ಕಾವ್ಯ ಸಂಗಾತಿ
ಡಾ.ಭಾರತಿ ಅಶೋಕ್
“ಮದ್ದಾಗಬಹುದಿತ್ತು”


ಈ ಹೊತ್ತಿಗು
ನಿನಗು ಹೇಳದ
ಮಾತೊಂದು ಎದೆಯಲ್ಲೇ
ಉಳಿದು ಮುಳ್ಳಾಗಿ ಚುಚ್ಚು ತ್ತಿದೆ
ಆ
ಮಾತು ಏನೆಂದು ಕೇಳುವ
ಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದ
ಗಾಯಕ್ಕಾದರೂ ಮದ್ದಾಗಬಹುದಿತ್ತು
ಅದೆಲ್ಲಾ ಬಿಡು
ನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದು
ಗಾಯವಾಗಿ ಈಗ ಬದುಕನ್ನೇ
ಬಲಿ ಕೇಳುತ್ತಿದೆ
ಎನ್ನುವ ಸತ್ಯದ ಅರಿವು ನಿನಗಿಲ್ಲ
ನನಗೋ
ಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನು
ಬದುಕಿಸಿಬಿಡುವ ತಹತಹಿಕೆ
ಈಗ
ಬದುಕಿನ ಬದಲಾಗಿ
ನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನು
ಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆ
ನಾನೂ ಗೆದ್ದುಬಿಡುವೆ
ಈ ಹೊತ್ತಿಗು
ನಿನಗು ಹೇಳದ
ಮಾತೊಂದು ಎದೆಯಲ್ಲೇ
ಉಳಿದು ಮುಳ್ಳಾಗಿ ಚುಚ್ಚು ತ್ತಿದೆ
ಆ
ಮಾತು ಏನೆಂದು ಕೇಳುವ
ಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದ
ಗಾಯಕ್ಕಾದರೂ ಮದ್ದಾಗಬಹುದಿತ್ತು
ಅದೆಲ್ಲಾ ಬಿಡು
ನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದು
ಗಾಯವಾಗಿ ಈಗ ಬದುಕನ್ನೇ
ಬಲಿ ಕೇಳುತ್ತಿದೆ
ಎನ್ನುವ ಸತ್ಯದ ಅರಿವು ನಿನಗಿಲ್ಲ
ನನಗೋ
ಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನು
ಬದುಕಿಸಿಬಿಡುವ ತಹತಹಿಕೆ
ಈಗ
ಬದುಕಿನ ಬದಲಾಗಿ
ನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನು
ಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆ
ನಾನೂ ಗೆದ್ದುಬಿಡುವೆ
ಡಾ.ಭಾರತಿ ಅಶೋಕ್



