ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ದಯಾನಂದ ಪಾಟೀಲ

ಜನಪದ ಸಂಗಾತಿ ದಯಾನಂದ ಪಾಟೀಲ “ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ಬಾಗಲಕೋಟ ಜಿಲ್ಲೆಯ ಜನಪದ ತಜ್ಞರು ಸಾಹಿತಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜನಪದಕ್ಕೆ ವಿಶೇಪವಾದ ಸ್ಥಾನ ಪಡೆದಿದೆ.ವಾಲೀಕಾರಯವರು ರಚನೆ ಮಾಡಿರುವ ಜನಪದ ಹಾಡುಗಳ ಒಂದು ಝಲಕ ನಿಮ್ಮ ಮುಂದೆ..ಆದಿ ಸ್ಥಳದಲ್ಲಿ ಇದ್ದ ಕಂಬಳಿಹಾಲು ಮತದ ಧರಮಕ ಬತ್ತ ಕಂಬಳಿ ಶಿಷ್ಯಾರದಿಂದ ಹುಟ್ಟಿತ ಕ೦ಬಳಿ ಜಗದ ಗುರುವ ಮಡ್ಡಿಸಿದ್ಯಾಗ ಹೊರುವ ಕಂಬಳಿ ಮಳಿ ರಾಜ ಬಂದಾಗ ಬೆಚ್ಚಾತ ಕಂಬಳಿ ತಲಿ ಮ್ಯಾಲ ಸುತ್ತುವ ಪಾವ ಡಾತ ಕಂಬಳಿ…ಮಳೆರಾಜ ನೀನಿಲ್ಲದೆ ಈ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ ಆದ್ದರಿಂದ ನೀ ಧರೆಗೆ ಬಾ ಅಂತ ಪರಿಪರಿಯಾಗಿ ಭಕ್ತಿಯಿಂದ ಬೇಡಿಕೊಂಡು ಭಕ್ತಿಯಿಂದ ಕುರುಬರು ಕಂಬಳಿಬೀಸಿದರೆ ಮಳೆ ಆಗುತ್ತದೆ. ಎ೦ದು ಹಿರಿಯರು ಕ್ಷೇತ್ರ ಕಾರ್ಯದಲ್ಲಿ ಹೇಳಿದ್ದಾರೆ.ಬೆಳೆಗಾಗಿ ನಾನೆದ್ದು /ಯಾರಾರ ನೆನೆಯಲಿ /ಎಳ್ಳು ಜೀರಿಗಿ ನೆನೆಯೊಳೆ “ಭೂಮಿತಾಯಿಎದ್ದೊಂದು ಗಳಿಗಿ ನೆನದೋ ಣೊ”ಭೂಮಿ ತಾಯಿ ದೇವರು ಸಕಲ ಚರಾಚರ ಜೀವ ರಾಶಿ ಬದುಕುವುದು ಈ ಭೂಮಿಯ ಮೇಲೆ ಇರುವ 84 ಲಕ್ಷ ಜೀವರಾಶಿ ಇದೆ ಈ ಭೂಮಂಡಲದಲ್ಲಿ ಬದುಕುತ್ತಿವೆ. ಎಲ್ಲಾ ಜೀವರಾಶಿಗೆ ಭೂಮಿ ತಾಯಿ ಅನ್ನ ಹಾಕುತ್ತಿದ್ದಾಳೆ..ಬೆಳ್ಳನೆ ಬೆಳಗಾಗಿ ಬೆಳ್ಳಿ ಮೂಡಲ ಗೈದು ಒಳ್ಳೊಳ್ಳೆ ಮೀನು ಗರಿ ಗಟ್ಟಿ ಆಡ್ಯಾವೋಗರತಿ ಗಂಗಮ್ಮನ ಉಡಿಯಾಗೆ/ಒಕ್ಕಲಿಗನಿಗೆ ನೀರು ಬರಿಯ ನೀರಲ್ಲ ಗರತಿ ಗಂಗವ್ವ ನಸುಕಿನಲ್ಲಿ ಈಕೆಯ ಉಡಿಯಲ್ಲಿ ಮೀನು ಗರಿ ಬಿಚ್ಚಿ ಆಡುವುದೆಂದು ಜನಪದರು ಬಣ್ಣಿಸಿರುವುದು ನೈಜವಾಗಿದೆ ಬೆಳಗು ಕೂಡ ಅವರ ಪಾಲಿಗೆ ಕೇವಲ ಬೆಳಕಲ್ಲ ಬೆಳ್ಳಿ ಬೆಳಕು..ಯೋಗವನು ಮನ ಮುಟ್ಟಿ ? ಭೋಗವನು ತೊರೆದಿಹರೆ |ಮಾಗಿಯಾ ಮಳೆಯ ಸುರಿದ೦ತೆ ಆ…. ಯೋಗ ಸಾಗುತ್ತ ಲಿಹುದು ಸರ್ವಜ್ಞIIಯೋಗಿಯ ದೇಹದ ಬೋಗಗಳೆನ್ನೆಲ್ಲ ಮನಸ್ಸಿನಿಂದ ತಿರಸ್ಕರಿಸಿ ಯೋಗ ಸಾಧನೆಯಲ್ಲಿ ಮನಸು ಲೀನಗೊಳಿಸುತ್ತಾನೆ. ಮಾಗಿಯ ದಿವಸಗಳಲ್ಲಿ ಮಳೆಯಾದರೆ ಭೂಮಿಯ ಮೇಲಿನ ಬೆಳೆಗೆ ಹಿತಕರವಾಗುವುದು ಅದರ೦ತೆಯೇ ಬೆಳೆಯುವ ಬೆಳೆಗೆ ಮಳೆ ನೀರು ಹನಿ ಹನಿಯಾಗಿ ದೊರಕಿದಾಗ ಅದರಲ್ಲಿ ಕಾಣಬರುವ ಸಂತೃಪ್ತಿ ಯೋಗಿಯ ಸಾಧನೆ…ಹಾಕಪ್ಪ ಅಗಳಿ ಹಾಕಪ್ಪ /ಜೋಕಪ್ಪ ಹಾಕಿದ ಅಗಳಿ ಹಿರಿಯಪ್ಪ / ನನ ಕೊಮರ”ಯಾಕೋ ಕೊಮರಾಮ ನೋ ನಿನ್ನ ಬಾಯಿಗೆ ಬೆಣ್ಲಿಲ್ಲ ಮೇಲೆ ಮಾಣಿಕದ ಹರಳಿಲ್ಲ / ಈ ಊರ ಓಣ್ಯಾಗ ನಿನ್ನ ಸುಳಿವಿಲ್ಲIIಡಾ.ಬೆಟಗೇರಿ ಕೃಷ್ಣ ಶರ್ಮ ಇವರು ಜೋಕುಮಾರ ಪದದ ಅರ್ಥ ಬಗ್ಗೆ ವಿವರಿಸಿದ್ದಾರೆ. ಜೋಕುಮಾರ – ಪದದ ಅಪಭ್ರ೦ಶ ಯೋಗ ಕುಮಾರ ಇದು ಸೋಮಾರಿ ಪಿ೦ಡ ಪೋಲಿ ಪೋಕರಿಸೋ ಮಾರಿ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.ಉತ್ತರ ದಿಕ್ಕಿಗೆ ಎತ್ತರಿಸಿ ಗಾಳಿ |ಬೀಸಿದರೆ ಉತ್ತಮ | ಮಳೆ ಎಂದ ಸರ್ವಜ್ಞ |ಶ್ರೀ ಮಳಿಯಪಯ್ಯ ಸ್ವಾಮಿಗಳು ಗ್ರಾಮದಲ್ಲಿ ಹಾದು ಹೋಗುವಾಗ ರೈತರು ಮಳೆ ಕೇಳಿಕೆ ಕೈತೆ ಆಗ ಮಳಿಯಪಯ್ಯ ಸ್ವಾಮಿಗಳು ತಡಿಹಾಕುನ 3 ದಿನಕ್ಕೆ ಬರತನ ಅಂತೆ ಹೇಳಿದಾರ೦ತಾ 3 ದಿನಕ್ಕೆ ಸಾಕಷ್ಟು ಮಳೆ ಆತು ಅಂತ ಹಿರಿಯರ ಹೇಳತಾರ..ಅಂದು ರೊಕ್ಕ ಕಡಿಮೆ ಇತ್ತು ಗೌರವ ಹೆಚ್ಚ ಇತ್ತು.ಇಂದು ರೊಕ್ಕ ಹೆಚ್ಚಾ ಗೈತಿ ಗೌರವ ಕಡಿಮೆ ಆಗೈತಿ..ದೂರದಶ೯ನಮಕ್ಕಳ ಜಾನಪದ ಎಷ್ಟೆಂದು ಸುಂದರ ಇತ್ತು ಅದೆನ್ನೆಲ್ಲ ಕಸಿದುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಮಳೆ ಆಚರಣೆ ಕಡಿಮೆಯಾಗುತ್ತಿದೆ.ಹಿರಿಯರಿಗೆ ಗೌರವ ಕೊಡುತ್ತಿಲ್ಲ ಜನಪದ ಸಾಹಿತ್ಯ ಮಾಯವಾಗುತ್ತಿದೆ.ಬಬಲಾದಿ ಚಿಕ್ಕಪ್ಪಯ್ಯಾನವರು ಸಾರಿ ಸಾರಿ ಹೇಳಿದ್ದಾರೆ.ಸಾಹಿತಿ ಜನಪದ ವಿದ್ವಾಂಸರಾದ ಪಿ.ಡಿ.ವಾಲೀಕಾರ ಯವರು ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ.ಅವರಿಗೆ ಸವಿ ನೆನಪುಗಳೊಂದಿಗೆ … ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ  ಬಳಗ ಮಹಾರಾಷ್ಟ..

“ಪಿ.ಡಿ.ವಾಲೀಕಾರಯವರ ಜನಪದ ಸಾಹಿತ್ಯದ ಒಂದು ಅವಲೋಕನ.” ದಯಾನಂದ ಪಾಟೀಲ Read Post »

ಕಾವ್ಯಯಾನ

ಜಯಶ್ರೀ ಭ.ಭಂಡಾರಿ ಅವರ ಕವಿತೆ “ಋತುಗಾನ.”

ಕಾವ್ಯ ಸಂಗಾತಿ ಜಯಶ್ರೀ ಭ.ಭಂಡಾರಿ “ಋತುಗಾನ.” ಆಸರೆಯಿಲ್ಲದ ಬಳ್ಳಿಯಂತೆನೆಲೆಯಿಲ್ಲದ ಬಾಳ ಸಂತೆಯಲಿತರಗಲೆಯಂತೆ ಉದುರುವಾಗಭಾವನೆಗಳ ಹೊತ್ತಿಸಿ ದೀಪವಾದೆಬದುಕಲಿ ಬೆಳಕ ಚಿಮ್ಮಿಸಿದೆಮತ್ತೆ ಬದುಕಬೇಕೆಂಬ ಕಿಡಿಹಚ್ಚಿದಚತುರೆ ನೀನಾರೆ…..ಸೋತಬದುಕಲಿ ಗೆಲುವು ತುಂಬಿದೆಬಾನಂಗಳದ ಬೆಳಕಾಗಿ ನಿಂದೆಉಷೆಯಂತೆ ಉಲಿಯುತ ಉನ್ಮಾದ ಉಕ್ಕಿಸಿದೆ ನವಚೈತ್ರದಿಜೀವಜಂಜಡ ಮರೆಸಿದ ಕೋಗಿಲೆಹಾಡು ಕಲಿಸಿದ ಹಮ್ಮಿಲ್ಲದ ಹಕ್ಕಿಯೇ…ನೀನಾರೆ….. ಸುಖವೇನೆಂದು ಅರುಹಿದೆ ನಲುಗಿದಜೀವಕೆ ಜೀವವಾಹಿನಿಯಾದೆ….ಅಂಧಕಾರದ ಮಡಿಲಿಂದ ಜ್ಯೋತಿಯೆಡೆ ಕೈ ಹಿಡಿದು ನಡೆಸಿದೆ.ಬದುಕೇ ಇಲ್ಲ ಬಾಳೇ ಬೇಡಂದವನಬಾಳಲಿ ಭಾಗ್ಯದ ಕಿರಣ ಹೊಮ್ಮಿಸಿದೆಪದಗಳಲಿ ಕಟ್ಟಲಾರೆ ನಿನ್ನನು…. ನೀನಾರು .. ನನ್ನ ಉಸಿರ ಬಸಿರಲಿ ಬೆರಗು ತಂದವಳೆ.ಬೆಂದ ಬಾಳಿಗೆ ಜೀವತುಂಬಿದ ಬೆಡಗಿನವಳೆ.ನೀನೆ ನನ್ನವಳು ಸದಾ ಚಿನ್ಮಯಿ ಚಿತ್ಕಳೆಯವಳೆ…ಮುಂಗುರುಳ ಉಂಗುರದ ಕೆನ್ನೆಯವಳೆಮಲ್ಲಿಗೆಯೆ ನಾಚುವ ಮುಗುಳ್ನಗೆಯವಳೆಹೇಳಬಾರದೆ ನೀನಾರು… ಕಣ್ಣ ಅಂಚಿನ ಸಂಚಿನ ಮಿಂಚಂಚೆಯವಳೆಬೆಂಗಾಡಿನಲಿ ಬಳಕುವ ಬೆಳಕ ಬೀರಿದವಳೆನಗುವ ನೈದಿಲೆಯಾಗಿ ಈ ಹೃದಯವಆಳುಬಾ ಬಾಳುವ ಬಾ ದೀಪವಾಗಿಬೆಳಗು ಬಾ….ಯಾರೆ ನೀ ಮಂದಸ್ಮಿತ ತಂದವಳೆ…. ಜಯಶ್ರೀ ಭ.ಭಂಡಾರಿ.

ಜಯಶ್ರೀ ಭ.ಭಂಡಾರಿ ಅವರ ಕವಿತೆ “ಋತುಗಾನ.” Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಮೂಡಲಗಿ ಕವಿತೆ”ಅಹಂಕಾರ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಅಹಂಕಾರ”  ಕಾಡುತಿಹೆ ವ್ಯಸನವಾಗಿಘನತೆ ಕಳೆವ ಮೌನವಾಗಿದೂರ ಸರಿಸಿಬಿಡು ಮನವೇ ಕೊಬ್ಬಿದ  ಅಹಂಕಾರವಹರಡಿಬಿಡು ಬಾಂಧವ್ಯದ ಮೃದುತನವ ನಾನು ನನ್ನದು ಎಂದುಮೆರೆಯುವ ಮನವೇಈ ಜಗದಲಿ ಯಾವ ತನಗಳು ಶಾಶ್ವತ?ಕೊನೆಯಲಿ ಏನಾಗುವೆ ಎಂಬುದ ಅರಿಯದ ಮೂರ್ಖತನವೇ ನಿನಗೆ? ನಾ ಕಾಣುವುದೇ ಸತ್ಯಆನೆ ನಡೆದದ್ದೇ ದಾರಿಎಂಬುವ ಹುಚ್ಚುಭ್ರಮೆ ಬೇಡಕೊಚ್ಚಿ ಹೋಗುವೆ ನೀ ಹೊಳೆಯಲಿ ಅದ ತಿಳಿಯೋಮನವೇ ನಾನೇ ಶ್ರೇಷ್ಠವೆಂಬ ಭಾವಅಹಂಕಾರದ ಪರಾಕಾಷ್ಠೆಸರ್ವರೊಳಗೂ ಒಂದಾಗಿ  ಶಾಂತಿದೂತ ಬುದ್ಧನಾಗುಬದುಕಿಗೆ ಅದೇ ಪರಮಸುಖಚಿರನೂತನ ಪ್ರೇಮ ಕಾವ್ಯ ಕೋಟೆ ಕಟ್ಟಿ ಮೆರೆದವರುಮಣ್ಣಾಗಿ ಕಣ್ಣಮುಂದೆ ಹೋಗುತಿಹರುಅಹಂಕಾರದ ಅಮಲುವ್ಯಕ್ತಿತ್ವದ ಕೊನೆಯ ಉಯಿಲು ಮನವೇ ನೀ ಶುದ್ಧ ಮನಸ್ಸಿನ ಮಗುವಾಗುದುರಹಂಕಾರಿಯಾಗಬೇಡನೆಮ್ಮದಿಯ ಬದುಕಿಗೆ ಭಂಗ ತಂದುಕೊಳ್ಳಬೇಡ  ಶಿವಕುಮಾರ ಕೋಡಿಹಾಳ ಮೂಡಲಗಿ

ಶಿವಕುಮಾರ ಕೋಡಿಹಾಳ ಮೂಡಲಗಿ ಕವಿತೆ”ಅಹಂಕಾರ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜದ ಪರಿಕಲ್ಪನೆಯ ಅಡಿಯಲ್ಲಿ ಸಾರ್ವಕಾಲಿಕ ಸಮಾನತೆಯನ್ನು ತಂದು ಜಗತ್ತಿನಲ್ಲಿ ಸಾಮಾಜಿಕ ಧಾರ್ಮಿಕ ಸಾಹಿತಿಕ ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕಾರಣ ಇಂದು ಇಡಿ ವಿಶ್ವವೆ ಬಸವಣ್ಣನವರ ತತ್ವಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಂಡಿದ್ದಾರೆ. ಒಕ್ಕಲಿಗ ಮುದ್ದಣ್ಣ ಅವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಒಬ್ಬ ಶ್ರೇಷ್ಠ ವಚನಕಾರರು ಮತ್ತು ಶಿವಶರಣರು. ಇವರು ಕೃಷಿ ಅಥವಾ ಬೇಸಾಯವನ್ನು ತಮ್ಮ ಮುಖ್ಯ ಕಾಯಕವನ್ನಾಗಿಸಿಕೊಂಡು ಬದುಕಿದವರು. ಒಕ್ಕಲಿಗ ಮುದ್ದಣ್ಣನವರ ಪ್ರಮುಖ ಜೀವನ ಮತ್ತು ಸಾಹಿತ್ಯದ ಪರಿಚಯದ ಒಂದು ನೋಟ: • ಕಾಲ ಮತ್ತು ಸ್ಥಳ: ಇವರು ಬಸವಾದಿ ಶರಣರ ಅವಧಿಯಲ್ಲಿ ಜೀವಿಸಿದ್ದರು ಹಾಗೂ ಇವರ ಜನ್ಮಸ್ಥಳ ಈಗಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿಗೆ ಸೇರಿದ ಜೋಳದಹಾಳು ಗ್ರಾಮ. ಇವರ ತಂದೆ ತಾಯಿ ಮತ್ತು ಮಡದಿ ಮಕ್ಕಳ ಯಾವುದೇ ಉಲ್ಲೇಖ ಕಂಡು ಬಂದಿಲ್ಲ. • ಅಂಕಿತ ನಾಮ: ಮುದ್ದಣ್ಣನವರ ವಚನಗಳ ಅಂಕಿತ ನಾಮ ‘ಕಾಮಭೀಮ ಜೀವಧನದೊಡೆಯ’. • ಕಾಯಕ ಮತ್ತು ದಾಸೋಹ: ಬೇಸಾಯ ವೃತ್ತಿಯನ್ನು ಶ್ರೇಷ್ಠವೆಂದು ನಂಬಿದ್ದ ಇವರು, ನಿತ್ಯವೂ ಜಂಗಮ ದಾಸೋಹ (ಅನ್ನದಾನ) ನಡೆಸುತ್ತಿದ್ದರು. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ನೀಡದೆ, ಆ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸಿದ ಧೀಮಂತ ಶರಣ ಇವರಾಗಿದ್ದಾರೆ. • ವಚನ ಸಾಹಿತ್ಯ: ಪ್ರಸ್ತುತ ಇವರ ಕೇವಲ 12 ವಚನಗಳು ಮಾತ್ರ ದೊರೆತಿವೆ. ಇವರ ವಚನಗಳಲ್ಲಿ ಒಕ್ಕಲುತನದ (ವ್ಯವಸಾಯದ) ಪರಿಭಾಷೆ, ಮುಗ್ಧ ಭಕ್ತಿ ಹಾಗೂ ಸರಳ ಶೈಲಿಯನ್ನು ಕಾಣಬಹುದು. ಪ್ರಸಿದ್ಧ ವಚನದ ಸಾಲುಗಳು: “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.” ಇವರ ವಚನಗಳು ಇಂದಿನ ಕೃಷಿಕರಿಗೂ ಬದುಕಿನ ಸಾರ ಮತ್ತು ಮಾರ್ಗದರ್ಶನವನ್ನು ನೀಡುತ್ತವೆ.  ಒಕ್ಕಲಿಗ ಮುದ್ದಣ್ಣ ಮತ್ತು ಅವರ ವಚನ ತಾತ್ಪರ್ಯ ಒಕ್ಕಲಿಗ ಮುದ್ದಣ್ಣನವರ ಕಾಯಕ ನಿಷ್ಠೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ತೋರ್ಪಡಿಸುವ ಪ್ರಮುಖ ವಚನಗಳು ಹಾಗೂ ಅವುಗಳ ಸರಳ ವಿಶ್ಲೇಷಣೆ ಕಾಣಬಹುದು: 1. ಕೃಷಿ ಮತ್ತು ಆಧ್ಯಾತ್ಮದ ಸಮ್ಮಿಲನ (ವಚನ ವಿಶ್ಲೇಷಣೆ – ) ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ:  ಈ ವಚನದಲ್ಲಿ ಮುದ್ದಣ್ಣನವರು ಬೇಸಾಯದ ಪರಿಭಾಷೆಯ ಮೂಲಕವೇ ಆತ್ಮಸಾಕ್ಷಾತ್ಕಾರದ ಹಾದಿಯನ್ನು ವಿವರಿಸಿದ್ದಾರೆ. ನಮ್ಮ ಈ ಭೌತಿಕ ಶರೀರವೇ (ಅಂಗ) ಒಂದು ಕೃಷಿ ಭೂಮಿ. ಅದರಲ್ಲಿ ಬಿತ್ತಿ ಬೆಳೆಯಬೇಕಾದ ಬೆಳೆಯೇ ದೈವತ್ವ ಅಥವಾ ‘ಲಿಂಗ’. ಈ ಬೆಳೆಯನ್ನು ಬೆಳೆಸಲು ಬೇಕಾದ ಮುಖ್ಯ ಶಕ್ತಿ ‘ವಿಶ್ವಾಸ’ ಅಥವಾ ಅಚಲವಾದ ನಂಬಿಕೆ. ಮಾನವನು ತನ್ನ ಶರೀರವೆಂಬ ಭೂಮಿಯಲ್ಲಿ ಭಕ್ತಿಯಿಂದ ಲಿಂಗ ತತ್ವವನ್ನು ಬೆಳೆಸಿ, ಆ ಅರಿವಿನ ಸವಿಯನ್ನುಂಡು ಸುಖಿಯಾಗಿರಬೇಕು ಎಂದು ಅವರು ಸಂದೇಶ ನೀಡುತ್ತಾರೆ. 2. ಕಾಯಕದ ಮುಗ್ಧತೆ ಮತ್ತು ಸಮರ್ಪಣಾ ಭಾವ (ವಚನ ವಿಶ್ಲೇಷಣೆ – ) ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ; ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ; ಬೆರಸಿ ವ್ಯವಹಾರವ ಮಾಡುವುದಕ್ಕೆ ವೈಶ್ಯನಲ್ಲ; ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಶರಣರು ಚಾತುರ್ವರ್ಣ್ಯ ಪದ್ಧತಿಯನ್ನು ಮೀರಿ ನಿಂತವರು. ಮುದ್ದಣ್ಣನವರು ಇಲ್ಲಿ ತಮ್ಮನ್ನು ತಾವು ಮುಗ್ಧ ಕೃಷಿಕನೆಂದು ಗುರುತಿಸಿಕೊಳ್ಳುತ್ತಾರೆ. “ನಾನು ವೇದ ಓದುವ ಬ್ರಾಹ್ಮಣನಲ್ಲ (ಹಾರುವ), ಯುದ್ಧ ಮಾಡುವ ಕ್ಷತ್ರಿಯನಲ್ಲ, ಅಥವಾ ಲಾಭಕ್ಕಾಗಿ ವ್ಯಾಪಾರ ಮಾಡುವ ವೈಶ್ಯನಲ್ಲ. ನಾನು ಕೇವಲ ಕರಗಷ್ಟ ಪಟ್ಟು ದುಡಿಯುವ ಉಳುವ ಒಕ್ಕಲ ಮಗ” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಹೊಲ ಉಳುವಾಗ ನನ್ನಿಂದ ತಿಳಿಯದೇ ತಪ್ಪುಗಳಾಗಿದ್ದರೆ (ಉದಾಹರಣೆಗೆ ಮಣ್ಣಿನಲ್ಲಿರುವ ಕ್ರಿಮಿಕೀಟಗಳಿಗೆ ನೋವಾಗುವುದು), ನನ್ನ ಮುಗ್ಧತೆಯನ್ನು ಕಂಡು ನನ್ನನ್ನು ಒಪ್ಪಿಕೋ ಪ್ರಭುವೇ” ಎಂದು ದೇವರಲ್ಲಿ ಅನನ್ಯವಾಗಿ ಪ್ರಾರ್ಥಿಸುತ್ತಾರೆ. 3. ಕೃಷಿ ಪ್ರಜ್ಞೆ ಮತ್ತು ಜ್ಞಾನದ ಅರಿವು (ವಚನ ವಿಶ್ಲೇಷಣೆ – ) ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು… ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಒಬ್ಬ ಚತುರ ರೈತನಿಗೆ ತನ್ನ ಹೊಲದ ಪೈರಿಗೆ ಯಾವಾಗ, ಎಷ್ಟು ನೀರು ಹಾಯಿಸಬೇಕು ಎಂಬ ‘ಉಚಿತ’ (ಸದಸದ್ವಿವೇಕ) ಜ್ಞಾನವಿರಬೇಕು. ಅತಿಯಾದರೆ ಬೆಳೆ ಕೊಳೆಯುತ್ತದೆ, ಕಡಿಮೆಯಾದರೆ ಒಣಗುತ್ತದೆ. ಹಾಗೆಯೇ ಮನುಷ್ಯ ಮಾಡುವ ಕಾಯಕಕ್ಕೆ (ಕ್ರಿಯೆಗೆ) ಜ್ಞಾನದ (ಅರಿವಿನ) ಬೆಂಬಲವಿರಬೇಕು. ಒಮ್ಮೆ ಸಾಧಕನು ಆಧ್ಯಾತ್ಮಿಕ ಸಾಧನೆಯೆಂಬ ‘ಬೆಳೆಯನ್ನು’ ಕೊಯ್ದು ಜೀವನ್ಮುಕ್ತನಾದ ಮೇಲೆ, ಅವನಿಗೆ ಲೌಕಿಕ ಬಂಧನಗಳಾಗಲಿ ಅಥವಾ ಶರೀರದ ಕಾವಲಿನ ಹಂಗಾಗಲಿ ಇರುವುದಿಲ್ಲ ಎಂಬುದನ್ನು ಕೃಷಿಯ ಉದಾಹರಣೆಯೊಂದಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲಿಗ ಮುದ್ದಣ್ಣನವರ ಹೆಚ್ಚಿನ ಐತಿಹಾಸಿಕ ಮಾಹಿತಿ: • ಕಾಯಕವೇ ಕೈಲಾಸ ತತ್ವ: ಅವರು ಕೇವಲ ಹೊಲದಲ್ಲಿ ದುಡಿಯುತ್ತಿರಲಿಲ್ಲ, ಆ ದುಡಿಮೆಯ ಆದಾಯದಿಂದ ನಿತ್ಯವೂ ಮನೆಗೆ ಬರುವ ಶರಣರಿಗೆ, ದಾಸೋಹಿಗಳಿಗೆ ಅನ್ನದಾನ (ಜಂಗಮ ದಾಸೋಹ) ಮಾಡುತ್ತಿದ್ದರು. • ವಚನಗಳ ವಿಶೇಷತೆ: ಇವರ ವಚನಗಳಲ್ಲಿ ನೇಗಿಲು, ಕುಂಟೆ, ಎತ್ತು, ಮಳೆ, ಹೊಲ, ಕಾವಲು ಮುಂತಾದ ಕೃಷಿ ಪರಿಭಾಷೆಗಳೇ ಆಧ್ಯಾತ್ಮಿಕ ರೂಪಕಗಳಾಗಿ ಬಳಕೆಯಾಗಿವೆ. 12ನೇ ಶತಮಾನದ ಶರಣ ಚಳವಳಿಯು ಸಮಾಜದ ಕೆಳಸ್ತರದ ಕಾಯಕಜೀವಿಗಳಿಗೆ ಹೇಗೆ ಆತ್ಮಗೌರವ ಮತ್ತು ಸಾಹಿತ್ಯದ ಅಭಿವ್ಯಕ್ತಿಯನ್ನು ನೀಡಿತು ಎಂಬುದಕ್ಕೆ ಒಕ್ಕಲಿಗ ಮುದ್ದಣ್ಣನವರೇ ಸಾಕ್ಷಿ. ಶರಣ ಸಂಸ್ಕೃತಿಗೆ ಶ್ರಮವನ್ನು ಶಿವಯೋಗವನ್ನಾಗಿಸಿದ ಶ್ರೇಷ್ಠ ಶರಣ ವಚನಕಾರ ಒಕ್ಕಲಿಗ ಮುದ್ದಣ್ಣ. ಇವರ ಬದುಕೆ ಒಂದು ಮಾದರಿಯ ಪಾಠ. ಇವರು ಜಗದ ಇತಿಹಾಸದಲ್ಲಿ ಸಾವಿಲ್ಲದ ಶರಣರು. ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ  

Read Post »

ಪುಸ್ತಕ ಸಂಗಾತಿ

ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ

ಪುಸ್ತಕ ಸಂಗಾತಿ ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ ಒಂದು ಪುಸ್ತಕ; ಮೂರು ಅಭಿಪ್ರಾಯ **** ಅಭಿಪ್ರಾಯ ಒಂದು; ಆಗಾಧ ಅರ್ಥ ತುಂಬಿದ ಬಿಡಿ ಕವಿತೆಗಳು  ಹೆಸರು: ‘ಧ್ಯಾನಕ್ಕೆ ಕೂತ ಕಂಗಳಲಿ‘  ಲೇಖಕರ ಹೆಸರು: ಶ್ರೀ ಅಶ್ಫಾಕ್ ಪೀರಜಾದೆ. ಎಚ್ ಎಸ್ ಆರ್ ಎ ಪ್ರಕಾಶನ. ಪುಟಗಳು: ೧೨೨+೪ ಬೆಲೆ: ₹೧೫೦/- ಗಜಲ್ ಗಳ ಸರದಾರ, ಕಥಾ ಬರಹದ ಸ್ಫೂರ್ತಿ, ಬಿಡಿಗವಿತೆಗಳ ಕರ್ತೃ ಗೆಳೆಯ ಅಶ್ಫಾಕ್ ಪೀರಜಾದೆಯವರ ‘ಧ್ಯಾನಕ್ಕೆ ಕೂತ ಕಂಗಳಲಿ‘ ಪುಸ್ತಕವನ್ನು ಎದುರಿಗಿಟ್ಟುಕೊಂಡು ನಾಲ್ಕು ಮಾತು ಸೇರಿಸಬೇಕೆಂಬ ಹುಕಿಯಲ್ಲಿ ನನ್ನ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಶ್ರೀ ಅಶ್ಫಾಕ್ ಅವರು ಈ ಪುಸ್ತಕವನ್ನು ನನಗೆ ಪ್ರೀತಿಯಿಂದ ಕೊಟ್ಟು ತಿಂಗಳುಗಳೇ ಗತಿಸಿವೆ. ಯಾವುದೋ ಗಡಿಬಿಡಿಯಲ್ಲಿ ಈ ಪುಸ್ತಕವನ್ನು ಎಲ್ಲಿಟ್ಟಿದ್ದೇನೆಂಬುದೇ ಮರೆತು ಹೋಗಿ ಪಾಪ ಪ್ರಜ್ಞೆಯಿಂದ ಸಂಕಟಕ್ಕೀಡಾಗಿದ್ದೆ. ಕಳೆದ ವಾರ ಅಚಾನಕ್ಕಾಗಿ ಇದು ಕಣ್ಣೆದುರು ಕಂಡು ಪುಳಕಗೊಂಡೆ. ‘ಧ್ಯಾನಕ್ಕೆ ಕೂತ ಕಂಗಳಲಿ‘ ಪುಸ್ತಕದ ಒಟ್ಟು ೨೦೯ ಬಿಡಿಗವಿತೆಗಳನ್ನು ಬಿಡಿಬಿಡಿಸಿ ಓದಿ ಈಗ ಇಲ್ಲಿ ಅವುಗಳನ್ನು ನನ್ನ ಅರ್ಥ ವ್ಯಾಪ್ತಿಯಲ್ಲಿ ಬಿಡಿಸಲೆತ್ನಿಸುತ್ತಿದ್ದೇನೆ.  ಪುಸ್ತಕದ ಆರಂಭದಲ್ಲೇ ಹ್ಯಾಟ್ರಿಕ್ ಸಾಧಿಸಿ ಬೀಗಿದ್ದಾರೆ ಕವಿಗಳು. ಮೊದಲ ಮೂರು ಬಿಡಿಗವಿತೆಗಳು ಮಾತು ಮೌನದ ಪರಿವ್ಯಾಖ್ಯೆಯನ್ನು, ಮುಗಿಲ ಹನಿಗಳು ಅಣಿಮುತ್ತುಗಳಾದ ಪರಿಯನ್ನು, ಕತೆಗಾರನ ಪಾತ್ರಗೊಳಡನಾಟದ ಬಗೆಯನ್ನು ಲೀಲಾಜಾಲವಾಗಿ ವರ್ಣಿಸಿದ್ದಾರೆ. ಏಳನೇ ‘ಬಿಡಿ‘ಯಲ್ಲಿ “ನಿನ್ನಂತೆ ಹೃದಯ ಚುಚ್ಚೋ ಮುಳ್ಳು ಹುಡುಕಿದರೂ ಸಿಗದು ಅದಕೆ ನೀ ಹೂವಿಗಿಂತಲೂ ಮಿಗಿಲು” ಎಂಬಲ್ಲಿ ಹೂವಾಗಿ ಚುಚ್ಚುವ ವಿಡಂಬನೆಯನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಅವಳು ಇದ್ದರೂ ಇಲ್ಲದಿದ್ದರೂ ಕವನ ಹುಟ್ಟುವ ಪವಾಡವನ್ನು ಕವಿ ಸಹಜೀಕರಿಸಿದ್ದಾರೆ ತಮ್ಮ ಹತ್ತನೆ ‘ಬಿಡಿ‘ಯಲ್ಲಿ. ಹದಿನೈದನೇ ‘ಬಿಡಿ‘ಯಲ್ಲಿ “ಕಲ್ಪನೆ ಮುಗಿಲು ವಾಸ್ತವ ನೆಲ ಇವೆರಡರ ಸಮಾಗಮ ಕವನ!” ಎಂದು ಸಾರಿ ನೆಲಮುಗಿಲಿನ ಸಂಬಂಧವನ್ನು ಕಾವ್ಯಾತ್ಮ(ಕ)ವಾಗಿ ಬಿಡಿಸಿದ್ದು ಸಿಕ್ಸರ್ ಹೊಡೆದಂತಿದೆ.  ಸಂಗಾತಿಯ ನಗುವಿನ ಹೊಳಹಿನ ಮುಂದೆ ನೇಸರ ಬೆಳಗನ್ನು ಕವಿ ನಿವಾಳಿಸಿ ಒಗೆದಿದ್ದಾರೆ ಹದಿನೆಂಟನೇ ‘ಬಿಡಿ“ಯಲ್ಲಿ. ಇಪ್ಪತ್ನಾಲ್ಕರ ‘ಬಿಡಿ‘ ಕಾಲಾಂತರದಲ್ಲಿ ಪ್ರವಾದಿಗಳ ಉದಯದ ಸುಳುಹನ್ನು ನೀಡಿದ್ದಾರೆ. ಕತೆಯೋ ಕವನವೋ ಏನಾದರೊಂದು ಸೃಜಿಸಬೇಕು ಬರಹಗಾರನ ಸಾರ್ಥಕ್ಯಕ್ಕೆ ಎಂದು ಬರಹಗಾರನ ತುಡಿತ ಮತ್ತು ರಚನೆಯ ಉದ್ಭವದ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ ಕವಿ ಸಹಜೀಕರಿಸಿದ್ದಾರೆ ಮೂವತ್ತೆರಡರ ‘ಬಿಡಿ‘ಯಲ್ಲಿ.  ಮೂವತ್ತಾರರ ‘ಬಿಡಿ‘ ”ಅಂತ:ಕರಣದಲಿ ಉಕ್ಕುವ ಕರುಣೆ ನಿಷ್ಕಾರುಣ್ಯದ ಕಣ್ಣಲ್ಲಿ ಹೇಡಿ” ಕವಿ ಪದಗಳೊಡನೆ ಆಟವಾಡುವ ಜಾದೂ ದರ್ಶಿಸಿದರೆ ನಲವತ್ತೊಂದರ ‘ಬಿಡಿ‘ “ಕವಿತೆ ಅರಳಿಸಬೇಕೆಂದು ನಿಶ್ಚಯಿಸಿ ನನ್ನೇ ನಾ ಒತ್ತಾಯಿಸಿಕೊಂಡಾಗ ಕವಿತೆ ಒಲಿದಳೇ? ಸ್ಫೂರ್ತಿ ಸಿಕ್ಕಿದಾಗಲೆಲ್ಲ ಬೇಡಬೇಡವೆಂದರೂ ಹೊಳೆಯಾಗಿ ಹರಿದಳು!” ಎಂದೆನ್ನುತ್ತ ಕಾವ್ಯೋಗಮದ ಚಮತ್ಕಾರ ಸಾಬೀತುಪಡಿಸಿದ್ದಾರೆ.  ಐವತ್ತನೇ ‘ಬಿಡಿ‘ಯಂತೂ “ಪತಿಯ ಸಾವಿನ ಬಳಿಕ ಎಲ್ಲ ಮುಗಿಯಿತೆಂದುಕೊಂಡವಳು ನವವರ್ಷದ ಮೊದಲ ದಿನ ಕ್ಯಾಲೆಂಡರ್ ಕೊಂಡಳು” ಎಂದು ಬರೆಯಿಸಿಕೊಂಡು ಜೀವನ್ಮುಖಿಯಾಗುವ ಅನಿವಾರ್ಯತೆಯನ್ನು ಎತ್ತಿ ಹಿಡಿದರೆ ಅರವತ್ಮೂರರ ‘ಬಿಡಿ‘ “ನೀ ಕೊರೆದ ಕಂಬೆಳಕಿಗೆ ಬೆಂಕಿ ಬಿದ್ದಿದೆ ಕಾಪಿಟ್ಟ ಹೊಂಗನಸುಗಳು ಸುಟ್ಟು ಭಸ್ಮವಾಗಿವೆ” ಎಂದು ಹೇಳಿ ತಾಪದ ಭೀಕರ ಪರಿಣಾಮ ತೋರಿಸಿದೆ. ಇಲ್ಲಿ ‘ಕಂಬೆಳಕು‘ ಅನ್ನುವ ಪದ ಓದುಗರಲ್ಲಿ ರೋಮಾಂಚನ ಉಂಟು ಮಾಡುತ್ತದೆ.  ಎಂಬತ್ತನೆ ‘ಬಿಡಿ‘ ಕರ್ತೃ ಕೇವಲ ನಿಮಿತ್ತ ಮಾತ್ರ; ಕೃತಿ ಚಿರಂತನವಾದದ್ದು ಎಂಬ ಸಾಲೋಕ್ತಿ ಚಿಂತನೆಗೆ ದೂಡಿದರೆ ತೊಂಬತ್ತೊಂದನೆ ‘ಬಿಡಿ‘ ಹಗಲಿನ ಗಾಯವನ್ನು ‘ಅಮವಾಸೆ‘ಗೆ ಹೋಲಿಸಿ  ಅದ್ಭುತ ರೂಪಕ ದಯಪಾಲಿಸಿದ್ದಾರೆ ಕವಿ.  ತೊಂಬತ್ತೈದನೆ ‘ಬಿಡಿ‘ “ವಿಶ್ವವಿದು ವಿಷ ವರ್ತುಲವಾದರೆ ನಾವು ಅಮೃತ ಬಿಂದುಗಳಾಗೋಣ” ಎಂಬ ವಿಷದಲ್ಲೂ ಅಮೃತತ್ವವನ್ನು ಬಿಚ್ಚಿಟ್ಟು ತತ್ತ್ವವನ್ನು ಉಣಬಡಿಸಿದರೆ ನೂರಾ ನಾಲ್ಕನೆ ‘ಬಿಡಿ‘ ವಲಸೆಯ ಕರುಣಾಜನಕ ಕಥೆಯನ್ನು ತುಂಬಾ ಆರ್ದೃವಾಗಿ ಹೇಳಿದ್ದು ಕಣ್ಣು ಮಂಜಾಗಿಸುತ್ತವೆ “ಆನೆ ಒಂಟೆ ಕುರಿ ಮೇಕೆ ಮುಂದೆ ಕಟ್ಟಿಕೊಂಡು ಗುಳೆ ಹೊರಟನು ಮಳೆರಾಯ!” ನೂರಾ ಹದಿನಾಲ್ಕನೇ ‘ಬಿಡಿ‘  ಅವಸರದ ರಚನೆ ಗರ್ಭಪಾತಕ್ಕೆ ಸಮ ಎಂದು ಹೇಳಿದರೆ ನೂರಾ ಇಪ್ಪತ್ತೊಂದನೆ ‘ಬಿಡಿ‘ “ನಾಕದಾಸೆಗೆ ಅವರು ನಡೆದರು ಪ್ರಾರ್ಥಿಸಲು ನಾ ನಡೆದೆ ಪಾಪಿ ಮನಗಳಲಿ ಬೆಳಕು ಹುಡುಕಲು” ಎಂಬ ಸಾಲಂತೂ ತತ್ತ್ವಜ್ಞಾನವನ್ನು ಸಾರಿ ನೂರಾ ಮೂವತ್ತೊಂದನೆ ‘ಬಿಡಿ‘ ಕಾವ್ಯದೋದು ಒಂದು ರಸಘಳಿಗೆಗೆ ಸಮ; ಅದು ನಡುರಾತ್ರಿಯ ಗಲ್ಲ ಕಚ್ಚಿ ಕಚಗುಳಿ ಇಡುವಂತಿರಬೇಕು ಎಂದು ಉಲ್ಲೇಖಿಸಿ ರಸಜ್ಞತೆಯ ಪರಿಧಿ ತೋರಿಸಿದ್ದಾರೆ.  ನೂರಾ ಮೂವತ್ತೆರಡರ ‘ಬಿಡಿ‘ಯಂತೂ ಕ್ರಾಂತಿಯನ್ನೆ ಮಾಡಿದೆ-“ನಿನ್ನ ಕೆನ್ನೆಯ ಗುಳಿಯಲಿ ಸಮುದ್ರದ ಸುಳಿಯಿದೆ” ಎಂದು ಹೇಳುವ ಮೂಲಕ! ನೂರಾ ನಲವತ್ತೊಂದನೆ ‘ಬಿಡಿ‘ ಜೀವನದ ನಶ್ವರತೆಯನ್ನು ತುಂಬಾ ಅರ್ಥಪೂರ್ಣವಾದ ಉಪಮೆಯೊಂದಿಗೆ ನಿರೂಪಿಸಿದ್ದಾರೆ.  “ಒಮ್ಮೊಮ್ಮೆ ಕವಿ ಕವಿತೆ ವಿಷವಾಗಿ ಕಕ್ಕುತ್ತಾನೆ ಆದರೆ ಕವಿತೆ ಹೂವಿನಂತೆ ನಯವಾಗಿ ಪ್ರೀತಿಯಿಂದ ಅರಳುತ್ತದೆ” ಎಂದು ನೂರಾ ನಲವತ್ತೇಳನೆ ‘ಬಿಡಿ‘ ಹೇಳಿ ಕವಿತೆಯ ಅದ್ಭುತ ಸಾಧ್ಯತೆಗಳನ್ನು ವಿಶದೀಪಡಿಸಿದೆ. ನೂರಾ ಅರವತ್ತೆಂಟನೆ ‘ಬಿಡಿ‘ “ಬದುಕು ಹಣ್ಣಾದಷ್ಟು ರುಚಿ! ಅದರಲ್ಲಿ ಹುಳುಗಳದೇ ಸಿಂಹಪಾಲು” ಎಂದು ಹೇಳುವ ಮೂಲಕ ಕವಿ ‘ಸುಖ‘ದ ಅಪಾಯ ಮತ್ತು ಮಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.  ನೂರಾ ಎಪ್ಪತ್ಮೂರರ ‘ಬಿಡಿ‘ ಕವಿತೆ ಹುಟ್ಟುವ ಹಿಂದೆ ಮಿತ್ರನಷ್ಟೆ ಶತ್ರುವೂ ಮುಖ್ಯ ಎಂದು ಹೇಳಿದರೆ ಎರಡು ನೂರಾ ನಾಲ್ಕರ ‘ಬಿಡಿ‘ “ಕಾಗದದಲಿ ದಾಖಲಿಸಿದ್ದೇ ಸಾಹಿತ್ಯವಾಯ್ತು ಹೃದಯದಲಿ ಉಳಿದುದಕೆ ಓದುಗನಾರು?” ಎಂದು ಪ್ರಶ್ನಿಸಿ ಕವಿತೆಯ ಅಮೂರ್ತ ರೂಪದ ವಿರಾಟ ದರ್ಶನವನ್ನು ಓದುಗರಿಗೆ ಮಾಡಿಸಿದ್ದಾರೆ. ಇಲ್ಲಿ ಪ್ರಾತಿನಿಧಿಕವಾಗಿ ಕೆಲವು ‘ಬಿಡಿ‘ಗಳನ್ನೆ ಉಲ್ಲೇಖಿಸಬೇಕೆಂದುಕೊಂಡರೂ ಅವುಗಳ ಸಂಖ್ಯೆ ೨೭ನ್ನು ತಲುಪಿದೆ ಎಂದರೆ ಈ ‘ಬಿಡಿ‘ಗಳ ಅಗಾಧತೆಯನ್ನು ಓದುಗರು ಕಲ್ಪಿಸಿಕೊಳ್ಳಬಹುದು. ಕವಿ ಅಶ್ಫಾಕ್ ಅವರ ಕಾವ್ಯ ಪ್ರೇಮ ಬಹಳ ದೊಡ್ಡದು. ಅದಕ್ಕೆ ಅವರು ನಡೆಸಿದ ಕೃಷಿಯೂ ಸಾವಯವ ಪದ್ಧತಿಯದೆ. ತಮ್ಮ ವೃತ್ತಿಯ ಕಾರ್ಯ ವ್ಯಾಪ್ತಿಯ ಗದ್ದಲದ ನಡುವೆಯೂ ಅಶ್ಫಾಕರು ಇಂಥ ಕವಿತೆಗಳ ಉಗಮಕ್ಕೆ ಕಾರಣರಾಗುತ್ತಾರೆ ಎಂದರೆ ಅವರ ರಸಾಗ್ರತೆಯ ಸೀಮೆಯನ್ನು ಓದುಗ ಮಹಾಶಯ ಅಂದಾಜಿಸಿಕೊಳ್ಳಬಹುದು. ಈ ಕೆಲಸಕ್ಕೆ ಕಿರೀಟ ಪ್ರಾಯವಾದ ಘಟನೆ ಏನೆಂದರೆ ಪುಟಪುಟದಲ್ಲೂ(೨೦೯ ಪುಟಗಳು)ಅದ್ಭುತ ಕಲಾವಿದ ಶ್ರೀ ಜಬೀವುಲ್ಲಾ ಅಸದ್ ಅವರ  ರೇಖಾಚಿತ್ರಗಳು! ಜನಾಬ್ ಅಸದ್ ಅವರು ಜನಾಬ್ ಅಶ್ಫಾಕ್ ಅವರೊಂದಿಗೆ ಸೇರಿ ಈ ಬಿಡಿಗವಿತೆಗಳನ್ನು ರಚಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ರೇಖಾಚಿತ್ರಗಳು ಒಂದರನೊಡನೆ ಇನ್ನೊಂದು ಸಾಪೇಕ್ಷವಾಗಿವೆ!  ಅಲ್ಲಲ್ಲಿ ಕತ್ತೆತ್ತಿ ತೋರುವ ಮುದ್ರಾ ರಾಕ್ಷಸನ ಹಾವಳಿಯನ್ನು ಕಡೆಗಣಿಸಿ ರಸಿಕರು ಓದಿಗೆ ಈ ಪುಸ್ತಕವನ್ನು ಕೈಗೆತ್ತಿಕೊಂಡು ತಮ್ಮ ರಸಘಳಿಗೆಗೆ ಖಂಡಿತವಾಗಿಯೂ ನೀರುಣಿಸಿ ಪೋಷಿಸಬಹುದು ಎಂದು ಧೈರ್ಯವಾಗಿ ಹೇಳಬಹುದು. *ರವೀಂದ್ರ ಮುನ್ನೋಳಿಮಠ*         – ಧಾರವಾಡ ಅಭಿಪ್ರಾಯ ಎರಡು; ಚಿಕ್ಕ ಸಾಲುಗಳಲ್ಲಿ ಸಾಗರದಷ್ಟು ಭಾವನೆ             ಅಶ್ಫಾಕ್ ಪೀರಜಾದೆ ಅವರ ಕಲ್ಪನೆಯ ಕುಸುಮ ” ಧ್ಯಾನಕ್ಕೆ ಕೂತ,,,,,,,”  ಸಂಕಲನದಲ್ಲಿ ಚಿಕ್ಕ ಚಿಕ್ಕ ಸಾಲುಗಳಲ್ಲಿ ಸಾಗರದಷ್ಟು ಭಾವನೆ ತುಂಬಿದ್ದಿರಿ, “ಹೃದಯದ ಬೆಂಕಿಗೆ ಅಗ್ನಿಶಾಮಕದಳ ಎನುಮಾಡಿತು?”       ಸಾಲು ಓದಿ ಒಂದು ಕ್ಷಣ “ಮನ”  ಮೌನ  ಕ್ಕೆ ಸಾಗಿದರೆ,,,  ಮೆಹಂದಿಯ ಕೈಗೆ… ರಕ್ತ ಚಿತ್ತಾರ ”  ವಾಸ್ತವದ ಕ್ರೌರ್ಯಕ್ಕೆ ತಲ್ಲಣಗೊಳ್ಳುತ್ತದೆ ,  “ರೊಷವನ್ನು ಸುಟ್ಟು….ಕಪ್ಪು ವಜ್ರ ವಾಗಲಿ”   ಶಾಂತಿ ಸಲಹೆಗೆ ಹಚ್ಚುವ  ಮಲಾಮು,  “ಹಸಿವಿನ ಅನುಭವ,, ಬಡವರ ಬವಣೆ ”   ಭಂಡರಿಗೆ  ಚಾಟೀಯೇಟು ….  “ಮಡದಿಯ ಮುನಿಸು” ” ತಾಯಿಯ ನೆನಪು ” ಇತ್ಯಾದಿ ಇತ್ಯಾದಿಯ ಈ ಅದ್ಭತ ಅಕ್ಷರ ಜೋಡಣೆ ಸಾಲಿಗೆ, ನನ್ನಬಳಿ ಮೌನ ಒಂದೇ !    ಕವಿ ರಸಿಕತನದ ಸುವಾಸನೆ ಹಲವು ಕಡೆ ಚಿಮ್ಮಿಸಿ,ನನ್ನಂತ ನಿವೃತ್ತಿ ಮನಸ್ಸಿಗೂ ಮದ ನೀಡುವಂಥದ್ದು,     ಒಟ್ಟಾರೆ ಮತ್ತೆ, ಮತ್ತೆ,ಓದುವಂತೆ ಮಾಡುವ ಈ ಕೃತಿ ಕವಿಯ” ಧ್ಯಾನ” ಮನಸಿನ ಕಂಗಳಿಂದ ಸದಾ ಪ್ರಕಟವಾಗುತ್ತಿರಲಿ  ಎಂದು ಬಯಸುವ… ತಮ್ಮ  ಡಾ. ಬಿ ಪಿ ಹಿರೇಮಠ ಧಾರವಾಡ ಅಭಿಪ್ರಾಯ ಮೂರು; ಹೃದಯದಲ್ಲಿ ಪಿಸು ಮಾತಾಡುವ ಹನಿಗವಿತೆಗಳು ಹೃದ್ಯವಾಗುವ ಚಿಕ್ಕ ಸಾಲುಗಳನ್ನು ಓದಿದಾಗ ಹಲವು ಸಮಯದವರೆಗೂ ತರಂಗದಂತೆ ಶಬ್ಧ ಮಾಡುತ್ತಲೇ ಇರುವಂತಹವು.ಚಿಕ್ಕ ಪದಗಳ ಒಳಗೆ ವಿಸ್ತಾರವಾದ ಅರ್ಥದ ಹೂರಣವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಲೇಖಕ, ಕವಿ, ಬರಹಗಾರರಾದ ಶ್ರೀ Ashfaq Peerzade ಧಾರವಾಡ ಅವರು‌. ಮೊನ್ನೆ ಮನ್ನೆ ಕಳಿಸಿದ ಹನಿಗವಿತೆಗಳ ಸುಂದರ ಸಂಕಲನ ಕೈ ಸೇರಿ ಒಂದೇ ದಿನದೊಳಗೆ ಓದಿ ಮುಗಿಯಿತು.ಬಹಳ ಸ್ವಾರಸ್ಯಕರವಾದ ಚಿಕ್ಕ ಸಾಲುಗಳು ಇಲ್ಲಿವೆ. ಭಾವಾಂತರಂಗದೊಳಗೆ ಬಂಧಿಸಲ್ಪಟ್ಟ ಪದಗಳ ವೈಖರಿ ಬಹಳ ಇಷ್ಟವಾಗುತ್ತದೆ. ಸರಿಯಾಗಿ ಆತ್ಮಾವಲೋಕನ ಮಾಡಿಕೊಂಡರೆ ಇಲ್ಲಿನ ಸಾಲುಗಳು ಯಾವುದೋ ಲೋಕದತ್ತ ನಮ್ಮನ್ನು ಹೊತ್ತೊಯ್ಯುವುದು ಖಚಿತ. ಹೀಗಾಗಿಯೇ ಕವಿ ತುಂಬಾ ಜಾಣತನದಿಂದ ಪುಸ್ತಕಕ್ಕೆ “ಧ್ಯಾನಕ್ಕೆ ಕೂತ ಕಂಗಳಲಿ“ ಎಂಬ ಶಿರೋನಾಮೆಯನ್ನು ಇಟ್ಟಿರುವುದು. ಕೆಲವನ್ನು ಇಲ್ಲಿ ಹೆಚ್ಚು ಇಷ್ಟವಾದ ಸಾಲುಗಳನ್ನು ನಮೂದಿಸಲು ಪ್ರಯತ್ನ ಪಟ್ಟಿದ್ದೇನೆ. ಉದಾಹರಣೆಗೆ “ಪ್ರೇಮಿಗಳ ಹೃದಯ ಸೀಳುವ  ಹತಾರಗಳು ಮಾಯವಾಗಲಿ ಕವಿ ಕನಸಿನ ಪ್ರೇಮ ಸಾಮ್ರಾಜ್ಯ ಉದಯವಾಗಲಿ“ ಎನ್ನುವಲ್ಲಿ ಜಾತಿ ಧರ್ಮದ ನೆಪವೊಡ್ಡಿ ಅರಳಿದ್ದ ಪ್ರೇಮ ವೈಫಲ್ಯ ಕಾಣದಿರಲಿ.ಕವಿ ಕನಸಿಗೆ ಹೊಂದಿಕೊಂಡ ಪ್ರೇಮ ವಿಶಾಲವಾಗಿ ಅರಳಿ ಸಾಮ್ರಾಜ್ಯವಾಗಲಿ ಎಂಬ ಆಶಯದ ಭಾವ ಇಷ್ಟವಾಗುತ್ತದೆ. ಜೀವನ ನಿಂತ ನೀರಲ್ಲ.ಪ್ರೇಮಕ್ಕೆ ಜಾತಿಯ ಅಡ್ಡಗೋಡೆ ಸಲ್ಲದು.ಅದು ಎರಡು ಮನಸ್ಸುಗಳು ಇಷ್ಟ ಪಟ್ಟಾಗ ಮಾತ್ರ ಬೆಳೆದು ಹೂಗಳಂತೆ ಅರಳಿ ಘಮಿಸುವುದು.ಹೃದಯದೊಳಗೆ ಪಿಸು ನುಡಿಗಳನ್ನಾಡುವುದು.ಅದನ್ನು  ಹೊಸಕಿ ಹಾಕುವುದು ಬೇಡ ಎಂಬ ಅವರ ಸವಿನಯದ ಕೋರಿಕೆಯುಳ್ಳ ಈ ಹನಿಗವಿತೆಯಂತೆಯೇ ತುಂಬಾ ಸಾಲುಗಳು ಇಲ್ಲಿವೆ. “ಬಾಳಿನುದ್ದಕ್ಕೂ ಅರಳಿದ ಹೂಗಳು ಚುಚ್ಚಿದ ಮುಳ್ಳುಗಳೇ ನನ್ನಂತರಂಗದಿ  ಉದಿಸಿದ ಕಾವ್ಯಗಳು“ ಎಂತಹ ನೋವಿಂದ ಕೂಡಿದ ಸಾಲುಗಳಿವು! ಮೌನದೊಳಗೆ ಅವಿತಿದ್ದ ನೋವಿನೆಳೆಗಳು ನೂರಾರು ತಾಪತ್ರಯದ ಗೋಡೆ ಏರಿ ಬಂದು ನಿಂತ ಪದಗಳ ಪೋಣಿಕೆಯಾದಾಗ ಇಂತಹ ಸಾಲುಗಳು ಉದಯಿಸುತ್ತವೆ.ಕವಿ ಅಂತರಂಗದಲ್ಲಿ ನೋವುಂಡು ಬಾಹ್ಯ ಪ್ರಪಂಚಕ್ಕೆ ನಗುವಿನ ಮುಖವಾಡ ಹಾಕಿಕೊಳ್ಳುವುದು ಇಲ್ಲಿ ಗೋಚರವಾಗುತ್ತದೆ. “ಕಾವ್ಯವೆಂದರೆ ಸುಂದರವಾದ  ಪದಪುಂಜಗಳ ಪೋಣಿಸಿ ಭಾವನೆಗಳಿಗೆ ಅಂಗಿ ತೊಡಿಸುವುದೇ? ಅಲ್ಲ ಇದ್ದ ಬಟ್ಟೆಗಳನ್ನೆಲ್ಲ  ಕಳಚಿ ಬೆಳಕಿನಲ್ಲೂ ಬೆತ್ತಲಾಗುವುದು!” ಅತ್ಯಂತ ಸುಂದರವಾದ ಸಾಲುಗಳೊಳಗೆ ತೆರೆದ ಮನಸ್ಸಿಂದ ಬಂದ ಅರ್ಥಸಾದೃಶ್ಯದ ಸಾಲುಗಳ ಗುಚ್ಚ ಕಾವ್ಯವಾಗಬೇಕು.ಅದಕ್ಕೆ ಗಡಿಯೊಳಗಿನ ಮಿತಿ ಸಲ್ಲದು. ಕಾವ್ಯ ಇವೆಲ್ಲವುಗಳ ದಾಟಿ ವಿಶಾಲ ಭಾವನೆಯಿಂದ ಕಟ್ಟಿಕೊಳ್ಳುವ ಹಿತವಾದ ಗೂಡಾಗಬೇಕು.ಆಗ ಕಾವ್ಯ ಕನ್ನಿಕೆ ನಕ್ಕಾಳು ಎಂಬ ಸದಾಶಯ ಬೀರುವ ಇಂತಹುದೇ ಸಾಲುಗಳಿಂದ ತುಂಬಿಕೊಂಡ ಹನಿಗವಿತೆಯ ಸಂಕಲನ  *ಧ್ಯಾನಕ್ಕೆ ಕೂತ ಕಂಗಳಲಿ* ಇಂತಹ ಕವನ ಸಂಕಲನಗಳು ದಾಪುಗಾಲಿಡುತ್ತ ಇವರ ಶಾಯ್ಮೊಳೆಯಿಂದ ಈ ಹಿಂದೂ  ಮೂಡಿ ಬಂದಿವೆ.ಮುಂದೆಯೂ ಮೂಡಿ ಬರುತ್ತವೆ ಎಂಬ ನಂಬಿಕೆ ನನಗಿದೆ.ಎಲ್ಲವೂ ಗಟ್ಟಿಯಾದ ಸಾಹಿತ್ಯದಿಂದ ಈ ಸಮಾಜಕ್ಕೆ ಏನಾದರೂ ಸಂದೇಶ ನೀಡುವಂತಹವುಗಳೇ ಆಗಿವೆ. ಆದರೆ ಡಿಟಿಪಿ ಅಥವಾ ಟೈಪಿಂಗ್ ನಲ್ಲಿ ಪ್ರತೀ ಕವಿತೆಯಲ್ಲೂ ಅಕ್ಷರದ ದೋಷ ಎದ್ದು ಕಾಣಿಸುತ್ತದೆ. ಈ ದಿಶೆಯತ್ತ ಇವರು ಗಮನ ನೀಡದೆ ಹೋದರೆ ಗಟ್ಟಿ ಸಾಹಿತ್ಯವಿದ್ದೂ ನಿಜವಾದ ಸಂಗತಿ ಹೇಳುವುದರಲ್ಲಿ ಪೊಳ್ಳಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಕವಿ ಇನ್ನು ಮುಂದೆ ಹೆಚ್ಚಿನ ಗಮನ ನೀಡಬೇಕಾಗಿದೆ. ಇನ್ನು ಮುಂದೆಯೂ ಇವರ ಇಂತಹ ಬರಹಗಳು ಹೆಚ್ಚೆಚ್ಚು ಮೂಡಿ ಬಂದು ನನ್ನಂತಹ ಸಾಮಾನ್ಯ ಓದುಗನ  ಹೃದಯಕ್ಕೂ ಸ್ಪರ್ಶಿಸುವಂತಾಗಲೆಂದು ಕೋರುತ್ತೇನೆ.  ಅಶ್ಪಾಕ್ ಗುರುಗಳಿಗೆ ಶುಭನಮನಗಳು. ಒಳ್ಳೆಯ ಹನಿಗವಿತೆಯುಳ್ಳ ಈ ಪುಸ್ತಕಗಳನ್ನು

ಅಶ್ಫಾಕ್ ಪೀರಜಾದೆ ಅವರ ಕೃತಿ “ಧ್ಯಾನಕ್ಕೆ ಕೂತ ಕಂಗಳಲಿ” ಒಂದು ಪುಸ್ತಕ ಮೂರು ಅಭಿಪ್ರಾಯ Read Post »

You cannot copy content of this page

Scroll to Top