ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲತಾ ಎ.ಆರ್ ಬಾಳೆಹೊನ್ನೂರು ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ ಡಾ. ಲತಾ ಎ.ಆರ್ ಬಾಳೆಹೊನ್ನೂರು “ಪ್ರೀತಿ” ಸುಂದರ ಬದುಕಿಗೆ ಬರೆದು ಮುನ್ನುಡಿಸಾರ್ಥಕತೆಗೆ ಬೇಕಿದೆ ನೆನೆವ ಬೆನ್ನುಡಿಎಲ್ಲರಲಿ ತುಂಬಿರಲಿ ಸಿಹಿಯಾದ ಸವಿನುಡಿಮುನ್ನಡೆಸುವ ಹಾದಿಗೆ ಮುಖ ಮಾಡಿ ಬಾಳಲಿ ಬೇಕಿದೆ ಬಲವಾದ ನಂಬಿಕೆಗಳಿಸಬೇಕು ಅದಕಾಗಿ ಬರದ ಸಡಿಲಿಕೆಬೇಕಿಲ್ಲ ಎಲ್ಲಾ ನನ್ನವರೆಂಬ ಮೂಢನಂಬಿಕೆಸತ್ಯ ನಿಷ್ಠೆ ಕರುಣೆ ಸಾರಿರಿ ಜಗಕೆ ನವ ಬದುಕಲಿ ಸ್ನೇಹವ ಗಳಿಸುಆತ್ಮೀಯತೆಯ ನಗುವನ್ನು ಸಂಪಾದಿಸುನೆನಪಿಡುವ ಕಾರ್ಯದಿ ಏನಾದರೂ ಸಾಧಿಸುಎಲ್ಲರ ಪ್ರೀತಿ ವಿಶ್ವಾಸ ಗಳಿಸು ಅತಿಥಿಗಳು ನಾವು ಬರೀ ಭೂಮಿಗೆಹೋಗಲೇಬೇಕು ಒಂದು ದಿನ ಸಾವಿಗೆಆಗಬೇಕು ಬೂದಿ ಉರಿವ ಚಿತೆಗೆಹೆಜ್ಜೆ ಗುರುತು ಬಿಟ್ಟುಹೋಗು ನಿನ್ನ ನಡೆಗೆ. ಡಾ. ಲತಾ ಎ.ಆರ್ ಬಾಳೆಹೊನ್ನೂರು..

ಡಾ. ಲತಾ ಎ.ಆರ್ ಬಾಳೆಹೊನ್ನೂರು ಅವರ ಕವಿತೆ “ಪ್ರೀತಿ” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ‌ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ‌ ಗಜಲ್ ಗಜಲ್(ಲಕ್ಷ್ಮಣ್ ಶರೆಗಾರ್ ಸರ್ ಅವರ ಶಾಯರಿಯ ಮಿಸ್ರಾ ಬಳಸಿಕೊಂಡು ಬರೆದದ್ದುನಿನ್ನನು ನೀ ಹಿಡಿದಿಟ್ಟುಕೊಂಡ ಮೇಲೆ ನನ್ನನು ನಾನು ಬಿಡಿಸಿಕೊಂಡಿದ್ದೇನೆ ) ನಿನ್ನನು ನೀನು ಹಿಡಿದಿಟ್ಟುಕೊಂಡ ಮೇಲೆನನ್ನನು ನಾನು ಬಿಡಿಸಿಕೊಂಡಿದ್ದೇನೆನೀ ಮೌನವ ಅಪ್ಪಿಕೊಂಡ ಮೇಲೆ,ನಾ ಮಾತಿನೊಂದಿಗೆ ಅಂತರ ಇರಿಸಿಕೊಂಡಿದ್ದೇನೆ ಅದೆಷ್ಟು ಸಲೀಸಾಗಿ  ನನ್ನನುಕಡೆಗಣಿಸಿ ಮುಂದೆ ಸಾಗಿದೆ ನೀ ನನ್ನನು ಆಯ್ಕೆಯಾಗಿ  ನೋಡಿದ ಮೇಲೆ,ನನ್ನನೇ ನಾ ಆದ್ಯತೆಯನ್ನಾಗಿ ಆರಿಸಿಕೊಂಡಿದ್ದೇನೆ ಮೊಹಬ್ಬತ್ತಿನ ಅದಾಲತ್ತಿನಲಿಮನಸುಗಳೇ ಸಾಕ್ಷಿ ಹೇಳುವವು  ನೀ ಹೃದಯದ ಕರೆಗೆ ಓಗೊಡದಾಗ,ನಾ ನೆನಪುಗಳ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ನಿನ್ನನು ಹಳಸದ ಹೊಂಗನಸಿನಂತೆ  ಸಿಂಗರಿಸಿ ರಾತ್ರಿ ಕಳೆಯುತ್ತಿದ್ದೆನೀ ಮಗ್ಗಲು ಬದಲಿಸಿದ ಮೇಲೆ,ನಾ  ಕಣ್ತುಂಬ ನಿದಿರೆಯನು ಕಟ್ಟಿಟ್ಟುಕೊಂಡಿದ್ದೇನೆ ಹುಸಿ ಕಲ್ಪನೆಯಲಿ ಸುಮ್ ಸುಮ್ಮನೆ ಖರ್ಚಾದಳು ವಾಣಿನೀ ದೂರಾದ ಮೇಲೆ ,ನಾ ಬಾಳಲು ತುಸು ಬದುಕನುಕೂಡಿಟ್ಟುಕೊಂಡಿದ್ದೇನೆ. ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ‌ ಅವರ ಗಜಲ್ Read Post »

You cannot copy content of this page

Scroll to Top