ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮಳೆಯ ಹನಿಯೊಂದು ಮುತ್ತಿಕ್ಕಿತ್ತು ಧರೆಗೆ
ಕಾನನದ ಹೂವೊಂದು ಅರಳಿತ್ತು ಕೊನೆಗೆ

ಪ್ರಕೃತಿ ಸೊಬಗ ಸವಿಯಲು ಕಾದು ನಿಂತಿಹೆ
ಹರ್ಷದಿ ನವಿಲೊಂದು ನರ್ತಿಸಿತ್ತು ಮಳೆಗೆ

ಅಲ್ಲೊಂದು ಕುಹೂ ಗಾನ ಮೈಮರೆಸಿತ್ತು ಕ್ಷಣ
ನಿನ್ನೊಲವಿನ ಓಲೆಯೊಂದು ತಲುಪಿತ್ತು ನನಗೆ

ಮೇಘ ಸಂದೇಶದೊಳು ರವಾನಿಸುವ ತವಕ
ಪ್ರೇಮದ ಬಾಣವೊಂದು ಚುಚ್ಚುತ್ತಿತ್ತು ಎದೆಗೆ

ಒಲವಿನ ಜಾಲದೊಳು ಸಿಲುಕಿಹಳು ರೇಖೂ
ಮಳೆಬಿಲ್ಲ ಬಣ್ಣವೊಂದು ಸಿಂಗರಿಸಿತ್ತು ಮುಡಿಗೆ


About The Author

Leave a Reply

You cannot copy content of this page

Scroll to Top