ಅಂಕಣ ಸಂಗಾತಿ
ಜ್ಯೋತಿ ಡಿ ಬೊಮ್ಮಾ
ಮನದ ಮಾತುಗಳು
ನಶೆ ಮುಕ್ತರಾಗಲಿ ಯುವಜನತೆ


ಈ ವಾರ ಮಾದಕ ವ್ಯಸನ ನಿವಾರಣಾ ಸಪ್ತಾಹ ಆಚರಿಸಲಾಯಿತು. ಕುಡಿತ ಮತ್ತು ಮಾದಕ ಪದಾರ್ಥಗಳ ವ್ಯಸನ ಯುವ ಪಿಳಿಗೆಗೆ ಒಂದು ಶಾಪ.ಯಾವಾಗ ವ್ಯಸನಕ್ಕ ಬಲಿ ಆಗ್ತಾರ ಅಂತ ಗೊತ್ತಾಗಲ್ಲ.ಗೊತ್ತಾಗುವಷ್ಟರಲ್ಲಿ ವ್ಯಸನಿಗಳಾಗಿ ಅದರಿಂದ ಹೊರ ಬರಲಾರದವರಾಗಿರತಾರ.ಇತ್ತೀಚಿಗೆ ಲಡಾಖ್ ಪ್ರವಾಸ ಹೋಗಿದ್ಧ.ಇಷ್ಟು ದಿನ ಅಲ್ಲಿ ಮದ್ಯಪಾನಕ್ಕ ಅವಕಾಶ ಇರಲಿಲ್ಲ.ಈಗ ಸರ್ಕಾರ ಅವಕಾಶ ಮಾಡಕೊಟ್ಟದ.ಅದರ ಅಗತ್ಯ ಇರಲಿಲ್ಲ ನಿಜ.ಆದ್ರ ಸರ್ಕಾರ ಕ್ಕ ಮದ್ಯ ಮಾರಾಟ ಒಂದು ದೊಡ್ಡ ಆದಾಯ.ಬ್ಯಾರೆ ಬಿಸಿನೆಸ್ ನಿಂದ ಬರುವ ಟ್ಯಾಕ್ಸ್ ಗಿಂತ ಮದ್ಯ ಮಾರಾಟದಿಂದ ಬರುವ ಟ್ಯಾಕ್ಸ್ ಸರ್ಕಾರ ಕ್ಕ ಉಪಯೋಗ.
ಆದ್ರ ಇದರಿಂದ ಆಗುವ ಉಪಯೋಗ ಅನುಪಯೋಗ ಜನ ಸಾಮಾನ್ಯರು ಚರ್ಚಿಸಬೇಕು.ಅಲ್ಲಿ ಇರುವದು ದಯಡಿಯುವ ವರ್ಗ.ಗಳಿಸಿದ ದುಡ್ಡಲ್ಲಿ ಸಂಸಾರ ನೋಡಕೊಂಡು ಆರಾಮ ಇದ್ರು.ಈಗ ಮದ್ಯ ಅವರಿಗೆ ಅಧಪತನಕ್ಕ ಕರೆದೊಯ್ಯತದ. ಸುಲಭವಾಗಿ ಸಿಗುವದರಿಂದ ದುಡಿದ ತಮ್ಮ ದಣಿವು ಪರಿಹಾರ ಮಾಡಕೊಳ್ಳಾಕ ಮದ್ಯದ ಮೊರೆ ಹೋಗತಾರ.ಕ್ರಮೇಣ ವ್ಯಸನಿಗಳಾಗತಾರ.
ಆದ್ರ ಅಲ್ಲಿನ ಸರ್ಕಾರ ದವರ ಹೆಳಿಕೆ ಬ್ಯಾರೆ.ಯುವ ಜನ ಬ್ಯಾರೆ ಬ್ಯಾರೆ ನಶೆ ಪದಾರ್ಥ ಉಪಯೋಗಿಸಿ ಹಾಳಾಗುವದನ್ನು ತಡೆಯಲು ಮದ್ಯ ಮಾರಾಟದ ಪರವಾನಿಗೆ ಕೊಡಲಾಗಿದೆ ಎಂದು ಹೇಳತಾರಂತೆ.ಒಂದು ವ್ಯಸನಕ್ಕೆ ಮತ್ತೊಂದು ವ್ಯಸನ ಪರ್ಯಾಯ ಆಗಲ್ಲ.
ಮದ್ಯ ಮಾರಾಟ ಮುಕ್ತ ರಾಜ್ಯಗಳು ಇವೆ.ಸಿಗಲಾರದು ಎಂದು ಜನ ಅದರ ಗೋಜಿಗೆ ಹೋಗದಿರಬಹುದು.ಉಳ್ಳವರು ಬೇರೆ ವ್ಯವಸ್ಥೆ ಮೂಲಕ ತರಿಸಿಕೊಂಡು ಕುಡಿಬಹುದು. ಆದ್ರೆ ಮುಕ್ತವಾಗಿ ಸಿಗುವದರಿಂದ ಆಗುವ ಅಧಪತನ , ಸಿಗದಿದ್ದಾಗ ಆಗದು.ಅದಕ್ಕೆ ಮದ್ಯ ಮಾರಾಟದ ನಿಷೇಧ ಒಳ್ಳೆದು.

ಒಮ್ಮೆ ಓದಿದ ನೆನಪು.ಝೆನ್ ಝಿ ಗಳು ಕುಡಿಯುವದಕ್ಕ ಅಷ್ಟು ಒಲವು ತೊರಿಸುತ್ತಿಲ್ಲ ಎಂದು. ಆದ್ರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮುಕ್ತ ವಾಗಿ ಮದ್ಯ ಮತ್ತು ಗಾಂಜಾ ಇತರ ಮಾದಕ ಪದಾರ್ಥಗಳ ಸೇವನೆ ಮಾಡತಾರೆ.ಇಂಜಿನಿಯರಿಂಗ್ , ವೈದ್ಯಕೀಯ ವಿದ್ಯಾರ್ಥಿಗಳೆ ಇದಕ್ಕೆ ಹೆಚ್ಚು ಬಲಿ ಆಗತಿದ್ದಾರೆ.ಯೌವನದ ಅಮಲಿನಲ್ಲಿ ಏನು ಮಾಡಿದ್ರು ನಡಿತದ ಎಂಬ ದೋರಣೆ. ಗೆಳೆಯರೊಂದಿಗೆ ಸೇರಿ ಒಂದು ಹೊಸ ಅನುಭವ ಎಂದು ಶುರು ಮಾಡುವದು ಯಾವಾಗ ತಮಗ ವ್ಯಸನ ಆಗತದ ಎಂದು ಅರಿವಾಗುವಷ್ಟರಲ್ಲಿ ಅದರಿಂದ ಹೊರ ಬರಲಾರದವರಂಗ ಆಗಿರತಾರ.ಹಾಗಂತ ಎಲ್ಲ ವಿದ್ಯಾರ್ಥಿಗಳು ವ್ಯಸನಿಗಳೆ ಅಂತ ಹೆಳಕ್ಕಾಗಲ್ಲ.ತಮ್ಮ ಬುದ್ಚಿಯ ಸೀಮೀತದಲ್ಲಿ ಇರುವವರು ಮಾದಕ ವಸ್ತು ಗಳನ್ನು ಒಂದು ಪ್ರಯೋಗವಾಗಿ ಉಪಯೋಗಿಸಿಕೊಂಡು ಬಿಡತಾರ.ಅದನ್ನೆ ದಿನಚರಿ ಮಾಡಿಕೊಂಡವರ ವ್ಯಸನ ಬಿಡಿಸೋದು ಕಷ್ಟ.
ಕಾಲೇಜ್ ಯುನಿವರ್ಸಿಟಿ ಗಳಲ್ಲಿ ಮಾದಕ ವಸ್ತುಗಳನ್ನು ಎಲ್ಲಿಂದ ತರತಾರ..! ಇವುಗಳನ್ನು ನಿಯಂತ್ರಣ ಮಾಡಲು ಅಲ್ಲಿನ ಸಿಬ್ಬಂದಿ ಪ್ರಯತ್ನ ಮಾಡಬಹುದು . ಆದ್ರ ವಿದ್ಯಾರ್ಥಿಗಳು ಕದ್ದು ಮುಚ್ಚಿ ಮಾಡುವ ವ್ಯಸನಕ್ಕ ಅವರು ಕುರುಡಾಗಿರತಾರ ಅಂತ ಕಾಣತದ.
ನನ್ನ ಮಗ ಕಲಿಯುವ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗಾಂಜಾ ಮತ್ತಿತರ ನಶೆ ಪದಾರ್ಥಗಳನ್ನು ಉಪಯೋಗಿಸುವದನ್ನು ಹೇಳತಿರತಾನೆ.ಅದು ಕೆಟ್ಟದ್ದು ಎಂದು ಅವರಿಗೂ ಗೊತ್ತು.ಆದ್ರೂ ಯೌವನದ ಹುರುಪು.ಈಗಲ್ಲದಿದ್ರೆ ಮಜಾ ಮತ್ಯಾವಾಗ ಮಾಡೋದು , ಒಂದು ಸಲ ಮಾಡಿ ನೋಡೋಣ , ಹೀಗೆ ಒಂದು ಪ್ರಯೋಗವಾಗಿ ಶುರುಮಾಡತಾರೆ.
ಮಾದಕ ಪದಾರ್ಥಗಳ ಬಗ್ಗೆ ನಮಗೆ ಗೊತ್ತಿರುವದಕ್ಕಿಂತ ಹೆಚ್ಚು ನಮ್ಮ ಮಕ್ಕಳಿಗೆ ಗೊತ್ತಿರತದ. ಅದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆಯೂ ತಿಳಿದಿರತದ.ನಾವು ಅವರಿಗೆ ಎಚ್ಚರಿಕೆ ಕೊಡಬಹುದು.ಆದ್ರ ನಿಯಂತ್ರಿಸಲಿಕ್ಕ ಆಗಲ್ಲ.ಅದರ ಪರಿಣಾಮ ದುಷ್ಪರಿಣಾಮ ಸ್ವತಃ ಅವರು ತಿಳಕೊಂಡು ತಮ್ಮನ್ನು ತಾವು ನಿಯಂತ್ರಣ ಮಾಡಕೊಳ್ಳಬೇಕು. ನಶೆ ಪದಾರ್ಥಗಳ ಬಳಕೆ ಮಾಡುವುದು ಬೇಡ ಅಂತ ಎಲ್ಲಾ ಹೆತ್ತವರಂತೆ ನಾನು ನನ್ನ ಮಕ್ಕಳಿಗೆ ಹೇಳತೇನೆ.ಆದ್ರ ಬೇಡವೇ ಬೇಡ ಅಂತ ಹೆಳಲಾರೆ.ಗೆಳೆಯರ ಸಂಗಡ ಅವರು ಬೆರೆತು ಅವರಿಷ್ಟ ಇದ್ರೆ ಉಪಯೋಗಿಸಲಿ , ಎಚ್ಚರಿಕೆ ಮಾತ್ರ ಸದಾ ಇರಲಿ ಎಂಬುದು ಸೂಚಿಸತೆನ
ಯುವ ಜನ ಮದ್ಯಕ್ಕಿಂತ ಇತರ ನಶೆ ಪದಾರ್ಥ ಗಳಿಗೆ ಬಲಿ ಆಗತಿರೋದು ಶೋಚನೀಯ.ಇಂತಹ ನಶೆಗಳು ದೇಶವಿದೇಶಗಳ ನೆಲದಲ್ಲಿ ಸಾಂಕ್ರಾಮಿಕ ವಾಗಿ ವ್ಯಾಪಿಸತಿವೆ. ಇವುಗಳನ್ನು ತೆಡಯಲು ಪೋಲಿಸ್ ಪಡೆಗಳು ಶ್ರಮಿಸಬೇಕು.ಕಾಲೇಜ್ ಗಳಲ್ಲಿ ವಿದ್ಯಾರ್ಥಿ ಗಳ ಕೈಗೆ ಸಿಗದಂಗ ನಿಯಂತ್ರಿಸಬೇಕು. ಆದ್ರ ಈಗಿನ ಸಿನಿಮಾಗಳಲ್ಲಿ ಹೀರೋ ಸಿಗರೇಟ್ ಮತ್ತು ಡ್ರಗ್ ವ್ಯಸನಿ ಆಗಿರತಾನ.ಅವನನ್ನು ಹೀರೋ ಅನ್ನತೀವಿ.ಇಂತಹ ಹೀರೋಗಳು ಸಮಾಜಕ್ಕ ಏನು ಸಂದೇಶ ಕೊಡತಾರ..ಈಗಿನ ಎಲ್ಲಾ ಸಿನಿಮಾಗಳಲ್ಲೂ ಹೀರೋ ನ್ ಕೈಯಲ್ಲಿ ಉರಿಯುವ ಸಿಗರೇಟ್ ಇರತದ.
ಮುಂದಿನ ಎರಡ್ಮೂರು ವರ್ಷಗಳಲ್ಲಿ ನಮ್ಮ ರಾಜ್ಯ ವ್ಯಸನ ಮುಕ್ತವಾಗಿ ಮಾಡಲಾಗತದ ಅಂತ ಸರ್ಕಾರ ಹೆಳ್ಯಾದ.ಒಳ್ಳೆದು.ನಶೆ ಪದಾರ್ಥಗಳು ವಿದ್ಯಾರ್ಥಿ ಗಳ ಕೈಗೆ ಸಿಗದಂಗ ಮೊದಲು ನಿಯಂತ್ರಿಸಬೇಕು.ನಶೆ ಪದಾರ್ಥಗಳು ನಮ್ಮ ರಾಜ್ಯದಲ್ಲಿ ತಯ್ಯಾರಾಗದಂತೆ , ಹೊರಗಿನಿಂದ ಬರದಂತೆ ನಿಯಂತ್ರಣ ಮಾಡೊದು ಮುಖ್ಯ.
ಮದ್ಯ ಮತ್ತು ಇತರ ಮಾದಕ ಪದಾರ್ಥ ಗಳಲ್ಲಿ ಬಹಳ ವ್ಯತ್ಯಾಸ ಇರತದಂತ.
ಮದ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ದುಷ್ಪರಿಣಾಮ ಆಗತದಂತ ಈ ಮಾದಕ ವಸ್ತುಗಳನ್ನು ಉಪಯೋಗಿಸುವ ದರಿಂದ.ಗೊತ್ತಿರಲಾರದವ್ರು ಯಾರೂ ಇಲ್ಲ ಈಗ.ಗೊತ್ತಿದ್ರೂ ಒಂದು ಸಲ ನೋಡೊಣ ಎಂಬ ಪ್ರಯೋಗ ಯುವಜನತೆಯ ಆಸೆ.ಇದೇ ಕ್ರಮೇಣ ವ್ಯಸನ ಆಗೊದು ದುರಂತ.
ವಿದ್ಯಾರ್ಥಿಗಳು ಜಸ್ಟ್ ಫನ್ ಎಂದು ಶುರುಮಾಡುವ ನಶೆಗಳು ಅವರ ಜೀವಕ್ಕೆ ಮಾರಕ ಆಗತಾವೆ ಅಂತ ಅರ್ಥಾಗಲ್ಲ.ಆದರೂ ಒಂದು ಸಮಾಧಾನ.ಈಗೀನ ವಿದ್ಯಾರ್ಥಿಗಳು ತಮ್ಮ ಜೀವನದ ಒಳ್ಳೆದು ಕೆಟ್ಟದ್ದು ತಾವೇ ನಿರ್ಧರ ಮಾಡ್ತಾರ.ಅವರಲ್ಲಿ ವಿವೇಚನೆ ಅದ.ದೊಡ್ಡ ನಗರಗಳಲ್ಲಿ ಪಬ್ ಗಳಲ್ಲಿ ಕಾಣುವ ಯುವಕ ಯುವತಿಯರೆಲ್ಲ ಹೆಚ್ಚಾಗಿ ಸ್ವಾವಲಂಬಿ ಗಳು. ವ್ಯಸನದ ಪರಿಣಾಮ ಬಲ್ಲವರು, ತಮ್ಮ ಮಿತಿಯಲ್ಲಿ ಜೀವನವನ್ನು ಎಂಜಾಯ್ ಮಾಡುವದಕ್ಕೆ ಆಕ್ಷೇಪ ಮಾಡಲಾಗದು.
ಆದ್ರೆ ದುಡಿಯುವ ವರ್ಗದ ವ್ಯಸನಿಗಳ ಜೀವನ ಶೋಚನೀಯ.ಮಾದಕವಸ್ತು ನಿಯಂತ್ರಣ ಮಾಡುವದೆ ಇದಕ್ಕೆಲ್ಲ ಪರಿಹಾರ.
ಜ್ಯೋತಿ ಡಿ ಬೊಮ್ಮಾ




