ಅಂಕಣ ಸಂಗಾತಿ-42 ಸುಜಾತಾ ರವೀಶ್ ವೃತ್ತಿ ವೃತ್ತಾಂತ ಒಂದಷ್ಟು ಪ್ರಸಂಗಗಳು ಈ ಬಾರಿ ಪಾಲಿಸಿ ಸೇವಾ ವಿಭಾಗದಲ್ಲಿ ನನ್ನದು ಮುಂದಿನ ಸಿಂಗಲ್ ವಿಂಡೋ ಆಗಿರಲಿಲ್ಲ. ಹಿಂಭಾಗದಲ್ಲಿ ಬೇರೆ ಇತರ ಪಾಲಿಸಿ ಸೇವಾ ವಿಷಯಗಳ ಕೆಲಸ ಎಂದು ಹೇಳಿದನಲ್ಲ. ಹಾಗೆ ನನಗೆ ಸಹಾಯಕರಾಗಿ ಗೋವಿಂದರಾಜು ಎನ್ನುವವರು ಇದ್ದರು. ಅವರು ಸ್ವಲ್ಪ ಖಂಡಿತವಾದಿ ಸ್ವಭಾವದವರು ಹಾಗೂ ಸ್ವಲ್ಪ ಜೋರು ಕೂಡ. ಹಾಗಾಗಿ ಅವರ ಜೊತೆ ಕೆಲಸ ಮಾಡಲು ಕೆಲವರು ಹಿಂಜರಿಯುತ್ತಿದ್ದರು. ಆದರೆ ಅಲ್ಲಿದ್ದಷ್ಟು ದಿನ ಒಂದು ಬಾರಿಯಾದರೂ ನಮ್ಮ ನಡುವೆ ಮಾತಿನ ಚಕಮಕಿ ಆಗಲಿ ಅಸಮಾಧಾನವಾಗಲಿ ಬರಲಿಲ್ಲ. ಅವರು ಸಹ ನಿಮ್ಮೊಬ್ಬರ ಬಳಿಯೇ ನಾನು ಜಗಳವಾಡದೆ ಕೆಲಸ ಮಾಡಿರುವುದು ಎಂದು ಹೇಳುವಷ್ಟು ಚೆನ್ನಾಗಿ ಹೊಂದಿ ಕೆಲಸ ಮಾಡುತ್ತಿದ್ದೆವು.ನಾರಾಯಣ ಸರ್ ಅವರು ಕೆಲಸ ತುಂಬಾ ಚೆನ್ನಾಗಿ ಗೊತ್ತಿದ್ದವರು ಹಾಗೂ ತುಂಬಾ ಮುತುವರ್ಜಿಯಿಂದ ಸಹ ಮಾಡುತ್ತಿದ್ದರು. ಆದರೂ ಸಹ ನಮ್ಮ ಶಾಖೆಯಲ್ಲಿ ಒಂದು ಫ್ರಾಡ್ ಆಗಿತ್ತು. ಪಾಲಿಸಿ ಸರೆಂಡರ್ ವಿಭಾಗದಲ್ಲಿ ಒಬ್ಬ ಏಜೆಂಟ್ ಮಾಡಿದ ತಪ್ಪು ಬೇರೆ ಪಾಲಿಸಿದಾರರಿಗೆ ಸರೆಂಡರ್ ಪಾವತಿ ಆಗಿ ಹೋಗಿತ್ತು. ನಂತರ ಆ ಹಣ ಮರುಪಾವತಿ ಆದರೂ ಸಹ ಆ ಐದಾರು ತಿಂಗಳ ಅವಧಿಯಲ್ಲಿ ನಾರಾಯಣ್ ಸರ್ ಹಾಗೂ ಆ ವಿಭಾಗದಲ್ಲಿ ಇದ್ದ ಒಬ್ಬ ಉನ್ನತದರ್ಜೆ ಸಹಾಯಕಿ ಮತ್ತು ಅಸಿಸ್ಟೆಂಟ್ ಅವರಿಗೆ ಉಂಟಾದ ಟೆನ್ಶನ್ ನಮಗೂ ತುಂಬಾ ಬೇಸರ ಹಾಗೂ ಗಾಬರಿ ಉಂಟು ಮಾಡಿದ್ದಂತೂ ನಿಜ. ಸಿಬ್ಬಂದಿಯವರು ಎಲ್ಲವನ್ನು ರೂಲ್ಸ್ ಪ್ರಕಾರವೇ ಮಾಡಿದ್ದರು ಸಹ ಈ ತಪ್ಪು ನಡೆದಿದ್ದು ನಿಜಕ್ಕೂ ದುರದೃಷ್ಟಕರ. ಇದೆ ಅವಧಿಯಲ್ಲಿ ಆಂಡ್ರಾಯ್ಡ್ ಫೋನ್ ಗಳ ಆಗಮನವಾಗಿತ್ತು ನನ್ನ ಕೈಗೂ ಒಂದು ಆಂಡ್ರಾಯ್ಡ್ ಫೋನ್ ಬಂದಿತ್ತು. ಅದರಲ್ಲಿ ಕನ್ನಡ ಸಹ ಟೈಪ್ ಮಾಡಬಹುದು ವಾಟ್ಸಪ್ ಮತ್ತು ಫೇಸ್ಬುಕ್ ಗಳು ಬಂದಮೇಲೆ ನನ್ನ ಬರವಣಿಗೆಗೆ ಒಂದು ನಿರ್ದಿಷ್ಟ ದಿಕ್ಕು ದೊರೆಯಲು ಆರಂಭವಾಗಿತ್ತು ಮೊಟ್ಟಮೊದಲ ಬಾರಿಗೆ ತುಷಾರ ಮಾಸಪತ್ರಿಕೆಯಲ್ಲಿ ಚಿತ್ರಕವಲ್ಲ ಸ್ಪರ್ಧೆಗೆ ಒಂದು ಕವನ ಬರೆದು ಪೋಸ್ಟ್ ನಲ್ಲಿ ಕಳಿಸಿದ್ದೆ ಮುಂದಿನ ಮಾಸದ ಸಂಚಿಕೆ ನೋಡಿದರೆ ನನಗೆ ತೀರ್ಪುಗಾರರ ಮೆಚ್ಚುಗೆ ದೊರೆತಿತ್ತು ನನ್ನ ಹೆಸರನ್ನು ಮೊಟ್ಟಮೊದಲ ಬಾರಿಗೆ ನೋಡಿದ ಖುಷಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ಹಾಗೆಯೇ ನನ್ನ ಮೆಚ್ಚಿನ ಹವ್ಯಾಸವಾದ ರಂಗೋಲಿ ಗಳನ್ನು ಫೇಸ್ಬುಕ ಹಾಗೂ ವಾಟ್ಸಾಪ್ನಲ್ಲಿ ಹಾಕಿ ಮೆಚ್ಚುಗೆ ಪಡೆಯಲು ಆರಂಭಿಸಿದೆ. ನನ್ನ ಹೈಸ್ಕೂಲ್ ಗೆಳತಿಯರಾದ ಉಮಾ ಗೀತಾ ಸುಧಾ ಅವರುಗಳ ಮೊಬೈಲ್ ನಂಬರ್ ಸಿಕ್ಕಿದ ನಂತರ ನಮ್ಮ ಪ್ರೌಢಶಾಲಾ ಗೆಳತಿಯರ ವಾಟ್ಸಾಪ್ ಗುಂಪನ್ನು ಆರಂಭ ಮಾಡಿ ನಿರಂತರ ಸಂಪರ್ಕದಲ್ಲಿ ಇರಲು ಆರಂಭಿಸಿದ್ದೆವು. ಒಬ್ಬ ಪ್ರೇಮ ಫೋಟೋಗಳನ್ನು ಗುಂಪಿನಲ್ಲಿ ಹಾಕಿಕೊಂಡು ಈಗ ಹೇಗಿದ್ದಾರೆ ಎಂದು ಮತ್ತು ಅವರ ಪ್ರಸ್ತುತ ಪರಿಸ್ಥಿತಿಗಳನ್ನು ಪರಿಚಯವನ್ನು ಅರಿತುಕೊಳ್ಳಲು ಇದು ಸಾಧ್ಯವಾಗಿತ್ತು. ಹೀಗಿರುವಾಗಲೇ ನಮ್ಮ ಪಿಯುಸಿ ಗೆಳತಿ ಯೋಗಲಕ್ಷ್ಮಿ ಭೇಟಿಯಾಗಿ ಅವಳಿಂದ ಈಗಾಗಲೇ ಅಸ್ತಿತ್ವದಲ್ಲಿದ್ದ ನಮ್ಮ ಪಿಯುಸಿ ಗ್ರೂಪಿನ ವಾಟ್ಸಾಪ್ ಬಳಗಕ್ಕೂ ನನಗೆ ಪ್ರವೇಶ ದೊರಕಿತ್ತು ಯಾವಾಗಲೂ ಅಷ್ಟೇ ಪ್ರತಿಯೊಬ್ಬರ ವಿಷಯ ವರ್ಷಾನುಗಟ್ಟಲೆಯಿಂದ ಬಿಟ್ಟು ಹೋಗಿದ್ದ ಸಂಪರ್ಕದ ಮರುಸ್ಥಾಪನೆ ತುಂಬಾ ಖುಷಿ ಕೊಟ್ಟಿತ್ತು.ನಮ್ಮ ಅಮ್ಮನ ಕಡೆ ಕಸಿನ್ಸ್ ಗಳೆಲ್ಲ ಸೇರಿ ಚಿಂತಾಮಣಿ ಬಳಗ ಹುಟ್ಟು ಹಾಕಿದ್ದು ದಿನಂಪ್ರತಿ ಕಸಿನ್ಗಳ ಮಧ್ಯೆ ಸಂವಹನ ಸಾಧ್ಯವಾಗಿತ್ತು.ಫೇಸ್ಬುಕ್ ನಲ್ಲಿನ ಅಡುಗೆ ಗುಂಪುಗಳಿಗೆ ಸೇರಿದ ಮೇಲಂತೂ ಮಾಡಿದ ಅಡುಗೆಗಳ ಫೋಟೋ ತೆಗೆದು ರೆಸಿಪಿ ಕಳಿಸಿ ಮೆಚ್ಚುಗೆಗಳನ್ನು ಪಡೆಯುವುದು ದಿನನಿತ್ಯದ ಕೆಲಸವಾಗಿತ್ತು ನಿಜಕ್ಕೂ ಜೀವನ ಒಂದು ಸಂತೋಷ ಕರ ತಿರುವನ್ನು ತೆಗೆದುಕೊಂಡಿದೆ ಎಂದೆನಿಸುತ್ತಿದ್ದ ದಿನಗಳು ಅವು. ವಿವಿಧ ಬಳಗಗಳಲ್ಲಿ ಇದ್ದ ಸ್ನೇಹಿತರ ಹಾಗೂ ನನ್ನ ಬಂಧು ಮಿತ್ರರ ಹುಟ್ಟುಹಬ್ಬಗಳಿಗೆ ಸಣ್ಣ ಸಣ್ಣ ಶುಭಾಶಯ ಕವನಗಳನ್ನು ಬರೆದು ಕಳಿಸುತ್ತಿದೆ ಒಂದೊಂದು ದಿನವಂತು ಎಲ್ಲಾ ಗುಂಪಿನಲ್ಲೂ ಸೇರಿ 4.5 ಜನಗಳ ಹುಟ್ಟುಹಬ್ಬ ಇದ್ದರು ಬಹಳ ಖುಷಿಯಾಗಿ ಪ್ರತಿಯೊಬ್ಬರಿಗೂ ಶುಭಾಶಯ ಕವನಗಳನ್ನು ಬರೆಯುತ್ತಿದೆ ಅದೇ ನನ್ನ ಕವನ ಬರೆಯುವ ಹವ್ಯಾಸಕ್ಕೆ ನಾಂದಿಯಾಯಿತು ಎನಿಸುತ್ತದೆ ಪ್ರತಿಯೊಬ್ಬರಿಗೂ ಶುಭಾಶಯ ಕವನಗಳ ಬಗ್ಗೆ ತುಂಬಾ ಮೆಚ್ಚುಗೆ ಹಾಗೂ ಅದಕ್ಕಾಗಿ ಕಾಯುವಷ್ಟು ಪ್ರೀತಿ ಹುಟ್ಡಿತ್ತು.ಇದರೊಂದಿಗೆ ಫೋಟೋಗ್ರಫಿ ಹುಚ್ಚು ಸಹ ಮೊದಲು ಕ್ಯಾಮರಾದಲ್ಲಿ ರೀಲ್ ಹಾಕಿ ತೆಗೆಸಿ ತುಳಸಿ ಫ್ರಂಟ್ ಹಾಕಿಸಬೇಕಿತ್ತ ಕೆಲಸ ಬಿಟ್ಟೆ ಹೋಗಿದ್ದು ಮೊಬೈಲ್ನಲ್ಲಿ ತಕ್ಷಣವೇ ಚಿತ್ರಗಳನ್ನು ಫೇಸ್ಬುಕ್ ಗಳಲ್ಲಿ ಹಂಚುವುದು ಸಹ ಸುಲಭವಾಗಿತ್ತು ತುಂಬಾ ಖುಷಿಯಾಗುತ್ತಿತ್ತು.ಈ ಸಂದರ್ಭದಲ್ಲಿಯೇ ನಮ್ಮ ಹೈಸ್ಕೂಲು ಗೆಳತಿಯರ ಒಂದು ಫ್ರೀ ಯೂನಿಯನ್ ಸಹ ನಡೆದು ನಮ್ಮ ಮನೆಗೆ ಬೆಂಗಳೂರಿನಿಂದ ವಾಹನ ಮಾಡಿಕೊಂಡು ಗೆಳತಿಯರು ಬಂದರು ಮೈಸೂರಿನ ಗೆಳತಿಯರು ಸೇರಿದ್ದರು ನಾನೇ ಮಸಾಲೆ ದೋಸೆ ಅಂದಿನ ತಿಂಡಿಗೆ ಮಾಡಿದ್ದು ಈಗಲೂ ಗೆಳತಿಯರು ಅದನ್ನು ನೆನೆಸಿಕೊಳ್ಳುವುದು ಉಂಟು.ಪಿಯುಸಿ ಬಳಗದ ರೀ ಯೂನಿಯನ್ ಸಹ ನಡೆದಿದ್ದು ಹಿಂದಿನ ದಿನ ಸಂಜೆ ಮೈಸೂರಿನ ಬಳಿಯಲೇ ಇರುವ ಸಹಪಾಠಿ ಸತ್ಯ ಅವರ ಪಾಲಿಗೆ ಹೋಗಿ ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿಕೊಟ್ಟು ವಾಪಸ್ ಆಗಿದ್ದೇವೆ ಮಾರನೆಯ ದಿನ ನಮ್ಮ ಶಾರದಾ ವಿಲಾಸ್ ಕಾಲೇಜಿನ ನಮ್ಮ ತರಗತಿ ನಡೆಯುತ್ತಿದ್ದ ಕೊಠಡಿಯಲ್ಲೇ ಎಲ್ಲರೂ ಸೇರಿ ನಮ್ಮ ಜಿಯೋಗ್ರಫಿ ಲೆಕ್ಚರರ್ ಆಗಿದ್ದ ಹಕ್ಕವರನ್ನು ಕರೆಸಿ ಅಂದಿನ ದಿನವನ್ನು ತುಂಬಾ ಖುಷಿಯಿಂದ ಕಳೆದು ಸಹ ನೆನಪಿನ ಗಂಟುಗಳಲ್ಲಿ ಇರುವ ಸವಿಯಾದ ಬುತ್ತಿ. ಇಷ್ಟರ ಮಧ್ಯೆ ನಮ್ಮ ಡಿಗ್ರಿ ಸಹಪಾಠಿಯಾಗಿದ್ದ ಶಿವಕುಮಾರ್ ಅವರು ಆಫೀಸಿಗೆ ಯಾವುದೋ ಕೆಲಸಕ್ಕೆ ಬಂದಾಗ ನನ್ನನ್ನು ನೋಡಿ ಮಾತನಾಡಿಸಿದರು ಅವರ ಬಳಿ ಸಹ ನಮ್ಮ ಡಿಗ್ರಿ ಸಹಪಾಠಿಗಳು ಕೆಲವರ ನಂಬರ್ ಇತ್ತು ನನ್ನ ಬಳಿಗೆ ಒಂದಷ್ಟು ಗೆಳತಿಯರ ನಂಬರ್ ಇತ್ತು ಹಾಗಾಗಿ ಎಲ್ಲವನ್ನು ಸೇರಿಸಿ ನಾನೇ ನಮ್ಮ ಬನ್ಮಯ ಕಾಲೇಜಿನ ಗುಂಪನ್ನು ಶುರು ಮಾಡಿದೆ ಆ ಗುಂಪಿನಿಂದಲೂ ಈ ಸಮಯದಲ್ಲಿಯ ಒಂದು ರಿಯೂನಿಯನ್ ಸಮಾರಂಭ ನಡೆದದ್ದು. ಸಿಕ್ಕಾಪಟ್ಟೆ ಶುಭಾಶಯ ಕವನಗಳಿಂದ ಸ್ವಲ್ಪ ದೀರ್ಘ ಕವನಗಳು ಅದರಲ್ಲೂ ಮುಖ್ಯವಾಗಿ ನನ್ನ ತಂದೆ ಮತ್ತು ತಾಯಿಯರ ಬಗ್ಗೆ ಗಿನ ಕವನಗಳನ್ನು ಬರೆಯಲು ಆರಂಭಿಸಿ ಹೀಗೆ ಗೆಳೆಯರ ಬಳಗಗಳಲ್ಲಿ ಹಾಕಿದ್ದು ಬಹಳವೇ ಪ್ರಶಂಸೆ ಗಳಿಸಿತು ಚೆನ್ನಾಗಿ ಬರೆಯುತ್ತೇನೆ ಎಂದು ಎಲ್ಲರೂ ಹೇಳುವಾಗ ನನ್ನ ಆತ್ಮವಿಶ್ವಾಸವು ಬೆಳೆಯಿತು. ಫೇಸ್ಬುಕ್ ನಲ್ಲಿದ್ದ ಹಲವಾರು ಸಾಹಿತ್ಯ ಬಳಗಗಳಿಗೆ ಸೇರಿ ಹೆಚ್ಚು ಹೆಚ್ಚು ಬರೆಯತೊಡಗಿದ್ದೆ. ಪಾಲಿಸಿಗಳನ್ನು ಆಲ್ಟ್ರೇಶನ್ ಅಂದರೆ ಒಂದು ಮೋಡ್ ನಿಂದ ಮತ್ತೊಂದು ಪಾವತಿಯ ವಿಧಾನಕ್ಕೆ ಬದಲಾಯಿಸುವ ಕೆಲಸ ಅದನ್ನು ನೋಡಿಕೊಳ್ಳುತ್ತಿದ್ದರು ನಾನೇ ಹೀಗೆ ಒಮ್ಮೆ ಸಂಸ್ಕೃತ ಕಾಲೇಜಿನ ಲೆಕ್ಚರರ್ ಒಬ್ಬರು ಈ ಕೆಲಸ ಬಿಟ್ಟು ದೆಹಲಿಯಲ್ಲಿ ಬೇರೊಂದು ಕೆಲಸಕ್ಕೆ ಸೇರುವುದಿಲ್ಲ ಸಂಬಳ ಕಡಿತದಲ್ಲಿ ಇದ್ದ ಪಾಲಿಸಿಯನ್ನು ಕಟ್ಟಲು ಬದಲಾಯಿಸಿಕೊಳ್ಳಲು ಬಂದಿದ್ದರು. ಮೊದಲೇ ಹೇಳಿದಂತೆ ಆಗ ತಾನೇ ಈ ಪದ್ಧತಿಗೆ ಬದಲಾಗುತ್ತಿದ್ದ ಸಮಯ ಕೆಲವೊಂದು ಸಮಸ್ಯೆಗಳು ಇದ್ದವು ಅವರ ಅವರು ಈ ಹಿಂದೆ ನಾಕು. ಐದು ತಿಂಗಳುಗಳ ಕಾಲ ಪ್ರೀಮಿಯಂ ಪಾವತಿ ಆಗಿರಲಿಲ್ಲ ಆದರೆ ಅದು ಕಂಪ್ಯೂಟರ್ನಲ್ಲಿ ತೋರಿಸಿರಲಿಲ್ಲ ಹಾಗಾಗಿ ಹಳೆಯ ವಾಕ್ಯವನ್ನು ಹಿಡಿದುಕೊಳ್ಳದೆ ಅವರ ಪಾಲಿಸಿಯನ್ನು ನಗದು ವಿಧಾನಕ್ಕೆ ಬದಲಾಯಿಸಿ ಕೊಟ್ಟುಬಿಟ್ಟವು ಆನಂತರದಲ್ಲಿ ಒಮ್ಮೆ ಸಿಸ್ಟಮ್ ಎಲ್ಲಾ ಸರಿ ಹೋದಾಗ ಈ ರೀತಿ ಅವರ ಹಳೆಯ ಬಾಕಿ ಇದ್ದುದನ್ನು ಆಡಿಟ್ ಸಮಯದಲ್ಲಿ ಕಂಡು ಹಿಡಿಯಲಾಗಿತ್ತು. ಮೊಬೈಲ್ ನಂಬರ್ ಇದ್ದರೆ ಅದನ್ನು ಅವರ ಫೈಲ್ ನಲ್ಲಿ ನಮೂದಿಸುವುದು ನನ್ನ ಅಭ್ಯಾಸ ಅಲ್ಲದೆ ಅವರು ಸದ್ಯದಲ್ಲೇ ದೆಹಲಿಗೆ ಹೋಗಿಬಿಡುವೆ ಕೆಲಸ ಆದ ನಂತರ ದಯವಿಟ್ಟು ತಿಳಿಸಿ ಎಂದು ಸಹ ಹೇಳಿದ್ದರಿಂದ ಅವರ ನಂಬರ್ ತೆಗೆದುಕೊಂಡಿದ್ದು ಅವರಿಗೆ ಕರೆ ಮಾಡಿ ತಿಳಿಸಿದೆ ಹಾಗಾಗಿ ಈಗ ಈ ರೀತಿಯ ಬಾಕಿ ಬಂದಾಗ ಅವರನ್ನೇ ಸಂಪರ್ಕಿಸಿ ಹೀಗಾಗಿದೆ ಎಂದು ಹೇಳಿದ ತಕ್ಷಣ ಆತ ಆಗಲಿ ಎಂದು ಒಪ್ಪಿಕೊಂಡು ಇನ್ನೊಂದು ವಾರಕ್ಕೆ ಮೈಸೂರಿಗೆ ಬರುತ್ತಿದ್ದೇನೆ ಆಗ ಬಂದು ಹಣ ಕಟ್ಟುತ್ತೇನೆ ಎಂದು ಹೇಳಿದಾಗ ಸ್ವಲ್ಪ ಉಸಿರು ಬಂದ ಹಾಗೆ ಆಯಿತು ಹೆಚ್ಚು ಕಡಿಮೆ 2000ಗಳ 5 ಕಂತು ಎಂದರೆ ಸುಮಾರು 10,000 ಅವರು ಬಂದು ಕಟ್ಟದಿದ್ದಲ್ಲಿ ತುಂಬಾ ಸಮಸ್ಯೆ ಆಗುತ್ತಿತ್ತು ಆದರೆ ಹೇಳಿದಂತೆ ಮುಂದಿನ ವಾರ ಬಂದಿದ್ದರು ನಾನು ಅಂದು ಏನೋ ಅನಿವಾರ್ಯದಿಂದ ರಜೆ ಹಾಕಿದ್ದೆ ನಮ್ಮ ಆಫೀಸರ್ ಬಳಿ ಬಂದು ಕೌಂಟರ್ನಲ್ಲಿ ಹಣ ಕಟ್ಟಿ ಮೇಡಂ ಅವರು ಹೇಳಿದ ತಕ್ಷಣ ಎಷ್ಟು ಚೆನ್ನಾಗಿ ಕೆಲಸ ಮಾಡಿ ಕೊಟ್ಟಿದ್ದಲ್ಲದೆ ಕರೆ ಮಾಡಿ ಸಹಿತ ವಿಷಯವನ್ನು ತಿಳಿಸಿದರು ಈಗ ಈ ರೀತಿ ಸಮಸ್ಯೆ ಬಂದಾಗ ನಾವು ಸ್ಪಂದಿಸದಿದ್ದರೆ ಏನು ಚೆಂದ ಎಂದು ಹೇಳಿದರಂತೆ ನಮ್ಮ ಆಫೀಸರ್ ಆಗಿದ್ದ ನಾರಾಯಣ್ ಅವರಂತೂ ನಿಮ್ಮ ಕಾರ್ಯವೈಖರಿಯೇ ನಿಮ್ಮನ್ನು ಕಾಪಾಡಿದ್ದು ಎಂದು ಬಹಳ ಸಾರಿ ಮೆಚ್ಚಿಕೊಂಡಿದ್ದರು. ಇನ್ನೊಮ್ಮೆ ಲಂಚ್ ಸಮಯದಲ್ಲಿ ಸಿಂಗಲ್ ವಿಂಡೋದಲ್ಲಿ ಇನ್ನು ಯಾರು ಸಿಟಿಗೆ ಬಂದಿರಲಿಲ್ಲ. ಆಗ ಯಾರೋ ಹಿರಿಯರು ಬಂದು ಸ್ವಲ್ಪ ಅರ್ಜೆಂಟಿದೆ ಯಾರು ಇಲ್ಲವಲ್ಲ ಎಂದು ಪೇಚಾಡಿ ಕೊಳ್ಳುತ್ತಿದ್ದನು ನೋಡಿ ನಾನೇ ಮುಂದೆ ಹೋಗಿ ಕುಳಿತು ಅವರ ಕೆಲಸ ಮಾಡಿಕೊಟ್ಟೆ. ಈ ರೀತಿ ಆಗಸಗ ಆಗುತ್ತಿದುದರಿಂದ ಆ ಕಡೆ ಹೆಚ್ಚಿನ ಗಮನ ಕೊಡಲಿಲ್ಲ. ಆದರೆ ಮುಂದಿನ ಬಾರಿ ಸ್ಟ್ಯಾಫ್ ಮೀಟಿಂಗ್ ನಡೆದಾಗ ಶಾಖಾಧಿಕಾರಿ ರಾಜಶೇಖರ್ ಅವರು ಈ ವಿಷಯವನ್ನು ಹೇಳಿ ಆ ಪಾಲಿಸಿದಾರರು ನನ್ನನ್ನು ಅವರ ಬಳಿ ಪ್ರಶಂಸಿ ಸಿದ್ದರಂತೆ ಆ ವಿಷಯವನ್ನು ಎಲ್ಲರ ಎದುರಿಗು ಹೇಳಿ ನನ್ನ ಖುಷಿಯನ್ನು ಹೆಚ್ಚಿಸಿದ್ದರು. ನನಗೂ ಅಷ್ಟೇ ಬೇರೆ ಯಾವುದೇ ವಿಭಾಗದಲ್ಲಿ ಕೆಲಸ ಮಾಡಿದಾಗ ಸಿಗುತ್ತಿದ್ದ ತೃಪ್ತಿಗಿಂತ ಪಾಲಿಸಿ ಸೇವಾ ವಿಭಾಗದಲ್ಲಿ ಮಾಡುವ ಕೆಲಸ ಹೆಚ್ಚಿನ ಖುಷಿ ಹಾಗೂ ತೃಪ್ತಿ ಕೊಡುತ್ತಿತ್ತು. ರಾಜಶೇಖರ್ ಅವರಿಗೆ ಒಂದೇ ವರ್ಷಕ್ಕೆ ಪ್ರಮೋಷನ್ ಸಿಕ್ಕಿ ಬೇರೆ ಕಡೆಗೆ ಹೋದರು ನಂತರ ಬಂದ ಶಾಖಾಧಿಕಾರಿಗಳು ರಾಜ ಕುಮಾರ್ ಅವರು. ಈ ಸಂದರ್ಭದಲ್ಲಿಯೇ ಈಗಾಗಲೇ ಶಾರದಾದೇವಿ ನಗರದಲ್ಲಿ ಇದ್ದ ಜೀವ ವಿಮಾ ನಿಗಮದ ಸೈಟಿನಲ್ಲಿ ಎಸ್ಟಿಸಿ ಅಂದರೆ ತರಬೇತಿ ನೀಡುವ ವಿಭಾಗ ಆರಂಭವಾಗಿದ್ದು ಅದರ ಪಕ್ಕದ ಜಾಗದಲ್ಲಿ ಶಾಖೆ 5ನ್ನು ಕಟ್ಟುವ ಯೋಜನೆ ಮಾಡಲಾಗಿತ್ತು. ಆ ಯೋಜನೆಗೆ ಶಂಕುಸ್ಥಾಪನೆ ಹಾಕುವ ಕಾರ್ಯ ನಡೆಯಿತು. ಅಲ್ಲಿ ನಡೆದ ಆ ಸಮಾರಂಭದ ಜಾಗದ ಬಳಿ ನಾವು ಒಂದಷ್ಟು ಜನ ಗೆಳತಿಯರು ಹೋಗಿ ರಂಗವಲ್ಲಿ ಹಾಕಿ ಬಂದೆವು ಒಂದು ವರ್ಷದಲ್ಲಿ ಕಟ್ಟಡ ಕಟ್ಟಿ ಪೂರ್ತಿ ಆಗುತ್ತದೆ ಎಂಬ ವಿಷಯ ನಮಗೆ ಸ್ವಂತ ಕಟ್ಟಡಕ್ಕೆ ಹೋಗಬಹುದಲ್ಲ ಎಂಬ ಖುಷಿ ಕೊಟ್ಟಿತು. ರಾಜಕುಮಾರ್ ಅವರು ಸಹ ನಮ್ಮ ಶಾಖೆಯಲ್ಲಿ ಕೆಲಸ ಮಾಡಿದ್ದು ಒಂದೇ ವರ್ಷ ಹೋಗುವ ಮುನ್ನ ಎರಡು ವರ್ಷಗಳಿಗೆ ಸಿಬ್ಬಂದಿಗಳಿಗೆ ವಿಭಾಗಗಳನ್ನು ಬದಲಾಯಿಸಿದರು. ಕಚೇರಿ ಸೇವಾ ವಿಭಾಗದಲ್ಲಿ ಪೂರ್ಣ ಗಣಕೀಕರಣ ಆದ ನಂತರ ಕೆಲಸ ಮಾಡದೆ ಇದ್ದಿದ್ದರಿಂದ ಆ ವಿಭಾಗಕ್ಕೆ ಬದಲಾವಣೆ ಬಯಸಿದೆ ಅದರಂತೆ ಅಲ್ಲಿಗೆ ಬದಲಾವಣೆಯು ಸಿಕ್ಕಿತು.ಅಲ್ಲಿನ ಕಾರ್ಯ ವೈಖರಿಯ ಬಗ್ಗೆ ಮುಂದಿನ ಕಂತಿನಲ್ಲಿ ತಿಳಿದುಕೊಳ್ಳೋಣ ಅಲ್ವಾ? ಮುಂದುವರೆಯುವುದು ಸುಜಾತಾ ರವೀಶ್ಮೈಸೂರು
“ದಾಂಪತ್ಯ ಗೀತೆ” ಒಂದು ನೆನಪು ಆದಪ್ಪ ಹೆಂಬಾ
ನೆನಪಿನ ಸಂಗಾತಿ “ದಾಂಪತ್ಯ ಗೀತೆ” ಆದಪ್ಪ ಹೆಂಬಾ ನನಗಿನ್ನೂ ನೆನಪಿದೆ. ನನ್ನವಳನ್ನು ನಾನು ಮೊದಲು ನೋಡಿದ್ದು ಸಾವಿರದೊಂಬೈನೂರಾ ತೊಂಬತ್ತೆಂಟರ ಆಷಾಢ ಏಕಾದಶಿ ದಿನದಂದು. ಅಧಿಕೃತವಾಗಿ, ಅಂದ್ರೆ ಶಾಸ್ತ್ರೋಕ್ತವಾಗಿಯೇ ನೋಡಿದ್ದು. ಆವಾಗ ನಾವೆಷ್ಟೇ ಮುಂದುವರಿದವರಾಗಿದ್ದರೂ ಅಪ್ಪ-ಅಮ್ಮ ತೋರಿಸುವ ಕನ್ಯೆಯನ್ನು ನೋಡಬೇಕು, ಮದುವೆಗೆ ಒಪ್ಪಿಗೆ ಸೂಚಿಸಬೇಕು. ಆಯ್ಕೆಯ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ನಮ್ಮಪ್ಪ ನಮಗೆ ನೀಡಿದ್ದರು, ಅನ್ನೋದಷ್ಟೆ ಖುಷಿಯ ವಿಚಾರ. ಇದೇ ಮನಸ್ಥಿತೀಲಿ ಆ ಏಕಾದಶಿ ದಿನ ಗದುಗಿಗೆ ಅಂಟಿಕೊಂಡಿರುವ ಬೆಟಗೇರಿಗೆ ನಮ್ಮ ಚಿಕ್ಕಪ್ಪನವರು ಒಂದು ಕನ್ಯೆ ತೋರಿಸಲು ನನ್ನನ್ನು ಕರೆದುಕೊಂಡು ಹೋಗಿದ್ದರು. ಹಳ್ಳಿಗರಾದ ನಮಗೆ ಗದಗು ದೊಡ್ಡದಾದ ಮತ್ತು ಚೆಂದದ ಪಟ್ಟಣದಂತೆ ಕಂಡಿತ್ತು. ನಾ ಮೊದಲು ಬಿದ್ದದ್ದು ಅಲ್ಲೆ…………. ಪಟ್ಟಣದ ಆಕರ್ಷಣೆಗೆ ಕಣ್ರೀ. ಅಲ್ಲಿಂದ ಬೆಟಗೇರಿಯ ನನ್ನವಳ ತವರು ಮನೆಗೆ ಕರೆದುಕೊಂಡು ಬಂದರು ನಮ್ಮ ಚಿಕ್ಕಪ್ಪನವರು. ಹಳೆಯದಾದರೂ ಅಚ್ಚುಕಟ್ಟಾದ ಮನೆ. ನಮ್ಮ ಅತ್ತೆ ಮಾವನವರಿಂದ ಸ್ವಾಗತ ದೊರೆಯಿತು. ನನ್ನ ಕಣ್ಣು ಏನನ್ನೋ ಹುಡುಕುತ್ತಿತ್ತು. ನಮ್ಮ ಚಿಕ್ಕಪ್ಪನವರು ಮತ್ತು ಹೆಣ್ಣು ಕೊಡಬೇಕಿರುವ ಮಾವನವರು ಮೊದಲೇ ಪರಿಚಿತರಿದ್ದರಲ್ಲವೇ ಉಭಯ ಕುಶಲೋಪರಿ, ಅದೂ….ಇದೂ ಮಾತಾಡ್ತಾ ಕುಳಿತರು. ಹುಡುಗಿಯನ್ನು ನೋಡಬೇಕೆನ್ನುವ ಕುತೂಹಲ ನನ್ನೊಳಗೆ ತವ ತವಕಿಸುತ್ತಿತ್ತು. ಅತ್ತ ಅವರ ಮಾತು ಮುಗಿಯಲೊಲ್ಲದು ಇತ್ತ ನನ್ನ ಚಿತ್ತದ ಚಡಪಡಿಕೆ….. ಹೇಗಾಗಿರಬೇಡ. ಕೊನೆಗೂ ನನ್ನ ತವಕ ಅವರಿಗೆ ಅರ್ಥವಾಯಿತೋ ಅಥವಾ ಅವರ ಮಾತುಗಳು ಮುಗಿದವೋ ಗೊತ್ತಿಲ್ಲ. ನನ್ನವಳ ನೋಡುವ ಮೊದಲ ಅವಕಾಶ ಬಂದೇ ಬಿಡ್ತು! ಅವರ ಅಡುಗೆ ಮನೆಯ ಒಳಗಿನಿಂದಹಳದಿ ಮತ್ತು ಗುಲಾಬಿ ಬಣ್ಣದ ಸುಂದರ ಸಮತೋಲಿತ ಮಿಶ್ರಣ ಹೊಂದಿದ ರೇಷ್ಮೆ ಸೀರೆಯಲ್ಲೊಂದು ನೀಳ್ಜಡೆಯ ಚೆಂದದ ಹುಡುಗಿಯೊಂದು ಬಂತು. ನಾನು ಮೊದಲು ನೋಡಿದ್ದು ಅವಳ ರೇಷ್ಮೆಯಂದದ ನೀಳ್ಜಡೆಯನ್ನು, ಹೊಳೆವ ಕಂಗಳನ್ನು ಮತ್ತು ನಿಷ್ಕಲ್ಮಶ ನಗುವಿನ ಹಿಂದಿನ ದಾಳಿಂಬೆ ಸಾಲುಗಳನ್ನು. ಮೊದಲ ನೋಟದಲ್ಲೇ ನಾನು ಬಿದ್ದೋದೆ. ನಮ್ಮ ಚಿಕ್ಕಪ್ಪ ಆ ಹುಡುಗಿಯನ್ನು ಮಾತನಾಡಿಸಿದರು.“ಏನವಾ….. ತಂಗಿ ನಿನ್ ಹೆಸರೇನು?”“ಭಾರತೀ……”“ಹೆಸರೇಳಂದ್ರ ಹಿಂಗೇಳ್ಬಾರ್ದಮ ಹೆಸರು ತಂದೆ ಹೆಸರು ಅಡ್ಡ ಹೆಸರು ಹೇಳಬೇಕಮ್ಮಾ”“ಭಾರತಿ ಬಸವರಾಜ ಗಿಡ್ನಂದಿ”……. ಹೀಗಂದ ಅವಳ ಇನಿದನಿ ನನ್ನ ಕರ್ಣಪಟಲದ ತುಂಬಾ ಆವರಿಸಿಕೊಂಡು ಬಿಟ್ಟಿತು….. ನಮ್ಮ ಚಿಕ್ಕಪ್ಪ ಮತ್ತೇನು ಕೇಳಿದರೋ……. ಅವಳೇನು ಹೇಳಿದಳೋ ಯಾರಿಗೆ ಬೇಕು ಅವಳ ಇನಿದನಿ ನನ್ನ ಕಿವಿಯೊಳಗೆ ಗುಂಯ್ ಗುಡುತ್ತಿದೆ ಅಷ್ಟು ಸಾಕು. ಮದುವೆ ಅಂತಾದರೆ ಇವಳನ್ನೇ, ಅಂತ ನಿರ್ಧರಿಸಿತು ನನ್ನ ಮನ. ಹೌದಪ್ಪಾ….. ಅವರು ನಿನಗೆ ಹೆಣ್ಣು ಕೊಡಲು ಒಪ್ಪಲಿಲ್ಲಾಂದ್ರೆ? ಏನ್ಮಾಡ್ತಿ?ಛಾನ್ಸೇ ಇಲ್ಲ ನನ್ನ ರೂಪವನ್ನು ಯಾರೂ ತಿರಸ್ಕರಿಸಲಾರರು ಎಂಬ ಧೃಡತೆ, ಇದಕ್ಕೂ ಮಿಗಿಲಾಗಿ ನನಗೆ ಸರಕಾರಿ ನೌಕರಿ ಇತ್ತು! ನಮ್ಮ ಚಿಕ್ಕಪ್ಪ ಆ ಹುಡುಗಿಯ ಇಂಟರ್ವ್ಯೂ ತಗೋಳದನ್ನು ಮುಗಿಸಿದರು. ಹುಡುಗಿಯನ್ನು ಒಳಗೆ ಕಳಿಸಲಾಯಿತು. ಖರೆನೆ ಅವರ ಮನೆಯೊಳಗಿನ ಕರೆಂಟ್ ಹೋದಂತಾಯ್ತು. ಮತ್ತೆ ಆ ರೂಮಿನಲ್ಲಿ ನನ್ನ ಮೌನದ ಸುತ್ತ ಅವರ ಮಾತುಗಳು. ಹೋಗಿದ್ದ ಕರೆಂಟ್ ಮತ್ತೆ ಬಂತು. ಅದೇ ಹುಡುಗಿ ಒಂದು ಟ್ರೇ ನಲ್ಲಿ ಎಲ್ಲರಿಗೂ ತಿಂಡಿ ತಂದಿದ್ದಳು. ಸೊಗಸಾದ ಅವಲಕ್ಕಿ ವಗ್ಗರಣೆ! ವಾಹ್….. ಅದರ ರುಚಿ! ಅವಲಕ್ಕಿಯನ್ನು ಎಲ್ಲರಿಗೂ ಕೊಡುತ್ತಾ ಆ ಹುಡುಗಿ ನನಗೆ ಕೊಡುವಾಗ ಸ್ಬಲ್ಪ ಬಾಗಿದ್ದಳು ಅವಳ ನುಣುಪು ನೀಳ್ಜಡೆ ಸರಕ್ಕನೆ ಮುಂದೆ ಬಂದು ನಾಟ್ಯ ಮಾಡಲು ಶುರುಮಾಡಿತು. ಆ ಕೇಶ ನೃತ್ಯದ ಜೊತೆ ಅವಳ ಸೊಗಸಾದ ನಗುವಿನ ನೋಟದೊಂದಿಗೆ ಬೆರೆತ ದುಂಡುಮಲ್ಲಿಗೆ ಘಮ! ನಾನು ಕಳೆದು ಹೋಗಲು ಇನ್ನೇನು ಬೇಕು? ನನ್ನೆದೆ ಢವ ಢವ ಅನ್ನೋದನ್ನ ಬಿಟ್ಟು ಇವಳೇ ಫಿಕ್ಸು…. ಇವಳೇ ಫಿಕ್ಸು ….. ಅನ್ನತೊಡಗಿತ್ತು. ಹುಡುಗಿ ಅವಲಕ್ಕಿ ಕೊಟ್ಟು ಅಡುಗೆ ಮನೆ ಸೇರಿತು. ಮತ್ತೆ ಕರೆಂಟ್ ಹೋಯಿತು. ಛೇ…. ಅವಲಕ್ಕಿ ರುಚಿಸುತ್ತಿಲ್ಲ. ಹೆಂಗೂ ಚಹ ಕೊಡಲು ಬರಬೇಕಲ್ಲ….? ಅದೇ ಆಸೆಯಿಂದ ಅವಲಕ್ಕಿ ಯನ್ನು ಗಬಗಬನೆ ತಿಂದೆ. ನಮ್ ಚಿಕ್ಕಪ್ಪ,“ಎಷ್ಟು ಜಲ್ದೀ ಅವಲಕ್ಕಿನ ತಿಂದ್ಯೋ….” ಅಂದ್ರು. ನನ್ನ ಅವಸರ ಅವರಿಗೇನು ಗೊತ್ತು. ಸುಮ್ನೆ ನಾನು, “ಹಿ…ಹಿ…ಹಿ” ಅಂತ ಹಲ್ಲು ಕಿಸಿದೆ. ನನಗೆ ಚಹ ತರುವ ನೆಪದಲ್ಲಿ ಕರೆಂಟ್ ಬರಬೇಕಿತ್ತು, ಆದ್ರೆ ಈ ಬಾರಿ ಪವರ್ ಕಟ್….. ಕರೆಂಟ್ ಬರಲಿಲ್ಲ. ನಮ್ಮತ್ತೆ ಚಹಾ ತಗೆದುಕೊಂಡು ಬಂದ್ರು. ಸಿಹಿ ಚಹಾ ಸಪ್ಪೆ ಸಪ್ಪೆ. ನನ್ನ ಮುಖವೂ…..ಮುಂದೇನಾಯಿತು ಸಧ್ಯದಲ್ಲೇ ಹೇಳುವೆ. ಆದಪ್ಪ ಹೆಂಬಾ
“ದಾಂಪತ್ಯ ಗೀತೆ” ಒಂದು ನೆನಪು ಆದಪ್ಪ ಹೆಂಬಾ Read Post »

