ಕವಿತೆ
ಹನಿಗಳು
ನಾಗರಾಜ. ಹರಪನಹಳ್ಳಿ
-1-
ಮೌನವಾಗಿ ಬಿದ್ದ ದಂಡೆಯಲ್ಲಿ
ಒಂಟಿಯಾಗಿ
ಧ್ಯಾನಿಸುತ್ತಿದೆ ದೋಣಿ
ಬದುಕಿನ ಯಾತ್ರೆ ಮುಗಿಸಿ
-2-
ಕಡಲ ಅಲೆಗಳ ಸದ್ದು
ಕೇಳಿಯೂ ಕೇಳದಂತೆ
ಬಿದ್ದಿರುವ ದಂಡೆಯ ಕಂಡು
ಆಗಸದಲ್ಲಿ ಚಂದ್ರ
ನಗುತ್ತಿದ್ದ
-3-
ಸಂಜೆ ಗತ್ತಲು
ದಂಡೆಯಲ್ಲಿ ನಡೆದಾಡುತ್ತಿರುವ
ಜೋಡಿ ನೆರಳುಗಳು
ನಕ್ಷತ್ರಗಳು ಹಾಡುತ್ತಿರೆ
ಮಗು
ಮರಳಲ್ಲಿ ಗುಬ್ಬಚ್ಚಿಗಾಗಿ
ಮನೆ ಮಾಡುತ್ತಿತ್ತು
-4-
ಗಾಳಿ ಸಿಳ್ಳೆಹಾಕುತ್ತಿತ್ತು
ಕಡಲಲ್ಲಿ ಯಾರೋ
ದೀಪಸಾಲು ಹಚ್ಚಿಟ್ಟಂತೆ
ದೋಣಿಗಳು
ಬದುಕಿಗಾಗಿ
ಹುಡುಕಾಡುತ್ತಿದ್ದವು
********************************
ಕಡಲು,ದೋಣಿಗಳ ನಂಟು ಜೀವನದ ಸಾಲು ದೀಪ ಹಚ್ಚಿದಂತೆ.ಚೆನ್ನಾಗಿದೆ. ಸರ್
ಚೆಂದದ ಹನಿಗಳು ಸರ್
ಎಂಥಹ ಅದ್ಭುತ ಚಿತ್ರಗಳನ್ನು ಈ ಹನಿಗಳು ಕಟ್ಟಿ ಕೊಟ್ಟಿವೆ..
ಇಲ್ಲಿನ ಸಣ್ಣ ಸಣ್ಣ ಚಿತ್ರಗಳು ಇಡೀ ಕವಿತೆಯನ್ನು ತೋರಣಗಟ್ಟಿವೆ…
ಅರ್ಥಪೂರ್ಣ….
ಹನಿ ಹರಡಿಕೊಳ್ಳುತ್ತದೆ.ಚನ್ನಾಗಿದೆ