ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಇದೋ ನೋಡಿ ….ಈ ವರ್ಷದ ಸೋಜಿಗ ,
ಒಂದು ಕಡೆ ನೆರೆ , ಇನ್ನೊಂದು ಕಡೆ ಬರ .
ಇರುವುದೊಂದೇ ಬಾನು , ಇರುವುದೊಂದೇ ಭುವಿ
ನಡುವೆ ಎನೀ  ಅಂತರ….. ?

ಒಂದೆಡೆ ಬರಗಾಲದ ಭೀತಿ ,
ಇನ್ನೊಂದೆಡೇ  ಪ್ರವಾಹಕೆ ಆಹುತಿ
ಬೇಡವೆಂದು ಗೋಳಾಡಿದರು , ಮುನಿದ ಮಾರಿಯ ಹಾಗೆ ಸುರಿಯುತಿಹುದು ಬಿಡದೆ ಮಹಾಮಳೆ ,
ಕಣ್ಣು ಮಿಟುಕಿಸಿದ್ದೆ ತಡ , ಕಂಡಿದ್ದೆಲ್ಲವು ಅವಶೇಷ ,
ಸುತ್ತ ನೋಡಿದರೂ ಜಲ ದಿಗ್ಬಂಧನ……

ಜೀವಮಾನದ ಗಳಿಕೆ ಕೊಚ್ಚಿ ಹೋಯಿತು ,
ಗಳಿಸಿದ ಧನ ಕನಕಕ್ಕೆಇಲ್ಲದ ಹಾಗಾಯಿತು ಕಿಮ್ಮತ್ತು
ನಾನು , ನನ್ನವರು , ನನ್ನದು ಎನ್ನುವ ಮೋಹ ಪಾಶ
ಸಡಿಲಗೊಂಡು ,  ನಶ್ವರ ಜಗದ ಸತ್ಯ ದರ್ಶನ…..

ಕಾಳಿಲ್ಲದೆ , ಕೂಳಿಲ್ಲದೆ  ಕಂಗೆಟ್ಟ ಜೀವ ಕುಲ
ನೀರಿಲ್ಲದೆ ಸೊರಗುತ್ತಿದೆ ಹಸಿರ ಬಸಿರು
ವರುಣದೇವನ ಕೃಪೆಗೆ ನಡೆದಿವೆ ಹಲವು ಪುಜೆಗಳು….

ಸುರಿಯುವ ಸುಳಿವೇ ಕೊಡದ ಮಳೆರಾಯ
ಆಡುತಿರುವ ನಮ್ಮೊಡನೆ  ಜೂಟಾಟ
ಹಸಿವು , ದಾಹಕೆ  ಅದೆಷ್ಟು ಬಲಿ  ಬಿಳುವುದೊ ತಿಳಿಯದು , …..

ತಾಪಮಾನದ ಹೆಚ್ಚಳಕೆ  ಪುರಾಣ ಐತಿಹ್ಯದ ಕೇದಾರನಾಥನೆ ಕರಗುತ್ತಿದ್ದಾನೆ
ಭೂ ಲೋಕವಿಗ ಅಸುರ ಲೋಕ ,ಸತ್ಯ ಮಿತ್ಯದ
ಲೆಕ್ಕದಲ್ಲಿ ಸತ್ಯ ಶೂನ್ಯವಾಗಿದೆ .
ಸೃಷ್ಠಿ ಕರ್ತನ ಅಣತಿ ಮೀರಬಹುದೆ?
ಪುಣ್ಯದ ದಿನಗಳು ಕಳೆದಾಗ ,
ಉಳಿಯುವ ಶೇಷವೆ ಕರ್ಮ …..


About The Author

Leave a Reply

You cannot copy content of this page

Scroll to Top