಿಗಳುತಮ್ಮಹಾದಿಜಾಡನ್ನೆಂದೂಕಳೆದುಕೊಳ್ಳುವುದಿಲ್ಲ. ನಿಖರಗುರಿನಿರ್ದಿಷ್ಟಉದ್ದೇಶಇದ್ದಾಗಯಾರೇಆಗಲಿ, ಯಾವುದನ್ನೇಆಗಲಿಕಳೆದುಕೊಳ್ಳುವುದುಅಷ್ಟುಸುಲಭವಲ್ಲ.ಕೆಲವೊಮ್ಮೆವಸ್ತುಗಳನ್ನುಮಾತ್ರವಲ್ಲ, […]

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.

Back To Top