ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

“ನೇಹ ಬೋರಾ.. ಹೋರಾಟದ ಹೊಸ ರೂಪ” ಟಿ.ದಾದಾಪೀರ್‌ ತರೀಕೆರೆ

ಕಾವ್ಯ ಸಂಗಾತಿ ಟಿ.ದಾದಾಪೀರ್‌ ತರೀಕೆರೆ “ನೇಹ ಬೋರಾ.. ಹೋರಾಟದ ಹೊಸ ರೂಪ” ನೇಹ ಬೋರಾ..ಸ್ತ್ರೀ ಹೋರಾಟದ ಹೊಸ ರೂಪ ಪ್ರಸಿದ್ಧಿಗಾಗಿ ರ್ಯಾಂಪ್ ಗಳ ಮೇಲೆ ಕ್ಯಾಟ್ ವಾಕ್ ಹೆಜ್ಜೆಗಳ ಹಾಕಿದಸುಂದರಿ ಲಾರ, ಸುಷ್ಮೀತ, ಐಶ್ವರ್ಯ ವಜ್ರದ ಕಿರೀಟ ಧರಿಸಿಭುವನ ಸುಂದರಿಯಾದರು ನೇಹ…..ನೀನು ಮಣ್ಣಲ್ಲಿ ಅರಳಿ, ಬೀದಿಯಲ್ಲಿ ತೆವಳಿ ಸೌಂದರ್ಯದ ಹೊಸ ಭಾಷ್ಯಬರೆದವಳು ಅನ್ಯಾಯದ ವಿರುದ್ಧ ಸಿಡಿದವಳುಅದುಮಿದಷ್ಟುಚೆಂಡಿನಂತೆ ಪುಟಿಯುವವಳುಬಭ೯ರತೆ, ಕ್ರೂರತೆಯ ಎದುರುಶಾಂತಿಯ ಮಾತಾಡಿದವಳು ನೀರಜಾ , ಥೆರೆಸಾ, ಝಾನ್ಸಿ ,  ಚೆನ್ನಮ್ಮ, ಅಕ್ಕಳ ನಂತರ ನೀನೆ ಇರಬೇಕುಭಗತ್, ಸುಭಾಷ್, ಬಿಸ್ಮಿಲ್ನಿನ್ನ ಅವತಾರ ಎತ್ತಿದಂತಿದೆ ‘ ಸಹನೆ ಸುಟ್ಟ ಕಿಡಿ,  ಕತ್ತಲೆ ಸೀಳಿದ  ಬೆಳಕು ನೀನು ‘ಲತೆ, ಕೋಮಲೆ ಅವರೆಲ್ಲ ಬೇರೆನೀನು ಸುಡುವಾಗ್ನಿ, ಬೋಗ೯ರೆವ ಶರಧಿತಲೆ ಮೇಲೆ ಮುಳ್ಳಿನ ಕಿರೀಟ ಧರಿಸಿದ  ‘ ಭುವನ ಸುಂದರಿ’ ಟಿ ದಾದಾಪೀರ್ ತರೀಕೆರೆ

“ನೇಹ ಬೋರಾ.. ಹೋರಾಟದ ಹೊಸ ರೂಪ” ಟಿ.ದಾದಾಪೀರ್‌ ತರೀಕೆರೆ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-46 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಬಭ್ರುವಾಹನ ಬಲದೆದುರು ಅನುಸಾಲ್ವನ ಆಕ್ರೋಶ ಯುದ್ಧರಥವನ್ನೇ ವಾಹನವನ್ನಾಗಿಸಿಕೊಂಡು ನನ್ನೆದುರಿನ ಕದನಕ್ಕೆ ಕೆರಳಿ ಕೆರಳುತ್ತಾ ಬಂದ ಬಭ್ರುವಾಹನ. ಅವನ ನೇತೃತ್ವದ ಚತುರ್ಬಲವದು ಸಮಸ್ತ ಭೂಮಿಯನ್ನು ವ್ಯಾಪಿಸಿದಂತೆ ತೋರುತ್ತಿತ್ತು. ಧ್ವಜ ಛತ್ರ ಚಾಮರಗಳು ದೇವಲೋಕವನ್ನೇ ಆವರಿಸಿಕೊಂಡAತೆ ಕಾಣುತ್ತಿದ್ದವು. ಎದ್ದ ಧೂಳು ಸೂರ್ಯಮಂಡಲವನ್ನು ಸೂರೆಗೊಂಡAತೆ ತೋರುತ್ತಿತ್ತು.ಈಗ ನನ್ನೆದುರಿಗೆ ಬಂದುನಿAತ ಬಭ್ರುವಾಹನ ದೊಡ್ಡ ಸೈನ್ಯವನ್ನೇ ಜೊತೆಗೂಡಿಸಿಕೊಂಡು ಬಂದಿದ್ದ. ಆನೆಗಳಿದ್ದವು ಕೋಟಿಯೆಣಿಕೆಯಲ್ಲಿ. ರಥಗಳ ಸಂಖ್ಯೆಯದು ಹತ್ತು ಕೋಟಿ. ಎರಡು ಕೋಟಿಗಳಷ್ಟು ಕುದುರೆಗಳು. ಸೈನಿಕರಿದ್ದರು ಮೂರು ಕೋಟಿಗಳಷ್ಟು. ಬ್ರಹ್ಮನ ಸೃಷ್ಟಿಯಲ್ಲಿಯೇ ಅದ್ಭುತವಿದು ಎನ್ನುವಂತೆ ಬಭ್ರುವಾಹನ ಪಡೆ ಗೋಚರಿಸುತ್ತಿದ್ದದ್ದಂತೂ ನಿಜ.ಚಿತ್ರಾಂಗದೆಯ ಮಗ ಕುಳಿತಿದ್ದ ಚಿತ್ರಾಲಂಕಾರಗಳಿAದ ಶೋಭಿಸುವ ರಥದಲ್ಲಿ. ಮಣಿಮಯವಾದ ತೇರಿನಲ್ಲಿ ಕುಳಿತಿದ್ದ ಮಣಿಪುರದ ಅರಸ.ಎರಡೂ ಕಡೆಯ ಸೈನಿಕರು ಯುದ್ಧಮುಖಿಗಳಾದರು. ಶತ್ರುಭಾವವನ್ನು ತೋರಿಸುತ್ತಾ ಯುದ್ಧ ಹೂಡಿದರು ಅತಿಶಯವಾಗಿ. ರಥದ ಗಾಲಿಗಳ ಸದ್ದು, ಕುದುರೆ- ಆನೆಗಳ ಕೂಗಿನ ಧ್ವನಿ, ಸೈನಿಕರ ಅಬ್ಬರದ ಬೊಬ್ಬೆ, ಯುದ್ಧವಾದ್ಯಗಳ ಘನರವ ಇವೆಲ್ಲವೂ ಸೇರಿಕೊಂಡು ಕರ್ಣಕಠೋರವೆನಿಸುವ ಶಬ್ದ ಹೊಮ್ಮತೊಡಗಿತು.ಬಭ್ರುವಾಹನನ ಬಿಲ್ಲಿನ ಠೇಂಕಾರವದು ಸಿಡಿಲ ಆರ್ಭಟದಂತೆ ಕೇಳಿಸಿತು. ಅವನ ಚಿನ್ನದ ರಥವದು ಹೊಳೆಯುತ್ತಿತ್ತು ಮಿಂಚಿನAತೆ. ಬಾಣಗಳ ಮಳೆಯನ್ನೇ ಸುರಿಸುತ್ತಾ ನನ್ನ ಸನಿಹಕ್ಕೆ ಬಂದ ಬಭ್ರುವಾಹನ. ತಂದೆಯೆAದು ಪ್ರೀತಿಯಿಂದ ನನ್ನ ಬಳಿಗೆ ಅವನು ಮಣಿದುಬಂದಾಗ ನಾನವನನ್ನು ಮಗನೆಂದು ಒಪ್ಪಿಕೊಳ್ಳಲಿಲ್ಲ ಎಂಬ ಆಕ್ರೋಶ ಕಾಣಿಸುತ್ತಿದ್ದದ್ದು ಅವನ ಕಣ್ಣುಗಳಲ್ಲಿ.“ತಂದೆಯೊಡನೆ ಯುದ್ಧ ಬೇಡವೆಂದು ನಾನು ಒಲವಿನಿಂದ ನಿನ್ನ ಬಳಿಗೆ ಬಂದು ಪಾದಕ್ಕೆ ಎರಗಿದೆ. ಆದರೆ ನೀನು ನನ್ನನ್ನು ನಿಂದಿಸಿದೆ ಹೀನಾಯವಾಗಿ. ಏನೇ ಆದರೂ ನಿನ್ನನ್ನು ನಾನು ಜಯಿಸದೇ ಹೋದರೆ ನಾನು ನಿನ್ನ ಮಗನೇ ಅಲ್ಲ” ಎಂದು ಘರ್ಜಿಸಿದ.ಅಂದರೆ, ಅವನಿಗೆ ಯುದ್ಧ ಬೇಕಾಗಿದ್ದದ್ದು ನನ್ನ ಮಗ ಎನ್ನುವುದನ್ನು ಸಾಬೀತುಪಡಿಸಲಿಕ್ಕಾಗಿ. ಅವನು ಕದನದ ಗೆಲುವನ್ನು ಬಯಸುತ್ತಿದ್ದದ್ದು ನಾನವನ ತಂದೆ ಎನ್ನುವುದನ್ನು ರುಜುವಾತುಪಡಿಸಿಕೊಳ್ಳುವುದಕ್ಕಾಗಿ. ಈ ಯುದ್ಧ ಎನ್ನುವುದು ತನಗೆ ಅರ್ಜುನನ ಮಗ ಎಂಬ ಗುರುತಿಸುವಿಕೆಯೊಂದನ್ನು ತಂದುಕೊಡಲಿ ಎಂಬ ಭಾವ ಅವನಲ್ಲಿ ಬಲವಾಗಿದ್ದಂತೆ ತೋರಿತು. ಏನೆಂದರೂ ಅದಕ್ಕೆ ಅವಕಾಶ ಕೊಡಲಾರೆ ಎಂಬ ಹಠ ಮೂಡಿತು ನನ್ನಲ್ಲಿ.ಅಷ್ಟರಲ್ಲಿಯೇ ಬಭ್ರುವಾಹನನನ್ನು ಎದುರುಹಾಕಿಕೊಳ್ಳುವ ದಿಟ್ಟತನವನ್ನು ತೋರಿಸಿದ ಅನುಸಾಲ್ವ. “ಸತ್ತವರ ಪಂಥ ಇದಲ್ಲವೆಂದು ನಿರೂಪಿಸಲು ನೀನು ವೃಥಾ ಪುರುಷಾರ್ಥವನ್ನು ತೋರಿಸುತ್ತಿರುವಂತಿದೆ. ನಿನ್ನ ಪೌರುಷಕ್ಕೆ ಅಂಜುವವನು ನಾನಲ್ಲ. ನಿನ್ನೊಡನೆ ಹೋರಾಡಿದರೆ ಎದುರಾಗುವ ಅಪಕೀರ್ತಿಗೆ ಅಳುಕುವವನು ನಾನಲ್ಲ. ತಂದೆಯನ್ನೇ ಹೀಯಾಳಿಸುವ ಧೂರ್ತ ನೀನು” ಎಂದು ನಸುನಗೆಯಿಂದಲೇ ಖಾರನುಡಿಯನ್ನಾಡಿದ ಅನುಸಾಲ್ವ.ಒಂಭತ್ತು ಬಾಣಗಳು ಒಮ್ಮೆಲೇ ಚಿಮ್ಮಿದವು ಬಭ್ರುವಾಹನನೆಡೆಗೆ, ಅನುಸಾಲ್ವನ ಕಡೆಯಿಂದ. ಪ್ರತ್ಯುತ್ತರವಾಗಿ ನೂರು ಬಾಣಗಳನ್ನು ಸಿಡಿಸಿದ ಬಭ್ರುವಾಹನ. ಬಾಣಗಳು ಚಿಮ್ಮುತ್ತಲೇ ಹೋದವು. ಅಂತೆಯೇ ಚಿಮ್ಮಿತು ಕೆನ್ನೆತ್ತರು ಇಬ್ಬರ ಶರೀರದಿಂದಲೂ. ದೇಹದ ಅಲ್ಲಲ್ಲಿ ಗಾಯ. ಬಾಣಗಳು ಇಬ್ಬರ ಶರೀರದ ಒಳಹೋಗಿದ್ದವು. ಬಿಲ್ಲು ಬಾಣಗಳ ಪ್ರಯೋಗದಲ್ಲಿ, ಪರಾಕ್ರಮದ ಪ್ರದರ್ಶನದಲ್ಲಿ ಸಮನಾರಿಲ್ಲ ತಮಗೆ ಎಂಬAತೆ ಹೋರಾಡಿದರು ಅವರಿಬ್ಬರು.ತನಗೆ ಸಮನಾಗಿ ಸಾಹಸ ತೋರುವ ಬಭ್ರುವಾಹನನ ರೀತಿಯದು ಕ್ರೋಧ ಹುಟ್ಟಿಸಿತು ಅನುಸಾಲ್ವನಿಗೆ. ಏಳು ಬಾಣಗಳಿಂದ ಬಭ್ರುವಾಹನನ ಬತ್ತಳಿಕೆಯನ್ನು ನಾಶಮಾಡಿದ. ಎಂಟನೆಯ ಬಾಣದ ಏಟಿಗೆ ಅವನ ಧ್ವಜ ಹರಿದುಹೋಯಿತು. ಇನ್ನೊಂದು ಬಾಣದಿಂದ ಅವನ ಬಿಲ್ಲನ್ನೇ ಪುಡಿಗಟ್ಟಿದ. ಬಭ್ರುವಾಹನ ಆಘಾತಕ್ಕೆ ಒಳಗಾದವನಂತೆ ನೋಡುತ್ತಿದ್ದಾಗಲೇ ಅವನ ಕವಚವನ್ನು ಸೀಳಿ ಕೆಳಕ್ಕೆ ಬೀಳಿಸಿತು ಅನುಸಾಲ್ವ ಪ್ರಯೋಗಿತ ಅಮೋಘ ಬಾಣ. ಸಾವಿರ ಬಾಣಗಳನ್ನು ಒಂದೇ ಸಲಕ್ಕೆ ಚಿಮ್ಮಿಸಿದ ಅನುಸಾಲ್ವ. ಬಭ್ರುವಾಹನನ ರಥದ ಕುದುರೆಗಳು ಪ್ರಾಣ ಕಳೆದುಕೊಂಡವು. ರಥ ಛಿದ್ರವಾಯಿತು. ಸಾರಥಿ ಸಾವನ್ನಪ್ಪಿದ.ಅನುಸಾಲ್ವನ ಅಮಿತ ಸಾಮರ್ಥ್ಯ ನನಗೆ ಮೆಚ್ಚುಗೆಯಾಯಿತು. ಇನ್ನೇನು ಬಭ್ರುವಾಹನನೂ ಪ್ರಾಣ ಕಳೆದುಕೊಳ್ಳುತ್ತಾನೆ ಎಂದುಕೊAಡೆ.ಆದರೆ ಬಡಪೆಟ್ಟಿಗೆ ಬಸವಳಿಯುವವನಾಗಿರಲಿಲ್ಲ ಮಣಿಪುರದ ಒಡೆಯ. ತಕ್ಷಣವೇ ಇನ್ನೊಂದು ರಥವನ್ನು ಏರಿನಿಂತ. ತನ್ನ ರಥವನ್ನು ಪುಡಿಗಟ್ಟಿದ್ದ ಅನುಸಾಲ್ವನ ರಥವನ್ನೇ ಇನ್ನಿಲ್ಲವಾಗಿಸಿದ.ರಥವಿಲ್ಲದವನಾದ ಅನುಸಾಲ್ವ ಈಗ ಬಭ್ರುವಾಹನನ ಮೇಲೆ ಬಾಣ ಪ್ರಯೋಗಿಸುವುದು ಕಷ್ಟವಿತ್ತು. ತಕ್ಷಣವೇ ಅನುಸಾಲ್ವ ಕೈಗೆತ್ತಿಕೊಂಡದ್ದು ದೈತ್ಯ ಗದೆಯನ್ನು. ಬಭ್ರುವಾಹನನ ಕಡೆಗೆ ಮುನ್ನುಗ್ಗಿಹೋದ. ಇನ್ನೇನು ಅಪ್ಪಳಿಸಿಯೇ ಬಿಡುತ್ತಾನೆ ಅನುಸಾಲ್ವ ಆ ವಿಸ್ತೃತ ಗದೆಯನ್ನು ಬಭ್ರುವಾಹನನ ಮುಖದ ಮೇಲೆ ಎಂದು ತೋರಿತು ನನಗೆ. ಆ ಬಗೆಯಲ್ಲಿತ್ತು ಅನುಸಾಲ್ವನ ಆಕ್ರೋಶ.ಬಭ್ರುವಾಹನ ಬಾಣಗಳನ್ನು ಸತತವಾಗಿ ಪ್ರಯೋಗಿಸಿದ. ಅವನ ಗುರಿ ತಪ್ಪಲಿಲ್ಲ. ಬಾಣಗಳೆಲ್ಲವೂ ಅನುಸಾಲ್ವನ ಶರೀರಕ್ಕೆ ಆಳವಾದ ಆಘಾತವನ್ನು ಉಂಟುಮಾಡಿದವು. ಅನುಸಾಲ್ವ ಅತೀವ ಆಯಾಸಕ್ಕೆ ಒಳಗಾದಂತೆ ಕಂಡುಬAದ. ಅವನ ದೇಹಶಕ್ತಿ ಅಳಿದುಹೋಗಿತ್ತು. ನೋಡನೋಡುತ್ತಲೇ ನೆಲದ ಮೇಲೆ ಬಿದ್ದ ಅನುಸಾಲ್ವ. ಅವನೀಗ ಪ್ರಜ್ಞೆ ಕಳೆದುಕೊಂಡಿದ್ದ.ಆ ಕ್ಷಣದಲ್ಲಿ ಬಭ್ರುವಾಹನನನ್ನು ಸಮರ್ಥವಾಗಿ ಎದುರಿಸುವವರೊಬ್ಬರು ಬೇಕಿತ್ತು. ಯಾರವರು ನನ್ನ ಕಡೆಯವರು, ಬಭ್ರುವಾಹನನ ಶೌರ್ಯವನ್ನು ಮೆಟ್ಟಿ ನಿಲ್ಲುವವರು ಎಂದು ಸುತ್ತಮುತ್ತ ಕಣ್ಣಾಡಿಸತೊಡಗಿದೆ ನಾನು. ಅಷ್ಟರಲ್ಲಿಯೇ ಶ್ರೀಕೃಷ್ಣಸುತ ಪ್ರದ್ಯುಮ್ನ ಬಭ್ರುವಾಹನನ ಎದುರು ಹೋಗಿ ನಿಂತಾಗಿತ್ತು. ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

You cannot copy content of this page

Scroll to Top