ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
“ಮಳೆಯಲಿ,ಜೊತೆಯಲಿ”


ಸುರಿದಿದೆ ಸೋನೆಯು
ಮುತ್ತುಗಳಂದದಿ
ಮುಂಗಾರಿನ ಮಳೆಯು
ಇಳಿಯುತ ಬಳುಕಿ
ಹಾಲ್ನೊರೆಯಂದದಿ
ಇಳೆಯೊಡಲಿಗೆ ಧಾರೆಯು…
ಬೀಸಿದೆ ಮೆಲ್ಲನೆ
ಸುಳಿಗಾಳಿಯು ಸುತ್ತಲೂ
ತೂಗಿವೆ ಬೆಳೆಗಳು
ತಲೆ ಎತ್ತುತಲಿ
ಹಸಿರಿನ ಶಾಲನು
ಹೊದೆದಿದೆ ಕಾನು
ಬೆಚ್ಚಗೆ ನಿದ್ರೆಯ ಮಾಡುವೊಲು…
ಸುಂದರ ಸಂಜೆಯ
ಜಿಟಿ ಜಿಟಿ ಮಳೆಯಲಿ
ಸಾಗುವಾ ಜೊತೆಯಲಿ
ದೂರದ ನಮ್ಮೊಲವಿನ ಮನೆಗೆ…
ಹಮೀದಾಬೇಗಂ ದೇಸಾಯಿ



