ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
“ಝಲಕು”


ಬರೆಯುವುದಕ್ಕೆ ಏನಿಲ್ಲ
ಎಲ್ಲ ಬರೀ ಮೌನ
ಎದೆಯೊಳಗೆ ಬೆಟ್ಟ
ನೆತ್ತಿ ಮೇಲೆ ಹಸಿರು ಕಾಡು
ಬರೆಯುವುದಕ್ಕೆ ಏನಿಲ್ಲ
ಕಣ್ಣ ಹೊಳಪು
ಶುಭ್ರಾಕಾಶದ ಝಲಕು
ಆಸೆ ತುಂಬಿದ ಮೆಲುಕು
ಬರೆಯುವುದಕ್ಕೆ ಏನಿಲ್ಲ
ಬಿಟ್ಟು ಹೋದ ಹಾದಿಗುಂಟ ಪುವಾಸನೆ
ಆಘ್ರಾಣಿಸುವ ಶಕ್ತಿಬರಡು
ಬಿಡು ಬರೆಯಲೇನಿಲ್ಲ
ಹೀಗೇ ಮಾತಿಲ್ಲ ಕಥೆಯಿಲ್ಲ
ಜನ್ಮಗಳಾಚೆ ಧಾರಾವಾಹಿ!
ಇಂದು ಇಂದಿಗೆ ನಾಳೆಯಿಲ್ಲ. ಹೀಗೇ ಬಿಡು ಬರೆಯಲೇನಿಲ್ಲ!!
ಡಾ.ಡೋ.ನಾ.ವೆಂಕಟೇಶ




ನಿಮ್ಮ ಲೇಖನಿಯಲ್ಲಿ ಬರೆಯುವುದಕ್ಕೆ ಇನ್ನೂ ಬಹಳಷ್ಟು ಇದೆ.. ಮುಂದುವರಿಯುತ್ತಿರಲಿ ಶಾಯಿ ಮುಗಿಯುವವರೆಗೆ..
…ಡಾ|| ಕೆ. ಬಿ . ಸೂರ್ಯ ಕುಮಾರ್
ಮಡಿಕೇರಿ
ಧನ್ಯವಾದಗಳು ಸೂರ್ಯ
ಶಾಯಿ ಮುಗಿಯುವ ಹೊತ್ತು ತಿಳಿದಿಲ್ಲ
ಸರಕು ದಾಸ್ತಾನಿನ ಕೋಠಿಯಲ್ಲಿ ತಿಜೋರಿಯೇ ಇಲ್ಲ !!
❤️❤️
Thank you ❤️❤️ravare
Intriguing poem.Please continue your unfinished passion.
Manju
Passions by nature are often intriguing for self only let alone someone. Thanks Manju
Super Bhavoji
Thank you Sona