ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಹಳ್ಳಿಗಾಡಿನ ಸಂಸ್ಕೃತಿಯ ಸೊಬಗು ಸೀಗಿ ಹುಣ್ಣಿಮೆ”‌ ಲೇಖನ ಡಿ ಪಿ ಯಮನೂರಸಾಬ್

ಸಂಸ್ಕೃತಿ ಸಂಗಾತಿ ಡಿ ಪಿ ಯಮನೂರಸಾಬ್ “ಹಳ್ಳಿಗಾಡಿನ ಸಂಸ್ಕೃತಿಯ ಸೊಬಗು ಸೀಗಿ ಹುಣ್ಣಿಮೆ”‌ ಭೂತಾಯಿಗೆ ಪೂಜೆ, ಸಕ್ಕರೆ ಆರತಿಯ ಸಂಭ್ರಮ: ಹೂಗಲೂರು ಗ್ರಾಮದಲ್ಲಿ ವಿಶಿಷ್ಟ ಆಚರಣೆ ಹೂವಿನ ಹಡಗಲಿ: ನಮ್ಮದು ಹಳ್ಳಿಗಳ ನಾಡು, ಕೃಷಿಯೇ ಜೀವಾಳವಾಗಿರುವ ರೈತಾಪಿ ಸಮಾಜ. ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಸೀಗಿ ಹುಣ್ಣಿಮೆ ಹಬ್ಬವು ಗ್ರಾಮೀಣ ಬದುಕಿನ ಸಂಪ್ರದಾಯ, ಭಕ್ತಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ರೈತರು ಭೂತಾಯಿಗೆ ಪೂಜೆ ಸಲ್ಲಿಸಿ ಉತ್ತಮ ಬೆಳೆ ಹಾಗೂ ಸಮೃದ್ಧ ಬದುಕಿಗಾಗಿ ಪ್ರಾರ್ಥಿಸುವ ಈ ಹಬ್ಬವನ್ನು ಹೂವಿನ ಹಡಗಲಿ ತಾಲೂಕಿನ ಹೂಗಲೂರು ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಭೂತಾಯಿಗೆ ನೈವೇದ್ಯ ಅರ್ಪಿಸಿದ ರೈತರು ಸೀಗಿ ಹುಣ್ಣಿಮೆ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಮನೆಮನೆಗಳಲ್ಲಿ ಹೋಳಿಗೆ, ಕರಿಗಡುಬು ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಲಾಗುತ್ತದೆ. ಬಳಿಕ ರೈತರು ಮನೆಯಿಂದ ತಯಾರಿಸಿಕೊಂಡು ತಂದ ನೈವೇದ್ಯದೊಂದಿಗೆ ತಮ್ಮ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಜಮೀನಿನಲ್ಲಿ ಐದು ಕಲ್ಲುಗಳನ್ನು ಇಟ್ಟು ಅವುಗಳನ್ನು ಪಾಂಡವರು ಎಂದು ಭಾವಿಸಿ, ವಿಭೂತಿ ಮತ್ತು ಕುಂಕುಮ ಹಚ್ಚಿ ಪೂಜಿಸುವುದು ಈ ಆಚರಣೆಯ ವಿಶೇಷವಾಗಿದೆ. ಇದರ ಪಕ್ಕದಲ್ಲಿ ಮತ್ತೊಂದು ಕಲ್ಲನ್ನು ಇಟ್ಟು ಅದನ್ನು ‘ಕಳ್ಳ’ ಎಂದು ಕರೆದು ಅದಕ್ಕೂ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಹೋಳಿಗೆ, ಕರಿಗಡುಬು ಸೇರಿದಂತೆ ಮನೆಯಿಂದ ತಂದ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಿ ಭೂತಾಯಿಗೆ ಭಕ್ತಿಯಿಂದ ನಮಿಸುತ್ತಾರೆ. ‘ಭೂತಾಯಿ ನಮಗೆ ಉತ್ತಮ ಬೆಳೆ ನೀಡಲಿ, ಮಳೆ-ಬೆಳೆ ಸಮೃದ್ಧಿಯಾಗಲಿ, ಕುಟುಂಬವನ್ನು ಸದಾ ಕಾಪಾಡಲಿ’ ಎಂದು ಪ್ರಾರ್ಥಿಸುವ ರೈತರು, ಪೂಜೆಯ ನಂತರ ಜಮೀನಿನಲ್ಲಿಯೇ ಕುಟುಂಬದವರೊಂದಿಗೆ ಊಟ ಮಾಡಿ ಸಂತೋಷದಿಂದ ಮನೆಗೆ ಮರಳುತ್ತಾರೆ. ಈ ಆಚರಣೆಯು ರೈತರು ಭೂಮಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧ ಹಾಗೂ ಪ್ರಕೃತಿಯ ಮೇಲಿನ ಗೌರವವನ್ನು ಸಾರುತ್ತದೆ. ಸಕ್ಕರೆ ಆರತಿಯ ಬೆಳಕಿನಲ್ಲಿ ಮಿಂದೆದ್ದ ಗ್ರಾಮ ಸೀಗಿ ಹುಣ್ಣಿಮೆ ಹಬ್ಬದ ಮರುದಿನ ಸಂಜೆ ನಡೆಯುವ ಸಕ್ಕರೆ ಆರತಿಯ ಆಚರಣೆಯು ಗ್ರಾಮದಲ್ಲಿ ವಿಶೇಷ ಸಂಭ್ರಮವನ್ನು ಮೂಡಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಯಸ್ಸಿನ ಮುತ್ತೈದೆಯರವರೆಗೆ ಮಹಿಳೆಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಶೃಂಗಾರಗೊಂಡು ಸಕ್ಕರೆ ಆರತಿ ಬೆಳಗಲು ಸಿದ್ಧರಾಗುತ್ತಾರೆ. ಸಕ್ಕರೆಯಿಂದ ತಯಾರಿಸಿದ ಗೊಂಬೆಗಳನ್ನು ಹಾಗೂ ಆರತಿಯ ತಟ್ಟೆಗಳನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿ, ತಟ್ಟೆಗಳಲ್ಲಿ ದೀಪ ಬೆಳಗಿಸಿಕೊಂಡು ಮಹಿಳೆಯರು ಸಾಲುಸಾಲಾಗಿ ದೇವಸ್ಥಾನದತ್ತ ತೆರಳುತ್ತಾರೆ. ಹೂವಿನ ಹಡಗಲಿ ತಾಲೂಕಿನ ಹೂಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹೆಣ್ಣು ದೇವತೆಯ ಮೂರ್ತಿಗೆ ಆರತಿ ಹಾಗೂ ದೀಪ ಬೆಳಗಿಸುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಸೊಬಗನ್ನು ಕಣ್ತುಂಬಿಕೊಳ್ಳಲು ಗ್ರಾಮದ ಜನರು ನೆರೆದಿರುವುದು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ವಿಶೇಷವಾಗಿ ಪುಟ್ಟ ಮಕ್ಕಳು ಸೀರೆ ಉಟ್ಟು, ಸಾಂಪ್ರದಾಯಿಕವಾಗಿ ಶೃಂಗಾರಗೊಂಡು ಸಕ್ಕರೆ ಆರತಿ ಬೆಳಗುವ ದೃಶ್ಯ ಎಲ್ಲರ ಮನಸ್ಸಿಗೂ ಮುದ ನೀಡುತ್ತದೆ. ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಸಂಪ್ರದಾಯವನ್ನು ಪಾಲಿಸುತ್ತಿರುವುದನ್ನು ಕಂಡು ಹಿರಿಯರು ಸಂತಸದಿಂದ ಹರಸುತ್ತಾರೆ. ಮಕ್ಕಳ ನಗು, ಮಹಿಳೆಯರ ಸಂಭ್ರಮ, ದೇವಸ್ಥಾನದ ಸಾನ್ನಿಧ್ಯ ಮತ್ತು ಆರತಿಯ ಬೆಳಕು ಇಡೀ ಗ್ರಾಮವನ್ನು ಹಬ್ಬದ ವಾತಾವರಣದಲ್ಲಿ ಮಿಂದೇಳುವಂತೆ ಮಾಡುತ್ತದೆ. ಸಂಸ್ಕೃತಿಯ ಪ್ರತೀಕ, ರೈತನ ಹೊಸ ಭರವಸೆ ಇಂದಿನ ಆಧುನಿಕ ಯುಗದಲ್ಲಿಯೂ ಇಂತಹ ಸಾಂಪ್ರದಾಯಿಕ ಆಚರಣೆಗಳು ಗ್ರಾಮೀಣ ಬದುಕಿನ ವೈಶಿಷ್ಟ್ಯವನ್ನು ಉಳಿಸಿಕೊಂಡಿವೆ. ಸೀಗಿ ಹುಣ್ಣಿಮೆ ಕೇವಲ ಒಂದು ಹಬ್ಬವಲ್ಲ; ಅದು ಭೂಮಿಯ ಮೇಲಿನ ಪ್ರೀತಿ, ಕೃಷಿಯ ಮೇಲಿನ ನಂಬಿಕೆ, ಕುಟುಂಬದ ಒಗ್ಗಟ್ಟು ಮತ್ತು ಹಿರಿಯರಿಂದ ಕಿರಿಯರಿಗೆ ಸಂಸ್ಕೃತಿಯನ್ನು ಪರಿಚಯಿಸುವ ಪರಂಪರೆಯ ಪ್ರತೀಕವಾಗಿದೆ. ಹೂಗಲೂರು ಗ್ರಾಮದಲ್ಲಿ ಕಂಡುಬಂದ ಸೀಗಿ ಹುಣ್ಣಿಮೆಯ ಆಚರಣೆಯು ನಮ್ಮ ಹಳ್ಳಿಗಾಡಿನ ಸಂಸ್ಕೃತಿಯ ಸೊಬಗನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ಭೂತಾಯಿಗೆ ಪೂಜೆ ಸಲ್ಲಿಸುವ ರೈತರ ಭಕ್ತಿ, ಸಕ್ಕರೆ ಆರತಿ ಬೆಳಗುವ ಮಹಿಳೆಯರ ಸಂಭ್ರಮ ಹಾಗೂ ಮಕ್ಕಳ ಉತ್ಸಾಹವು ಗ್ರಾಮೀಣ ಜೀವನದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಮಣ್ಣನ್ನು ನಂಬಿ ಬದುಕುವ ರೈತನಿಗೆ ಭೂಮಿಯೇ ತಾಯಿ; ಆ ತಾಯಿಗೆ ಸಲ್ಲಿಸುವ ಪೂಜೆಯೇ ಸೀಗಿ ಹುಣ್ಣಿಮೆ. ಸಂಪ್ರದಾಯದ ಬೇರುಗಳನ್ನು ಉಳಿಸಿ, ಸಂಸ್ಕೃತಿಯ ಬೆಳಕನ್ನು ಮುಂದಿನ ಪೀಳಿಗೆಗೆ ತಲುಪಿಸುವ ಈ ಹಬ್ಬವು ರೈತನ ಹೊಸ ಭರವಸೆಯ ಸಂಕೇತವಾಗಿದೆ. ಡಿ ಪಿ ಯಮನೂರಸಾಬ್

“ಹಳ್ಳಿಗಾಡಿನ ಸಂಸ್ಕೃತಿಯ ಸೊಬಗು ಸೀಗಿ ಹುಣ್ಣಿಮೆ”‌ ಲೇಖನ ಡಿ ಪಿ ಯಮನೂರಸಾಬ್ Read Post »

ಕಾವ್ಯಯಾನ, ಗಝಲ್

ಡಾ.ಹಸೀನಾ ಹೆಚ್.ಕೆ ಶಿವಮೊಗ್ಗ ಅವರ ಗಜಲ್

ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ ಗಜಲ್ ಕತ್ತಲನು ಸೀಳಿ ಸಂಸಾರಕೆ ಸಿರಿ ಕಾಂತಿಯಾದವಳು ಹೆಣ್ಣುಅಶಾಂತಿಯ ಗೋಡೆ ಮುರಿದು ಮನೆಗೆ ಭಾತಿಯಾದವಳು ಹೆಣ್ಣು ಸಂಕೋಲೆಗಳ ತೂರಿ ಸಮಾನತೆಯ ಬಾನಲಿ ಹಾರುತಿಹಳುಬದುಕಿನ ಪಯಣದಲಿ ಬೆಳಕಾಗಿ ನೀತಿಯಾದವಳು ಹೆಣ್ಣು ಕಣ್ಣೀರಿನ ಕಡಲನ್ನೇ ಭೇದಿಸಿ ನಗುವಿನ ಖಜಾನೆಯಾಗುತ್ತಾಳೆಜಗದ ಕಣ್ಣಾಗಿ ಸೌಜನ್ಯ ಕಲಿಸಿ ಶಾಂತಿಯಾದವಳು ಹೆಣ್ಣು ಅಬಲೆಯೆಂಬ ಕೀಳು ಮನಸುಗಳ ಯೋಚನೆ ಕಿತ್ತೆಸೆದವಳುಅಂಧಕಾರವ ಅಳಿಸಿ ಅರಿವಿನ ಕಣ್ತೆರೆಸಿ ಜ್ಯೋತಿಯಾದವಳು ಹೆಣ್ಣು ಕೇವಲ ರೂಪದ ಗೊಂಬೆಯಲ್ಲ ಹೆಣ್ಣು ಜ್ಞಾನ ದೀವಿಗೆಯಿವಳುಹಸೀನಾ ಅರಿವಿನ ಕಿಡಿಯಾಗಿ ಮಾನವತೆಗೆ ರೀತಿಯಾದವಳು ಹೆಣ್ಣು ಡಾ.ಹಸೀನಾ ಹೆಚ್.ಕೆ ಶಿವಮೊಗ್ಗ

ಡಾ.ಹಸೀನಾ ಹೆಚ್.ಕೆ ಶಿವಮೊಗ್ಗ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ-47 ಡಾ.ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಅರ್ಜುನ ಉವಾಚ ನಮ್ಮ ಸೇನೆ ಮಡಿಯಿತು; ಮಣಿಯಿತು, ಮಣಿಪುರದ ಅರಸನಿಗೆ “ನನ್ನನ್ನು ಮೊದಲು ಕಾಣಬೇಕಿತ್ತು ನೀನು. ಅದನ್ನು ಬಿಟ್ಟು ಪಾರ್ಥನನ್ನು ಕಂಡು ರಾಜಕಾರ್ಯವನ್ನು ಕೆಡಿಸಿದೆ. ನಿನ್ನ ದೇಹವನ್ನು ಹೆಚ್ಚಾಗಿ ನೋಯಿಸುವುದಿಲ್ಲ. ನೀನೀಗ ನನಗೆ ಮೈದುನ. ಸರಸ ಭಾವದಿಂದಲೇ ಯುದ್ಧ ಮಾಡೋಣ. ಕಂಗೆಡದಿರು” ಎಂದು ವ್ಯಂಗ್ಯದ ಮಾತುಗಳನ್ನಾಡಿ ಬಾಣಪ್ರಯೋಗಕ್ಕೂ ಮೊದಲೇ ಬಭ್ರುವಾಹನನನ್ನು ಚುಚ್ಚುವ ಪ್ರಯತ್ನ ಮಾಡಿದ ಪ್ರದ್ಯುಮ್ನ. ಮಾತು ಮುಗಿಸಿದಾಕ್ಷಣವೇ ನಾಲ್ಕು ಬಾಣಗಳು ಸಿಡಿದವು ಬಭ್ರುವಾಹನನ ಮೇಲೆ.“ಸಂಗ್ರಾಮವಿದು. ಇಲ್ಲಿ ಸರಸ ಭಾವಕ್ಕೆ ಎಡೆಯಿಲ್ಲ. ಭಾವನಿರಲಿ, ಮೈದುನನಿರಲಿ, ಯಾರೇ ಆಗಿರಲಿ ಯುದ್ಧಕ್ಕಿಳಿದ ಮೇಲೆ ಸಮರವೊಂದೇ ಗುರಿ. ಬಿಲ್ಲು ಬಾಣಗಳಿಗೆ ಸಂಬAಧದ ಋಣವಿಲ್ಲ” ಎಂದು ಹೇಳಿದ ಬಭ್ರುವಾಹನ ಸಿಡಿಸಿದ್ದು ಸಹಸ್ರ ಶರಗಳನ್ನು, ಏಕಕಾಲಕ್ಕೆ.ಪ್ರತಿಯಾಗಿ ಕೃಷ್ಣತನಯ ಪ್ರಯೋಗಿಸಿದ ಬಾಣಗಳು ಭೀಕರವಾಗಿ ತೋರಿದವು. ದಿಕ್ಕು, ಆಗಸ, ಭೂಮಿ ಇವುಗಳೆಲ್ಲಾ ಎಲ್ಲಿವೆ? ಎನ್ನುವುದನ್ನು ಪತ್ತೆಮಾಡಲಾಗದಂತೆ, ಸೂರ್ಯ- ಚಂದ್ರರನ್ನು ಗುರುತುಹಚ್ಚಲಾಗದಂತೆ ಹೊಮ್ಮಿದವು ಚಿಮ್ಮಿದವು ಬಾಣಗಳು. ಸುರಾಸುರರ ಕದನದಲ್ಲಿ, ಪ್ರಸಿದ್ಧ ವೀರರ ಯುದ್ಧದಲ್ಲಿ ಈ ಬಗೆಯ ಬಾಣಾಘಾತ ಆಗಿಲ್ಲ ಎನ್ನುವಂತೆ ಶರಪ್ರಯೋಗ ಮಾಡಿದ ಪ್ರದ್ಯುಮ್ನ.ಅವನ ಬಾಣಪ್ರಯೋಗದಿಂದ ಕತ್ತಲು ಕವಿಯಿತು. ಆ ಅಂಧಕಾರವನ್ನು ದೂರಮಾಡುವಂತೆ ಬಭ್ರುವಾಹನನ ಬಿಲ್ಲುಬಾಣಗಳ ಕಾಂತಿಯದು ಕಂಡುಬAದಿತು. ಕವಿದ ಇರುಳನ್ನು ಕಿತ್ತೋಡಿಸುವಂತೆ ಪರಸ್ಪರ ಸಂಘರ್ಷಕ್ಕಿಳಿದವು ಪ್ರದ್ಯುಮ್ನ ಮತ್ತು ಬಭ್ರುವಾಹನನ ಬಾಣಗಳು.ಆಗ ಬಭ್ರುವಾಹನನ ಬತ್ತಳಿಕೆಯಲ್ಲಿದ್ದ ಬಾಣಗಳು ಈಗ ಪ್ರದ್ಯುಮ್ನ ಶರೀರದಲ್ಲಿ. ತುಸು ಸಮಯಕ್ಕೆ ಮೊದಲು ಕೃಷ್ಣಸುತನ ಕರದಲ್ಲಿ ಶೋಭಿಸುತ್ತಿದ್ದ ಶರಗಳು ಈಗ ಮಣಿಪುರದರಸನ ಮೈಯ್ಯಲ್ಲಿ.ಬಭ್ರುವಾಹನನ ಭೀಕರತೆಯನ್ನು ಸಹಿಸದವನಾದ ಪ್ರದ್ಯುಮ್ನ. ಕುಸುಮಾಸ್ತçವನ್ನೇ ಪ್ರಯೋಗಿಸಿದ, ಮೂರೂ ಲೋಕಗಳು ನಡುಗುವ ರೀತಿಯಲ್ಲಿ. ಕುದುರೆ ಸವಾರರ ಶಿರಗಳು ನೆಲಕ್ಕುರುಳಿದವು. ಕುದುರೆಗಳು ಮಡಿದವು. ಆನೆಯ ಮೇಲಿದ್ದವರು ಇಳೆಯ ಮೇಲಕ್ಕೆ ಬಿದ್ದರು. ಆನೆಗಳು ಭೂಮಿಯ ಮೇಲೆ ಹೊರಳಿ ಬಿದ್ದವು. ರಥ ಓಡಿಸುತ್ತಿದ್ದವರ ದೇಹಗಳು ಸೀಳಿಹೋದವು. ರಥದ ಮೇಲಿದ್ದು ಯುದ್ಧ ಮಾಡುತ್ತಿದ್ದವರ ಶರೀರವೂ ಇಬ್ಭಾಗವಾಯಿತು. ಇಂಥದ್ದೊAದು ಭೀಕರ ಪರಿಣಾಮ ಉಂಟುಮಾಡಿತು ಪ್ರದ್ಯುಮ್ನ ಪ್ರಯೋಗಿತ ಬಾಣ.ಭೂಮಿಯಂತೆ ಒಂಭತ್ತು ಭಾಗಗಳಾಗಿ ಒಡೆದುಹೋಯಿತು ಆ ಯುದ್ಧಭೂಮಿ. ಯಮಪುರಿಯಂತೆ ನರಕಸದೃಶವಾಗಿ ತೋರಿತು. ಸಾಗರದ ನೀರು ಉಕ್ಕಿದಂತೆ ಅಲ್ಲೋಲ ಕಲ್ಲೋಲ ಸ್ಥಿತಿಯನ್ನಪ್ಪಿತು ರಣರಂಗ. ಜೀವನಚಕ್ರದ ರೀತಿಯಲ್ಲಿ ಪಾತಕಗಳಿಂದ ತುಂಬಿಹೋಯಿತು. ಶಿವಗಣಗಳೆನಿಸಿಕೊಂಡ ಭೂತ ಬೇತಾಳಗಳ ನೆಲೆಯಾಗಿ ಕೈಲಾಸಸಮಾನವಾಯಿತು. ರಕ್ತಮಾಂಸಗಳಿAದ ಕೂಡಿದ್ದ ರಣಭೂಮಿ ಅಸುರಲೋಕವನ್ನು ನೆನಪಿಸಿತು.ಹೆಣಗಳ ಭಕ್ಷಣೆಗಾಗಿ ಬಂದಿದ್ದವು ಯಕ್ಷ ರಾಕ್ಷಸ ಭೂತ ಬೇತಾಳ ಗಣಗಳು. ಭಯಂಕರವಾಗಿ ತೋರಿತು ಕದನರಂಗ ಆ ಕ್ಷಣದಲ್ಲಿ. ಶವಗಳನ್ನು ತಿನ್ನಲು ಬಂದಿದ್ದ ಕೆಲವು ಪಿಶಾಚಿಗಳು ಮುರಿದುಬಿದ್ದಿದ್ದ ಆನೆಯ ಸೊಂಡಿಲುಗಳನ್ನು ಕಹಳೆಗಳಂತೆ ಊದಿದವು. ಇನ್ನೂ ಕೆಲವು ಪಿಶಾಚಿಗಳು ಸತ್ತ ಆನೆಗಳ ದಂತವನ್ನು ಮುರಿದು, ತಲೆಬುರುಡೆಗೆ ಸಿಕ್ಕಿಸಿ, ಅದಕ್ಕೆ ನರಗಳನ್ನು ತಂತಿಗಳನ್ನಾಗಿಸಿ ಸಂಗೀತ ವಾದ್ಯವನ್ನಾಗಿ ಮಾಡಿದವು, ಹಾಡಿದವು. ಮೃತ ಕುದುರೆಗಳ ಕಾಲಿನ ಗೊರಸುಗಳನ್ನು ಕಿತ್ತುತೆಗೆದು, ಅವುಗಳನ್ನೇ ತಾಳಗಳನ್ನಾಗಿಸಿಕೊಂಡು, ಜೋರಾಗಿ ಬಡಿಯುತ್ತಾ ಲಯವನ್ನಿತ್ತು ಸಂಭ್ರಮಿಸಿದವು ಇನ್ನೂ ಹಲವು ಪಿಶಾಚಿಗಳು. ಸತ್ತ ಆನೆಗಳ ಶಿರಗಳನ್ನೇ ಚರ್ಮವಾದ್ಯಗಳನ್ನಾಗಿಸಿ ಧ್ವನಿ ಹೊಮ್ಮಿಸಿದವು ಉಳಿದ ಪಿಶಾಚಿಗಳು. ಈ ಹಾಡು, ತಾಳ, ಲಯಗಳಿಗೆ ಅನುಗುಣವಾಗಿ ಕುಣಿಯತೊಡಗಿದವು ಅನಿತೂ ಪಿಶಾಚಿಗಳು. ಪ್ರದ್ಯುಮ್ನ ಬಭ್ರುವಾಹನರ ಮೆರೆದಾಟಕ್ಕೆ ಸಾಕ್ಷಿಯಾಗಿದ್ದ ರಣರಂಗವದು ಪಿಶಾಚಿಗಳ ನಾಟ್ಯರಂಗವಾಗಿ ತೋರಿತು ಆ ಗಳಿಗೆಯಲ್ಲಿ.ತನ್ನ ಸೇನೆಯನ್ನು ಸಂಹರಿಸುತ್ತಲೇ, ರಕ್ತಪ್ರವಾಹವನ್ನು ಹರಿಸುತಲಿದ್ದ ಹರಿಸುತನ ಪರಿಯನ್ನು ಕಂಡು ಕ್ರೋಧಕ್ಕೊಳಗಾದ ಬಭ್ರುವಾಹನ. ನಮ್ಮ ಸೈನ್ಯದೆಡೆಗೆ ನುಗ್ಗಿಬಂತು ಅವನ ರಥ. ಅದೆಷ್ಟೋ ಸೈನಿಕರು ಆಹುತಿಯಾದರು ಅವನ ಕ್ರೋಧಕಿಡಿಗೆ.ಬಿದ್ದಿದ್ದ ಆನೆಗಳು ಬೆಟ್ಟಗಳಂತೆ ತೋರಿದವು. ಮಡಿದಿದ್ದ ಕುದುರೆಗಳು ಬಂಡೆಗಲ್ಲುಗಳAತೆ ಕಾಣಿಸಿದವು. ಕಡಿದಿದ್ದ ಕೈ ಕಾಲು ದೇಹಗಳು ಮರಗಳಾಗಿ, ಮರದ ತುಂಡುಗಳಾಗಿ ಗೋಚರಿಸಿದವು. ರಕ್ತಪ್ರವಾಹವೇ ನದಿಯಾಗಿ, ಒಡೆದಿದ್ದ ತಲೆಬುರುಡೆಗಳೇ ದೋಣಿಗಳಾಗಿ ಮೂರ್ತಗೊಂಡಿದ್ದವು ಅದೊಂದು ಸಮಯದಲ್ಲಿ.ಪ್ರದ್ಯುಮ್ನನ ಸಾರಥಿ, ಕುದುರೆಗಳು, ಧ್ವಜಗಳನ್ನು ಸರ್ವನಾಶ ಮಾಡಿದ ಬಭ್ರುವಾಹನ, ರಥವನ್ನೂ ಪುಡಿಗೈದ. ಹೊಸದು ರಥವನ್ನೇರಿ ನಿಂತ ಪ್ರದ್ಯುಮ್ನ. ಅದೂ ಚೂರಾಗಿಹೋಯಿತು ಬಭ್ರುವಾಹನನ ಬಿರುಸು ಬಾಣಕ್ಕೆ ಸಿಲುಕಿ. ಮತ್ತೊಂದು ರಥ ಬಂತು. ಅದಕ್ಕೂ ಇದೇ ಗತಿ. ಇನ್ನೊಂದು ರಥ ಬಂತು. ಇದಕ್ಕೂ ಅದೇ ಸ್ಥಿತಿ. ಹೀಗೆಯೇ ಪ್ರದ್ಯುಮ್ನ ಏರಿದ ಎಪ್ಪತ್ತು ರಥಗಳ ಹುಡಿಯೆಬ್ಬಿಸಿದ ಮಣಿಪುರದ ದೊರೆ.ಭೂಮಿಯ ಮೇಲಿನ ಯುದ್ಧವದು ಸಾಕು ಎನಿಸಿತೇನೋ ಅವರಿಗೆ! ಗಗನಕ್ಕೇರಿದರು. ಅಲ್ಲಿ ಕದನ ಹೂಡಿದರು. ಸಿಡಿಲ ರಭಸದಲ್ಲಿ ಬಾಣಗಳು ಸಿಡಿಯಲ್ಪಟ್ಟವು. ಅಷ್ಟರಲ್ಲಿ, ಆಯುಧಗಳಿದ್ದ ಚೀಲ ಭೂಮಿಯ ಮೇಲೆಯೇ ಇದೆ ಎನ್ನುವುದು ಇಬ್ಬರಿಗೂ ನೆನಪಾಯಿತು. ಇಂದ್ರನ ವಜ್ರಾಯುಧದ ಹೊಡೆತಕ್ಕೆ ಪರ್ವತ ಕೆಡೆದುಬೀಳುವಂತೆ ಭೂಮಿಗೆ ಬಂದುಬಿದ್ದರು ಘನಶೂರರು.ಪ್ರದ್ಯುಮ್ನ ಪರಾಕ್ರಮವದು ಸಾಲದಾಯಿತು ಮಣಿಪುರದರಸನನ್ನು ಮಣಿಸಲು. ಅನುಸಾಲ್ವ ಮತ್ತೆ ಬಭ್ರುವಾಹನನನ್ನು ಕೆಣಕಲು ಹೋದ. ವ್ಯಥೆಗೀಡಾದ. ಯೌವನಾಶ್ವ ಸೋಲು ಕಂಡ. ನೀಲಧ್ವಜ ಬಾಣದ ಏಟಿನ ಊಟವನ್ನುಂಡ.ನಮ್ಮ ಕಡೆಯ ಬಹುತೇಕ ಮಂದಿ ಬಭ್ರುವಾಹನನೆದುರು ಸೋತುಹೋದರು. ಗೆಲುವಿನ ಹುಮ್ಮಸ್ಸಿನಲ್ಲಿ ಅವನು ಮೈಮರೆತು ಮೆರೆಯುತ್ತಿದ್ದ. ಅವನ ಆ ಆನಂದವನ್ನು ನೋಡಲಾಗಲಿಲ್ಲ ನನಗೆ.ನಮ್ಮ ಪಕ್ಷದಲ್ಲಿ ಅವನನ್ನು ಎದುರಿಸಲು ಬಾಕಿಯಿದ್ದವರು ನಾನು, ಹಂಸಧ್ವಜ, ಸುವೇಗ ಮತ್ತು ವೃಷಕೇತು. ನಮ್ಮಲ್ಲಿ ಯಾರಾದರೊಬ್ಬರು ಈಗ ಅವನನ್ನು ಎದುರಿಸಬೇಕಿತ್ತು. ನಾನೇ ಯುದ್ಧರಂಗಕ್ಕೆ ಇಳಿಯುತ್ತೇನೆ ಎಂದುಕೊAಡೆ. ಬಭ್ರುವಾಹನನ ತಲೆಗೇರಿರುವ ಮದವನ್ನು ಇಳಿಸುತ್ತೇನೆ ಎಂದುಕೊAಡೆ. ಆದರೆ ಅದಾಗಲೇ ಉತ್ಸಾಹ ತೋರಿದ ಹಂಸಧ್ವಜ ರಾಜ. ಡಾ.ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ

Read Post »

ನಿಮ್ಮೊಂದಿಗೆ

ಮಾಜಾನ್‌ ಮಸ್ಕಿ ಅವರ ಕವಿತೆ “ತಿರುವುಗಳ ಬದುಕು”

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ “ತಿರುವುಗಳ ಬದುಕು” ಗೆಳೆಯನೀ ದೂರವಾದರೇನುಅರಿವಿನ ಹಾದಿಜೊತೆಯಾಯಿತುಸರಿದ ಕಪ್ಪು ಛಾಯೆಬೆಳದಿಂಗಳ ತಂಪಿನಲ್ಲಿತಾವರೆ ಅರಳಿದಂತೆ ನೀ ನನ್ನ ತೊರೆದು ಹೋದೆಬದುಕು ಸೆಳೆಯಿತುಮೋಹದ ಮಿಂಚುಕರಗಿಮಳೆ ಸುರಿದುಹಸಿರಿಗೆ ಉಸಿರಾದಂತೆಸುಳ್ಳು ಪ್ರೀತಿಯೇ ಸರಿಪ್ರೀತಿಯ ಸವಿ ನೀಡಿದೆಕ್ಷಣ ಕಾಲ ಬಯಸಿದ್ದೆಲ್ಲ ಸಿಗುತ್ತಿದ್ದರೆಬದುಕಿಗೆ ಬೆಲೆ ಎಲ್ಲಿಬದುಕು ಬವಣೆ  ಅಲ್ಲಸರಳತೆಯೂ ಅಲ್ಲಬಯಸಿದಂತೆ ಬದುಕುಸಾಗುವುದಿಲ್ಲ….. ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಅವರ ಕವಿತೆ “ತಿರುವುಗಳ ಬದುಕು” Read Post »

You cannot copy content of this page

Scroll to Top