ಸಾವಿತ್ರಿ

ಕವಿತೆ

ಸಾವಿತ್ರಿ

ಡಾ.ಸುರೇಖಾ ರಾಠೋಡ

Savitribai Phule: Biography, Education,Work and Quotes

ವೀರ ಮಹಿಳೆ ಸಾವಿತ್ರಿ
ಅಕ್ಷರದ ಅವ್ವ ಸಾವಿತ್ರಿ

ಅಕ್ಷರ ಕಲಿಯಲು ಹೊರಾಡಿದ
ಅಕ್ಷರ ಕಲಿಸಲು ಶ್ರಮಿಸಿದ
ವೀರ ಮಹಿಳೆ ಸಾವಿತ್ರಿ

ದಿನ ದಲಿತರ ಶಿಕ್ಷಣಕ್ಕಾಗಿ
ನಿಂದನೆ, ಅಪಮಾನ, ಅವಮಾನಗಳನ್ನು
ಸಹಿಸಿದ ವೀರ ಮಾತೆ ಸಾವಿತ್ರಿ

ಬಡವಬಲ್ಲಿದವರೆನ್ನೆದೆ ಎಲ್ಲರ
ಸೇವೆ ಮಾಡಿದ
ದೇಶದ ಮೊದಲ ಶಿಕ್ಷಕಿ
ಮೊದಲ ಮುಖ್ಯೋಪಾಧ್ಯಾಯಿನಿ
ಸಾವಿತ್ರಿ

ಮಹಿಳಾ ಶಿಕ್ಷಣಕ್ಕಾಗಿ ಜೀವನವನ್ನೇ
ಮುಡುಪಾಗಿಟ್ಟ
ವೀರ ಮಾತೆ ಸಾವಿತ್ರಿ

ಜ್ಯೋತಿ ಬಾ ಪುಲೆಯವರೊಂದಿಗೆ
ಶಾಲೆಗಳನ್ನು ತೆರೆದ ಶಿಕ್ಷಣದಾತೆ
ಸಾವಿತ್ರಿ

ಜನರ ಕೆಂಗಣ್ಣಿಗೆ ಗುರಿಯಾಗಿ
ಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡು
ದಿಟ್ಟತನದಿಂದ ಮುಂದೆ ನಡೆದ
ದಿಟ್ಟ ಮಹಿಳೆ ಸಾವಿತ್ರಿ

ಶಾಲಾ ಮಕ್ಕಳ ಬೇಕು ಬೇಡಗಳನ್ನು
ಕುಂದುಕೊರತೆಗಳನ್ನು ನಿಗಿಸಿದ
ಸಹನಾಮಯಿ ಸಾವಿತ್ರಿ

ಶಿಕ್ಷಣದ ಜೊತೆಗೆ
ಜೀವನ ಕೌಶಲ್ಯ ಕಲಿಸಿದ
ಜೀವನವಿಧಾತೆ ಸಾವಿತ್ರಿ

ರೂಢಿ, ಸಂಪ್ರದಾಯ, ಸಮಾಜಿಕರಣದ
ಕಟ್ಟಳೆಗಳನ್ನು ಮುರಿದು ಶವಸಂಸ್ಕಾರವ ಮಾಡಿದ ಧೈರ್ಯವಂತೆ ಸಾವಿತ್ರಿ
ಅಕ್ಷರದವ್ವ ಸಾವಿತ್ರಿ
ಮೊದಲ ಶಿಕ್ಷಕಿ ಸಾವಿತ್ರಿ

***********************

One thought on “ಸಾವಿತ್ರಿ

  1. ಇಂದು ಮಹಿಳೆಯರು ಅಕ್ಷರಸ್ಥರಾಗಿದ್ದರೆ ಈ ಮಹಿಳೆ ಬಂಧನಗಳನು ಮುರಿದು ಸಮಾಜವನ್ನು ಎದುರಿಸಿದ್ದಕ್ಕೆ.ಇಂಥ ಚೇತನವನ್ನು ಪರಿಚಯಿಸಿದ್ದು ಸಮಂಜಸ

Leave a Reply

Back To Top