ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರರಾವ ಉಭಾಳೆ ಅವರ “ಮರದೊಳಗಣ ಅಗ್ನಿ”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ ಅವರ “ಮರದೊಳಗಣ ಅಗ್ನಿ” ಮರದೊಳಗಣ ಅಗ್ನಿಬೋಧಿಸತ್ವ ಹೇಳಿತು,“ಬುದ್ಧ ನನ್ನ ಕೆಳಗೆ ಧ್ಯಾನಕ್ಕೆ ಕುಳಿತಾಗ ಆತನೊಂದಿಗೆ ನನಗೂಮನಃಶಾಂತಿ ದೊರಕಿತ್ತು.ಅರಮನೆಯ ಬೇಲಿಯೊಳಗೆಸೆರೆಮನೆಯ ಗಾಳಿಯಿತ್ತು.ಹಂಗಿನ ಒಡ್ಡಿನಲ್ಲಿ ಬೆಳೆದ ಮರಸಾಲದ ಬಡ್ಡಿಯಂತೆ ಫಲ ನೀಡಲೇಬೇಕು.ಮರ ಅಮರವಾಗೋದುಸಮರ ನಿಂತಾಗಲೇ….. ಮರಾ….. ಎಂದು ಜಪಿಸಿದವರಾಮನ ರಾರಾಜಿಸಿದ.ಆದಿ ಪೂಜಿತನಾದಕೆಲವೊಮ್ಮೆ ಗಿಡದ ಎಲೆಯಿಂದಗಿರಿಧರನನ್ನೇ ತೂಗಿದ ದೃಷ್ಟಾಂತವಿದೆತಿಮ್ಮಕ್ಕ ನೆಟ್ಟು ಬೆಳೆಸಿದದಾರಿಯ ಇಕ್ಕೆಲಗಳ ಮರಇಂದು ಕಲ್ಪವೃಕ್ಷವಾಗಿದೆ ತಾಯ ಒಡಲು ಶಸ್ತ್ರಗಳನ್ನ ಒಡಲಲ್ಲಿಟ್ಟುಕೊಂಡಬನ್ನಿ ಮರಕ್ಕಿಂತದಾರಿಯಲ್ಲಿ ನೆರಳು ನೀಡುವಸಾಲು ಮರದ ತಿಮ್ಮಕ್ಕ ಬೆಳೆಸಿದಮರ ಶ್ರೇಷ್ಠವೆನಿಸಿತು ಮದ್ದು ಗುಂಡುಗಳ ಬೆಂಕಿಯಲಿ ಉಕ್ರೇನ್ಬೂದಿಯಾಗುವಾಗಹಸಿರ ಹುಲ್ಲಿನ ಓಕ್ ಮರದ ಇಬ್ಬನಿಕಂಬನಿಯಲಿ ಆವಿಯಾಯಿತು ಪೂರ್ವದಿಂದಲೂ ಮರಕ್ಕೂ ಮಹರ್ಷಿಗಳಿಗೂ ಅದೇನೋ ಸಾಂಗತ್ಯಕಾಲಾನುಕ್ರಮದಲ್ಲಿ ಮರವು ಪಿಶಾಚಿಗಳಮನೆಯಾಗಿತ್ತುಮನುಷ್ಯರಿಲ್ಲದ ಲೋಕದಲ್ಲಿ ಮರಅರಸನಂತಿತ್ತುದಾನವರ ವಿಷಪ್ರಾಶನದಿಂದ ಮಸಣವಾದನೆಲದಲ್ಲಿ ಬೀಜ ನೆಟ್ಟರೆಬರೀ ಕೆಂಪು ದಾಸವಾಳವೇ ಹುಟ್ಟಿತು ಭವಿಷ್ಯ ನುಡಿದ ತಾಳೇಗರಿಗಳು ಬೆಚ್ಚಿಬಿದ್ದಿವೆಕೆಟ್ಟ ಗಾಳಿಯಿಂದ ಜನ ಪಟಪಟನೆ ಸಾಯುವಾಗಮರದ ತಾಕತ್ತು ಗೊತ್ತಾಗಿತ್ತು ಪಾರಿಜಾತ ಬೇಕೆಂದರೆ ಸ್ವರ್ಗಕ್ಕೆ ಹೋಗಬೇಕೆಂದಿಲ್ಲಮನದ ಪೊರೆ ಕಳಚಿದರೆ ಸಾಕು..! ಅಳಿವ ಮನೆಗಿಂತಬೆಳೆವ ಮರಭವಿಷ್ಯದ ರಾಯಭಾರಿಯಂತೆಅಂತರಂಗದಿ ಅಗ್ನಿಯಿದ್ದರೂ ಜಗಕೆಗಾಳಿಯನ್ನೇ ಕೊಡುವೆನೀರಿಗೂ ಕರ ವಿಧಿಸಿದಂತೆನನ್ನ ಸಂತತಿ ನಾಶವಾದರೆಗಾಳಿಗೂ ಕರ ಕೊಟ್ಟು ಕರಗದಂತೆಮೆರವಣಿಗೆ ಮಾಡಬೇಕಾದೀತು ಶಂಕರರಾವ ಉಭಾಳೆ

ಶಂಕರರಾವ ಉಭಾಳೆ ಅವರ “ಮರದೊಳಗಣ ಅಗ್ನಿ” Read Post »

ಕಾವ್ಯಯಾನ

ಪ್ರೊ. ಡಾ.ಸರಸ್ವತಿ ಕಳಸದ ಅವರ ಕವಿತೆ “ಬೀದಿಯಲಿ ಬಿದ್ದವಳು”

ಕಾವ್ಯ ಸಂಗಾತಿ ಪ್ರೊ. ಡಾ.ಸರಸ್ವತಿ ಕಳಸದ ಅವರ ಕವಿತೆ “ಬೀದಿಯಲಿ ಬಿದ್ದವಳು” ಬೀದಿಯಲ್ಲಿ ಬಿದ್ದವಳುಟಾರು ರೋಡು ಗಲ್ಲಿಗಲ್ಲಿಫುಟ್ ಪಾತ್ ಮಠ ಮಸೀದಿಎಲ್ಲವೂ ಎನ್ನ ಸರ್ವಸ್ವವೆನುತಕಾಲ ಕಳೆಯುತಿಹಳುಕಣ್ಣಲ್ಲೇ ಕಂಡವರ ಜರಿಯುತಕೆಂಡದುಂಡೆ ಕಣ್ಣ ತಿರುವುತಚಿಂದಿಯಲಿ ಹಂದಿಯೊಡಗೂಡಿಕೇಕೆ ಹಾಕುತನಿಧಿ ಸಿಕ್ಕಂತೆ ಓಡುತಿಹಳುಬಿಸಿಲಿನ ದಳ್ಳೂರಿ ಎಲ್ಲೋಕನಸಿನ ಕಲ್ಪನೆ ಎಲ್ಲೋಕತ್ತಲಿನ ಕರಾಳತೆ ಎಲ್ಲೋಸುತ್ತೆಲ್ಲಾ ಜನವಿದ್ದರೂಇವಳಿಗಿಲ್ಲ ಚಿಂತೆಹಸಿದೊಡಲಿಗಾಗಿ ಕೈ ಹಾಕಿಹಳುಅಂಗಡಿಯ ಲಾಡುವಿಗೆಬೆನ್ನೇರಿ ಬಂತು ಬಾಸುಂಡೆ, ಬಾಯಿಗೆ ಸಿಕ್ಕಷ್ಟು ತುರುಕುತ್ತಾಲೋಡುವಳುದಿಕ್ಕು ದೆಸೆ ತಿಳದತ್ತಕಂಡವರ ಕರುಣೆಗೆನಿಂತವರ ನಿಂದೆಗೆನಕಾರಾತ್ಮಕ ಉತ್ತರವಿತ್ತುಸಂಧಿ ಗೊಂದಿಗಳಲ್ಲಿಸುಖನಿದ್ದೆ ಗೈಯುತುಳಿದವಳೀಕೆಹಿಂದೊಮ್ಮೆ ಮೆರೆದವಳುಈಗೊಮ್ಮೆ ತೊರೆದವಳಾಗಿಬೀದಿಯಲಿ ಬಿದ್ದವಳಾಗಿಹಳು ಪ್ರೊ. ಡಾ. ಸರಸ್ವತಿ ಕಳಸದ

ಪ್ರೊ. ಡಾ.ಸರಸ್ವತಿ ಕಳಸದ ಅವರ ಕವಿತೆ “ಬೀದಿಯಲಿ ಬಿದ್ದವಳು” Read Post »

You cannot copy content of this page

Scroll to Top