ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲ
ಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ
ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆ
ಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ
ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆ
ಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ
ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆ
ರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ
ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾ
ಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ
ಅರುಣಾ ನರೇಂದ್ರ




ಚಂದದ ಗಜಲ್.