ಮತ್ತೆ ನೆನಪಾಗುತ್ತಿದೆ
ಚಂದ್ರು ಪಿ ಹಾಸನ್
ಮತ್ತೆ ನೆನಪಾಗುತ್ತಿದೆ, ನನ್ನ ಬಾಲ್ಯದೊಳು
ಕಳೆದ ದಿನಗಳು ಸುಂದರ ಆ ಮಧುರ ಕ್ಷಣಗಳು
ಕೆದಕಿದೆನು ನಾ ಇಂದು ಒಂದೊಂದು ಮನದೊಳು
ಚಿತ್ರಿಸಲೊರಟೆ ಸಾಲುಗಳಲ್ಲಿ ಆಕ್ಷಣಗಳ ಮುದದೊಳು
ಮತ್ತೆ ನೆನಪಾಗುತ್ತಿದೆ, ನಾಲ್ಕೆಜ್ಜೆಯ ಮುಗ್ದ ಸಾಲು
ಅಮ್ಮನ ತೋಳು ಅದು ಸಂತಸದ ಸಾಲು
ರಾಜ ಸಿಂಹಾಸನ ನನ್ನ ತಾಯಿಯ ಮಡಿಲು
ಕುಣಿದು ಕುಪ್ಪಳಿಸಿದೆ ಪಡೆದೆ ಕೈತುತ್ತು ಅಲ್ಲಿ
ನೆನಪಾಗುತ್ತಿದೆ ವಿದ್ಯಾರ್ಜನೆಯ ಆರಂಭ
ಪ್ರಾಥಮಿಕ ಶಾಲೆಯ ಗಂಟೆ ಸದ್ದು
ಕೇಳಿದೊಡನೆ ಅಡ್ಡಗದ್ದೆ ಬಯಲಲ್ಲಿ
ಓಡುತ್ತಿದ್ದೆವು ಗುಂಪಾಗಿ ಎದ್ದು-ಬಿದ್ದು
ಮತ್ತೆ ನೆನಪಾಗುತ್ತಿದೆ, ಶಾಲೆಯ ಸಂಜೆಗಳು
ಅಣ್ಣನ ತೋಳು ಪ್ರತಿಸಂಜೆ ನಾ ಕೊಟ್ಟ ಗೋಳು
ದಿನಂಪ್ರತಿ ಅವಂಗೆ ನನ್ನ ಕಾಯುವ ಕಾರ್ಯ
ರಸ್ತೆಬದಿ ಶುದ್ಧಕ್ಕಾಗಿ ನನ್ನ ಚಡ್ಡಿ ಹಿಡಿವಾಗ ಶೌರ್ಯ
ಮತ್ತೆ ನೆನಪಾಗುತ್ತಿದೆ ರಾತ್ರಿಯ ಊಟ
ಸಂಜೆಗೆ ಬಂದ್ ಆಗ್ತಿತ್ತು ಎಲ್ಲ ಆಟ-ಪಾಠ
ಅಜ್ಜಿ ಹಾಸಿಗೆಯಲ್ಲಿ ನುಸುಳಿ ಗೊರಕೆ ಗೋಟರ್ ಗೊಟ
ಮುಂಜಾನೆ ನಾಲ್ಕ್ಘಂಟೆಗೆ ಅಮ್ಮಂಗೆ ಗಿಳಿಪಾಠ
ಮತ್ತೆ ನೆನಪಾಗುತ್ತಿದೆ, ಶಾಲೆಯ ಅಡ್ಡರಸ್ತೆ
ಆ ಹಾದಿಯಲ್ಲಿ ಸಾಗಿದರೆ ಕಳೆಯುವುದೆಲ್ಲಾ ಸುಸ್ತು
ಅಲ್ಲೊಂದಿತ್ತು ಹುಣಸೆ, ಮಾವು, ನೇರಳೆ ಮರ
ಪ್ರತಿ ಸೀಜನ್ ನಲ್ಲೂ ನಮ್ಮದೇ ರಾಜ್ಯಭಾರ
ಮತ್ತೆ ನೆನಪಾಗುತ್ತಿದೆ, ಪರೀಕ್ಷೆಗಳ ಪ್ರಗತಿ ಪತ್ರ
ಮಾರ್ಕ್ಸ್ ಕಾರ್ಡ್ ನಲ್ಲಿ ಅಂಕಗಳು ಕಡಿಮೆ ಬಂದದ್ದು
ಎಷ್ಟು ಬಾರಿ ಅಪ್ಪನ ಭಯದಲ್ಲಿ ತೋರಿಸದೆ ಕುಳಿತದ್ದು
ಬೆಳಗ್ಗೆ ಹೊರಡುವ ಸಮಯದಲ್ಲಿ ಅಮ್ಮನ ಕಾಲಿಡಿದಿದ್ದು
ಮತ್ತೆ ನೆನಪಾಗುತ್ತದೆ, ಗದ್ದೆಯಲ್ಲಿನ ಆಟೋಟ
ಭಾನುವಾರದಿ ನಡೆಯುತ್ತಿತ್ತು ನಮ್ಮದೇ ಒಂದು ಕೂಟ
ಮುಂದಾಳತ್ವ ಸಿಗುತ್ತಿತ್ತು ಮಾಡಿಸಿದಂತೆ ಮಾಟ
ಯಾಕಂದ್ರೆ ನಾ ಆಡ್ತಿದ್ದೆ ಚೆನ್ನಾಗಿ ಮರಕೋತಿಯಾಟ
ಮತ್ತೆ ನೆನಪಾಗುತ್ತಿದೆ, ಜಾತ್ರೆ ಹಬ್ಬಗಳು
ಬಗೆಬಗೆಯ ತಿಂಡಿಗಳ ಬಿಡ ಬಿಡದೆ ಸವಿದಿದ್ದು
ಬಚ್ಚಿಟ್ಟಿದ್ದ ತಿನಿಸುಗಳ ಒಂದೊಂದೇ ಕದ್ದದ್ದು
ಎಂಟಾಣೆ ಹಿಡಿದು ಜಾತ್ರೆಯೆಲ್ಲಾ ಸುತ್ತಿದ್ದು
ಮತ್ತೆ ನೆನಪಾಗುತ್ತಿದೆ ಕಾಲೇಜಲ್ಲಿ ನನ್ನ ಸ್ಥಿತಿಗತಿ
ಅಲ್ಲಿ ಕಾಡಿತು ಪ್ರತಿದಿನ ವಿಜ್ಞಾನ ಕೋರ್ಸ್ನ ಭೀತಿ
ಪ್ರಾರಂಭದಲ್ಲಿ ಹೃದಯದಲ್ಲಿ ಅಡಗಿಸಿದ್ದೆ ಚೊಚ್ಚಲ ಪ್ರೀತಿ
ನಿಧಾನ ಹಂತದಲ್ಲಿ ಪಡೆದು ಜೀವನದಿ ಪ್ರಗತಿ
ಮತ್ತೆ ಮತ್ತೆ ನೆನಪಾಗುತ್ತಿದೆ ಕಾಲೇಜು ಪಯಣ
ಬಸ್ಸಿನಲ್ಲಿ ರಶ್ಶಾದರೆ ಬಾಗಿಲಲ್ಲಿ ನೇತಾಡ್ತಾ ನಮನ
ಗೆಳತಿಯರ ಸೆಳೆಯಲು ಮಾಡ್ತಿದ್ದೆ ಆರೋಗ್ಯಕರ ಗಮನ
ಸ್ನೇಹದ ಕಡಲಲ್ಲಿ ಹೇಗೋ ಸಾಗಿಸಿದ ಪಾರ್ವತಿರಮಣಾ
ಮತ್ತೆ ನೆನಪಾಗುತ್ತಿದೆ ಪ್ರತಿ ಹೆಜ್ಜೆಗಳಲ್ಲಾಟ
ಒಂದೊಂದು ಪರಿಸರದಲ್ಲೂ ಅನುಭವದ ಪಾಠ
ಶಿಕ್ಷಕನಾಗಿ ಕಲಿಸಿದ ಕಂಡದ್ದೆಲ್ಲ ಬರೆಯುವ ಚಟ
ಪರ ವಾಯಿತು ವಿಧಿಯಾಟ ಕಲಿಸಿತು ನೀತಿಪಾಠ
ಮತ್ತೆ ನೆನಪಾಗುತ್ತಿದೆ ಬಾಲ್ಯದ ಸ್ನೇಹಜೀವಿಗಳು
ಕಂಡಾಗ ಹಾಯ್ ಹೋಗುವಾಗ ಬಾಯ್ ಅನ್ನೋ ಸಿಹಿ ಕ್ಷಣಗಳು
ಕಾಲಚಕ್ರವು ಎಲ್ಲವ ತಿರುಗಿಸಿ ಮರೆಸಿತು
ಆದರೆ ಮನಸ್ಸಿನ ಪುಟದಲ್ಲಿ ಅಚ್ಚರಿಯಾಗಿವೆ ನೆನಪುಗಳು
ಮತ್ತೆ ನೆನಪಾಗುತ್ತಿದೆ ನೆನಪುಗಳ ನೆನಪುಗಳು
****************************************
Wonderful.. good going
Tq u so much
ಬಾಲ್ಯದ ದಿನಗಳೇ ಚೆಂದ ಸೂಪರ್
ಧನ್ಯವಾದಗಳು ಮೇಡಂ
ಹೌದು ನಿಮ್ಮ ಮಾತು ಅಕ್ಷರಸಹಃ ಸತ್ಯ
ಬಾಲ್ಯದ ದಿನಗಳು ಮತ್ತೆಂದೂ ಸಿಗದ ಮುಂದೆಂದು ಬಾರದ ದಿನಗಳು ಆದರೂ ಚಿರ ನೆನಪುಗಳು
ಬಾಲ್ಯದ ಸವಿನೆನಪು ಅವಿಸ್ಮರಣೀಯ..
ಮತ್ತೊಮ್ಮೆ ಸಿಗದ ಚಿರನೆನಪುಗಳು