ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. […]
ಗೂಡಂಗಡಿಯ ತಿರುವು ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ […]
ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್ ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು. ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು. ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ ವ್ಯವಸ್ಥೆಯನ್ನು ಒಡೆದು ಬೇರೆ ದಾರಿ ಹಿಡಿಯುವುದು ಹೇಗೆ ಮತ್ತು ಅದರ […]
ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ […]
ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ. ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ […]
ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು… ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ […]
ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ […]
ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ […]
ಬಾಗಿಲುಗಳ ಆಚೀಚೆ ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ […]
ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ […]