ಕವಿತೆ
ದ್ವಿಪದಿಗಳು
ವಿ.ಹರಿನಾಥ ಬಾಬು
ಹೊರಗೆ ಚಿಟ್ಟೆ ಹಾರುವುದ ನೋಡಿದೆ
ಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ
ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆ
ಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ
ನದಿಗಳು ಉಕ್ಕಿ ಹರಿಯುತ್ತಿವೆ
ನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ
ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆ
ನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ
ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆ
ನೀನು ಕಾಣದೆ ಮನಸು ಗರಬಡಿದ ಹಾಗಿದೆ
*********************
ಕತ್ತಲಾದ ಮೇಲೆ ಬೆಳಕು ಬಾರದೆ ಇರುವುದೇ, ಹಾರಿ ಹೋದ ಚಿಟ್ಟೆ ಮತ್ತೆ ಬಾರದೆ?