ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ನವಿಲಗರಿಯ ನೆನಪು”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನವಿಲಗರಿಯ ನೆನಪು” ನೀನು ಮಳೆ, ನಾನು ನವಿಲು,ನಿನ್ನ ನಗು ಹೊನ್ನ ಹೊಳಪು;ನೀಲಿ ಹಸಿರು ಗರಿಯ ತುಂಬನಿನ್ನ ಒಲವ ರೇಷ್ಮೆ ಒನಪು. ಹನಿಯ ಗೆಜ್ಜೆ ಮಣ್ಣಿಗೆ ತಾಗಿ,ಅದರ ತಾಳಕೆ ನಾನು ಕುಣಿದೆ;ನೀನು ನಗುತ್ತ ನೋಡಿದಾಗಗರಿಯ ನೆರಳಲಿ ಜಾಗ ಕೊಟ್ಟೆ. ಕೃಷ್ಣನ ಮುಡಿಯ ನೀಲಿ ಗರಿಯಂತೆನಿನ್ನ ಮನದಿ ನೆಲೆ ಬಯಸಿದೆ;ನಿನಗಾಗಿ ತಂದ ನವಿಲಗರಿಯಕೊಡಲು ಕೈಯಲ್ಲಿ ಹಿಡಿದು ನಿಂತೆ. ಹೇಳಬೇಕಿದ್ದ ಮಾತು ಉಳಿಯಿತು,ಚಾಚಬೇಕಿದ್ದ ಕೈ ಮುದುಡಿತು;ಮೋಡದಂತೆ ನೀನು ಸರಿದೆ,ನನ್ನ ಹಾಡಲಿ ನಾನೇ ಉಳಿದೆ. ಪುಸ್ತಕದಲಿ ಹೊನ್ನಂಚಿನ ಗರಿಯಿಟ್ಟುಮರಿ ಬರುವುದೆಂದು ಕಾದೆ;ಪುಟ ತೆರೆದು ಗರಿಯ ಸವರಿನೀನು ಬರುವ ಕನಸು ಕಂಡೆ. ಮರೆಯಲೆಂದು ಮಧು ಹಿಡಿದೆ,ಹೊರಗೆ ಮಳೆಹನಿಯ ಸದ್ದು;ನೀನು ಬಂದೆಯೆಂದು ತಿರುಗಿದೆಬಾಗಿಲಲ್ಲಿ ಗಾಳಿಯ ಗುದ್ದು. ಮತ್ತೆ ಮಳೆ, ಮತ್ತೆ ಕುಣಿತ,ನೀನು ನಿಂತ ಜಾಗ ಮಾತ್ರ ಖಾಲಿ;ಪುಸ್ತಕ ಮುಚ್ಚಿ ಎದೆಗೊತ್ತಿಕೊಂಡೆಒಳಗೆ ಇನ್ನೂ ಮುರಿದ ಗರಿ. ಮೊದಲ ಹನಿಗೆ ಗರಿ ತೆರೆದೆ,ನಿನ್ನ ನೆನಪಿಗೆ ಕಣ್ಣು ತುಂಬಿ;ಮಳೆ ನಿಂತ ಮೇಲೂ ಒದ್ದೆನೀನು ಮುಡಿಯದ ನವಿಲಗರಿ.
ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ನವಿಲಗರಿಯ ನೆನಪು” Read Post »

