ಕವಿತೆ
ಜೀವನ
ಭಾರತಿ ರವೀಂದ್ರ
ನೋವು ನಲಿವುಗಳ
ನೆರಳು ಬೆಳಕಿನ ಜೋಕಾಲಿ ಈ ಜೀವನ.
ಹುಣ್ಣಿಮೆಯ ಕಂಡು
ಉಕ್ಕಿ ಬರುವ ಸಾಗರ ದಷ್ಟೇ ಅಗಾಧ ಈ ಜೀವನ.
ಸುರಿಯೋ ಸೋನೆಗೆ
ಹೆಜ್ಜೆ ಹಾಕೋ ನವಿಲಿನ
ಕಾಲ್ಗೆಜ್ಜೆಯ ದನಿಯ ಹಾಗೆ
ಸದ್ದೇ ಇಲ್ಲದ ಹೆಜ್ಜೆಯ
ಸಂಗೀತ ದಂತೆ ಈ ಜೀವನ.
ಬಡತನದ ಬೇಗೆ ಇರಲಿ
ಸಿರಿತನದ ಸೊಬಗಿರಲಿ
ಪ್ರೀತಿಯ ಹೊನಲಾಗಲಿ
ಈ ಜೀವನ.
ಸಂತೃಪ್ತಿಯ ಮನಕೆ
ಸಿರಿತನದ ಸೋಗು ಇರದು ಒಲವೇ ನಲಿವು
ಈ ಜೀವನ
**********************************