ಕಾವ್ಯ ಸಂಗಾತಿ
ಕಾವ್ಯ ಸುಧೆ
“ಮಾಯಾಜಾಲ”


ನಿನ್ನೊಲುಮೆ ಭಾವದ ತೇರನು ಏರುತಾ
ಹಾದಿಗುಂಟ ಹೂವ ಹಾಸಿ ಕಾದೆನು
ಇರುಳ ಒಂದು ಜಾವ ಕಳೆಯಲು
ನೆಟ್ಟ ನೋಟ ನಿನ್ನ ಜಾಡ ಅರಿಯದೆ
ಮೂಕ ಮನದಿ ಮೌನ ರೋದನೆ
ಯಾಕೋ ಬರದೆ ಹೋದೆ ನೀನು
ಅರಿಯದಾದೆ ಕಾರಣ, ಬೇಕು ಬೇಡ
ಎನದೆ ಹೋದೆ ಕಾಣದಾಗೆ ತಲ್ಲಣ
ನಿನ್ನ ಮಧುರ ನೆನಪು ಮರುಕಳಿಸಿ
ಈಟಿಯಂಗಿರಿದು ಎದೆಗೆ ನೋವ ಬಿತ್ತರ
ಭಾವಗೀತೆಯಂತೆ ನಲಿದ ಬಾಳಿನಲ್ಲಿ
ತೊರೆದು ಹೋದೆ ಇರಿಸಿ ಬಾಧೆ
ಮಾಯವಾದೆಯೇಕೆ ಮಾಯಾಮೃಗದಂತೆ
ಕೈಗೆ ಸಿಗದೆ ಸುಳಿವು ಕೂಡ ನೀಡದೆ ಹೋದೆ
ಕೆಣಕಿ ಶೋಧೆ ಸಿಲುಕಿಸೆನ್ನ ಜಾಲದಲಿ…..!!
ಕಾವ್ಯ ಸುಧೆ.




ಕಾಯುವಿಕೆಯ ಸೊಗಸಾದ ಬರಹ..❤️