ಕನ್ನಡ ಸಂಗಾತಿ
ಸವಿತಾ ಇನಾಮದಾರ್
“ಕನ್ನಡ ಸವಿಗನ್ನಡ”

ಕನ್ನಡ ಸವಿಗನ್ನಡ ಕನ್ನಡ ಸಿರಿಗನ್ನಡ
ಕನ್ನಡವ ಮಾತಾಡೋ ಕನ್ನಡದ ಕಂದ
ಕನ್ನಡ ಭಾಷೆಯ ಸೊಗಡು ಕರ್ಣಾನಂದllಪ ll
ಭಾರತಾಂಬೆಯ ಕುವರಿ ತಾಯಿ ಭುವನೇಶ್ವರಿ
ಸಲಹುವಳೆಮ್ಮನು ಮಾತೆ ಚಾಮುಂಡೇಶ್ವರಿ
ಸರ್ವ ಧರ್ಮಗಳ ಸಂಸ್ಕಾರವಿಹುದಿಲ್ಲಿ
ನಿತ್ಯ ನೂತನ ಸಂಗಮದಲ್ಲಿ ll೧ ll
ಸತ್ಯಕ್ಕೆ ಸಾವಿಲ್ಲ ಕನ್ನಡಕ್ಕೆ ಸೋಲಿಲ್ಲ
ಬಳಸಿದಷ್ಟು ಬೆಳೆಯುವುದು
ಎಲ್ಲೆಡೆಯೂ ಹಬ್ಬುವುದು
ಕನ್ನಡವ ಕಾಪಾಡೋ ಕನ್ನಡದ ಕಂದ
ಕನ್ನಡಮ್ಮನ ಹರಕೆ ಅದುವೇ ಶ್ರೀಗಂಧ ll೨ll
ಸವಿತಾ ಇನಾಮದಾರ್




ಜೈ ಕನ್ನಡಾಂಬೆ