ಪ್ರೇಮ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಒಲವಿನ ಸ್ನೇಹದ ಪ್ರೀತಿ”


ಒಲವಿನ ಸ್ನೇಹದ ಪ್ರೀತಿ ಅಂದ್ರೆ ಬೆಳಗ್ಗೆ ಎದ್ದು “ಚಹ ಕುಡಿದೆಯಾ?”ಅಂತ ಕೇಳೋ ಸ್ನೇಹಿತ/ತೆನೀನು ಸುಮ್ನೆ ಇದ್ದಾಗ “ಏನಾಯ್ತು?”ಅಂತ ಅರ್ಥ ಮಾಡ್ಕೊಳ್ಳೊ ಮೌನ.
ಒಲವಿನ ಪ್ರೀತಿ ಸ್ನೇಹ ಅಂದ್ರೆ ನೀನು ಸೋತಾಗ “ಪರವಾಗಿಲ್ಲ,ಮತ್ತೆ ಪ್ರಯತ್ನಿಸು” ಅಂತ ಹೇಳೋ ಧೈರ್ಯ
ನೀನು ಗೆದ್ದಾಗ ಮೊದಲು ಚಪ್ಪಾಳೆ ತಟ್ಟುವ ಕೈ.
ಅದು ಹೂವಿನ ಹಾಗೆ ಗೊತ್ತಾ ನಿನಗೆ ಜೋರಾಗಿ ಕೂಗಲ್ಲ, ಆದ್ರೆ ಅದರ ವಾಸನೆಗೆ ಮನಸ್ಸು ಹಗುರ ಆಗುತ್ತೆ
ಅದು ದೇವರ ಮುಂದೆ ಹಚ್ಚಿದ ದೀಪದ ಹಾಗೆ,ಜೋರಾಗಿ ಉರಿಯಲ್ಲ,ಆದ್ರೆ ಕತ್ತಲಲ್ಲಿ ದಾರಿ ತೋರಿಸುತ್ತೆ.
ಒಲವಿನ ಪ್ರೀತಿ ಕೇಳಲ್ಲ ಏನೂ, ಸ್ನೇಹಕ್ಕೆ ಕೊಡೋದಷ್ಟೇ ಗೊತ್ತು
ಮನಸ್ಸು ತುಂಬಾ ಇದ್ದಾಗ ಹಂಚಿಕೊಳ್ಳೋಕೆ ಭುಜ, ಮನಸ್ಸು.ಖಾಲಿ ಇದ್ದಾಗ ತುಂಬೋಕೆ ಮಾತು.
ಆ ಪ್ರೀತಿ ಇದ್ದರೆ ಸಾಕು ಸಖಿ/ಖ ಬದುಕು ಎಷ್ಟೇ ಕಷ್ಟ ಆದ್ರೂ ಎದೆಯ ಒಂದು ಬೆಚ್ಚಗಿನ ಮೂಲೆಯಲ್ಲಿ ನಾನು ಸುರಕ್ಷಿತವಾಗಿರುತ್ತೇನೆಎಂಬ ಭಾವ ಸ್ನೇಹಿತ/ತೆ ಎನಿಸಿಕೊಂಡ ಎಲ್ಲರಿಂದಲೂ ಪಡೆಯಲು ಸಾಧ್ಯವಿಲ್ಲ.

ಕಲ್ಪನಾ ಎಸ್ ಪಾಟೀಲ
ಕಾವ್ಯಧರೆ




