ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ ಗಜಲ್ ನಿನ್ನೆದೆಯ ಅಂಗಳದಿ ಹಿಡಿ ಹೂಗಳನು ನಾನು *ಸುರಿದೆ* ಕಟುಕ ನೀನು ನನ್ನ ಮನದಲಿ ಮುಳ್ಳುಗಳನು *ಮುರಿದೆ* ಭರವಸೆಯ ಹಸ್ತವೆಂದು ನಂಬಿ ಕೈ ನೀಡಿದೆ ನಾನಂದುಜೇನುಲಿಯಲಿ ವಂಚನೆಯ ವಿಷವನು *ಕಾರಿದೆ* ಬಣ್ಣದ ಕನಸುಗಳಿಗೆ ನಗುತ ರಂಗು ತುಂಬುತ ಬಂದೆಪ್ರೀತಿಯ ಚೂರಿಯಲಿ ಹೃದಯವನೇಕೆ *ಇರಿದೆ* ತಂಗಾಳಿಯೇ ಬಿರುಗಾಳಿಯಾಗಿದೆ ಬದುಕಲಿ ಇಂದುಮರುಳ ಹುಚ್ಚು ಭಾವಗಳನು ನಾನೇ *ಜರಿದೆ* ಕಂಗಳಲಿ ಮೂಡಿದ ಕಾಮನಬಿಲ್ಲು ಮಾಸುತಿಹುದುಬೇಗಂಳ ಒಲವು ಕಾಣದ ವಿಧಿಯ *ದೂರಿದೆ*ಹಮೀದಾಬೇಗಂ ದೇಸಾಯಿ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »


