ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಭಂಡಾರಿ ಗಜಲ್ ನನ್ನ ಪ್ರೀತಿ ಗರಿಕೆಯಂತೆ ಆದರೀಗ ನೋಡು ಸೋತು ಶವವಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.ನೋವಿರದ ಊರೆಲ್ಲಿದೆ ಆ ನೋಟ ಆಟವೀಗ ನೋಡು ಜೀವ ಹಣ್ಣಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಸಾವಿನ ಊರಿಗೆ ತೆರಿಗೆ ಕಟ್ಟಬೇಕು ಕನಸಿಗಲ್ಲ ಒಲವು ಒಲವಾಗೇ ಮಣ್ಣಾಗುತಿದೆ ನೋಡಿಲ್ಲಿ.ಬದುಕೊಂದು ಪಾಠ ಶಾಲೆ ಮೊಹಬತ್ ಮುದುರಿ ಕುಸಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ನನ್ನ ನಾನು ಅರಿತ ಮೇಲೆ ಯೌವ್ವನಕ್ಕೂ ಮುಪ್ಪು ಅಡರಿ ಹೆಪ್ಪಾಗಿರುವೆ.ವಿಳಾಸವಿರದ ದಾರಿ ನನ್ನದು ನಿನ್ನ ಪ್ರೀತಿಯುಸಿರು ಜನ್ನತ್ ಗೆ ಚಲಿಸಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಏನಿದ್ದರೇನು ಇಲ್ಲಿ ಎಲ್ಲ ಮಣ್ಣೊಳಗೆ ಸಿಗುವಾಗ ನನ್ನಾಸೆಗೂ ಅಲ್ಲೆ ಮುಕ್ತಿ ಸಿಗಲಿ ಬಿಡುಈಜಲಾಗದ ಪಾಡು ಕಡಲ ಕಣ್ಣೀರು ಬಡಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ. ಎಂತ ಗೋಳು “ವಾಣಿ” ನಿನ್ನ ಬಾಳು ಗೆಲ್ಲಲಾಗದ ಒಲವೊಂದು ನಗುತಿದೆ ಬಾನಾಡಿ ಚೆಲ್ಲಿ.ಕನಸಿನ ಅರಮನೆ ಮುರಿದು ಉಸಿರು ತಣ್ಣಗಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.  ವಾಣಿ ಭಂಡಾರಿ  ಶಿವಮೊಗ್ಗ           

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಕವಿತೆ “ಭಾವಗಳ ಹೂರಣ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ “ಭಾವಗಳ ಹೂರಣ” ಬರೆದ ಒಲವ ಓಲೆಯ ತುಂಬಾನಿನ್ನುಸಿರ ಬಿಸಿ ಸಿಂಚನಬೆರೆಸಿ ಪ್ರೇಮದ ಪನ್ನೀರ ಹನಿಯುನೀಡಿ ಎನ್ನೆದೆಗೆ ಹೊಸ ಚೇತನ ಪ್ರತೀ ಪದಗಳಲೂ ತುಂಬಿ ತುಳುಕುತಿದೆನಿನ್ನಂತರಂಗದ ಭಾವಗಳ ಹೂರಣಜೊತೆ ಜೊತೆಗೆ ನಡೆವಾಸೆ ಬದುಕಲಿಕಟ್ಟಿರುವೆ ಬಯಕೆ ತೋರಣ ಪುಳಕಗೊಂಡಿದೆ ತನುಮನ ಒಂದಾಗಿಹೃದಯದೊಳು ನವ್ಯ ಮಿಡಿತತಳಮಳವು ಹೆಚ್ಚಿರೆ ಒಂದೊಮ್ಮೆಕಾಣಬೇಕೆಂಬ ತುಡಿತ ತೆರೆದ ಪುಸ್ತಕದಂತೆ  ನಿನ್ನೊಡಲಮಾತಿನ ಸರಣಿ ಮಾಲೆಮರೆತೆ ಮಧುರ ಅನುಭೂತಿಯಲಿಸೆಳೆಯಿತು ಮೋಹದ ಸೆಲೆ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಕವಿತೆ “ಭಾವಗಳ ಹೂರಣ” Read Post »

ಪುಸ್ತಕ ಸಂಗಾತಿ

ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” ಒಂದು ಓದು ಶಿವಲೀಲಾ ಹುಣಸಗಿ ಯಲ್ಲಾಪುರ

ಪುಸ್ತಕ ಸಂಗಾತಿ ಶಿವಲೀಲಾ ಹುಣಸಗಿ ಯಲ್ಲಾಪುರ ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” . ಸುಧಾರಾಣಿ ಉದಯೋನ್ಮುಖ ಹಾಗೂ ಭರವಸೆಯ ಕವಯತ್ರಿ.. ಅವಳ ನೇರ ನಿಲುವು,ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಗಟ್ಟಿಗಿತ್ತಿ.ಅಷ್ಟೇ ಮೃದುವಾಗಿ ಪ್ರೀತಿಗೆ ಕರಗಿ ಹೋಗುವ ಮನಸ್ಸುಳ್ಳವಳು.ಹಾಗಂತ ಅವಳನ್ನು ಹತ್ತಿರದಿಂದ,ದೂರದಿಂದ ಬಲ್ಲವರಿಗೆ’ ಸುಧಾ’ ಅಸಮಾನ್ಯ ಳಂತೂ ಹೌದು.ಕ್ರೀಡಾಪಟು,ನೃತ್ಯಗಾತಿ,ಹಾಡುಗಾರ್ತಿ,ಸಂಘಟಕಿ,ಒಳ್ಳೆಯ ಓದುಗಳು.ಒಟ್ನಲ್ಲಿ ಬಹುಮುಖ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.‘ಸುಧಾ’ ಳ ಚೊಚ್ಚಿಲ ಕವನ ‘ಮನದ ರಿಂಗಣ’ ನನ್ನ ಕೈಗಿತ್ತಾಗ ಸುಧಾ ತನ್ನೆಲ್ಲ ಬವಣೆಗಳ ಹೊತ್ತು ಹೊರಟ ಸಾಮಾನ್ಯ ಮಹಿಳೆಯಂತೆ ಕಾಣುವುದಂತೂ ಸತ್ಯ. ಈ ಕವನಸಂಕಲನದ ಕವಿತೆಗಳನ್ನು ಓದುತ್ತ ಹೊರಟವಳಿಗೆ; ನನ್ನೊಳಗಿನ ಭಾವ ಮೈತಳೆದು ನಿಂತಂತೆ, ಅನುಭವ ಕಟ್ಟಿಕೊಳ್ಳುವತ್ತ ಹೆಜ್ಜೆ ಇಟ್ಟಂತೆ. “ಅವ್ವ” ಕವಿತೆ ಒಂದು ಕ್ಷಣ ಕಣ್ಣತೇವಗೊಳಿಸಿದ್ದು ಗೊತ್ತಾಗಲೇ ಇಲ್ಲ. ಕಣ್ಣೇರಡು ಬತ್ತಿದೆ ಅಪ್ಪನ ಕುಡಿತದ ಅಮಲಿಗೆರಕ್ತ ಅಲ್ಲಲ್ಲಿ ಮರಟಿದೆಎದ್ದ ಬಾಸುಂಡೆಯ ಕುರುಹಾಗಿಆದರೂ ಅವ್ವ ಹಚ್ಚಗೆ ನಗುತ್ತಾಳೆಕಲೆಯ ಮೇಲೆ ಬೆಚ್ಚಗಿನ ಬಟ್ಟೆ ಒತ್ತಿದಂತೆ! ‘ಅವ್ವ’ ಎಂದರೆ ಹಾಗೆ ಅಲ್ಲವಾ? ಎಲ್ಲ ದುಗುಡ ದುಮ್ಮಾನಗಳ ಬದಿಗೊತ್ತಿ ನಗುವ ಛಾತಿ ಹೊತ್ತಿರುವ ಏಕೈಕ ವಿಶ್ವದ ಮಹಿಳೆಯೆಂದರೆ ಅವ್ವ.ಅವಳನ್ನು ಸೋಲಿಸುವುದು ಅಷ್ಟು ಸುಲಭವಿಲ್ಲ.ಆದರೆ ನರಕ ತೋರಿಸುವ ಗಂಡ,ಕೊನೆಗೆ ಇಲ್ಲವಾದಾಗಲೂ ಅವ್ವ ಹೆಬ್ಬಂಡೆಯಂತೆ.ಸುಟ್ಟ ರೊಟ್ಟಿಯಂತೆ ಬೆಂದಾಗಲೂ ಅವ್ವ ನಗುತ್ತಾಳೆ ಎಂದರೆ ಅವಳ ಮೌನ ವ್ಯರ್ಥವಾಗಲು ಬಿಡದ ಛಲಗಾರ್ತಿ ಎಂದರೆ ತಪ್ಪಾಗದು..ಇಂತಹ ವಿಶಿಷ್ಟ ಹಾಗೂ ಸ್ತ್ರೀ ಸಮಾನತೆಯೆಂಬ ಮೌಡ್ಯಗಳು ಒಮ್ಮೆ ಸುಳಿದಾಡಿದ್ದಂತೂ ದಿಟ. ‘ರಂಗೇರಿಸು’ ಎಂಬ ಕವಿತೆ ವಿರಹಿಯಾಗಿ ಕಂಗೆಟ್ಟ ಕನವರಿಕೆಗಳು ಮನತಟ್ಟಿದವು. ನಿನ್ನ ಕನವರಿಕೆಗೆನಿದ್ದೆಗಣ್ಣಲೂ ಕೈ ತಡಕಾಡಿದೆಎದೆಗೊತ್ತಿ ದೂಡಿಮತ್ತೆ ಕಾಡಬೇಡ ಹೋಗೆಂದುಹುಸಿಯಾಗಿ ತಳ್ಳಲು,ಕನಸ ನನಸಾಗಿಸಿ,ಆಲಂಗಿಸುನಮ್ಮ ಮಿಲನಕೆ ಚಂದಿರನುಕೋಟಿ ತಾರೆಯ ಮಧ್ಯೆವಿರಹಿಯಾಗುವಂತೆ!.. ಇದೊಂದು ವಿರಹ ಸಾಕು ಕೋಟಿ ಕಟ್ಟಳೆಗಳ ನಡುವೆಯೂ ಪ್ತೇಮವು ಭಗ್ನಪ್ರೇಮಿಯಂತೆ ರಾರಾಜಿಸುತ್ತಿದೆ..ಸುಧಾಳ ಮನಸ್ಸು ಚಂಚಲವಾಗಿ ಕೊನೆಗೆ ಹಿಡಿದಿಟ್ಟುಕೊಳ್ಳುವ ಕಾರ್ಯ ವೈಖರಿ ಪ್ರೇಮ ಗೆದ್ದಂತೆ ಅನ್ನಿಸದಿರದು. “ಮತ್ತೆ ಆವಿರ್ಭವಿಸು”ಈ ಇದೊಂದು ವಿಶೇಷ ಕವಿತೆ.ವಿಶ್ವಗುರು..ಕ್ರಾಂತಿಕಾರಿ ಬಸವಣ್ಣನವರು ಎಲ್ಲರಿಗೆ ಕಾಯಕವೇ ಕೈಲಾಸ ಎಂದು ಎಲ್ಲರಿಗೂ ಲಿಂಗ ಧಾರಣೆ ಮಾಡಿಸಿ ಸಮಾನತೆಯ ಬೀಜ ಬಿತ್ತಿದ ಮಹಾನ್ ವ್ಯಕ್ತಿಗಳು. ವಚನದೊಂದಿಗೆ ಭವದ ಕಷ್ಟವ ನೂಕಬೇಕು ಎಂಬುದನ್ನು ಸಾರಿದ್ದನ್ನು ಮರೆಯುವಂತ ಸ್ಥಿತಿಗೆ ನಾವೆಲ್ಲ ಬಂದು ನಿಂತಿದ್ದಿವಿ ಎಂದರೆ ವಿಷಾದನೀಯ. ಬದಲಾಗಬೇಕಿದೆ ಮನುಕುಲನೀನೆಣಿಸಿದಂತೆಪ್ರತಿಮೆಯಾಗಿ ಸ್ಥಾವರವಾಗದೇಜಂಗಮವಾಗುಮತ್ತೆ ಅಮರನಾಗು ಅವಿರ್ಭವಿಸು.. ಕವಯತ್ರಿಯ ಅಳಲು ಒಂದೇ ಒಂದು.ಜಾತಿ,ಧರ್ಮ ಮೀರಿ ಮಾರ್ದನಿಸಲಿ ಮಾನವ ಜಾತಿಯೊಂದೆ ಎಂದು ಮತ್ತೆ ಬೋಧಿಸಲಿ ಜಗದ ಚಕ್ಷು ಶುಚಿಯಾಗಲಿ ಎಂಬ ಕಳಕಳಿಗೆ ಮನಸ್ಸು ಮಾಗುವತ್ತ ಸಾಗಿದೆ ಎಂಬುದಕ್ಕೆ ಸಾಕ್ಷಿ.ಪುನಃ ಪುನಃ ಹುಟ್ಟಿ ಬರಬೇಕು ಭಗವಂತನ ಅನುಯಾಯಿಗಳು.. ಎಂಬ ನಿರೀಕ್ಷೆ ಕವಯತ್ರಿಯದು. ನಾನು ಎಂಬ ಕವಿತೆ ಸುಧಾಳ ಒಳಮನಸ್ಸನ್ನು ತಿರುವಿ ಹಾಕಿಬೇಕಿದ್ದನ್ನುಒಮ್ಮೆ ಓದಬೇಕು.‌‍ನಾನು ಎಂದರೆ ಯಾರೆಂಬುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ.. ಬಾಲ್ಯದಂತೆ ನೋವಾದಾಗಲೆಲ್ಲಸಂತೈಸುವರ ನಿರೀಕ್ಷಸುವಂತಿಲ್ಲಬೊಬ್ವಿಟ್ಟು ಅಳುವಂತಿಲ್ಲಬೆಚ್ಚಿಬಿಟ್ಟೆ ನಾನು ನನ್ನ ಅಸ್ತಿತ್ವ ನೆನದುಸತ್ಯದ ವ್ಯಂಗ್ಯನಗೆಗೆ ಶೂನ್ಯವೆನಿಸಿತುನನಗೆ ‘ನಾನು’ ಎಂಬ ಹೆಗ್ಗಳಿಕೆಗೆ ನಾನು ಎಂಬ ಮರಿಚೀಕೆಯ ಒಳಹೊರಗು ಪ್ರತಿಯೊಬ್ಬರಲ್ಲೂ ನಾನೆಂಬುದು ಹಾಸುಹೊಕ್ಕಾಗಿದೆ.ಕೊನೆಗೆ ವಿಷಾದದ ನಗೆಯಲ್ಲಿ ಜೀವನದಲ್ಲಿ ನಿಂತಿರುವುದು ನಾನೆ ಎಂಬ ಶೂನ್ಯ ಅರಿವಾದಾಗ ನಮ್ಮ ಅಸ್ತಿತ್ವ ಎಷ್ಟು ಬೇರು ಬಿಟ್ಟಿದೆ ಎಂಬುದು ಗೋಚರಿಸುತ್ತದೆ. ಹೀಗೆ ಕವಯತ್ರಿಯ ಪಯಣ ಸುಖ,ದುಃಖ, ನೋವು ನಲಿವು,ಕೋಪ,ಒಂಟಿತನ,ಅಪ್ಪ,ಬುದ್ದನೊಬ್ಬನೇ,ಇಂತಾದರೆ ಉಳಿದಿತೇ ಸ್ವಾತಂತ್ರ್ಯ, ಪೊರಕೆ ಮಾರುವ ಹುಡುಗಿ,ಕೆಣಕಬೇಡಿ, ಒಲವ ಧ್ಯಾನ,ಶಪಥ,ಮಂದಾಗ್ನಿ,ಒಲವ ಪ್ರಣತಿ, ಹೀಗೆ ಒಟ್ಟು 44 ವೈವಿಧ್ಯಮಯ ಕವಿತೆಗಳು ಒಮ್ಮೆ ಪ್ರಕೃತಿಯನ್ನು, ಮತ್ತೊಮ್ಮೆ ಸಂಬಂಧಗಳು,ಇನ್ನೊಂದು ಮತ್ತೆ ಹೆಣ್ಣಾಗಿ ಹುಟ್ಟಬೇಕಿದೆ ಎಂಬ ಭಾವಗಳು ಶವಯಾತ್ರೆಯ ಮುಂದೆ ಸಮಾಧಿ ತನಕ ಸುಧಾಳ ಮನದಲ್ಲಿ ರಿಂಗಣಿಸಿದ ಎಲ್ಲ ಪಾತ್ರಗಳು ಅನಾವರಣಗೊಂಡಿದ್ದು ಕವಯತ್ರಿಯ ಭಾವಯಾನದಲ್ಲಿ ಅಲ್ಲಲ್ಲಿ ಮೈಲುಗಲ್ಲುಗಳನ್ನು ನಿಲ್ಲಿಸಲು ಪ್ರಯತ್ನ ಮಾಡಿರುವುದು ಅಭಿನಂದನಾರ್ಹ. ಒಟ್ಟಾರೆ ಹೇಳುವುದಾದರೆ, ಕವನಸಂಕಲನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನಸಹಾಯ ಪಡೆದ ಕೃತಿ ಇದಾಗಿದ್ದು ಉತ್ತಮ ಸಂವಹನ ಹಾಗೂ ಓದುಗನ ಮನದಲ್ಲಿ ಒಂದಿಷ್ಟು ಕವಿತೆಗಳ ಸಾಲುಗಳು ನೆಲೆನಿಲ್ಲುವುದಂತೂ ದಿಟ!.ಹೀಗೆ ಸಾಗಲಿ ಅಕ್ಷರಗಳ ಪ್ರೇಮ,ಶಿಲ್ಪಿಯ ತೆರದಿ ಉಳಿಬಿಳಲಿ ಕವಿತೆಗಳ ಅಂತರಂಗಕೆ,ಅದರ ಸದ್ದುಗಲ್ಲುಗಲ್ಲಿಗೂ ಡಂಗುರ ಸಾರುವಂತಿರಲೆಂದು ಶುಭ ಹಾರೈಸುವೆ…                                          ಶಿವಲೀಲಾ ಹುಣಸಗಿ 

ಸುಧಾರಾಣಿ ನಾಯ್ಕ ಅವರ ಕೃತಿ “ಮನದ ರಿಂಗಣ” ಒಂದು ಓದು ಶಿವಲೀಲಾ ಹುಣಸಗಿ ಯಲ್ಲಾಪುರ Read Post »

You cannot copy content of this page

Scroll to Top