ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

೧
ಮನವೆಂಬ ಮನೆಯಲ್ಲಿ
ಎದ್ದು ನಿಂತಿವೆ ಗೋಡೆಗಳು! ಹೃದಯದ ಹಜಾರದಲ್ಲಿ
ಆಗಾಗ ಎಲ್ಲ ಕೂತು
ಔತಣಕೂಟ ಮಾಡಿ
ನಕ್ಕು ನಲಿಯುತ್ತಿದ್ದ
ವಿಶಾಲ ಜಾಗವೀಗ ಪಾಲಾಗಿದೆ
ಅವರಿಗಿಷ್ಟು ಇವರಿಗಿಷ್ಟು

ಅತ್ತಕಡೆ ಇವರು
ಇತ್ತ ಕಡೆ ಅವರು
ಬಾರದಂತೆ ಎಲ್ಲರೂ ಸ್ವಯಂಕೃತವಾಗಿ
ಅಲಿಖಿತ ನಿಯಮ ಜಾರಿಗೊಳಿಸಿಕೊಂಡಿದ್ದಾರೆ!

ಮನದ ಗೋಡೆಯ ನಡುವೆ
ಬಿರುಕು ಬಿಟ್ಟಿವೆ!

೨
ಮತ್ತೆ
ಆ ಬಿರುಕಿನ ನಡುವೆ
ಪ್ರೀತಿ ಸ್ನೇಹಗಳ
ಬೀಜ ಬಿತ್ತಿ
ನಲುಮೆಯಿಂದ ನೀರೆರೆದು
ಹೂವು ಅರಳಿಸಬಹುದೇ?

ಮತ್ತೆ ಆ ಮನೆಯ
ಬೃಂದಾವನದ ತುಂಬಾ
ಸ್ನೇಹದ ಬಳ್ಳಿ ಹಬ್ಬಿ
ಹಸಿರಾಗಿ ನಳನಳಿಸಬಹುದೇ?

೩
ಬಿಟ್ಟರೆ ಆದೀತು!!
ವಾದ -ಪ್ರತಿವಾದಗಳ
ರಾಗ-ದ್ವೇಷಗಳ
ಅಸಹನೆ-ಅಸೂಹೆಗಳ
ಮದ-ಮತ್ಸರಗಳ
ಶುಚಿಗೊಳಿಸಿ
ಶುಭ್ರಗೊಳಿಸಿದರಾದೀತು!

ಮನವೆಂಬ ಮನೆಯೊಳಗೆ
ಸ್ನೇಹದ ಮಂದಿರ !
ಹೃದಯದ ಹಜಾರದ
ತುಂಬ ಸೂಸುವುದು
ಹಿತವಾದ ಸುಂದರ
ಸುಗಂಧದ ಗಾಳಿ 


“

About The Author

2 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಮನವೆಂಬ ಮನೆಯೊಳಗೆ””

Leave a Reply

You cannot copy content of this page

Scroll to Top