ಕವಿತೆ
ಬದುಕಲಿ ಅವಳು
ತಿಲಕ ನಾಗರಾಜ್
ಬಿಟ್ಟು ಬಿಡಿ ಅವಳನು
ಅವಳ ಪಾಡಿಗೆ
ಬದುಕಲಿ ಅವಳು….
ನಿಮ್ಮ ನಿರ್ಧಾರಗಳೇ
ಸುಟ್ಟಿರುವಾಗ
ಅವಳ ಬದುಕ
ಅಳಿದುಳಿದವುಗಳನೇ
ಜೋಡಿಸಿ ಮುನ್ನಡೆಯಲಿ ಬಿಡಿ
ಕಣ್ಮುಂದೆ ಕುಣಿದು
ಅಣಕಿಸುತಿರುವಾಗ ಅವಳು
ಕಂಡ ಕನಸುಗಳು
ಈಡೇರದ ಆಸೆಗಳು ಚಾಟಿಯೇಟಿನಂತೆ ಮೈ
ಮನದ ತುಂಬೆಲ್ಲಾ ನೋವ
ಬರೆಗಳ ಎಳೆಯುತಿರಲು
ಕೆನ್ನೆಯ ತುಂಬೆಲ್ಲಾ..
ಕಂಬನಿಯ ಬಿಂದುಗಳು
ಬಿಟ್ಟುಬಿಡಿ ಅವಳನು
ಅವಳ ಪಾಡಿಗೆ
ಆಗಲೇ ದಾಟಿತಲ್ಲ ಮೂವತ್ತು
ಎಲ್ಲದಕೂ ಆಕ್ಷೇಪಿಸುವ ನೀವುಗಳು
ಕೊಟ್ಟಿರೇ ಒಂದೊಳ್ಳೆ ಬದುಕನು?
ಇನ್ನಾದರೂ ಬಿಟ್ಟು ಬಿಡಿ ಅವಳನು
ನಿಮ್ಮ ಬಂಧನದ ಕಟ್ಟಳೆಗಳಿಂದ
ಕಟ್ಟಿಕೊಳ್ಳಲಿ ಒಂದೊಳ್ಳೆ ಬದುಕನು
***********************************
Beautiful kavana friend
Thank you
Wonderful poem
Thank you so much ma’am
Thumba chennagide Tilaka.
Dhanyavadagalu Haleema
Heartfelt poem Tilaka. Lovely
Thank you Prathiksha