ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಅವರ‌ ಗಜಲ್

ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಜಲ್ ಅನುಭಾವದ ಸೀರೆಯನು ನೇಯಬೇಕು ನಾವುಅನುಭವದ ಕುಲುಮೆಯಲಿ ಬೇಯಬೇಕು ನಾವು ವಿನಯದಿಂದ ಜಗದಿ ಜೀವಿಸಬೇಕಲ್ಲವೆ ಹೇಳುಕನಸುಗಳ ಕಡಲಿನೊಳಗೆ ಮೀಯಬೇಕು ನಾವು ಅನುಗಾಲವೂ ವ್ಯಥೆಯಲ್ಲಿ ಕಳೆಯಿತಲ್ಲ ಕಾಲಅನುಕ್ಷಣ ಜೀವನವನು ತೇಯಬೇಕು ನಾವು ವಾಂಛಲ್ಯವ ಮನದಲಿ ಬಿತ್ತುತ್ತಲೆ ಸಾಗಬೇಕುಅಂಚಿರದ ಬಾಳಿಗಾಗಿ‌ ಸಾಯಬೇಕು ನಾವು ಅನೂಹ್ಯ ಭಾವಗಳನು ಅರುಹಿದನು ಅಭಿನವಅನುಪಮದ ಸಿರಿಗಾಗಿ ಕಾಯಬೇಕು ನಾವು ಶಂಕರಾನಂದ ಹೆಬ್ಬಾಳ

ಶಂಕರಾನಂದ ಹೆಬ್ಬಾಳ ಅವರ‌ ಗಜಲ್ Read Post »

ಕಾವ್ಯಯಾನ

ಜಯಶ್ರೀ. ಭ.ಭಂಡಾರಿ ಬಾದಾಮಿ ಅವರ ಕವಿತೆ “ನೀನೇಕೆ ಹೀಗಾದೆ”

ಕಾವ್ಯ ಸಂಗಾತಿ ಜಯಶ್ರೀ. ಭ.ಭಂಡಾರಿ ಬಾದಾಮಿ “ನೀನೇಕೆ ಹೀಗಾದೆ” ನೀನೇಕೆ‌‌ ಹೀಗಾದೆ‌‌‌‌ ಹೇ ಹೃದಯ ಮಿಡಿತವೇನಮ್ಮಿಬ್ಬರ ಬಾಳದಾರಿ ಕವಲಾಯಿತಲ್ಲವೇಹೀಗೇ ಬದುಕಬೇಕೆಂಬ ಛಲ ಮರತೆಯಲ್ಲ.ನಾನೀಗ‌ ಒಂಟಿಯಾಗಿ ಸಾಗುವದು ತರವೇ. ನೀನಿಲ್ಲದೆ‌ ನಾನು‌ ಬದುಕಲಾರೆ ಗೆಳೆಯನೇ.ನಿನಗೆ ಅರ್ಥ ಮಾಡಿಸಲು ನೀನೆನು ಎಳೆಯನೇ.ಜೋಡಿ‌‌‌ ಜೀವ‌ ಅಗಲಿದರೇನು‌ ಚಂದ ತಿಳಿದುಕೋ.ಮನದ ಭಾವನೆ ಬತ್ತದಿರಲಿ ನೀ‌ ಗೆಳೆಯ ಹಳೆಯನೇ. ಮನದ ಮಾತು ಬಲ್ಲವನೇ‌ ನೀನೆ ದೂರಾದೆಯಲ್ಲದೂರದಿ‌‌ ನೀ ಸಾಗಿದರೂ ಮನಸ್ಸು ಮರೆಯದಲ್ಲ.ಮರೆತು‌ ಮೋಸ ಮಾಡದಿರು ಕೆಟ್ಟ ಗಳಿಗೆಯಲಿ ಗೆಳೆಯಾಮತ್ತೆ‌ ಮತ್ತೆ‌‌ ನೆನಪಿಸಿಕೋ ಕಳೆದ ಸಂಭ್ರಮಗಳನ್ನೆಲ್ಲ ನಲ್ಲ ಹೂಗಳ‌ ರಾಶಿ‌‌ ಹಾಸಿ‌ ಕೈ ಹಿಡಿದು ನಡೆಸಿದೆ‌‌‌ ಅಂದು ನೋವುಗಳ‌‌ ನೀಗಿಸಿ ನಗಿಸಿ‌ ಹತ್ತಿರ ಹತ್ತಿರವಾದೆ ಬಂಧುಇಂದೇನಾಯ್ತೋ ಅರಿಯದೆ ಅರಸುತಿಹೆ ನಿನ್ನನೇ ಸಖನೇ.ಒಲಿದ ಜೀವಗಳು ದೂರಾಗದಿರಲೆಂದು ಪ್ರಾರ್ಥಿಸುತಿಹೆ ಇಂದು. ಜಯಶ್ರೀ. ಭ.ಭಂಡಾರಿ ಬಾದಾಮಿ.

ಜಯಶ್ರೀ. ಭ.ಭಂಡಾರಿ ಬಾದಾಮಿ ಅವರ ಕವಿತೆ “ನೀನೇಕೆ ಹೀಗಾದೆ” Read Post »

ನಿಮ್ಮೊಂದಿಗೆ

ಹೆಚ್.ಎಸ್.ಪ್ರತಿಮಾ ಲೇಖನ ” ಕನ್ನಡದ ಕಂಪು”

ಕನ್ನಡ ಸಂಗಾತಿ ಹೆಚ್.ಎಸ್.ಪ್ರತಿಮಾ ” ಕನ್ನಡದ ಕಂಪು” ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿದೇವಿ……. ಈ ಮೇಲಿನ ಮುಕ್ತಕದಂತೆ ನಮ್ಮ ಕನ್ನಡವನ್ನು ನಾವೇ ಉಳಿಸುವ ಕಾರ್ಯ ಮಾಡಬೇಕಿದೆ. ಕನ್ನಡಕ್ಕೆ ಕೈ ಎತ್ತು ಗೌರಿ ಶಿಖರದ ಹಾಗೆ ಕನ್ನಡಕ್ಕೆ ಕೊರಳೆತು ಪಾಂಚಜನ್ಯ ನಮ್ಮ ಕನ್ನಡವನ್ನು ನೆನೆಯುತ್ತಾ ಕನ್ನಡದ  ಬಗ್ಗೆ ಕೈ ಮುಗಿದು ನಮಿಸಬೇಕಿದೆ. ಕನ್ನಡವೇ ಚೆನ್ನುಡಿಯು ಎಂದು ದೇವರಿಗೆ ಕೈಮುಗಿಯುವುದು ಮುಖ್ಯ. ಪ್ರತಿಯೊಬ್ಬರೂ ಕನ್ನಡವನ್ನು ಉಳಿಸುತ, ಬೆಳೆಸುತ ಕಾರ್ಯವನ್ನು ಮಾಡಬೇಕಿದೆ. ಜನಸಾಮಾನ್ಯರ ಜೀವನದಲ್ಲಿ ಕೆಲಸ ಎಂಬುದು ಬಹಳ ಮುಖ್ಯ. ಇಂತಹ ಕೆಲಸವನ್ನು ಪಡೆಯಬೇಕಾದರೆ ಅನ್ಯ ಭಾಷೆಗಳಲ್ಲಿ  ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ಕಲಿತಿರಬೇಕು. ಇಲ್ಲದಿದ್ದರೆ ಕೆಲಸವೇ ಸಿಗದಿರುವ ಪರಿಸ್ಥಿತಿ ಇದೆ. ನಮ್ಮ ಮಾತೃಭಾಷೆ ಕನ್ನಡವನ್ನು ಪ್ರಾಮುಖ್ಯತೆ ನೀಡದಿರುವುದು ಈ ವಿಷಯದಲ್ಲಿ ನಾವು ನೋಡಬಹುದು. ದಯಮಾಡಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಿ. ನಮ್ಮ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಹಲವಾರು ವ್ಯವಸ್ಥೆಯನ್ನು ಮಾಡುತ್ತಿದೆ. ಅಂತಹದ್ದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ದಿನನಿತ್ಯ ನಮ್ಮ ಸರ್ಕಾರದ ಕೆಲಸಗಳನ್ನು ಗಮನಿಸಿದರೆ ಸರ್ಕಾರವಂತು  ಸವಲತ್ತುಗಳನ್ನು ನೀಡುತ್ತಿದೆ. ಅದನ್ನು ಉಪಯೋಗ ಮಾಡಿಕೊಳ್ಳುವವರು ಕಡಿಮೆ ಇದ್ದಾರೆ. ಜನರ ಜೀವನದಲ್ಲಿ  ಭಾಷೆಯು ಒಂದು ಪ್ರಕಾರವೇ. ಅಂತಹ ಭಾಷೆಯನ್ನು ಪ್ರಮುಖವಾಗಿ ಕಾಣಬೇಕಿದೆ. ತಾಯಿನುಡಿಯಾದಂತಹ ಕನ್ನಡವನ್ನು  ಗೌರವಿಸಬೇಕು. ಮೊದಲು ನಾವು ಕಲಿಯಬೇಕು. ನಾವು ಇತರರಿಗೆ ಕಲಿಸುವ ಕೆಲಸ ಮಾಡಬೇಕು. ಅದನ್ನು ಬರೆಯುವುದು.  ಓದುವುದರಲ್ಲಿ ಪ್ರಮುಖರಾಗಬೇಕಿದೆ. ಹೊರದೇಶದಿಂದ, ಅವರ ರಾಜ್ಯದಿಂದ ಬಂದಂತಹ ಜನಗಳಿಗೆ  ಕನ್ನಡ ಕಲಿಯುವುದು ಕಷ್ಟವೇ ಎನಿಸುತ್ತಿಲ್ಲ. ಅಂತಹದರಲ್ಲಿ  ನಮ್ಮ ತಾಯಿನುಡಿಯಾದಂತಹ  ಕನ್ನಡವನ್ನು ನಮ್ಮವರೇ ಯಾಕೆ ಜರಿಯಬೇಕು . ಪ್ರತಿಯೊಬ್ಬರ  ಮನಸ್ಸಿನಿಂದ ಕನ್ನಡಾಂಬೆಯ ಸೇವೆಯನ್ನು ಮಾಡಬೇಕೆಂಬ ಆಸೆಯನ್ನು ಹೊಂದಿದ್ದು.  ಜೀವಿಸಿದರೆ ಪ್ರತಿ ಮನೆ ಮನೆಗಳಲ್ಲೂ  ಕನ್ನಡಾಂಬೆಯ  ಪ್ರಾಮುಖ್ಯತೆಯನ್ನು ಅರಿತರೆ . ಎಲ್ಲರಿಗೂ ಕನ್ನಡದ ಅರಿವನ್ನು ಮೂಡಿಸುತ್ತ. ಕನ್ನಡದ ಉಳಿವಿಗಾಗಿ ಕಾರ್ಯಗಳನ್ನು ಮಾಡಿದರೆ. ಪ್ರಸ್ತುತ ದಿನಮಾನಗಳಲ್ಲಿ  ಕನ್ನಡವನ್ನು ಉಳಿಸಬಹುದು. ಇಂದು ಕನ್ನಡದ ಪರವಾಗಿ ಎಷ್ಟು ಸಂಘ-ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಕನ್ನಡ ರಾಜ್ಯೋತ್ಸವದಂದು ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುತ್ತಿದ್ದಾರೆ. ಅದು ಅಂದಿಗೆ ಸೀಮಿತವಾಗದೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ  ಕನ್ನಡದ ಅರಿವು, ಉಳಿವಿನ ಬಗ್ಗೆ  ತಿಳಿಸುತ್ತಾ ಮುಂದಿನ ಭವಿಷ್ಯದ ಉತ್ತಮ ಪ್ರಜೆಯನ್ನಾಗಿ ಮಾಡಲು ಅವಕಾಶವಾಗುತ್ತದೆ. ಕನ್ನಡಕ್ಕೆ ಕೈ ಎತ್ತುತ್ತ ಪ್ರತಿಯೊಬ್ಬರೂ ಕನ್ನಡಕ್ಕಾಗಿಯೇ ಸೇವಿ ಸಲ್ಲಿಸುವ ಮನೋಭಾವ ಒಳಗೊಂಡಿದ್ದು. ಕನ್ನಡವೇ ಉಸಿರಿ ಎಂದು ಜೀವಿಸುತ್ತಿರುವ ಕನ್ನಡದ ಅಭಿಮಾನಿಗಳೇ  ಈ ಕಾರ್ಯಗಳನ್ನು ಮಾಡಬೇಕಿದೆ.      “ಉಳಿದೆಲ್ಲ ಭಾಷೆಗಿಂತಲು ಕನ್ನಡವೆ ಅಂಟುಬಳುವಳಿಯ ನೀಡೆ ಸಂಸ್ಕೃತದ ಗಂಟುಕಳವಳವ ಪಡಬೇಡ ಜ್ಞಾನ ಪೀಠವು ಎಂಟುಕಳಸ ಹಿಡಿದರೆ ನಂಟು ಲಕ್ಷ್ಮಿ ದೇವಿ”…….  ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ನಮಗೆ ಅಂಟು. ನಮಗೆ ಬಳುವಳಿಯಾಗಿ ನೀಡುತ್ತಿದೆ ಈ ಸಂಸ್ಕೃತದ ಗಂಟು. ಯಾರು ಯಾವಾಗಲೂ ಸಹ ಗೊಂದಲಮಯವಾಗಿ ಗೊಂದಲಕ್ಕೆ ಒಳಗಾಗದೆ. ನಮ್ಮ ಜ್ಞಾನಪೀಠ ಎಂಟು ಎಂಬುದನ್ನು ನೆನೆಯಬೇಕಿದೆ. ಕಳಸ ಹಿಡಿದರೆ ಬಹಳಷ್ಟು ಹತ್ತಿರದ ನಂಟಾಗುತ್ತದೆ. ಅದಕ್ಕೆ ನಮ್ಮ ಕನ್ನಡಿಗರ ಹೊಂದಾಣಿಕೆ ಬೇಕಾಗಿದೆ.ಕನ್ನಡದ ಕಂಪನ್ನು  ಬೀರುವ ಪ್ರತಿಯೊಬ್ಬರು  ಕನ್ನಡಮ್ಮನ ಮಕ್ಕಳೇ, ಕನ್ನಡದ ಕಸ್ತೂರಿ ಕರುನಾಡ ಕುವರರು ನಮ್ಮ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ. ಮಾತೃಭಾಷೆ ಕನ್ನಡ, ನಾವು ಆಡುವ ಮಾತು ಕನ್ನಡ, ನಾವಿರುವುದು ಕನ್ನಡ ನಾಡಿನಲ್ಲಿ  ಅಂದಮೇಲೆ  ಜೀವನವನ್ನು ಸಾಗಿಸುವುದು  ತಾಯಿ ಕನ್ನಡಾಂಬೆಯ ಆಶೀರ್ವಾದದಿಂದ ತಾನೇ ನನ್ನೊಲವ  ಕನ್ನಡವನ್ನು ಮರೆತರೆ ನನಗೆ ಒಳಿತಾಗುವುದೇನು. ಕನ್ನಡದ ಕಂಪನ್ನು ಬೀಸುವ ಕೆಲಸವನ್ನು ಕನ್ನಡ ಕಲಿಸುವುದರ ಮುಖಾಂತರ, ಕನ್ನಡವನ್ನು ಬರೆಯಲು ತಿಳಿಸುವ ಮುಖಾಂತರ ಕನ್ನಡದ ಫಲಕಗಳನ್ನು ಹಾಕುವುದರ ಮುಖಾಂತರ, ನಮ್ಮ ಮನಸ್ಸು ಒಳ್ಳೆಯ ಕಾರ್ಯ ಮಾಡಲು ದಾರಿ  ತೋರುತ್ತದೋ ಹಾಗೆ ಕನ್ನಡವನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ. ಪ್ರತಿಯೊಬ್ಬರಿಗೂ, ಪ್ರತಿಯೊಂದು ಮಗುವಿಗೂ ಕನ್ನಡವನ್ನು ಕಲಿಸುವಂತಹ ಕೆಲಸ ಮಾಡಬೇಕು. ಕನ್ನಡವನ್ನು ಎಲ್ಲರೂ ತಿಳಿದಂತೆ ದಕ್ಷಿಣ ಭಾರತದ ಪ್ರತಿಯೊಂದು ಕಡೆಯೂ ಕನ್ನಡ ಭಾಷೆಯನ್ನು ಮಾತನಾಡಿಸುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ  ಮಾಡಬೇಕೆಂದು  ಅರಿತು ಘೋಷಣೆ ಮಾಡಿದ ದಿನವನ್ನು  ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ದಿನವೆಂದು ಆಚರಿಸುತ್ತೇವೆ. ಆ ದಿನವನ್ನು ಕನ್ನಡ ರಾಜ್ಯೋತ್ಸವಕ್ಕಾಗಿ ಸರ್ಕಾರಿ ರಜೆಯನ್ನು ನೀಡುವಂತೆ ತಿಳಿಸಿದ್ದಾರೆ. ಕನ್ನಡಿಗರು ಇದನ್ನು ಬಹಳ ವಿಜೃಂಭಣೆಯಿಂದ ವಿಶ್ವದಾದ್ಯಂತ ಆಚರಿಸುವ ದಿನವಾಗಿದೆ . ನಾವು ಎಂದೆಂದಿಗೂ ನವೆಂಬರ್ 1 ದಿನದಂದು ಕನ್ನಡವನ್ನು  ನೆನೆದು ತೋರಿಕೆಗೆ ಕನ್ನಡ ರಾಜ್ಯೋತ್ಸವ ಆಚರಿಸದೆ. ನಮಗೆ 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆಯ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಪದ್ಧತಿ ಬಂದಿತು ಎಂಬುದು  ಪ್ರತಿಯೊಬ್ಬರಿಗೂ ತಿಳಿದಂತಹ ವಿಷಯವಾಗಿದೆ. ನಾವು ಎಂದಿಗೂ ನಂಬರ್ 1 ಕನ್ನಡಿಗರಾಗಬೇಕೆ  ಹೊರತು. ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ನವೆಂಬರ್ ಒಂದರ ದಿನದಂದು ಆಚರಣೆ ಮಾಡಿ, ಕನ್ನಡಿಗರೆಂದು ಹೇಳಿಕೊಳ್ಳುವುದು ಸರಿಯಲ್ಲ. ಪ್ರತಿಯೊಂದು ದಿನವು ನಮ್ಮ ಕನ್ನಡಕ್ಕೆ ನಾವು ಸೇವೆಯನ್ನು ಸಲ್ಲಿಸುವಂತಹ ಮನೋಭಾವವನ್ನು ಒಳಗೊಂಡಿರಬೇಕು. ನಮ್ಮ ಕರ್ನಾಟಕದ ಏಕೀಕರಣಕ್ಕೆ ಮನ್ನಣೆಯನ್ನು  ನೀಡಿ ಹಲವಾರು ಸಾಹಿತಿಗಳು ತಮ್ಮದೇ ಆದಂತಹ ಸೇವೆಗಳನ್ನು ಸಲ್ಲಿಸಿದ್ದಾರೆ. ಶಿವರಾಂ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಇನ್ನು ಹಲವಾರು ಸಾಹಿತಿಗಳು ತಮ್ಮದೇ ಆದಂತಹ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ. ಕನ್ನಡಿಗರಾಗಲು ಜಾತಿ ಇಲ್ಲ, ಭೇದವಿಲ್ಲ, ಪಕ್ಷ ವಿಲ್ಲ, ನಾವೆಲ್ಲರೂ ಒಂದೇ ಎನ್ನುವ ಮನೋಭಾವವನ್ನು ಒಳಗೊಂಡಂತೆ ಕನ್ನಡ ತಾಯಿಯ ಸೇವೆಯನ್ನು ಮಾಡುವುದು ಬಹಳ ಮುಖ್ಯ. ನಮ್ಮ ಕನ್ನಡವನ್ನು ಉಳಿಸಲು ಹಲವಾರು ಜನರು ಹಲವಾರು ರೀತಿಯಲ್ಲಿ ತನ್ನದೇ ಆದಂತಹ ಸೇವೆಯನ್ನು ಸಂಘಟನೆಗಳ ಮುಖಾಂತರ ಸಂಸ್ಥೆಗಳ ಮುಖಾಂತರ ಸಾಹಿತಿಗಳಾಗಿ ಹಲವಾರು ರೀತಿಯ ಪಾತ್ರಗಳನ್ನು ಒಳಗೊಂಡಂತೆ ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವುದು ಕನ್ನಡವನ್ನು ಉಳಿಸಲು ಪ್ರಯತ್ನವನ್ನು ಮಾಡುತ್ತಿರುವುದನ್ನು  ದಿನನಿತ್ಯ ನಾವು ನೋಡುತ್ತಿದ್ದೇವೆ. ಇಂದು ನಮ್ಮ ಕನ್ನಡವನ್ನು ಕನ್ನಡಿಗರೇ ಮಾತನಾಡಲು ಹಿಂಜರಿಯದೆ ಕನ್ನಡವನ್ನು  ಹೆಮ್ಮೆಯಿಂದ ಮಾತನಾಡಲು ಮುಂದಾಗಬೇಕು . ನಮ್ಮ ಮನೆಯಲ್ಲಿ ಹುಟ್ಟಿದಂತಹ ಮಗುವಿಗೆ ಮೊದಲಿನಿಂದಲೂ ಕನ್ನಡದ ಅಭ್ಯಾಸ ಮಾಡಿಸಿ ಕನ್ನಡ  ಕಲಿಸುವ ಕಾರ್ಯ ಪ್ರತಿಯೊಂದು ಮನೆಯಿಂದ ಪ್ರಾರಂಭ ಮಾಡಿದರೆ ಕನ್ನಡವನ್ನು ಉಳಿಸಿ,ಬೆಳೆಸಿ ಎಂದು ಹೇಳುವ  ಪ್ರಮೇಯವೆ ಬರುವುದಿಲ್ಲ.  ಕನ್ನಡವನ್ನು ಕಲಿಸುವುದರಲ್ಲಿ ನಾವು ಸೋಲುವುದಿಲ್ಲ.ಹೊರ  ರಾಜ್ಯಗಳಿಂದ  ಬಂದಂತಹ   ಜನರೆಲ್ಲ ಕನ್ನಡವನ್ನು ಕಲಿತು ಕನ್ನಡವನ್ನು  ಬಳಸಿಕೊಂಡು ತನ್ನ ಜೀವನವನ್ನು   ಸಾಗಿಸುವಂತಹ ದಿನಗಳು ಇಲ್ಲಿ ಇರುವಾಗ. ನಮ್ಮವರು  ಏಕೆ ಕನ್ನಡವನ್ನು ಬಿಟ್ಟು ಪರಭಾಷೆಯ ವ್ಯಾಮೋಹಕ್ಕೆ ಹೋಗುತ್ತಿದ್ದಾರೆ. ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ನಮ್ಮ ಕನ್ನಡವನ್ನು ಉಳಿಸುವ ಕೆಲಸದಲ್ಲಿ ಹಲವಾರು ಮಹನೀಯರು  ತಮ್ಮದೇ ಆದಂತಹ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಜೀವನವನ್ನು  ಕನ್ನಡ ಸೇವೆಯಲ್ಲಿ ಕಳೆಯುತ್ತಿದ್ದಾರೆ. ಕನ್ನಡಮ್ಮನ ಹೆಮ್ಮೆಯ ಪುತ್ರರಾಗಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಅವರದೇ ಆದಂತಹ ಹಲವಾರು ನಿಯಮಗಳನ್ನು, ಕಟ್ಟುಪಾಡುಗಳನ್ನು, ಹಾಕಿಕೊಂಡು ಜೀವಿಸುತ್ತಿದ್ದಾರೆ“ನಮ್ಮ ಕನ್ನಡ ನಮ್ಮ ಹೆಮ್ಮೆ.” ಇಂತಹ ಕನ್ನಡವನ್ನು  ಸಂತಸದಲ್ಲಿ ಖುಷಿಯಿಂದ ಮಾತನಾಡಬೇಕು. ನಮ್ಮ ಕನ್ನಡ ಭಾಷೆಯು ಕಲಿಯಲು ಸಹ ಬಹಳ ಸರಳವಾದದ್ದು.ಎಂತಹವರು  ಬೇಕಾದರೂ ಕಲಿಯುವಂತಹ ರೀತಿಯ ಪ್ರಕ್ರಿಯೆಯನ್ನು ಒಳಗೊಂಡಿದೆ “ಕನ್ನಡವೇ  ನಮ್ಮ ಉಸಿರಾಗಿರಲಿಮರೆಯದಿರಿ  ಕನ್ನಡವನ್ನು ಜರಿಯದಿರಿ ನಮ್ಮವರನ್ನುಅವಕಾಶ  ನೀಡಿರಿ ಎಲ್ಲೆಡೆ ಪರಭಾಷೆ ತಳ್ಳಿರಿ ಮೂಲೆಗೆ ನೀಡಿರಿ  ಕೆಲಸದ ಅವಕಾಶ ನಮ್ಮವರಿಗೆ ಆರ್ಥಿಕವಾಗಿ ಪ್ರಬಲಗೊಳ್ಳಿಸಿರಿ ನಮ್ಮವರನ್ನು ದೇಶದ ಉದ್ದಾರಕ್ಕೆ ಕರ್ನಾಟಕ ಬಲಗೊಳ್ಳಲಿ ಪ್ರೀತಿ- ಪ್ರೇಮ- ಸೌಹಾರ್ದ ಎಲ್ಲರಲ್ಲೂ ಮೂಡಲಿ ಕನ್ನಡವೇ ನಮ್ಮಮ್ಮ ಎಂದು ತಿಳಿಯಮ್ಮ ಅವಳಿಗೆ ಕೈ ಮುಗಿಯುತ ನಡೆಯಮ್ಮ ಎಂದು ಹೇಳುತ್ತಾ  ಕನ್ನಡಾಂಬೆಗೆ ಜೈ ಎನ್ನುವೆ ಜೀವನಪೂರ್ತಿ ಅವಳ  ಸೇವೆ ಮಾಡುವೆ”……..  ನಾವು ಹುಟ್ಟಿರುವುದು ನಮ್ಮ ಕರ್ನಾಟಕದ ನೆಲದಲ್ಲಿ. ಕನ್ನಡಾಂಬೆಯೇ ನನ್ನ ತಾಯಿಯಾದರೆ  ತಾಯಿ ಭಾಷೆ ಕನ್ನಡವಾದ ಮೇಲೆ  ಕನ್ನಡಕ್ಕೆ ಚಿರಋಣಿಯಾಗಬೇಕೆ ಹೊರತು. ನಮ್ಮ ಕನ್ನಡ ನಾಡಿಗೆ  ಎಂದಿಗೂ ದ್ರೋಹವನ್ನು ಬಗೆಯುವ ಕೆಲಸ ಮಾಡಬಾರದು. ನಮ್ಮ ನೆಲ, ನಮ್ಮ ಜಲ, ನಮ್ಮ ಗಾಳಿ ಕನ್ನಡದಿಂದ ಕೂಡಿದೆ. ನಾವು ಎಂದೆಂದಿಗೂ ನಮ್ಮ ಕರುನಾಡಿಗೆ ಕೃತಜ್ಞರಾಗಬೇಕು.  “ತೊರೆಯಲಾರೆ, ಮರೆಯಲಾರೆ, ಇರಲಿ ಒಳಿತಿನ ದೃಷ್ಟಿ,  ಆಗುವುದು ಹೊಸ ಸೃಷ್ಟಿ. ಶ್ರಮಿಕನ ಜೀವನ , ಆಗುವುದು ಸಾಧನ,   ಮರೆಯಬೇಡ ನಿನ್ನತನ,ಮಾಡಬೇಕಿದೆ ಕನ್ನಡಾಂಬೆಯ ಸ್ನಾನ. ಅರಿಯದೆಲೆ ಮಾಡದಿರು ದೋಷವ ಮಾಡಿ ತೋರಿಸಬೇಕಿದೆ ಬಹಳಷ್ಟು ಕಾರ್ಯವ”…  ಎಲ್ಲಿಂದ ಬಂದಿದ್ದರು ನಮ್ಮ ಕನ್ನಡ ನಾಡಿನ ಅನ್ನವನ್ನು ತಿನ್ನುವುದರಿಂದ ಕನ್ನಡಕ್ಕೆ ಬೆಲೆಯನ್ನು  ನೀಡಲೇಬೇಕು. ಜನುಮ ಜನುಮದಲ್ಲೂ ಈ ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿ ಬೆಳೆಯಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು. ಕನ್ನಡದ ಹೆಸರು ಹೇಳುತ್ತಲೇ, ಕನ್ನಡಾಂಬೆಯನ್ನು ನೆನೆಯುತ್ತಲೇ, ಮೈ ರೋಮಾಂಚನವಾಗುತ್ತದೆ. ನಟಸಾರ್ವಭೌಮ ಡಾ. ರಾಜಕುಮಾರ್  ರವರ ಹಾಡಿ, ನಟಿಸಿರುವ ಹಾಡು “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು,” ಎಂಬ ಹಾಡು ಪ್ರತಿಯೊಬ್ಬ ಕನ್ನಡಿಗನ ಮೆಚ್ಚಿನ ಗಾಯನವಾಗಿದೆ. “ಬದುಕಿನ ದಾರಿಯಲಿ ಕನ್ನಡದ ತೇರನ್ನು ಪ್ರತಿಯೊಬ್ಬರೂ ಹೆಳೆಯಬೇಕು” ಎಂಬುದು ಪ್ರತಿಯೊಬ್ಬರ ಆಸೆ ಆಗಿರಬೇಕು  ” ಕನ್ನಡವೇ ಸತ್ಯ ಕನ್ನಡವೇ ನಿತ್ಯ ” ಎಂದು ದಿನನಿತ್ಯ ನುಡಿವಂತೆ ಆಗಬೇಕು.ಈ ರೀತಿಯಾಗಿ ಹಲವು ಬಗೆಯಲ್ಲಿ ನನ್ನ ಕನ್ನಡ ತಾಯಿಯನ್ನು ಕನ್ನಡಾಂಬೆಹೆಚ್. ಎಸ್. ಪ್ರತಿಮಾ ಹಾಸನ್.ಯನ್ನು ವರ್ಣಿಸಬಹುದು. ನಮ್ಮ ಕನ್ನಡಾಂಬೆಯ ವಿಷಯದಲ್ಲಿ ಬಂದರೆ ಆಚರಣೆಗೆ ಸೀಮಿತಗೊಳ್ಳದೆ ಕಾರ್ಯಗಳಲ್ಲಿ ಸೀಮಿತಗೊಳಿಸಿ ನನ್ನ ಕನ್ನಡ ನಮ್ಮೆಲ್ಲರ ಉಸಿರಾಗಿರಲಿ ಎಂದು ಹಾರೈಸುವೆ ಹಚ್.ಎಸ್. ಪ್ರತಿಮಾ ಹಾಸನ್ ಸಂಸ್ಥಾಪಕ ಅಧ್ಯಕ್ಷರು :ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ). ರಾಜ್ಯ ಘಟಕ.ಹಾಸನ

ಹೆಚ್.ಎಸ್.ಪ್ರತಿಮಾ ಲೇಖನ ” ಕನ್ನಡದ ಕಂಪು” Read Post »

ಕಾವ್ಯಯಾನ

ಪ್ರೊ. ಡಾ. ಸರಸ್ವತಿ ಕಳಸದ ಕವಿತೆ” ಅಂದ-ಚಂದ”

ಕಾವ್ಯ ಸಂಗಾತಿ ಪ್ರೊ. ಡಾ. ಸರಸ್ವತಿ ಕಳಸದ “ಅಂದ-ಚಂದ” ಚಂದದ ಚಲುವೆನಿನ್ನಂದಕ್ಕೊಂದುಬಾಹುಬಂದ “ಮುದ್ದು ಕೂಸೆ” ಎನ್ನುವಅಪ್ಪ – ಅಮ್ಮರ ಅಮರ ಪ್ರೇಮಇಂದಿರೆಯಂಗಳದಲಿಅಜ್ಜ – ಅಜ್ಜಿಯರ ಅಂಬಾರಿ ನಿನಗದೋ ಜಂಬೂ ಸವಾರಿಕುಟುಂಬದ ಕಣ್ಮಣಿಮಮತೆಯ ಕಲ್ಯಾಣಿ ನೀಚಲುವಿನ ಚಿತ್ತಾರ // ಎಡವಿ ಬಿದ್ದಾಗದುತ್ತೆಂದು ಎತ್ತಿ ಬಟ್ಟೆ ಮಣ್ಣು ಕೊಡವಿಭುಜದ ಮೇಲೆ ಹೊತ್ತುಊರ ಸುತ್ತಿಸಿ – ಮಿಠಾಯಿ ತಿನ್ನಿಸಿಮುದ್ದು ಮಾಡಿದ ಮನು ಕಾಕಾನಪ್ರೀತಿಯ ಬುಜ್ಜಿ ನೀನು ಚಲುವೆ // ಮೌಲ್ಯಗಳ ಊರ ಜಾತ್ರೆಒಲವ ದೇಗುಲದ ಯಾತ್ರೆಜೆರತಾರಿ ಅಂಗಿ ತೊಟ್ಟುನವಿಲ ಗರಿ ಇಟ್ಟುಓಡುವ ಓಟಗಂಧರ್ವ ಲೋಕದ ಸೌಂದರ್ಯಮಾಂಕಾಗಿಸುವ ಹೊಂಬೆಳಕಿನ ಚಲುವೆ // ಕಷ್ಟದ ಕಡಲಲ್ಲಿ ಇಷ್ಟದ ಒಡಲಲ್ಲಿಬೆಟ್ಟಗಳ ಕುಟ್ಟಿಶಿಲ್ಪಗಳನ್ನಾಗಿಸಿದಒಡಲ ಸೌಂದರ್ಯವೇಮತ್ತೇ ಬಾ ನೀಈ ಅಂದ – ಚಂದ ನೋಡಲುಸೋಲದ ಆತ್ಮ ಶಕ್ತಿಯೇಸೌಂದರ್ಯದ ಇನ್ನೊಂದು ಮುಖವೇ ನೀನಲ್ಲವೇ? ಪ್ರೊ. ಡಾ. ಸರಸ್ವತಿ ಕಳಸದ

ಪ್ರೊ. ಡಾ. ಸರಸ್ವತಿ ಕಳಸದ ಕವಿತೆ” ಅಂದ-ಚಂದ” Read Post »

ಇತರೆ

“ರಾಷ್ಟ್ರಕವಿ ಕುವೆಂಪು ಮತ್ತು   ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಅವರ ಒಡನಾಟದ ಕೆಲ ಘಟನೆಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ವ್ಯಕ್ತಿ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ರಾಷ್ಟ್ರಕವಿ ಕುವೆಂಪು ಮತ್ತು   ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಅವರ ಒಡನಾಟದ ಕೆಲ ಘಟನೆಗಳು” ಕರ್ನಾಟಕದ ಎರಡು ಅಪರೂಪದ ಅಮೂಲ್ಯ ಆಸ್ತಿಗಳು ಎಂದರೆ ಒಬ್ಬರು ಸನ್ಮಾನ್ಯ ಶ್ರೀ ಎಸ್ ನಿಜಲಿಂಗಪ್ಪನವರು. ಇನ್ನೊಬ್ಬರು ರಾಷ್ಟ್ರಕವಿ ಕುವೆಂಪು. ಅವರಿಬ್ಬರ ಒಡನಾಟ ಸಂಬಂಧಗಳ ಕುರಿತಾದ ಕೆಲ ಸಂಗತಿಗಳು. ರಾಷ್ಟ್ರಕವಿ ಕುವೆಂಪು ಮತ್ತು ನವಕರ್ನಾಟಕದ ನಿರ್ಮಾತೃ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ನಡುವಿನ ಸಂಬಂಧವು ಪರಸ್ಪರ ಗೌರವ, ಪ್ರೀತಿ ಮತ್ತು ನಾಡು-ನುಡಿಯ ಬದ್ಧತೆಯಿಂದ ಕೂಡಿದ್ದಾಗಿತ್ತು. ರಾಜಕಾರಣ ಮತ್ತು ಸಾಹಿತ್ಯ ಕ್ಷೇತ್ರಗಳ ಈ ಇಬ್ಬರು ಧ್ರುವತಾರೆಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುವ ಕೆಲವು ಪ್ರಮುಖ ಘಟನೆಗಳು ಹಾಗೂ ವಿಚಾರಗಳು : • ಕರ್ನಾಟಕ ಏಕೀಕರಣ ಚಳವಳಿ ಮತ್ತು ಬೆಂಬಲ: ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ಎಸ್. ನಿಜಲಿಂಗಪ್ಪನವರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಕುವೆಂಪು ಅವರು ತಮ್ಮ ಸಾಹಿತ್ಯ ಹಾಗೂ ಭಾಷಣಗಳ ಮೂಲಕ ಏಕೀಕರಣ ಚಳವಳಿಗೆ ಭೌದ್ಧಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ತುಂಬಿದ ಅನಕೃ ನಂತರದ ಏಕೈಕ ಸಾಹಿತಿಗಳು.  ನಿಜಲಿಂಗಪ್ಪನವರ ರಾಜಕೀಯ ನಾಯಕತ್ವಕ್ಕೆ ಕುವೆಂಪು ಅವರ ವೈಚಾರಿಕ ನಿಲುವುಗಳು ದೊಡ್ಡ ಬೆಂಬಲವಾಗಿದ್ದವು. • ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ: ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಅವಧಿಯಲ್ಲಿ (1956ರ ಸುಮಾರಿಗೆ) ಎಸ್. ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲಿ ವಿಶ್ವವಿದ್ಯಾಲಯದಲ್ಲಿ ಕನ್ನಡವನ್ನು ಬೋಧನಾ ಮಾಧ್ಯಮವನ್ನಾಗಿ ತರಲು ಕುವೆಂಪು ಶ್ರಮಿಸಿದರು. ಈ ದಿಸೆಯಲ್ಲಿ ಕುವೆಂಪು ಅವರು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪನವರಿಗೆ ಪತ್ರ ಬರೆದು ಮೈಸೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಕನ್ನಡವನ್ನು ಬೋಧನಾ ಮಾಧ್ಯಮವನ್ನಾಗಿ ತರುವ ಯೋಜನೆಗಾಗಿ ಮಾನ್ಯ ನಿಜಲಿಂಗಪ್ಪನವರನ್ನು ಭೇಟಿ ಆಗಲು ವಿನಂತಿಸಿಕೊಂಡಿದ್ದರು. ಆಗ ಸರ್ಕಾರದ ಮುಖ್ಯಸ್ಥರಾಗಿ ಶ್ರೀ ಎಸ್  ನಿಜಲಿಂಗಪ್ಪನವರು ಕುವೆಂಪು ಅವರಿಗೆ ಪತ್ರ ಬರೆದು ತಮ್ಮಂತಹ ಹಿರಿಯ ಸಾಹಿತಿಗಳು ಕನ್ನಡದ ಆಸ್ತಿ ತಾವು ಬೆಂಗಳೂರಿಗೆ ಬರಬಾರದು ನಿಮ್ಮ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿಗಳನ್ನು ಕಳುಹಿಸಿ ಕೊಡುತ್ತೇನೆ ಎಂದು ಹೇಳಿ ಮರು ಪತ್ರ ಬರೆದರು. ಕುವೆಂಪುಅವರ ಶಿಕ್ಷಣ ಮತ್ತು ಭಾಷಾ ಸುಧಾರಣೆಗಳಿಗೆ ಪೂರ್ಣ ಸ್ವಾತಂತ್ರ್ಯ ಹಾಗೂ ಆಡಳಿತಾತ್ಮಕ ಸಹಕಾರವನ್ನು ನೀಡಿದ್ದರು. • ರಾಜಕಾರಣಿಗೆ ಕುವೆಂಪು ನೀಡಿದ ಆದರ್ಶ ವ್ಯಾಖ್ಯಾನ: ಕುವೆಂಪು ಅವರು ತಮ್ಮ ಕಾವ್ಯ ಹಾಗೂ ವೈಚಾರಿಕ ಬರಹಗಳಲ್ಲಿ “ರಾಜಕಾರಣಿಗಳು ಹೇಗಿರಬೇಕು? ಅವರ ನೈತಿಕತೆ ಎಂತಿರಬೇಕು?” ಎಂದು ವಿವರಿಸಿದ್ದರು. ಎಸ್. ನಿಜಲಿಂಗಪ್ಪನವರ ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರರಹಿತ ಬದುಕು ಕುವೆಂಪು ಅವರ ಆ ಆದರ್ಶಗಳಿಗೆ ಕನ್ನಡಿ ಹಿಡಿದಂತಿತ್ತು. ಇದೇ ಕಾರಣಕ್ಕೆ ಚಿತ್ರದುರ್ಗದಲ್ಲಿರುವ ನಿಜಲಿಂಗಪ್ಪನವರ ಸಮಾಧಿ ಸ್ಥಳವನ್ನು (ಪುಣ್ಯಭೂಮಿ) ಇಂದಿಗೂ “ಕುವೆಂಪು ಅವರು ವ್ಯಾಖ್ಯಾನಿಸಿದ ಆದರ್ಶ ರಾಜಕಾರಣಿಯ ಬದುಕಿಗೆ ಸಾಕ್ಷಿ” ಎಂದು ಬಣ್ಣಿಸಲಾಗುತ್ತದೆ. • ಪರಸ್ಪರ ಗೌರವ ಮತ್ತು ಸಾಹಿತ್ಯಿಕ ಒಡನಾಟ:ಎಸ್. ನಿಜಲಿಂಗಪ್ಪನವರಿಗೆ ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಇತ್ತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕುವೆಂಪು ಅವರನ್ನು ಕಂಡಾಗ ನಿಜಲಿಂಗಪ್ಪನವರು ಅತ್ಯಂತ ವಿನಯದಿಂದ ಗೌರವಿಸುತ್ತಿದ್ದರು. ರಾಜಕೀಯದ ಉನ್ನತ ಹುದ್ದೆಯಲ್ಲಿದ್ದರೂ ಕುವೆಂಪು ಅವರಂತಹ ಸಾಂಸ್ಕೃತಿಕ ನಾಯಕರ ಮಾರ್ಗದರ್ಶನಕ್ಕೆ ಅವರು ಸದಾ ಸಿದ್ಧರಿರುತ್ತಿದ್ದರು.ನಾಡು, ನುಡಿ ಮತ್ತು ಸಂಸ್ಕೃತಿಯ ಹಿತದೃಷ್ಟಿಯಿಂದ ಸಾಹಿತ್ಯ ಮತ್ತು ರಾಜಕೀಯ ರಂಗಗಳು ಹೇಗೆ ಜೊತೆಯಾಗಿ ಸಾಗಬಹುದು ಎಂಬುದಕ್ಕೆ ಕುವೆಂಪು ಮತ್ತು ಎಸ್. ನಿಜಲಿಂಗಪ್ಪನವರ ಒಡನಾಟ ಒಂದು ಅಪರೂಪದ ಉದಾಹರಣೆಯಾಗಿದೆ. ಇಂದು ಸಾಹಿತ್ಯ ಮತ್ತು ರಾಜಕಾರಣ ಎರಡೂ ಭ್ರಷ್ಟಾಚಾರದ ವಿಷಯ ಸಂಗತಿಗಳಾಗಿವೆ. ಕುವೆಂಪು ಅಂತಹ ಒಬ್ಬ ದಿಟ್ಟ ವೈಚಾರಿಕ ಸಾಹಿತಿ ಎಸ್ ನಿಜಲಿಂಗಪ್ಪನವರಂತಹ ಅಪ್ಪಟ ಭಾರತೀಯ ಪ್ರಾಮಾಣಿಕ ರಾಜಕಾರಣಿ ಈಗ ನೆನಪು ಮಾತ್ರ. ಡಾ. ಶಶಿಕಾಂತ್‌ ಪಟ್ಟಣ ರಾಮದುರ್ಗ

“ರಾಷ್ಟ್ರಕವಿ ಕುವೆಂಪು ಮತ್ತು   ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪ ಅವರ ಒಡನಾಟದ ಕೆಲ ಘಟನೆಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ

ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ

ಸಮ್ಮಾನ ಸಂಗಾತಿ ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ ಗದಗ :2 ಸ್ಥಳೀಯ ನಿರಂತರ ಪ್ರಕಾಶನ ಹಾಗೂ ಗಜೇಂದ್ರಗಡ ದ ಮಕಾನದಾರ ಸಾಹಿತ್ಯ ಪ್ರತಿಷ್ಠಾನದ 2026 ನೇ ಸಾಲಿನ ರಾಜ್ಯಮಟ್ಟದ ನಿರಂತರ ಪುರಸ್ಕಾರ ಕ್ಕೆ ಹಾವೇರಿ ಜಿಲ್ಲೆಯ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ ನ ಕ್ಯೂರೇಟರ್ ಹಿರಿಯ ಕವಯಿತ್ರಿ ಡಾ. ವೇದಾರಾಣಿ ದಾಸನೂರ ಅವರಿಗೆ ಇಂದು ಸರ್ವಾ ನುಮತ ದಿಂದ ಆಯ್ಕೆ ಮಾಡಲಾಯಿತೆಂದು ಪ್ರತಿಷ್ಠಾನ ದ ಸಂಚಾಲಕ ಹಿರಿಯ ಕವಿ ಎ ಎಸ್. ಮಕಾನದಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಗ್ರಾಮೀಣ ಜನತೆಯ ಬದುಕನ್ನು ನೆನಪಿನ ಪುಟಗಳಲ್ಲಿ ಮಾತ್ರ ಉಳಿಯದೆ ಮುಂದಿನ ಪೀಳಿಗೆಗೆ ತಲುಪಿಸುವ ದೆಸೆಯಲ್ಲಿ ಕಳೆದ ಎರಡು ದಶಕಗಳಿಂದ ಶ್ರಮಿಸುತ್ತಿರುವ ಡಾ ವೇದಾರಾಣಿ ದಾಸನೂರ್. ಪ್ರಕಾಶ ದಾಸನೂರ್ ದಂಪತಿಗಳ ಸಹಯೋಗದೊಂದಿಗೆ ಖ್ಯಾತ ಶಿಲ್ಪ ಕಲಾವಿದ, ದೊಡ್ಡಾಟ ಕಲೆಗೆ ಹೊಸ ಸ್ಪರ್ಶ ನೀಡಿದ ಡಾ ಟಿ. ಬಿ.ಸೋಲಬಕ್ಕ ನವರ ಅವರ ಕನಸು ನನಸು ಮಾಡುವಲ್ಲಿ ಸರಳ, ಸ್ನೇಹಜೀವಿ ಕವಯಿತ್ರಿ ಡಾ ವೇದಾರಾಣಿಯವರ ಪರಿ ಶ್ರಮ ಅಗಾಧವಾದುದು.ಚಂದಿಗಡದ ಪದ್ಮಶ್ರೀ ನೆಕ್ ಚಂದ ಸೈನಿ ಅವರ ರಾಕ್ ಗಾರ್ಡನ್ 40ಎಕರೆ ವಿಸ್ತೀರ್ಣ ದಲ್ಲಿ ನಿರ್ಮಿಸಿದರೆ. ಹಾವೇರಿ ಜಿಲ್ಲೆಯ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ 50ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕರ್ನಾಟಕ ಗ್ರಾಮೀಣ ಸಂಸ್ಕೃತಿ, ಪರಂಪರೆ, ಕೃಷಿ, ಜಾನಪದ ಬದುಕು ಚಿತ್ರ ಕಲೆ, ಶಿಲ್ಪಕಲೆ ಮೈದಾಳಿ ನಿಂತಿದೆ. ರಾಕ್ ಗಾರ್ಡನ್ ಕೇವಲ ಪ್ರವಾಸಿ ತಾಣ ವಲ್ಲ ಕಲಾವಿದರ ಕಲ್ಪನಾ ಶಕ್ತಿ ಪರಿಶ್ರಮ ಮತ್ತು ಪರಿಸರ ಪ್ರಜ್ಞೆ ಯ ಪ್ರತೀಕವಾಗಿದೆ ಕವಯತ್ರಿ ವೇದಾ ರಾಣಿ ಸ್ವತಃ ಕವಯಿತ್ರಿ ಜೊತೆಗೆ ಕವಿ ಕಲಾವಿದರಿಗೆ ಪೋಷಕರಾಗಿಯೂ ಪ್ರತಿಭಾವಂತ ಬರಹಗಾರರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ವನ್ನು ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಮನಿಸಿದ್ದನ್ನು ಸಭೆಯಲ್ಲಿ ಚರ್ಚಿಸಲಾಯಿತು.ಆಯ್ಕೆ ಸಮಿತಿಯಲ್ಲಿ ಎಂ ಆರ್. ಸೋಂಪುರ.ಸಾಹಿತಿಗಳಾದ ರಾಮಪ್ಪ ಎಫ್ ಲೊಟಗೇರಿ, ರಂಜಾನ್ ಹೆಬಸೂರ್, ದೀಪಾ ಗೋನಾಳ್, ಸದಸ್ಯರಾದ ಬಸವ ರಾಜ್ ಎಚ್ ಬಡಿಗೇರ್. ಎಸ್ ಐ. ತೆಗ್ಗಿನಮನಿ. ಕೆ.ಆರ್. ಸುಣಗಾರ. ಅಮೀರ್ ನಾಯಕ,  ಎಂ.ಎಸ್. ಮಕಾನದಾರ ಮುಂತಾದವರು ಪಾಲ್ಗೊಂಡಿದ್ದರು.

ನಿರಂತರ ಪುರಸ್ಕಾರಕ್ಕೆ ಡಾ ವೇದಾರಾಣಿ ದಾಸನೂರ ಆಯ್ಕೆ Read Post »

ನಿಮ್ಮೊಂದಿಗೆ

“ಕನ್ನಡ ಭಾಷೆಯ ಅಸ್ತಿತ್ವ” ವೀಣಾ ಹೇಮಂತ್‌ ಗೌಡ ಪಾಟೀಲ

ಕನ್ನಡ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಕನ್ನಡ ಭಾಷೆಯ ಅಸ್ತಿತ್ವ” ಕನ್ನಡ ಭಾಷೆಯ ಅಸ್ತಿತ್ವ ನಾವು ಕನ್ನಡಿಗರಿಗೆ ಒಂದು ವಿಸ್ಮೃತಿ ಇದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ನಾವೆಲ್ಲರೂ ನಮ್ಮ ಮಕ್ಕಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವ್ಯವಸ್ಥೆಗೆ ರೂಢಿ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ, ಕಾರ್ಯ ತತ್ಬರತೆ ಹಾಗೂ ಶ್ರದ್ಧೆಯಿಂದ ಯಶಸ್ವಿ ವ್ಯಕ್ತಿಗಳಾಗಿದ್ದಾರೆ, ಸಾಕಷ್ಟು ಹಣ ಸಂಪಾದಿಸಿದ್ದಾರೆ. ತಾವಿರುವ ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಕೂಡ ಹೊಂದಿದ್ದಾರೆ… ಆದರೆ ತಮ್ಮ ನೆಲಮೂಲ ಸಂಸ್ಕೃತಿಯ ಅರಿವನ್ನು ಹೊಂದಿದ್ದಾರೆಯೇ ಎಂದು ಕೇಳಿದರೆ ದೊಡ್ಡದೊಂದು ಶೂನ್ಯ ನಮ್ಮ ಕಣ್ಣ ಮುಂದೆ ಬರುತ್ತದೆ.ಇಲ್ಲಿ ನಾವು ಒಂದು ವಿಷಯವನ್ನು ಖಂಡಿತವಾಗಿಯೂ ನೆನಪಿನಲ್ಲಿ ಇಡಬೇಕು. ನಮ್ಮ ಕರ್ನಾಟಕ ರಾಜ್ಯದಲ್ಲಿ ತಮ್ಮ ಅಪ್ರತಿಮ ಜ್ಞಾನ, ತಿಳಿವಳಿಕೆ, ವಾಕ್ಚಾತುರ್ಯ ಹಾಗೂ ಸರಳ ಬದುಕಿನ ಜೀವನ ಶೈಲಿಯಿಂದಾಗಿ ಹೆಸರಾಗಿರುವ ನೂರಾರು ಸಾವಿರಾರು ಜನರನ್ನು ಈ ಜಗತ್ತು ನೆನಪಿನಲ್ಲಿ ಇಡಲು ಕಾರಣ ಅವರ ಸಿರಿವಂತಿಕೆಯಲ್ಲ, ಯಶಸ್ಸು ಕೂಡ ಅಲ್ಲ, ಅವರು ಓಡಾಡಲು ಬಳಸುವ ಐಷಾರಾಮಿ ಕಾರುಗಳಂತೂ ಅಲ್ಲವೇ ಅಲ್ಲ …ಬದಲಾಗಿ ಅವರ ಸರಳ ನಡೆ ಹಾಗೂ ಜೀವನಶೈಲಿ. ತಾವು ನುಡಿದಂತೆ ನಡೆಯುವ, ಪಾಲಿಸುವ ಇಂತಹ ವಿರಳಾತಿ ವಿರಳ ಜನರನ್ನು ಈ ಸಮಾಜ ಗುರುತಿಸುತ್ತದೆ, ಗೌರವಿಸುತ್ತದೆ ಹಾಗೂ ಅವರನ್ನು ತಮಗೆ ಸ್ಪೂರ್ತಿ ಕೊಡುವ ಮಾದರಿಯನ್ನಾಗಿ ಇಟ್ಟುಕೊಳ್ಳುತ್ತದೆ. ಸ್ನೇಹಿತರೆ,  ಒಂದು ಮರ ಮೇಲೆ ಆಕಾಶದ ಎತ್ತರಕ್ಕೆ ತನ್ನ ರೆಂಬೆ ಕೊಂಬೆಗಳನ್ನು ಚಾಚಿ, ಬೆಳೆದು ಲಕ್ಷಾಂತರ ಜನರಿಗೆ ಹೂವು, ಹಣ್ಣು, ಸ್ವಚ್ಛ ಗಾಳಿಯನ್ನು ನೀಡಿದರೆ ಸಾವಿರಾರು ಪಕ್ಷಿಗಳಿಗೆ ಆಸರೆ ಹಾಗೂ ನೆರಳನ್ನು ನೀಡುತ್ತದೆ. ಸ್ವಚ್ಛ ಗಾಳಿಯನ್ನು ನಮ್ಮ ಉಸಿರಿನ ತಿತ್ತಿಗಳಲ್ಲಿ ತುಂಬುತ್ತದೆ. ನಮಗೆ ಮರದ ಕಾಂಡ, ರೆಂಬೆ-ಕೊಂಬೆ, ಎಲೆ, ಹೂವು-ಹಣ್ಣು ಎಲ್ಲವೂ ಗೋಚರಿಸುತ್ತವೆ ಆದರೆ ಮರದ ನಿಜವಾದ ಅಸ್ತಿತ್ವವಿರುವುದು ಆಳವಾದ ಮಣ್ಣಿನಲ್ಲಿ ಹುದುಗಿರುವ ಅದರ ಬೇರುಗಳಲ್ಲಿ. ಬೇರು ಅದೆಷ್ಟು ಭದ್ರವಾಗಿ ತನ್ನ ಬೇರುಗಳನ್ನು ಅದು ನೆಲದ ಅಡಿಯಲ್ಲಿ ಹರಡಿಕೊಂಡು ನೀರು, ಪೋಷಕಾಂಶ ಹಾಗೂ ಮಣ್ಣಿನ ಸಾರವನ್ನು ಹೀರಿ ಬೆಳೆಯುತ್ತದೆಯೋ ಅಷ್ಟೇ ಹುಲುಸಾಗಿ ಮರ ತನ್ನನ್ನು ತಾನು ವಿಸ್ತರಿಸಿಕೊಂಡು ಬೆಳೆಯುತ್ತದೆ.ಹಾಗೆಯೇ ನಮ್ಮ ಕನ್ನಡ ನಾಡಿನ ಅಸ್ಮಿತೆ ಕೂಡ. ನಮ್ಮ ಭಾಷೆಯನ್ನು ಉಳಿಸಲು ನಾವು ನಮ್ಮ ನೆಲದ ಕುರಿತು ಅಭಿಮಾನವನ್ನು ಹೊಂದಿದ್ದರೆ ಮಾತ್ರ ಸಾಲದು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಮ್ಮದೇ ಆದ ಪ್ರಯತ್ನವನ್ನು ಕೂಡ ಮಾಡುತ್ತಿರಬೇಕು.ಬಳಸುತ್ತಿದ್ದರೆ ಹುಲುಸಾಗಿ ಬೆಳೆಯುತ್ತದೆ…. ಎಂಬ ಮಾತಿನಂತೆ ಕನ್ನಡ ಭಾಷೆಯನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ಶೇಕಡ 50ರಷ್ಟು ಕನ್ನಡ ಉಳಿಯುತ್ತದೆ…. ಆದರೆ ಹಾಂ! ಇಲ್ಲೊಂದು ಮಾತನ್ನು ಖಂಡಿತ ನೆನಪಿಡಿ. ಬೇರಾವ ಭಾಷೆ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡವನ್ನು ಬಳಸುತ್ತೇವೆ ಎಂಬಂತೆ ಇರಬಾರದು.ಔದ್ಯೋಗಿಕ ವಲಯದಲ್ಲಿ, ಸಭೆ ಸಮಾರಂಭಗಳಲ್ಲಿ ಜನರು ಸೇರಿದ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಇತರರನ್ನು ಪ್ರಭಾವಿಸಲು ನಾವು ಅವರದ್ದೇ ಭಾಷೆಯನ್ನು ಮಾತನಾಡಬೇಕಾಗಿಲ್ಲ ಎಷ್ಟೋ ಬಾರಿ ಸಂವಹನಕ್ಕೆ ಮಾತುಗಳೇ ಬೇಕಿಲ್ಲ ಎಂಬುದು ನಿಜವಾದರೂ ನಮ್ಮ ಭಾಷೆಯನ್ನು ಹೊರತುಪಡಿಸಿ ‘ಪೀಪಲ್ ಪ್ಲೀಸಿಂಗ್ ‘ ಆಗುವ ಅವಶ್ಯಕತೆ ಇಲ್ಲ.ಇತರ ಭಾಷೆಗಳಲ್ಲಿ ವಿಶೇಷವಾಗಿ ತಮಿಳು ಹಾಗೂ ಮರಾಠಿ ಭಾಷಿಕರನ್ನು ಗಮನಿಸಿ ನೋಡಿ…. ತಮ್ಮದೇ ಭಾಷೆಯ ಜನರುದೊರೆತಾಗ ಅವರು ತಮ್ಮ ಭಾಷೆಯಲ್ಲಿಯೇ ಮಾತನಾಡುತ್ತಾರೆ ಹೊರತು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಅಲ್ಲ…. ಅಷ್ಟರ ಮಟ್ಟಿಗೆ ಅವರಲ್ಲಿ ಭಾಷೆಯ ಕುರಿತು ಅಭಿಮಾನವಿದೆ ಅವರ ಅಭಿಮಾನದ ಕೇವಲ ಒಂದಷ್ಟು ಪಾಲನ್ನು ನಾವು ಹೊಂದಿದರೂ ಸಾಕು ನಮ್ಮ ಭಾಷೆಯ ಅಭಿವೃದ್ಧಿಯಾಗುತ್ತದೆ.ಇನ್ನು ನಮ್ಮ ಕನ್ನಡ ನಾಡು ಕದಂಬರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಆಳಿದ ನೆಲೆವೀಡು… ನಮ್ಮದೇ ಐತಿಹಾಸಿಕ ದೇಗುಲಗಳನ್ನು ನೋಡಲು ದೇಶ ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಗಖುದ್ದು ಇದೇ ನಾಡಿನವರಾದ ನಾವು ನಮ್ಮ ಮಕ್ಕಳಿಗೆ ಎಷ್ಟರಮಟ್ಟಿಗೆ ನಮ್ಮ ನಾಡಿನ ಪರಿಚಯ ಮಾಡಿಕೊಟ್ಟಿದ್ದೇವೆ ಎಂಬುದನ್ನು  ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.ಅಯ್ಯೋ ! ಮಕ್ಕಳು ಅದೇನು ನೋಡ್ತಾರೆ ಅವರಿಗೆ ಇಂತದ್ದರಲ್ಲೆಲ್ಲ ಆಸಕ್ತಿ ಇಲ್ಲ ಎಂದು ಖಂಡಿತ ಹೇಳಬೇಡಿ…. ಮಕ್ಕಳಿಗೆ ಆಸಕ್ತಿ ಮೂಡಿಸುವಲ್ಲಿ ನಾವು ಪ್ರಯತ್ನವನ್ನೇ ಮಾಡಿಲ್ಲ ಎಂದಾದರೆ ಅವರು ಹೇಗೆ ಸ್ಪಂದಿಸುತ್ತಾರೆ ನೀವೇ ಹೇಳಿ ?ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ನೆಲ-ಜಲ, ಇತಿಹಾಸ ಇವುಗಳ ಅರಿವು ನಮಗೆ ಇರದಿದ್ದರೆ ನಾವು ಒಳ್ಳೆಯ ಭವಿಷ್ಯವನ್ನು ಬರೆಯಲು ಹೇಗೆ ಸಾಧ್ಯ.ಇಂದಿಗೂ ಕೂಡ ನಾವು ನಾಗರಿಕತೆಗಳ ಕುರಿತು ಮಾತನಾಡುವಾಗ ಆಯಾ ನಾಗರಿಕತೆಗಳು ಹುಟ್ಟಿರುವ, ಬೆಳೆದಿರುವ ಅಳವಡಿಸಿಕೊಂಡಿರುವ ಜೀವನ ಶೈಲಿ, ಸಾಹಿತ್ಯ, ಸಂಗೀತ, ಕಲೆಗಳ ಮೂಲಕ ಅವುಗಳನ್ನು ಗುರುತಿಸುತ್ತೇವೆ ಎಂಬುದನ್ನು ನಾವು ಮರೆಯಬಾರದು. ಪಾಶ್ಚಾತ್ಯ ನೃತ್ಯ ಸಂಗೀತಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ ನಿಜ ಆದರೆ ನಮ್ಮದೇ ನೆಲ ಮೂಲದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ನಾವು ಪ್ರೋತ್ಸಾಹಿಸಬೇಕು.ನಮ್ಮದೇ ಕನ್ನಡ ನಾಡಿನ ತುಳುವ ಭಾಷೆಯನ್ನು ಮಾತನಾಡುವಶೆಟ್ಟಿ ಜನಾಂಗದವರು ತಮ್ಮದೇ ಜನರನ್ನು ಭೇಟಿಯಾಗಿ ಮಾತನಾಡುವಾಗ ತಮ್ಮ ಮನೆ ಭಾಷೆ ತುಳು ಇಲ್ಲವೇ ಕೊಂಕಣಿ ಯಲ್ಲಿ ಮಾತನಾಡುತ್ತಾರೆ. ಅವರು ನಮ್ಮವರು ಕಣೋ ಅವರನ್ನು ಬೆಳೆಸಬೇಕು ಎಂದು ಹೇಳುತ್ತಾರೆ. ಅಂತಹ ಪ್ರೀತಿ ವಿಶ್ವಾಸ ನಮ್ಮಲ್ಲೂ ಬೇರೂರಬೇಕು.ಆಡಳಿತದ ಎಲ್ಲ ಪ್ರಕ್ರಿಯೆಗಳಲ್ಲಿ ಕನ್ನಡ ಮುನ್ನೆಲೆಗೆ ಬರಬೇಕು. ಕಚೇರಿಯ ಎಲ್ಲ ವಹಿವಾಟುಗಳು ಕನ್ನಡದಲ್ಲಿ ಇರಬೇಕು. ಬಹು ರಾಷ್ಟ್ರೀಯ ಕಂಪನಿಗಳಲ್ಲೂ ಕೂಡ ಕನ್ನಡದ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶವಿರಬೇಕು.ಅಂಗಡಿ ಮುಂಗಟ್ಟುಗಳ, ಕಚೇರಿಗಳ ಹೊರಭಾಗದಲ್ಲಿ ಅವುಗಳ ಹೆಸರಿನ ಶಿರೋ ಬರಹವನ್ನು ಕನ್ನಡಕ್ಕೆ ಇಳಿಸಿದರೆ ಸಾಲದು  ಕನ್ನಡ ಭಾಷೆಯ ಮೇಲಿನ ಪ್ರೀತಿ ನಮ್ಮ ಸಾಹಿತ್ಯ, ಸಂಗೀತ, ಲಲಿತ ಕಲೆಗಳ ಮೂಲಕ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು.ಕನ್ನಡ ನಾಡಿನಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜನರು ಕನ್ನಡ್ ಬರಲ್ಲ ಎಂದು ಹೇಳಬಾರದು. ಕನ್ನಡ ನಾಡಿನಲ್ಲಿ ಇದ್ದಾರೆ ಎಂದರೆ ಇಲ್ಲಿಯ ಭಾಷೆಯನ್ನು ಅರಿತುಕೊಳ್ಳುವ ಮಾತನಾಡುವ ಇಲ್ಲಿ ಯ ನೆಲಮೂಲ ಸಂಸ್ಕೃತಿಯನ್ನು ಗೌರವಿಸುವ ಅವಶ್ಯಕತೆಯನ್ನು ಅವರಿಗೆ ಮನಗಾಣಿಸಬೇಕು.ಮನೆಮನೆಗಳಲ್ಲಿ ಕನ್ನಡ ಮಾತನಾಡುವ, ಕನ್ನಡದಲ್ಲಿ ವ್ಯವಹರಿಸುವ ಮೂಲಕ ನಮ್ಮ ಭಾಷೆಯ ಕುರಿತು ಅಭಿಮಾನವನ್ನು ಮೂಡಿಸಬೇಕು.ಅಂದಾಗ ಮಾತ್ರ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ.ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ವೀಣಾ ಹೇಮಂತಗೌಡ ಪಾಟೀಲ್

“ಕನ್ನಡ ಭಾಷೆಯ ಅಸ್ತಿತ್ವ” ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಪುಸ್ತಕ ಸಂಗಾತಿ

ಉಮೇಶಬಾಬು ಎಂ ಸಾಸಾಬಾಳ ಅವರ ಭಾವಬಂಧುರ(ಗಜಲ್ ಸಂಕಲನ) ಅವಲೋಕನ,ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಉಮೇಶಬಾಬು ಎಂ ಸಾಸಾಬಾಳ ಭಾವಬಂಧುರ (ಗಜಲ್ ಸಂಕಲನ) ಅವಲೋಕನ, ಭಾವ ಬಂಧುರದ ಗಜಲ್ ಗಳಲ್ಲಿ ಬಂಧಿ ಯಾಗುವುದೇ ಒಂದು ಸುಖದ ಅಮಲು* *ಕೃತಿ ಶೀಷಿ೯ಕೆ…..ಭಾವಬಂಧುರ* (ಗಜಲ್ ಸಂಕಲನ)*ಲೇಖಕರು………ಉಮೇಶಬಾಬು ಎಂ ಸಾಸಾಬಾಳ*  ಮೊ.ನಂ.೭೦೧೯೨೯೩೩೨೫*ಪ್ರಥಮ ಮುದ್ರಣ…..೨೦೨೬*  ಬೆಲೆ…೨೦೦₹*ಪ್ರಕಾಶಕರು….ಸುವನಾ ಪ್ರಕಾಶನ ಕಲಬುರಗಿ* *ಭಾವ ಬಂಧುರದ ಗಜಲ್ ಗಳಲ್ಲಿ ಬಂಧಿ ಯಾಗುವುದೇ ಒಂದು ಸುಖದ ಅಮಲು* ನಿಸರ್ಗದಲ್ಲಿ ಹುಟ್ಟಿ ಬೆಳೆಯುವ ಪ್ರತಿಯೊಂದು ಜೀವಿಗಳು ತಮ್ಮ ಹೃದಯದ ಭಾವನೆಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸಿ ಆನಂದಿಸುತ್ತವೆ. ಪಶು ಪಕ್ಷಿಗಳು ತಮ್ಮ ಮನದ ಭಾವನೆಯನ್ನು ಸುಖ ದುಃಖವನ್ನು ದ್ವನಿ ಮೂಲಕ ವ್ಯಕ್ತಪಡಿಸುತ್ತವೆ. ಮನುಷ್ಯನು ಅವುಗಳಿಗಿಂತ ಭಿನ್ನವಾದ ರೂಪದಲ್ಲಿ ತನ್ನ ಹೃದಯದ ಭಾವನೆಗಳಾದ ನೋವು ನಲಿವು ಆಶ್ಚರ್ಯಗಳನ್ನು  ನಗು ಅಳುವಿನಲ್ಲಿ ವ್ಯಕ್ತಪಡಿಸುತ್ತಾನೆ. ಕೆಲವು ಸಾರಿ ಮನುಷ್ಯನು ತನ್ನ ವಿದ್ವತ್ತಿನಿಂದ ಕಾವ್ಯ, ಕಥೆ, ಹಾಡು, ರೂಪಕದಲ್ಲಿ ವ್ಯಕ್ತಪಡಿಸಿ ಮನಸ್ಸು ಹಗುರ ಮಾಡಿಕೊಳ್ಳುತ್ತಾನೆ. ಇಂತಹ  ಹೃದಯದ ಭಾವನೆಗಳನ್ನು ಸಶಕ್ತವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಕಾವ್ಯವೆಂದರೆ ಗಜಲ್ ಕಾವ್ಯ ವೆಂದು ಹೇಳಬಹುದು. ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮವಾದ ಅಭಿವ್ಯಕ್ತಿ ಇದಾಗಿದೆ. ಗಜಲ್ ಕಾವ್ಯ  ಒಂದು  ಹೃದಯದ ಭಾವನೆಗಳನ್ನು ಇನ್ನೊಂದು ಹೃದಯಕ್ಕೆ ಪಿಸುಮಾತಿನಲ್ಲಿ ಮುಟ್ಟಿಸುವ ಮಧುರವಾದ ಮೃದುವಾದ ಶಬ್ದಗಳ ರೂಪಕಗಳ ಕಾವ್ಯವಾಗಿದ್ದು ಎಲ್ಲರ ಮನ ಗೆಲ್ಲುತ್ತದೆ .  ಗಜಲ್ ಸಾಹಿತ್ಯ ಭಾರತಕ್ಕೆ ಫಾರ್ಸಿ ಉರ್ದುವಿನಿಂದ ವಲಸೆ ಬಂದ ಕಾವ್ಯ. ಗಜಲ್ ಎಂಬ ಮೋಹಕ ಕಾವ್ಯ ಕನ್ನಡ ಕವಿಗಳ ಹೃದಯದಲ್ಲಿ ಇಂದು ನೆಲೆಸಿದೆ. ಉರ್ದು ಕಾವ್ಯದ ರಾಣಿಯಾದ ಗಜಲ್ ಇಂದು ಭಾರತದ ಎಲ್ಲಾ ಭಾಷೆಗಳನ್ನು ಅಪ್ಪಿಕೊಂಡಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದೆ. ಗಜಲ್ ಕಾವ್ಯ ಕೋಮಲ, ಮಧುರ, ಲಯ, ಲಾಲಿತ್ಯ, ಗೇಯತೆ ಮತ್ತು ಮಾಧುರ್ಯದಿಂದ ಮೈಗೂಡಿಸಿಕೊಂಡು ಎಲ್ಲರ ಹೃದಯದಲ್ಲಿ ನೆಲೆಸಿದೆ. ಈ ಕಾವ್ಯ ಸುಂದರಿ ಒಯ್ಯಾರಿ, ಮಯೂರಿ, ಬಿನ್ನಾಣೆಗಿತ್ತಿ ಎಲ್ಲರಿಗೆ ಒಲಿಯುತ್ತಾಳೆಂಬ ಭರವಸೆ ಇಲ್ಲ. ಯಾರು ಆಕೆಯನ್ನು ಹಗಲು ರಾತ್ರಿ ಧ್ಯಾನಿಸುತ್ತಾರೋ ಅವರಿಗೆ ಮಾತ್ರ ಒಲಿದು ಲೌಕಿಕ ಮತ್ತು ಅಲೌಕಿಕ ಪ್ರೀತಿಯ ಕಡಲಲ್ಲಿ ತೇಲಿಸುತ್ತಾಳೆ ಮತ್ತು ವಿರಹ, ಕಾಯುವಿಕೆಯ ಕಿಚ್ಚಿನಲ್ಲಿ ಬೇಯಿಸುತ್ತಾಳೆ. ಇಂಥ ಮೋಹಕವಾದ ಕಾವ್ಯಕ್ಕೆ ಉಮೇಶಬಾಬು ಎಂ. ಸಾಸಾಬಾಳ  ಅವರು ಮೋಹಿತರಾಗಿದ್ದಾರೆ ಮತ್ತು ಅವಳು ಇವರಿಗೆ ಒಲಿದಿದ್ದಾಳೆ.‌‌ ಇವರು ಪ್ರಸಿದ್ಧ ಚಿತ್ರಕಲಾವಿದರು ಹಾಗೂ ಚಿತ್ರಕಲಾ ಶಿಕ್ಷಕರಾಗಿದ್ದವರು. ರಾಷ್ಟ್ರೀಯ, ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮತ್ತು ಬಹುಮಾನಗಳನ್ನು ಪಡೆದಿದ್ದಾರೆ. ಕಲೆಯ ಜೊತೆಗೆ ಸಾಹಿತ್ಯವನ್ನು ಅಪ್ಪಿಕೊಂಡು ಈಗಾಗಲೇ *ನಮ್ಮೂರ ತೇರು*  *ಮೌನಡಂಗುರ* ಕವನ ಸಂಕಲನ ಹಾಗೂ *ಭಾವಭೃಂಗ*  ಗಜಲ್ ಸಂಕಲನ, ಹೀಗೆ ನಾಲ್ಕು ಸಂಕಲಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಕಲಾವಿದರಾಗಿ ತಮ್ಮ ಭಾವನೆಗಳನ್ನು ರೇಖೆ ಮತ್ತು ಬಣ್ಣಗಳ ಮೂಲಕ ಚಿತ್ರಗಳನ್ನು ಚಿತ್ರಿಸಿ ಎಲ್ಲರ ಮನ ಗೆದ್ದ ಇವರು ತಮ್ಮ ಗಜಲ್ ಸಾಹಿತ್ಯದಲ್ಲಿಯೂ ತಮ್ಮ ಭಾವನೆಗಳನ್ನು ಮೃದು, ಮಧುರ ಶಬ್ದಗಳಿಂದ, ರೂಪಕಗಳಿಂದ ಗಜಲ್  ರಚಿಸಿ ಓದುಗರ ಮನ ಗೆದ್ದಿದ್ದಾರೆ . ಉಮೇಶಬಾಬು ಅವರ ಮೊದಲನೇ ಗಜಲ್ ಸಂಕಲನ  *ಭಾವ ಬಂಧುರ*  ಶೀರ್ಷಿಕೆ ಓದುಗರನ್ನು ಭಾವನೆಯಲ್ಲಿ ಬಂಧಿಸುತ್ತದೆ. ಈ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರು ಮತ್ತು ವಿಮರ್ಶಕರು ಆದ ವೈ. ಎಂ. ಯಾಕೊಳ್ಳಿ ಸರ್ ಅವರು ಮೌಲಿಕವಾದ ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ. ಇನ್ನೊಬ್ಬ ಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಶೇರಿ ಸೇಡಂ ಅವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಮುಖಪುಟ ವಿನ್ಯಾಸ ವನ್ನು ಎ. ಕಮಲಾಕರ್ ಸುರಪುರ  ಅವರು ಅಂದವಾಗಿ ಅರ್ಥಪೂರ್ಣವಾಗಿ ಸಿದ್ಧಪಡಿಸಿದ್ದಾರೆ. ಇದರಿಂದ ಸಂಕಲನದ ಸೌಂದರ್ಯ ಹೆಚ್ಚಾಗಿದೆ. ಉಮೇಶಬಾಬು ಸಾಸಾಬಾಳ ಅವರ  ಗಜಲ್ ಕೃತಿ *ಭಾವ ಬಂಧುರ*  ಸಂಕಲನದಲ್ಲಿ 70 ಗಜಲ್ ಗಳಿದ್ದು ಎಲ್ಲಾ ಗಜಲ್ ಗಳು ಐದು ದ್ವಿಪದಿಯಲ್ಲಿವೆ. ಉಮೇಶ‌ಬಾಬು ಅವರು *ಬಾಬು* ಎಂಬ ತಖಲುಸ್ ( ಕಾವ್ಯನಾಮ) ವನ್ನು ಬಳಸಿದ್ದಾರೆ. ಗಜಲ್  ಕಾವ್ಯದ ಸ್ಥಾಯಿ ಗುಣವಾದ ಪ್ರೀತಿ, ಮೋಹ, ವಿರಹ, ಕಾಯುವಿಕೆ, ಇವುಗಳನ್ನು ವ್ಯಕ್ತಪಡಿಸುವ ಗಜಲ್‌ಗಳು ಈ ಸಂಕಲನದಲ್ಲಿ ಇವೆ. ಮೃದು, ಮಧುರವಾದ, ಮಾಧುರ್ಯಪೂರ್ಣವಾದ ಶಬ್ದಗಳಿಂದ ಗಜಲ್ ಗಳನ್ನು ರಚಿಸಿದ್ದಾರೆ.  ಗಜಲ್ ಗಳು ಓದುಗರ ಮನ ಸೆರೆ ಹಿಡಿಯುತ್ತವೆ. *ಕೊಸರಿ ಹೋದ ಕೊನೆಯ ಸ್ಪರ್ಶವಿತ್ತ ಬೆರಳು ನೆನಪಿದೆ*ಹುಸಿ ನೆಪಗಳ ಏದುಸಿರು ಬಿಟ್ಟ ಕೊರಳು ನೆನಪಿದೆ*    (ಗ.೧೧) ಪ್ರಿಯತಮೆ ಮುನಿದು  ಕೈ ಕೊಸರಿಕೊಂಡು ಹೋದಾಗ ಅವಳ ಬೆರಳ ಸ್ಪರ್ಶದ ನೆನಪು ಯಾವ ರೀತಿ ಕಾಡುತ್ತದೆ ಎಂದು ಗಜಲ್ ಕಾರರು ಇಲ್ಲಿ ವಿವರಿಸಿದ್ದಾರೆ. ಪ್ರೇಮಿಯು ಹೃದಯದಲ್ಲಿ ಬೆಸೆಗೊಂಡು ಒಲವಿಂದ ಇದ್ದ ಆ ಸವಿ ನೆನಪುಗಳು ಎಂದೂ ಮಾಸುವುದಿಲ್ಲ. ಅವಳ ಸಂಗ ಮನವು ಮತ್ತೆ ಮತ್ತೆ ಬಯಸುತ್ತಿರುತ್ತದೆ. ಅವಳ ರೂಪ, ಸ್ಪರ್ಶ ಸುಖ, ಕಾಡುವುದನ್ನು ಗಜಲ್ ಕಾರರು ಇಲ್ಲಿ ರೂಪಕಗಳೊಂದಿಗೆ ಸಾಕ್ಷಿಕೊಡುತ್ತಾ ವಿವರಿಸಿದ್ದಾರೆ . *ಚಂದ್ರೋದಯಕೆ ಅಂಬುಧಿ ಅಲೆಗಳ ಎತ್ತರಿಸುವುದು ಏಕೆ ಸಖಿ**ಸುಂದರಿಯೇ ನೀ ಬಂದರೆ ತಳಮಳ ಒತ್ತರಿಸುವುದು  ಏಕೆ ಸಖಿ*   ( ಗ ೧೬) ಈ ಗಜಲ್ ದಲ್ಲಿ ನಿತ್ಯ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಸುಂದರವಾದ ನಿಸರ್ಗದ ಚಲುವನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ .  ಸೂಯೋ೯ದಯ  ಚಂದ್ರೋದಯ  ಋತುಗಳ ಆಗಮನದಿಂದಾಗುವ ನಿಸರ್ಗದ ಬದಲಾವಣೆಯನ್ನು ಕಡಲ ಅಲೆಗಳ ಉಕ್ಕುವಿಕೆ, ಜಲಚರ ಪ್ರಾಣಿಗಳ ಜೀವನ ಶೈಲಿಯನ್ನು, ಹೀಗೆ ಪ್ರಕೃತಿಯ ಸೊಬಗನ್ನು ಹಿಡಿದಿಟ್ಟಿದ್ದಾರೆ ಮತ್ತು ಪ್ರಕೃತಿಯ ಬದಲಾವಣೆ ಏಕೆ ಎಂದು ಪ್ರಶ್ನಿಸುತ್ತ ಉತ್ತರ  ಹುಡುಕಿದ್ದಾರೆ. *ದುಂಬಿ ಪ್ರದಕ್ಷಿಣೆ ಹಾಕುವಾಗ ಹೂ ಒಂದೂ ಮಾತಾಡಲಿಲ್ಲ**ತುಂಬಿ ಬಂದು ನದಿ ಸೇರಲು ಸಾಗರ ಎಂದೂ ಮಾತಾಡಲಿಲ್ಲ*     (ಗ೨೨) ಈ ಗಜಲ್ ದ ರದೀಫ್  ಮಾತಾಡಲಿಲ್ಲ ಎಂಬುದು ಒಂದು ವಿಶಿಷ್ಟವಾದ ಅರ್ಥ ಕೊಡುತ್ತದೆ. ಕೆಲವೊಂದು ಕ್ರಿಯೆಗಳಿಗೆ ಮಾತು ಬೇಕಾಗಿಲ್ಲ. ಮೌನವೇ ಸಮ್ಮತಿಯಾಗಿರುತ್ತದೆ. ಆ ಮೌನದಲ್ಲಿ 100 ಮಾತುಗಳು ಅಡಗಿರುತ್ತವೆ ಎಂಬುದನ್ನು ಗಜಲ್ ದ  ಪ್ರತಿ ಶೇರ್ ನಲ್ಲಿ ಎತ್ತಿ ತೋರಿಸಿದ್ದಾರೆ. ದುಂಬಿ ಹೂವನ್ನು ಮೋಹಿಸಿ ಹೂವು ಸುತ್ತಲೂ ಪ್ರದಕ್ಷಿಣೆ ಹಾಕುತ್ತದೆ. ಅದು ಹೂವಿಗೆ ಹಿತವಾಗಿರುತ್ತದೆ. ಅದಕ್ಕಾಗಿ ಅದು ಒಂದೂ ಮಾತಾಡುವುದಿಲ್ಲ. ಹಾಗೆ ಓಡುವ ನದಿ ಸಾಗರದಲ್ಲಿ ಸಂಗಮವಾಗಲು ಕಾತರಿದಿಂದ ಸಾಗರದತ್ತ ಓಡುತ್ತದೆ. ಇದು ಸಾಗರಕ್ಕೂ ಬೇಕಾಗಿರುತ್ತದೆ ಸಾಗರ ಎಂದೂ  ಮಾತನಾಡದೆ ನದಿಯನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತದೆ. ಹೀಗೆ ಉತ್ತಮವಾದ ರೂಪಕಗಳಿಂದ ಗಜಲ್ ಸುಂದರವಾಗಿ ಅರ್ಥಪೂರ್ಣವಾಗಿ ರಚಿಸಿದ್ದಾರೆ. *ಹೇಳಬೇಕಾದ ಮಾತನು ಆಡುವದೇಕೆ ಸುತ್ತಿ ಬಳಸಿ**ಬೀಳಿಸಿ ಸೆರಗನು ಎತ್ತುತ ನೋಡುವದೇಕೆ ಸುತ್ತಿ ಬಳಿಸಿ*    ( ಗ. ೩೩) ಎಷ್ಟೋ ಸಾರಿ ನಮ್ಮ ಮನದಲ್ಲಿ ಇರುವ ಭಾವನೆಗಳನ್ನು ನೇರವಾಗಿ ಹೇಳಲಾಗದೆ ಹೇಳಿದರೆ ಅವರಿಗೆ ನೋವಾಗಬಹುದೆಂದು ಸುತ್ತಿ ಬಳಸಿ ಹೇಳುತ್ತೇವೆ. ಇದೇ ವಿಷಯವಾಗಿ  ಗಜಲ್ ಕಾರರು ತಮ್ಮ ಬಾಳ ಸಂಗಾತಿಗೆ ಕೇಳುತ್ತಾರೆ. ನಿನ್ನ ಮನದಲ್ಲಿರುವ ಮಾತುಗಳನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಯಾಕೆ ಹೇಳುವೆ, ಮನದ ಬಯಕೆಯನ್ನು ಹೇಳಲಾಗದೆ ಸೆರಗನ್ನು ಬೀಳಿಸಿ ಅದನ್ನು ಎತ್ತುತ್ತಾ ಆಸೆ ಕಂಗಳಿಂದ ನೋಡುವೆ ಏಕೆ ಎಂದು ಕೇಳುತ್ತಾರೆ. ಇದು ಒಂದು ದಾಂಪತ್ಯದ ಸರಸದ ಗಜಲ್ ಆಗಿದೆ. *ವಿರಹದ ವ್ಯಥೆಯ ಹೇಳಲರಿಯೆ ನಾಲಿಗೆ ಇರದ ಹೃದಯ**ತರತರಹದ ಕಥೆಯಾದ ಬದುಕು ಬರೆಯಲು ಬರದ ಹೃದಯ*   ( ಗ ೪೯) ಇದು ಒಂದು ವಿರಹದ ಗಜಲಾಗಿದೆ ಪ್ರೇಮಿಯ ಅಗಲಿಕೆಯಿಂದ ಹೃದಯ ನೊಂದು ಬೆಂದು ವ್ಯಥೆಪಡುತ್ತದೆ. ಆದರೆ ಹೃದಯಕ್ಕೆ ಬಾಯಿ ಇಲ್ಲ ತನ್ನ ಸ್ಥಿತಿಯನ್ನು ಹೇಳಲು ಕವಿ ಹೃದಯಕ್ಕೆ ನಾಲಿಗೆ ಇರಬೇಕಾಗಿತ್ತೆಂದೂ, ಇದ್ದರೆ ಅದು ತನ್ನ ಭಾವನೆಗಳನ್ನು ಹೇಳುತ್ತಿತೆಂದು ವಿವರಿಸುತ್ತಾರೆ. ಮನದಲ್ಲಿ ಉಂಟಾಗುವ ಭಾವನೆಗಳನ್ನು ಬದುಕಿನಲ್ಲಿ ಅನುಭವಿಸಿದ ನೋವುಗಳನ್ನು ಕಥೆಯ ರೂಪದಲ್ಲಿ ಬರೆಯಬೇಕೆಂದರೆ ಹೃದಯಕ್ಕೆ ಕೈ ಇಲ್ಲ ಇದರಿಂದ ಬರೆಯಲು ಆಗುವುದಿಲ್ಲವೆಂದು ವ್ಯಥೆಪಡುತ್ತ ವಿರಹದ ತಾಪವನ್ನು ಗಜಲ್ ದಲ್ಲಿ ತೋರಿಸಿದ್ದಾರೆ. *ಅನುಗಾಲ ಅಗಲದ ಮಾತನಿತ್ತು ನಿಯತ್ತು ಮುರಿದೆ ಏಕೆ**ಕೊನೆಯವರೆಗೆ ಜೊತೆಗಿರುವ ಇರಾದೆಗೆ ಮಣ್ಣು ಸುರಿದೆ ಏಕೆ*    (ಗ. ೫೦) ಪ್ರೀತಿಯಲ್ಲಿ ಒಂದಾದ ಹೃದಯಗಳು ಜನ್ಮ ಪೂರ್ತಿ ಜೊತೆಯಲ್ಲಿ ಇರಬೇಕು ಅದರಂತೆ ಒಬ್ಬರಿಗೊಬ್ಬರು ಮಾತು ಕೊಟ್ಟಿರುತ್ತಾರೆ. ಅದರಲ್ಲಿ ಒಬ್ಬರು ಕೊಟ್ಟ ಮಾತನ್ನು ಮುರಿದು ದೂರಾದಾಗ  ಹೃದಯವು ತನ್ನ ಪ್ರಿಯತಮೆ ಅಥವಾ ಪ್ರಿಯಕರ ನೀನು ಅನುಗಾಲ ಅಗಲದೆ ಇರುವೆನೆಂದು ಮಾತುಕೊಟ್ಟು ಏಕೆ  ಭಾಷೆಯನ್ನು ಮುರಿದೆ. ಕೊನೆಯವರೆಗೆ ಜೊತೆಯಾಗಿರುತ್ತೇನೆಂದು ಹೇಳಿ ಸುಂದರ ಬದುಕಿಗೆ ಮಣ್ಣು ಯಾಕೆ ಸುರಿದೆ? ಎಂದು ಪ್ರಶ್ನೆ ಮಾಡುವುದನ್ನು ಕವಿ ಇಲ್ಲಿ ಸುಂದರವಾದ ರೂಪಕಗಳೊಂದಿಗೆ ವಿವರಿಸಿದ್ದಾರೆ. *ದಕ್ಕದ ಹೋದವಳೆ ನೆನಸದಿರು ಬಿಕ್ಕ ಹತ್ತತಾವ ಸಮ್ಮನೆ**ಲೆಕ್ಕಕೆ ಸಿಗದ ನೆನಪುಗಳು ದುಃಖ ಬಿತ್ತತಾವ‌‌ ಸುಮ್ಮನೆ*    ( ಗ೬೪) ಇದು ಒಂದು ನಿರಾಶೆಯ ಗಜಲಾಗಿದ್ದು ತನ್ನವಳಾಗಬೇಕಾದ ಪ್ರಿಯತಮೆ ಬೇರೊಬ್ಬನ ಪಾಲಾದಾಗ ನೊಂದ ಹೃದಯ ಹಳಹಳಿಸುವ ರೀತಿಯನ್ನು ಸುಂದರವಾದ ರೂಪಕಗಳೊಂದಿಗೆ ವಿವರಿಸಿದ್ದಾರೆ. ನೀನು ನನಗೆ ಸಿಗಲಾರದವಳು ನನ್ನಿಂದ ದೂರ ಆದ ಮೇಲೆ ಯಾಕೆ ಮತ್ತೆ ನನ್ನನ್ನು ನೆನೆಸುವೆ, ನೀ ನೆನೆಸುವುದರಿಂದ ನನಗೆ ಬಿಕ್ಕಳಿಕೆ ಬರುತ್ತವೆ. ನಿನ್ನೊಂದಿಗೆ ಕಳೆದ ದಿನಗಳು ನೆನಪಾದರೆ ದುಃಖವೂ ಉಮ್ಮಳಿಸಿ ಬರುತ್ತದೆ. ನನ್ನನ್ನು ನೀ ಮರೆತೇ ಬಿಡು ಎಂದು ಹೇಳುವ ಮನದ ನೊಂದ  ಕಳಕಳಿಯ ಗಜಲ್ ಇದಾಗಿದೆ. ಉಮೇಶಬಾಬು ಅವರು ತಮ್ಮ *ಭಾವ ಬಂಧುರ* ಗಜಲ್  ಸಂಕಲನದಲ್ಲಿ ತೂಕ ಬದ್ಧವಾದ ಕಾಫಿಯಾಗಳು ಮತ್ತು ಅದಕ್ಕೆ ಹೊಂದುವಂತಹ ಅರ್ಥಪೂರ್ಣವಾದ ರದೀಫ್ ಗಳನ್ನು ಬಳಸಿ ಗಜಲ್ ಗಳನ್ನು ರಚಿಸಿದ್ದಾರೆ. ಸಂಕಲನದಲ್ಲಿ ವಿಶಿಷ್ಟವಾದ ನುಡಿಗಟ್ಟುಗಳನ್ನು ಕಾಣುತ್ತೇವೆ. ಉಮೇಶ ಬಾಬು ಅವರು ಹುಟ್ಟು ಕಲಾವಿದರಾಗಿದ್ದು ಕೇವಲ ಚಿತ್ರಗಳಲ್ಲದೆ ಭಾವಪೂರ್ಣ ಗಜಲ್ ಕಟ್ಟುವ ಕಲೆಯಲ್ಲಿಯೂ ನಿಪುಣರಾಗಿದ್ದಾರೆ. ನವಿರಾದ ಮೃದುವಾದ ಮಾಧುರ್ಯದ ಭಾವಪೂರ್ಣವಾದ ಶಬ್ದಗಳ ಕುಸಿರಿನ ಕಲೆಯಿಂದ ಗಜಲನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. *ಭಾವ ಬಂಧುರ* ಗಜಲ್ ಸಂಕಲನದ ಗಜಲ್ ಗಳು ಓದುಗರ ಹೃದಯವನ್ನು ಬಂಧಿಸಿ ಗಜಲ್ ರಾಣಿಯನ್ನು ಅಪ್ಪುವಂತೆ ಮಾಡುತ್ತವೆ. ಇದು ಒಂದು ಉತ್ತಮವಾದ ಗಜಲ್ ಕೃತಿಯಾಗಿದ್ದು ಓದಲು ಮತ್ತು ಸಂಗ್ರಹಿಸಲು ಯೋಗ್ಯವಾಗಿದೆ. ಇವರಿಂದ ಇನ್ನೂ ಉತ್ತಮವಾದ ಗಜಲ್ ಸಂಕಲನಗಳು ಪ್ರಕಟವಾಗಿ ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಅರ್ಪಿತವಾಗಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ. ಪ್ರಭಾವತಿ ಎಸ್ ದೇಸಾಯಿವಿಜಯಪುರ

ಉಮೇಶಬಾಬು ಎಂ ಸಾಸಾಬಾಳ ಅವರ ಭಾವಬಂಧುರ(ಗಜಲ್ ಸಂಕಲನ) ಅವಲೋಕನ,ಪ್ರಭಾವತಿ ಎಸ್ ದೇಸಾಯಿ Read Post »

ನಿಮ್ಮೊಂದಿಗೆ

ಶಶಿಕಲಾ ಚಂದ್ರಶೇಖರ “ಕನ್ನಡದಾಗ ಉಸಿರಾಡ್ರಿ”

ಕನ್ನಡ ಸಂಗಾತಿ ಶಶಿಕಲಾ ಚಂದ್ರಶೇಖರ “ಕನ್ನಡದಾಗ ಉಸಿರಾಡ್ರಿ” ಕನ್ನಡದಾಗ ಮಾತಾಡಬೇಕ್ರಿ, ಕನ್ನಡದಾಗ ಹಾಡಬೇಕ್ರಿ, ಕನ್ನಡಕ್ಕ ನಾವು ಹೋರಾಡಬೇಕ್ರಿ.ತಿನ್ನುವ ಅನ್ನ ಕನ್ನಡದ್ದು, ಕುಡಿಯೋ ನೀರು ಕನ್ನಡದ್ದು,ಉಸಿರಾಡೋ ಗಾಳಿನೂ ಕನ್ನಡದ್ದು, ಅಲ್ವೇನ್ರಿ?ಹಂಗಿದ್ದಾಗ ಹೆಮ್ಮೆಯಿಂದ ಕನ್ನಡದಾಗ ಮಾತಾಡಬೇಕ್ರಿ. ಖರೆ, ಸಾವಿರ ವರ್ಷದ ಇತಿಹಾಸ ಐತ್ರಿ,ಹಳೇ, ಹೊಸ ಕನ್ನಡಾನ ನೀವು ಓದಬೇಕ್ರಿ.ರನ್ನ, ಪೊನ್ನ, ಜನ್ನ, ಪಂಪ, ಹರಿಹರನ್ನ ನೆನೆಸಿಕೊಳ್ಳ್ರಿ,ಬೇಂದ್ರೆ, ಕುವೆಂಪು, ಗುಂಡಪ್ಪ, ಕಂಬಾರರಕಾವ್ಯ ರಸಧಾರೆ ಒಮ್ಮೆ ಸವಿದು ನೋಡ್ರಿ.ಜ್ಞಾನಪೀಠ ಸುಮ್ ಸುಮ್ನ ಕೊಡ್ತಾರೆನ್ರಿ?ಹಿತ್ತಲ ಗಿಡದ ಮದ್ದು ಮೊದ್ಲು ಮಾಡಿ ನೋಡ್ರಿ,ಆಗ ಖರೇನ ನೀವು ಒಪ್ಕೋತೀರಿ. ನಮ್ಮ ಮಕ್ಕಳ ಪಾಠದೊಳಗಲಂಡನ್ ಬ್ರಿಡ್ಜ್ ಯಾಕ ಬೇಕ್ರಿ, ಬೆಳದಿಂಗಳಲ್ಲಿ“ಚಂದಮಾಮ ಓಡಿ ಬಾ” ಹೇಳಿಕೊಡ್ರಿ,ಉಂಡಾಡಿ ಗುಂಡನ ಹಾಡು ಕೇಳ್ರಿ,ನಕ್ಕು ನಲಿವ ಮಕ್ಕಳನ್ನ ನೋಡ್ರಿ.ನಮ್ಮ ನೆಲದ ಸೊಗಡನ್ನ ತಿಳಿಸಿಕೊಡ್ರಿ,ಸ್ವಾಭಿಮಾನ ಬೆಳೆಸಿಕೊಳ್ಳ್ರಿ, ನಮ್ಮ ಭಾಷೆ ಉಳಿಸಿಕೊಳ್ಳ್ರಿ.ಕನ್ನಡ ಅಂದ್ರ ಮನಸು ಥೈ ಥಕ ಕುಣಿಬೇಕ್ರಿ. ಇನ್ನು ನಿಮಗ ಹ್ಯಾಂಗ ತಿಳಿಸಿ ಹೇಳಬೇಕ್ರಿ,ಆಜುಬಾಜು ಭಾಷೆ ಕಲಿಯೋದ ಮೊದ್ಲು ಬಿಡ್ರಿ,ಒಂದೇಟು ನಮ್ಮ ಭಾಷೆ ಅವರಿಗೂ ಕಲಿಸಿಕೊಡ್ರಿ.ಭಾಷೆ ನಮ್ಮದು ಹಂಗೇನು ಕಳಪೆಯಿಲ್ಲರಿ,ಇದನ್ನ ಎಲ್ಲರಿಗೂ ತಿಳಿಸಿ ಹೇಳ್ರಿ,ಎದೆತಟ್ಟಿ ಹೆಮ್ಮೆಯಿಂದ ಮಾತನಾಡ್ರಿ. ಇನ್ನೂ ನೀವು ಮಾತಾಡಿಲ್ಲ ಅಂದ್ರಅಭಿಮಾನಶೂನ್ಯ ನಿಮ್ಮಂತ ಜನರಪಡೆದ ಕನ್ನಡಾಂಬೆ ಸುಮ್ಮನಕಣ್ಣೀರು ಹಾಕ್ತಾ ಸೊರಗ್ತಾಳ್ರಿ.ಹೇಳೋವಷ್ಟು ಹೇಳಿದ್ದೀವ್ರಿ,ಇನ್ನು ನಿಮ್ಮ ವಿವೇಚನೆಗೆ ಬಿಟ್ಟಿದ್ದೀವ್ರಿ.ಎಂದೂ ಮನಿ ಗೆದ್ದು ಮಾರು ಗೆಲ್ಲಬೇಕ್ರಿ. ಶಶಿಕಲಾ ಚಂದ್ರಶೇಖರ

ಶಶಿಕಲಾ ಚಂದ್ರಶೇಖರ “ಕನ್ನಡದಾಗ ಉಸಿರಾಡ್ರಿ” Read Post »

ಕಾವ್ಯಯಾನ

ಸವಿತಾ ಇನಾಮದಾರ್ “ಕನ್ನಡ ಸವಿಗನ್ನಡ”

ಕನ್ನಡ ಸಂಗಾತಿ ಸವಿತಾ ಇನಾಮದಾರ್ “ಕನ್ನಡ ಸವಿಗನ್ನಡ” ಕನ್ನಡ ಸವಿಗನ್ನಡ ಕನ್ನಡ ಸಿರಿಗನ್ನಡಕನ್ನಡವ ಮಾತಾಡೋ ಕನ್ನಡದ ಕಂದಕನ್ನಡ ಭಾಷೆಯ ಸೊಗಡು ಕರ್ಣಾನಂದllಪ ll ಭಾರತಾಂಬೆಯ ಕುವರಿ ತಾಯಿ ಭುವನೇಶ್ವರಿಸಲಹುವಳೆಮ್ಮನು ಮಾತೆ ಚಾಮುಂಡೇಶ್ವರಿಸರ್ವ ಧರ್ಮಗಳ ಸಂಸ್ಕಾರವಿಹುದಿಲ್ಲಿನಿತ್ಯ ನೂತನ ಸಂಗಮದಲ್ಲಿ ll೧ ll ಸತ್ಯಕ್ಕೆ ಸಾವಿಲ್ಲ ಕನ್ನಡಕ್ಕೆ ಸೋಲಿಲ್ಲಬಳಸಿದಷ್ಟು ಬೆಳೆಯುವುದುಎಲ್ಲೆಡೆಯೂ ಹಬ್ಬುವುದುಕನ್ನಡವ ಕಾಪಾಡೋ ಕನ್ನಡದ ಕಂದಕನ್ನಡಮ್ಮನ ಹರಕೆ ಅದುವೇ ಶ್ರೀಗಂಧ ll೨ll ಸವಿತಾ ಇನಾಮದಾರ್

ಸವಿತಾ ಇನಾಮದಾರ್ “ಕನ್ನಡ ಸವಿಗನ್ನಡ” Read Post »

You cannot copy content of this page

Scroll to Top