ಕಾವ್ಯ ಸಂಗಾತಿ
ಚಂಪಾ ಬಿ. ಜಿ.
“ಒಲವಿನೋಲೆ”


ಮಣ್ಣಿನ ವಾಸನೆ ಹೊತ್ತ ಮೊಗಸಿರಿ
ಮುಗ್ಧ ನಗುವಿನ ಮೋಹನಾಂಗಿ
ನಿನ್ನ ನಡಿಗೆಯ ಲಯಕೆ
ಸುಳಿಗಾಳಿ ತಿಳಿಯಾಗಿ
ತುಂತುರು ಹನಿಯಾಗಿ
ಭುವಿಯೆಲ್ಲಾ ಹರಡಿತೇನೋ
ಇವಳ ಒಡನಾಟವೇ
ಮಧುರ ಸಂಗೀತವಾಗಿ
ಝರಿಯಾಗಿ ಹರಿಯಿತೇನೋ
ಸೂರ್ಯನ ಕಿರಣ ಕೂಡ
ನಾಚಿ ಮೇಘಗಳ ಹಿಂದೆ ಸರಿಯಿತೇನೋ
ನೀ ನಡೆವ ಹಾದಿಯಲಿ ನಿಸರ್ಗವೇ
ಬರೆಯಿತೇನೋ ಒಲವಿನೋಲೆ.
ಚಂಪಾ ಬಿ. ಜಿ.



