ವ್ಯಕ್ತಿ ಸಂಗಾತಿ
ಹಿರಿಯೂರು ರಾಘವೇಂದ್ರ

“ಕ ಸಾ ಪ ಅಧ್ಯಕ್ಷಗಿರಿಗೆ
ಜಾಣಗೆರೆಯೇ ಸೂಕ್ತ ಗರಿ”

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಈಗಾಲೆ ಸರ್ಕಾರ ಚುನಾವಣಾಧಿಕಾರಿಯನ್ನು ನೇಮಕ ಮಾಡಿದೆ. ಮತಾದಾರರ ಪಟ್ಟಿ ಪರಿಷ್ಕರಣೆ ಆಗಿ, ದಿನಾಂಕ ಘೋಷಣೆಯಷ್ಟೇ ಬಾಕಿ ಉಳಿದಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಸಾಹಿತಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ವೈದ್ಯೆ ವಿಜಯಲಜ್ಷ್ಮಿ ಬಾಳೆಕುಂದ್ರೆ, ನಿವೃತ್ತ ಅಧಿಕಾರಿ ಸಿ. ಸೋಮಶೇಖರ ಮೂರು ಹೆಸರುಗಳು ಸಧ್ಯ ಚಾಲ್ತಿಯಲ್ಲಿವೆ.
ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ,
ಮಕ್ಕಳ ಹೃದ್ರೋಗ ತಜ್ಞೆ,
‘ದೊಡ್ಡ ಪರಂಪರೆಯುಳ್ಳ ಪರಿಷತ್ತಿಗೆ ಇದುವರೆವಿಗೂ ಮಹಿಳೆಯೊಬ್ಬರು ಅಧ್ಯಕ್ಷರಾಗಿಲ್ಲ, ಈ ಬಾರಿ ನನಗೆ ಅವಕಾಶ ಮಾಡಿಕೊಡಿ’
ಎನ್ನುತ್ತಿದ್ದಾರೆ.
ಡಾ. ಸಿ. ಸೋಮಶೇಖರ್
ನಿವೃತ್ತ ಐಎಎಸ್ ಅಧಿಕಾರಿ ಆಗಿದ್ದವರು,
‘ಅಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಸೇವೆ ಈ ಬಾರಿ ಆ ಸ್ಥಾನಕ್ಕೆ ನಾನೇ ಸೂಕ್ತ’ ಎಂದಿದ್ದಾರೆ.
ಒಬ್ಬರು ವೈದ್ಯೆ, ಇನ್ನೊಬ್ಬರು ಸರಕಾರಿ ಅಧಿಕಾರಿಯಾಗಿ ಅಧಿಕಾರ ಚಲಾಯಿಸಿದವರು.
ಇವರಿಬ್ಬರನ್ನೂ ಒಂದು ಪಕ್ಕಕ್ಕೆ ಸರಿಸಿ ಮತ್ತೊಬ್ಬರತ್ತ ಗಮನಿಸಿದರೆ ಕಂಡುಬರುವುದು
ಜಾಣಗೆರೆಯ ಜಾಣ ಜಾಣಗೆರೆ ವೆಂಕಟರಾಮಯ್ಯ ನವರು. ಕತೆ, ಕಾದಂಬರಿ, ವ್ಯಕ್ತಿಚಿತ್ರ, ಆತ್ಮಕತೆ ಬರೆದು, ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರ ಪಡೆದವರು. ಅವರು ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹಿರಿಯರು.
ಕನ್ನಡ ಹಾಗೂ ಸಮಾಜದ ಹಿತಕ್ಕಾಗಿ ಮಿತಿಮೀರಿ ತುಡಿದವರು.
ದುಡಿದವರು.
ಅದಕ್ಕಿಂತಲೂ ಮಿಗಿಲಾಗಿ ಎಲ್ಲ ಬಗೆಯ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡವನ್ನೇ ಹಾಸಿ, ಹೊದ್ದು, ಮಗ್ಗಲು ಬದಲಿಸಿದೇ ಅಹರ್ನಿಶಿ ದುಡಿದು, ಯಾವುದೇ ಆಮಿಷಗಳಿಗೂ ತಮ್ಮ ಧ್ಯೇಯ, ನಿಷ್ಠೆ ಬದಲಿಸದೆ ಮುನ್ನುಗ್ಗುತ್ತಿರುವವರು.
ಅವರಿಗೆ,
‘ಕನ್ನಡವೇ ಬದುಕು.
ಅವರ ಉಸಿರು ಇರುವುದೇ ಕನ್ನಡಕ್ಕಾಗಿ.
ತಮ್ಮ ಕನ್ನಡ ಧ್ಯೇಯೋದ್ದೇಶಗಳನ್ನು ಅಕ್ಷರಶಃ ಅಂಕುಶವಾಗಿಸಿಕೊಂಡು ಬದುಕುತ್ತಿರುವ ಈ ಕನ್ನಡತನದ ಭೀಷ್ಮ ಜಾಣಗೆರೆ,
ಕ ಸಾ ಪ ದ ಅಧ್ಯಕ್ಷ ಗಿರಿಗೆ ಅತಿ ಸೂಕ್ತ ಗರಿ.
ಅವರ ಬದುಕಿನ ಗುರಿಯೇ ಕನ್ನಡ.
ಅವರ ಉಸಿರೇ ಕನ್ನಡ.
ಅವರ ನಡೆ ನುಡಿಯೇ ಕನ್ನಡ.
ಅವರ ಭವಿಷ್ಯವೇ ಕನ್ನಡ.
ಕನ್ನಡ, ಕನ್ನಡತನ ಬಿಟ್ಟು ಅವರಿಗೆ ಬೇರೊಂದು ಗೊತ್ತಿಲ್ಲ.
ಬೇರೆಯೇ ಆದ ಗತ್ತು ಅವರಿಗೂ ಇಲ್ಲ.
ಸರ್ಕಾರಿ ಅಧಿಕಾರಿಗಳಾಗಿ, ಮಾಜಿಯಾದವರಿಗೆ, ನಮಸ್ಕಾರಗಳನ್ನೇ ಸುತ್ತ ಮುತ್ತ ಆಲಿಸಿಕೊಂಡವರಿಗೆ, ಅಧಿಕಾರಿಗಳಾಗಿ ಅಧಿಕಾರ ಚಲಾಯಿಸಿ ಮಾತ್ರ ಗೊತ್ತಿರುತ್ತದೆ.
‘ನಿವೃತ್ತಿ’ಯ ನಂತರವಷ್ಟೇ ಅವರಿಗೆ ಕನ್ನಡದ ಕಂಪಿನ ಬಗ್ಗೆ ಒಲವು ಮೂಡಿರುತ್ತದೆ !
ಆದರೆ ಸದಾ, ಸರ್ವದಾ ಕನ್ನಡಿಗರ ಜೊತೆ ಬೆರೆತು,
ಅವರನ್ನು ಅರಿತು, ಅವರಿಗೆ ದುಡಿಯುವ ದುಡಿತ ಗೊತ್ತಿರುವುದಿಲ್ಲ.
ಆದರೆ ‘ಜಾಣ’ಗೆರೆ ಹಾಗಲ್ಲ,
ಕನ್ನಡಕ್ಕಾಗಿ ಬೀದಿಗಿಳಿದು,
ಕನ್ನಡಕ್ಕಾಗಿಯೇ ಹಂಬಲಿಸಿ ,
‘ಕನ್ನಡದ ಚಿತ್ರಾನ್ನವೇ ಮೃಷ್ಟಾನ್ನ’
ಎಂದು ಕನ್ನಡವನ್ನೇ ಕಣ್ಣಿಗೊತ್ತಿಕೊಂಡು , ಕನ್ನಡ ಪರ ಹೋರಾಟಗಾರರ ಕಣ್ತೆರೆಸಿದವರು ಜಾಣಗೆರೆ ವೆಂಕಟರಾಮಯ್ಯ.
ಅವರಿಗೆ ಕೊಡುವ ಪ್ರತಿಯೊಂದು ಓಟಿಗೂ ಸಾವಿರ, ಸಾವಿರ ನೋಟಿನ ಮೌಲ್ಯವಿರುತ್ತದೆ.
ಅವರ ಗೆಲುವು ಕ ಸಾ ಪ ದ ಉದ್ದೇಶದ ನೈಜ ಗೆಲುವಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧಿಕಾರ ಅನುಭವಿಸಿದ ಅಧಿಕಾರಸ್ಥರು ಬೇಡವೇ ಬೇಡ,
ಕನ್ನಡದ ಪರವಾದ ನಿಜ ಸೇವಕರು ಬೇಕು,
ಅದಕ್ಕಾಗಿ ಆ ಪರಮ ಪವಿತ್ರ ಸ್ಥಾನಕ್ಕೆ ಜಾಣಗೆರೆಯವರೇ ಬೇಕು ಎಂಬುದು ಕನ್ನಡಿಗರ ಆಶಯ.
ಈ ಬಾರಿಯಾದರೂ ಸಾಹಿತಿ, ಕನ್ನಡಪರ ಹೋರಾಟಗಾರನನ್ನೇ ಅಧ್ಯಕ್ಷಗಿರಿಗೆ ಚುನಾಯಿಸಿ.
ಜಾಣಗೆರೆಯ ಬದುಕಿನ ಜಾಡನ್ನು ಗುರುತಿಸಿ, ಗೌರವಿಸಿ, ಅಧ್ಯಕ್ಷರನ್ನಾಗಿಸಿ ಎಂಬುದು ನನ್ನೊಬ್ಬನ ಒಡಲ ಅನಿಸಿಕೆಯಲ್ಲ, ಕನ್ನಡಿಗರೆಲ್ಲರ ಪರವಾದ ನಮ್ರ ವಿನಂತಿ.
ಈ ಬಾರಿಯ ಗೆಲುವು ಕನ್ನಡಿಗನ ಗೆಲುವಾಗಲಿ.
ಜೈ ಭುವನೇಶ್ವರಿ.
ಹಿರಿಯೂರು ರಾಘವೇಂದ್ರ
ಲೇಖಕ, ಕಿರುತೆರೆ ಕಲಾವಿದ, ಕನ್ನಡಪರ ಚಿಂತಕ.





ಒಳ್ಳೆಯದಾಗಲಿ