ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ನೆರೆ-ಬರ”


ಇದೋ ನೋಡಿ ….ಈ ವರ್ಷದ ಸೋಜಿಗ ,
ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .
ಇರುವುದೊಂದೇ ಬಾನು , ಇರುವುದೊಂದೇ ಭುವಿ
ನಡುವೆ ಎನೀ ಅಂತರ….. ?
ಒಂದೆಡೆ ಬರಗಾಲದ ಭೀತಿ ,
ಇನ್ನೊಂದೆಡೇ ಪ್ರವಾಹಕೆ ಆಹುತಿ
ಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,
ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,
ಸುತ್ತ ನೋಡಿದರೂ ಜಲ ದಿಗ್ಬಂಧನ……
ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,
ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತು
ನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶ
ಸಡಿಲಗೊಂಡು , ನಶ್ವರ ಜಗದ ಸತ್ಯ ದರ್ಶನ…..
ಕಾಳಿಲ್ಲದೆ , ಕೂಳಿಲ್ಲದೆ ಕಂಗೆಟ್ಟ ಜೀವ ಕುಲ
ನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರು
ವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು….
ಸುರಿಯುವ ಸುಳಿವೇ ಕೊಡದ ಮಳೆರಾಯ
ಆಡುತಿರುವ ನಮ್ಮೊಡನೆ ಜೂಟಾಟ
ಹಸಿವು , ದಾಹಕೆ ಅದೆಷ್ಟು ಬಲಿ ಬಿಳುವುದೊ ತಿಳಿಯದು , …..
ತಾಪಮಾನದ ಹೆಚ್ಚಳಕೆ ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆ
ಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದ
ಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .
ಸೃಷ್ಠಿ ಕರ್ತನ ಅಣತಿ ಮೀರಬಹುದೆ?
ಪುಣ್ಯದ ದಿನಗಳು ಕಳೆದಾಗ ,
ಉಳಿಯುವ ಶೇಷವೆ ಕರ್ಮ …..
ಪರವಿನಬಾನು ಯಲಿಗಾರ



