ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸತ್ತ ನಂಬಿಕೆ”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಸತ್ತ ನಂಬಿಕೆ” ದೈವ ಸನ್ನಿಧಿಗಾಗಿ  ಹೊರಟ ಪಾದಗಳುದಾರಿಯಲ್ಲೇ ನಿಂತು ಹೋದವುಕರ್ಪೂರದ ಹೊಗೆಯಲ್ಲಿ ಬೆಳಕ ಹುಡುಕಿದವರುಕಾಲನ ಕತ್ತಲೆಗೆ  ನಡೆದುಬಿಟ್ಟರು  ದರ್ಶನದ ಸಾಲೇ ಸಾವಿನ ಸುರಂಗವಾಗಿಹೂವಿನ ಅಂಗಡಿಯ ಮುಂದೆಸಾವಿನ ಸಂತೆ ತೆರೆಯಿತು ಇತ್ತ ಬೆಳಕಿನ ಮನೆಯ ಮಗಕತ್ತಲಲ್ಲಿ ಕೆಡವಲ್ಪಟ್ಟ ,ಬಂದೂಕುಹಣದ ಕೋಟೆಯನೂ ಕಾಯದುಹೆಸರಿನ ಛಾಯೆಯನೂ ಉಳಿಸದು . ಭಕ್ತರ ಕಾಯುವ ದೇವರೂ ಮೈಮರೆತಸುರಕ್ಷತೆಯ, ವ್ಯವಸ್ಥೆ ಕಡೆಗಣಿಸಿತುದೇವರು ,ವ್ಯವಸ್ಥೆ ಎರಡಷ್ಟೇ ಸೋತು ಸತ್ತದ್ದಲ್ಲಾಸತ್ತಿದ್ದು ನಂಬಿಕೆಯು  ವ್ಯವಸ್ಥೆ ಇನ್ನೂ ಹದವಾಗುವುದುದಾರಿ ಅಗಲ ಮಾಡುವವವರು  ರೊಕ್ಕ ನೋಡ್ತಾರೆಇಂದು,ಮಾಡುವ ಕೆಲಸ ಸೇವೆಯಲ್ಲಾ ರೊಕ್ಕ ಕೇಳುತ್ತದೆಕುಸಿದ ಮೇಲೆ ಮಾತ್ರ ಕಣ್ಣು ತೆರೆಯುತ್ತದೆ ಸಹಬಾಳ್ವೆ ಕಲಿಯದ ಗುಂಪಿನ ನಡುವೆ ಜೀವಗಳು ಒದ್ದಾಡುತ್ತಿವೆಸಹನೆ ಕಲಿಯದ ದಾರಿಯ ನಡುವೆ ಕನಸುಗಳೂ ಸುಂಕ ಕೇಳಿವೆ ನಾವು ದೇವರ ಯಾಕೆ ನಂಬುತ್ತೇವೆ?ಭಯದಿಂದಲೋ, ಭಕ್ತಿಯಿಂದಲೋಆದಿಯಿಂದ ಬಂದ ಆಚಾರದಿಂದಲೋಉತ್ತರವಿಲ್ಲದ  ಪ್ರಶ್ನೆ ಇಲ್ಲಿ ಎಲ್ಲವೂ ಮರುಳು ಉತ್ತರ ಹುಡಕಲಾಗದುಷ ನಂಬಿಕೆ ಸತ್ತಾಗ ದೇವರು ಸಾಯುವುದಿಲ್ಲಮನುಷ್ಯ ಸಾಯುತ್ತಾನೆದೇವರು ಗುಡಿಯಲ್ಲಿಲ್ಲ ತಾಯಿಯಲ್ಲಿ, ಕರುಣೆಯಲ್ಲಿಪ್ರೇಮದ ಕಣ್ಣಲ್ಲಿ ,ನಿಸ್ವಾರ್ಥದಲ್ಲಿಹದವರಿತ ಕಾಯಕದಲ್ಲಿ ಎಂಬರಿವು ಯಾವಾಗ ? ವನಜಾಕ್ಷಿ ಬೆಟ್ಟದಾಲೂರು.

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸತ್ತ ನಂಬಿಕೆ” Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹೋರಾಡಿ ಸೋತೆ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹೋರಾಡಿ ಸೋತೆ” ಹೃದಯದೊಳಗೆ ಸಾವಿರ ಕನಸು ಹೊತ್ತು,ನೋವಿನ ಮುಳ್ಳುಗಳ ಹಾದಿಯಲಿ ನಡೆದು,ಕಣ್ಣೀರ ಹನಿಗಳ ಮೌನದಲಿ ಕರಗಿ,ನನ್ನವರಿಗಾಗಿಯೇ ನನ್ನನ್ನೇ ಮರೆತು ಬಿರುಗಾಳಿಯ ನಡುವೆ ದೀಪವಾಗಿ ಉರಿದೆ, ಬಿದ್ದಾಗಲೆಲ್ಲ ಮತ್ತೆ ಎದ್ದು ನಿಂತೆ,ಸೋಲಿನ ನೆರಳಿಗೂ ಸವಾಲೆಸೆದೆ,ಗೆಲುವಿನ ಕನಸಿಗೆ ಆಯುಷ್ಯವ ಕೊಟ್ಟೆ. ಆದರೆ ಕೊನೆಗೆ ಉಳಿದದ್ದೇನು?ಸುಟ್ಟ ಕನಸುಗಳ ಬೂದಿಯ ಹೊರತುನಂಬಿದ ಕೈಗಳೇ ಕೈಬಿಟ್ಟ ಮೇಲೆ,ಯಾರಲ್ಲಿ ಹುಡುಕಲಿ ಸಾಂತ್ವನದ ಬೆಳಕು? ನೋವು ನುಂಗಿ ನಗುವುದ ಕಲಿತೆ,ಒಳಗಿನ ಬಿರುಗಾಳಿಗೆ ಮೌನದ ಹೊದಿಕೆ ಹೊದೆದೆ,ನನ್ನ ಕಣ್ಣೀರ ಕಥೆಯ ಕೇಳುವವರಿಲ್ಲದೆ,ನಾನೇ ನನಗೆ ಸಮಾಧಾನ ಹೇಳಿಕೊಂಡೆ. ಗೆಲ್ಲಲೇಬೇಕೆಂದು ಹೋರಾಡಿದೆ ನಾನು,ಸೋಲಬಾರದೆಂದು ಎಲ್ಲವನ್ನೂ ಸಹಿಸಿದೆ,ಜಗತ್ತಿನ ಕಣ್ಣಿಗೆ ಸೋತವಳಾದರೂ,ನನ್ನವರಿಗಾಗಿ ನನ್ನ ಬದುಕನ್ನೇ ತೆತ್ತೆ ಇಂದು ದಣಿದಿವೆ ಹೆಜ್ಜೆಗಳು, ಮೌನವಾಗಿವೆ ಮನದ ಮಾತುಗಳು,ಕನಸುಗಳೆಲ್ಲ ಕಣ್ಣೀರಾದರೂ,ಆತ್ಮಗೌರವ ಇನ್ನೂ ತಲೆಬಾಗಿಲ್ಲ ಹೌದು, ಹೋರಾಡಿ ಸೋತೆ ನಾನು,ಆದರೆ ಸೋಲಿಗೆ ಶರಣಾಗಿ ಅಲ್ಲ;ನನ್ನವರ ಸಂತೋಷಕ್ಕಾಗಿ ಹೋರಾಡಿ ಸೋತೆ,ನನ್ನ ನೋವನ್ನು ಯಾರಿಗೂ ಕಾಣದಂತೆ ಮುಚ್ಚಿ ಸೋತೆ ಒಂದು ದಿನ ಈ ಮೌನವೇ ಮಾತಾಡಬಹುದು,ಈ ಕಣ್ಣೀರೇ ನನ್ನ ಕಥೆ ಹೇಳಬಹುದು,ಆಗ ಜಗತ್ತಿಗೆ ಅರ್ಥವಾಗಬಹುದುನಾನು ಸೋತದ್ದು ಬದುಕಿನಲ್ಲಿ ಅಲ್ಲ,  ನನ್ನವರಿಗಾಗಿ ಬದುಕುತ್ತಾ ನನ್ನನ್ನೇ ಕಳೆದುಕೊಂಡೆ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹೋರಾಡಿ ಸೋತೆ” Read Post »

ನಿಮ್ಮೊಂದಿಗೆ

ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ”

ಕಥಾ ಸಂಗಾತಿ ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ” ಸಣ್ಣ ಕಥೆ: ದಸರಾ  ಗೊಂಬೆ    “ತ್ರಿವೇಣಿ ಯಾವಾಗವ್ವ ನೀನು ಅಡ್ಡಾಡೋದು?.  ಮೈಸೂರು ದಸರಾ ಬಹಳ ದೊಡ್ಡದು, ಒಂದ್ಸಾರಿ ಆದರೂ ನೋಡಿ ಬರೋಣ ಬಾರೆ” ಎಂದು ಅಪ್ಪ-ಅವ್ವ ಕರೆದಾಗೊಮ್ಮೆ ನಾನು ಸಾಲಿ ಕಲಿತು ದೊಡ್ಡೋಳಾಗಿ ನೌಕರಿ ಹಿಡಿದ ಮೇಲೇನೆ… ನನ್ನ ರೊಕ್ಕದಲ್ಲಿ ಅಡ್ಡಾಡತೀನಿ .ಬಹಳಷ್ಟು ಮೈಸೂರ ದಸರಾ ಗೊಂಬೆಗಳನ್ನು ನನ್ನ ರೊಕ್ಕದಲ್ಲೇ ತಗೋತೀನಿ. ನನ್ನ ಸಾಲೀ ಕಲಿಸ್ತೀರಿ ಅಲ್ಲವಾ ನೀವು ಅಷ್ಟ ಸಾಕು ನನಗ ಅನ್ನೋ ಸ್ವಾಭಿಮಾನದ ಭಾಷಣ ಕೇಳಿ ಕೇಳಿ ಅವರಿಗೂ ಸಾಕಾಗಿ ಹೋಗಿತ್ತು. ನನಗೂ ನನ್ನ ಸ್ವಾಭಿಮಾನದ ಪಿತ್ತ ನೆತ್ತಿಗೇರುತ್ತಲೇ ಇತ್ತು.      ಬೇಗನೆ ನೌಕರಿ ಹಿಡಿದು ಅಲ್ಲಿ ಇಲ್ಲಿ ವರ್ಗಾವಣೆಯಾಗುತ್ತ ಅಪ್ಪನ ನೆರವಿನಿಂದ, ಕೆಲವೊಮ್ಮೆ ಒಬ್ಬಂಟಿಗಳಾಗಿ ಕಾಲಕಳೆಯುತ್ತ ಊರಿನ ಹತ್ತಿರ ವರ್ಗವಾಗಿ ಬರಲು ನಾಲೈದು ವರ್ಷಗಳೇ ಕಳೆದವು. ಆಗಾಗ ಮೈಸೂರು ದಸರಾ ಉತ್ಸವದಲ್ಲಿ ಸೋಗು ಹಾಕಿರುವ ದೊಡ್ಡ ದೊಡ್ಡ ಗೊಂಬೆಗಳು ,ಆಟಿಕೆ ಗೊಂಬೆಗಳು,ನವದುರ್ಗೆಯರ ನಾನಾ ಅವತಾರದ ಗೊಂಬೆಗಳು ಕನಸ್ಸಲ್ಲಿ ಮೂಡಿ ಮರೆಯಾಗುತ್ತ ಕುಟುಂಬ ಸಮೇತರಾಗಿ ನೋಡಬೇಕೆಂಬ ಆಸೆ ಚಿಗುರಿಸುತ್ತಿದ್ದವು. ಹುಟ್ಟಿದಾಗಿಂದ ನೋಡದೆ ಸುಪ್ತವಾಗಿದ್ದ ಆಸೆ ಎಂದು ನೆರವೇರುವುದೋ.    ಅದರೆ ಗಟ್ಟಿಯಾಗಿದ್ದ ತಂದೆ ಅದ್ಯಾವುದೋ ದಾಯಾದಿ ಕಲಹದ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಅನಾರೋಗ್ಯಕ್ಕೆ ಒಳಗಾಗಿ ದಿನೇ ದಿನೇ ಕೃಶವಾಗುತ್ತ ಹಾಸಿಗೆ ಹಿಡಿದು ತೀರಿಹೋದರು.      ಕೌಟುಂಬಿಕ ಜವಾವ್ದಾರಿ ಹೊತ್ತ ತ್ರಿವೇಣಿ ಇರಲೊಂದು ಬೆಚ್ಚನೆಯ ಮನೆಕಟ್ಟುವ ಸಾಹಸಕ್ಕೆ ಕೈಹಾಕಿದಳು. ದಸರಾ ಗೊಂಬೆಗಳು ಕನಸ್ಸಲ್ಲಿ ಅಷ್ಟೇ ಅಲ್ಲದೆ ಮನಸ್ಸಲ್ಲೂ ಕೂಡ ಮೂಡದೆ ಮರೆಯೆಲ್ಲೆಲ್ಲೋ ಸರಿದು ನಿಂತವು. ದಸರಾ ಗೊಂಬೆಯಂತೆ ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾದ ತ್ರಿವೇಣಿಗೆ ತನ್ನ ನೌಕರಿ, ಮನೆ ಹಾಗೂ ಕೌಟುಂಬಿಕ ಜಂಜಡಗಳಲ್ಲಿ ಮುಳುಗಿ ಆಗಲೇ ಮೂವತ್ತು ವರ್ಷದವಳಾಗಿ ಅಲ್ಲಲ್ಲಿ ಬಿಳಿಗೂದಲು ಮೂಡತೊಡಗಿದವು. ಮನೆಯವರು ಹಾಗೂ ಹೀಗೂ ಒತ್ತಾಯಿಸಿ ಮದುವೆಗೆ ಒಪ್ಪಿಸಿದರು.       ಅಂತೂ ಹೆಣ್ಣು ದಸರಾ ಗೊಂಬೆಯಂತ ತ್ರಿವೇಣಿಗೆ ಬ್ಯಾಂಕ ಮ್ಯಾನೇಜರ ಹುದ್ದೆಯಲ್ಲಿದ್ದ ಸ್ಪುರದ್ರೂಪ ಗಂಡು ದಸರಾ ಗೊಂಬೆಯಂತಹ ವರ ಸಿಕ್ಕು ಮದುವೆಯೂ ಆಯಿತು. ಹೃದ್ರಾಬಾದಿನಲ್ಲಿದ್ದ ಗಂಡ ತಿಂಗಳಿಗೊಮ್ಮೆ ಮಾತ್ರ ಊರಿಗೆ ಬರುತ್ತಿದ್ದ. ತ್ರಿವೇಣಿ ನೌಕರಿ ಮಾಡುವ ಜಿಲ್ಲೆಗೆ ವರ್ಗವಾಗದೆ ಒದ್ದಾಡುತ್ತಿದ್ದ. ಎರಡು ಮುದ್ದಾದ ಮಕ್ಕಳು ಏಳೆಂಟು ವರ್ಷದ್ದಾಗಿದ್ದವು. “ಮೈಸೂರು ದಸರಾ ಹೇಗಿರುತ್ತದಮ್ಮ! ಅಕ್ಟೋಬರ್ ರಜೆಯಲ್ಲಿ ಕರೆದುಕೊಂಡು ಹೋಗಮ್ಮ” ಎಂದಾಗ. ತನ್ನಪ್ಪ ತಟ್ಟನೆ ನೆನಪಾದ. ದಸರೆ ನೋಡಲು ಅಪ್ಪ ಅದೆಷ್ಟು ಕರೆದರೂ ಹೋಗದ ನನ್ನ ಸ್ವಾಭಿಮಾನ ಇಂದು ಗಂಡನ ಬಿಡುವಿಗಾಗಿ, ಆತನ ರಜೆಗಾಗಿ, ಅದಕ್ಕೂ ಮೀರಿ ಅತನಿಲ್ಲದೆ ಹೋಗದಂತಹ ಸ್ಥಿತಿ. ಒಂದು ವೇಳೆ ಹೋಗಬೇಕೆಂದರೂ ಆತನ ಅನುಮತಿಗೆ  ಕಾದು ಕಾದು ಸುಸ್ತಾದ ಅಸಹಾಯಕತೆಯನ್ನು ನೆನೆಯುತ್ತ ಅಪ್ಪನನ್ನು ಸ್ಮರಿಸುತ್ತ, ಗಂಡನ ಅಗಮನಕ್ಕೆ ತಹಿತಹಿಸುತ್ತ ತ್ರಿವೇಣಿ ಲೋಡ್ ಶೆಡ್ಡಿಂಗನಿಂದ ಕರೆಂಟು ಇರದ ರೂಮಲಿ ಮಕ್ಕಳನ್ನು ಮಲಗಿಸಿ ದಿಂಬಿಗೊರಗಿದಳು.      “ಗಂಡ ಬೆಳಗಿನ ನಾಲ್ಕರ ಜಾವ ಕಾರಿನ ಸಮೇತ ಮನೆಗೆ ಬಂದು ಲಗುಬಗೆಯಿಂದ ನಮ್ಮನ್ನೆಲ್ಲ ಕರೆದುಕೊಂಡು ಮೈಸೂರಿಗೆ ಹೊರಟ. ಮಲಗಿದ ಮಕ್ಕಳನ್ನು ಎತ್ತಿ ಕಾರಲ್ಲೇ ಮಲಗಿಸಿಕೊಂಡ,ಅರೆನಿದ್ದೆಯಲ್ಲಿದ್ದ ನನ್ನನ್ನು ಕಾರಿನಲ್ಲಿ ಕುಳ್ಳಿರಿಸಿದ. ಕಾರು ಐದುನೂರು ಕಿಲೋ ಮೀಟರ ಪ್ರಯಾಣವನ್ನು ಕಣ್ಣೆವೆ ತೆರೆಯುವಷ್ಟರಲ್ಲೇ ತಲುಪಿ, ಮಕ್ಕಳು ನಾನು ಕಣ್ಣು ಬಿಟ್ಟಾಗ ಭವ್ಯ ಅರಮನೆಯ ದ್ವಾರದಲ್ಲಿದ್ದೆವು. ಈ ಸಾಕಷ್ಟು ಬಾರಿ ಕನಸ್ಸಿನಲ್ಲಿ ಬಂದ ದೊಡ್ಡ ದೊಡ್ಡ ಗೊಂಬೆಗಳು ನಡು ಬಳಕಿಸುತ್ತ ಸೋಗು ಹಾಕಿ ನರ್ತಿಸುತ್ತಿದ್ದವು. ಸಣ್ಣ ಸಣ್ಣ ಅಲಂಕಾರಿಕ ಗೊಂಬೆಗಳು ಕಣ್ಣು ಮಿಟುಕಿಸುತ್ತ, ಕೊರಳು ಕುಣಿಸುತ್ತ ನಮ್ಮನ್ನೆ ನೋಡುತ್ತಿದ್ದಂತೆ  ಅವುಗಳನ್ನು ಎತ್ತಿಕೊಳ್ಳಲು ಮಕ್ಕಳು ಒಬ್ಬರಿಗೊಬ್ಬರು ಜಗಳಕ್ಕೆ ಇಳಿದು ಸುಂದರವಾದ ಗೊಂಬೆಗಳನ್ನೆಲ್ಲ ಕೆಳ ಬೀಳಿಸಿದರು. ರಾಜಬೀದಿಯಲ್ಲಿ ಖಾಸಗಿ ದರ್ಭಾರಿನ ರಾಜ,ಮಂತ್ರಿ, ಅವರ ಕಾಲ್ದಳ, ಅಶ್ವ ಪಡೆ ಪರೇಡ ಮಾಡುತ್ತ ನಮ್ಮ ಕಡೆಗೆ ಬರತೊಡಗಿತು. ಆಳೆತ್ತರದ ಬಿಳಿ ಕುದುರೆಗಳು ನಮ್ಮನ್ನು ಹತ್ತಿಸಿಕೊಂಡು ನಾ ಮುಂದೆ ತಾಮುಂದೆ ಎಂದು ಓಡತೊಡಗಿದವು. ಮಕ್ಕಳು  ಹುಟ್ಟಾ ಕುದುರೆ ಸವಾರಿ ಕಲಿತವರಂತೆ ವೇಗವಾಗಿ ಓಡಿಸತೊಡಗಿದರು. ಅಲಂಕೃತ ರಥವೊಂದು  ನಮ್ಮನ್ನು ಸುತ್ತಾಡಿಸಲು ತಯಾರಾಗಿ ನಿಂತಿತ್ತು. ಅದೆಂತ ಅದೃಷ್ಟ ಎಂದರೆ ಗಂಡನೇ ಸಾರಥಿಯಾಗುವಂತಹ ಅವಕಾಶ ಒದಗಿ ನನ್ನನ್ನು ಮಹಾರಾಣಿಯಂತೆ ರಾಜಬೀದಿಗಳಲ್ಲಿ ಸುತ್ತಾಡಿಸಿದರು. ಗಜ ಪಡೆಗಳು ಚಾಮುಂಡಿ ತಾಯಿಯನ್ನು ಹೊತ್ತು ಹೆಜ್ಜೆ ಇಡುತ್ತಿದ್ದವು. ನಮ್ಮನ್ನು ನೋಡಿದ್ದೆ ತಡ ಸೊಂಡಿಲಿನಿಂದ ಆಶೀರ್ವದಿಸಿದವು. ಝಗಮಗಿಸುವ ಚಿನ್ನದ ಅಂಬಾರಿ ಹೊಳೆಯುತ್ತ, ಮಿಂಚುತ್ತ ಕಣ್ಣುಗಳನ್ನು ಅದೆಷ್ಟು ಕುಕ್ಕುತ್ತಿತ್ತೆಂದರೆ ತ್ರಿವೇಣಿ ತಟ್ಟನೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು.  ಅಷ್ಟೊಂದು ಬೆಳಕು ಅವಳ ಕಣ್ಣಿಗೆ ಬಡಿಯಿತು. ಅದರೂ ಅರೆ ಕಣ್ಣು ತೆರೆದು ನೋಡಿದಾಗ ರೂಮಿನೊಳಗೆ ಕರೆಂಟ ಬಂದಿತ್ತು. ಇಲ್ಲಿವರೆಗೆ ಕಂಡಿದ್ದು ಕನಸಾ? ಎಂದು ತ್ರಿವೇಣಿ ಪೆಚ್ಚು ಮೋರೆ ಹಾಕುತ್ತ ಟೈಮ್‌ ನೋಡಿದಳು.  ರಾತ್ರಿ ಹನ್ನೆರಡು ಗಂಟೆ. ಅಷ್ಟರಲ್ಲೆ ಅವಳ ಪೋನ್‌ ರಿಂಗಾಗತೊಡಗಿತು. ಆಕಡೆಯಿಂದ ಗಂಡ “ನನಗೆ ರಜೆ ಸಿಗಲಿಲ್ಲ ಮುಂದಿನ ದಸರಾಕ್ಕೆ ಹೋದರಾಯಿತು ಮಲಕೊ” ಎಂದು ಹೇಳಿ ಪೋನ್ ಕಟ್ ಮಾಡಿದ. -ಕಿರಣ ಗಣಾಚಾರಿ.  ಮುತ್ತಿನಪೆಟ್ಟಿಗಿ

ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ” Read Post »

You cannot copy content of this page

Scroll to Top