ಕಾವ್ಯ ಸಂಗಾತಿ
“ಬಿಕರಿಯಾದ ಪ್ರೀತಿ”
ಕಲ್ಪನಾ ಎಸ್ ಪಾಟೀಲ


ಬಿಕರಿಯಾದ ಪ್ರೀತಿ ಅಂದ್ರೆ ಗೊತ್ತೇನು!
ಇದ್ದದ್ದೆಲ್ಲವನ್ನೂ ಕೊಟ್ಟು
ಒಂದು ನಗುವಿಗೆ ಕಾಯೋದು
ಅದು ಬರದಾಗ ಎದೆ ಖಾಲಿ ಆಗೋದು.
ನಿನಗೊ ಪ್ರತಿ ಮಾತಿಗೂ ಅರ್ಥ
ಕಂಡುಕೊಳ್ಳುವ ತವಕ
ಅವರೊ ಪ್ರತಿ ಮಾತಿಗೂ ಬೆಲೆ ಕಟ್ಟಿದ್ರು
ನೀನು ಕಣ್ಣೀರಲ್ಲಿ ಹೆಸರು ಬರೆದೆ
ಅವರು ಅದನ್ನ ಮಳೆಗೆ ಕೊಟ್ಟು ಹೋದ್ರು.
ಒಲವಿನ ಪ್ರೀತಿ ಕೇಳಿದ್ದೇನು?
ಸಿಗೋದು ಸುಳ್ಳಿನ ವ್ಯಾಪಾರ ಆಯ್ತು.
ನಾನಿಲ್ಲವಾ ಎಂದಿದ್ದ ಕೈ,
ಬಿಟ್ಟು ಹೋಗೋವಾಗ “ನಿನ್ನ ತಪ್ಪು”
ಅಂದಿತ್ತು ಅದರಲ್ಲಿ ಅಚ್ಚರಿ ಏನಿಲ್ಲ.
ಆದ್ರೂ ನಿನಗೆ ಗೊತ್ತಾ?
ಬಿಕರಿಯಾದ ಪ್ರೀತಿ ನಿನ್ನನ್ನು ಚಿಕ್ಕದಾಗಿಸಲ್ಲ
ಅದು ನಿನ್ನ ದೊಡ್ಡತನಕ್ಕೆ ಸಾಕ್ಷಿ
ಯಾಕಂದ್ರೆ ಪ್ರೀತಿಸೋಕೆ ಧೈರ್ಯ
ಬೇಕಲ್ಲವೆ ಮೋಸ ಮಾಡೋಕೆ ಅಲ್ಲ.
ಅದಕೇಕೆ ಅಳುವೆ ಅಳುವುದಾದರೆ
ಮನಸಾರೆ ಎದೆ ಹಗುರಾಗುವವರೆಗೆ ಅಳು
ಆಮೇಲೆ ಆ ಕಣ್ಣೀರನ್ನೇ ಶಕ್ತಿ
ಮಾಡ್ಕೊಂಡು ಬಿಡು ಅದರಲ್ಲೆ
ನಗೋದನ್ನ ಕಲಿತುಬಿಡು.
ಬಿಕರಿಯಾದ ಪ್ರೀತಿಗೇಕೆ ಅಳುವೆ
ನಿನ್ನನ್ನು ನಿಜವಾಗಿ ಪ್ರೀತಿಸೋ
ಒಲವಿಗಾಗಿ ಕಾಯೋದಾ?
ಕಾಯುವುದಾದರೆ ಇನ್ನೆಷ್ಟು ದಿನ.!?
ಬರಬಹುದೆಂಬ ಊಹೆಯ ಬಿಟ್ಟು ಬಿಡು.
ಊಹಿಸಿರೊದೆಲ್ಲವೂ ಇಲ್ಲಿ ನೈಜವಾಗಿ
ನಡೆಯುವುದಿಲ್ಲ ಊಹೆಯೊಳು
ಬದುಕುತ್ತಿದ್ದರೆ ಅದು ಬದುಕಲ್ಲ
ಬದುಕಿನ್ನು ಬಿಕರಿಯಾಗುವುದಕ್ಕಿಂತ
ಮೊದಲೆ ನಿನ್ನ ನೀನು ಪ್ರೀತಿಸುವುದನ್ನ
ಕಲಿತುಬಿಡು.
ಕಲ್ಪನಾ ಎಸ್ ಪಾಟೀಲ
ಕಾವ್ಯಧರೆ



