ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ರಾತ್ರಿ ನೀಲ ಗಗನದಲ್ಲೂ ಬಿಸೋ ಗಾಳಿ ಮಳೆಯಲ್ಲೂ
ಚಂದಿರನು ಹೊಳೆಯುತಾನ.
ನಿನ್ನ ಕಣ್ಣ ನೋಟದಾಂಗ ನನ್ನ ಹೃದಯ ಮಾತಿನಾಂಗ
ಮನಸು ಸೇರಿ ಕನಸು ನೀಡುತಾವಾ…

ಚುಕ್ಕಿ ಬೆಳಕ ಹೊಳಪಿನಲ್ಲೂ ಕಡಲ ತಟದ ತೀರದಲ್ಲೂ
ಮನುಜ ಪ್ರೀತಿ ಕಾಣುತಾನಾ..
ಒಲವ ಕಾಣೋ ಹೃದಯದಲ್ಲಿ ಮುತ್ತಿನಂತ ಮಾತಿನಲ್ಲಿ
ನಗುವು ತಾನೇ ಮೂಡುತಾವ.

ಬಳ್ಳಿ ಹೂವ ಕಾಣುವಾಗ ಮುಡಿಗೆ ತಾನೇ ಇರಿಸುವಾಗ
ತನ್ನ ಚೆಲುವ ಬೀರುತಾವ…
ಗೆಜ್ಜೆ ಶಬ್ದ ಮಾಡಿಕೊಂಡು ನೀಲ ಜಡೆಯ ಬೀಸಿಕೊಂಡು
ಬಿಂಕದಲ್ಲಿ ನಡೆಯುತಾವ…

ಪಚ್ಚಾ ಪೈರು ಹುಲ್ಲಿನಲ್ಲೂ ಅರಳುತ್ತಿರುವ ಹೂವಿನಂತೆ
ತನ್ನ ಸೊಗಸ ಚೆಲ್ಲುತಾವ..
ಅವಳ ನಡೆಯ ನುಡಿಯಲ್ಲಿ
ಸುಗಂಧ ಪರಿಮಳ ಬೀರುತಾವ…


About The Author

Leave a Reply

You cannot copy content of this page

Scroll to Top