ಬದಲಾಗುವ ಸತ್ಯ

ಕವಿತೆ

ಬದಲಾಗುವ ಸತ್ಯ

ನೂತನ ದೋಶೆಟ್ಟಿ

purple green and yellow round mirror

NUTAN

ನಿನ್ನೆಗಳ ಬಾನಲ್ಲಿ ನಿನ್ನ ನಗುವಿನ ನಕ್ಷತ್ರ
‘ ಶೂಟಿಂಗ್ ಸ್ಟಾರ್ ‘ ಎಂದ ಗೆಳತಿಯ ಪುಳಕ
ಮರೆತ ಜಿಜ್ಞಾಸೆ
ಎದುರಲ್ಲಿ ನಿನ್ನ ಗುರಿಗಳು

ಅವಳ ಪಿಟಿಪಿಟಿಸುವ ಬಾಯಲ್ಲಿ
ಅವಸರದ ಬೇಡಿಕೆಗಳು
ನನ್ನ ಮುಚ್ಚಿದ ಕಂಗಳಲ್ಲಿ
ನಿನ್ನ ಕನಸುಗಳ ಹಾರೈಕೆ
ನಿನ್ನೆಯವರೆಗೆ ಇದೆಲ್ಲ ಸತ್ಯ

ಇಂದು
ನೀನು, ನಕ್ಷತ್ರ , ಕನಸು

ನನ್ನ ಮುಖದಲೊಂದು ಮುಗುಳ್ನಗೆ
ತುಟಿಯಂಚಿನ ಅಚ್ಚರಿ
ಗಲ್ಲದಲ್ಲೂರಿ ಕುಳಿತ ವಾಸ್ತವ
ಶೂಟಿಂಗ್ ಸ್ಟಾರಿನತ್ತ ಹರಿದು ನೋಟ
ನಾಳಿನ ಸತ್ಯಕ್ಕೆ ಸಿದ್ಧವಾಗಿತ್ತು.

**********************

Leave a Reply

Back To Top