ಕಥೆ
ಹೇಮಾ
ಎಂ.ಆರ್.ಅನಸೂಯ
ವಿಜಯಾ ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ ಹೇಮಾ !
” ನಮಸ್ತೆ ಮೇಡಂ “
ಹೇಮಾ, ಆರಾಮಾಗಿದೀಯಾ , ಹೇಗಿದಾನಮ್ಮ ನಿನ್ನ ಮಗ ?
ಚೆನ್ನಾಗಿದ್ದಾನೆ ಮಿಸ್.
ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ
ಖಂಡಿತ ಬರಬೇಕು ಮೇಡಂ
ಹೌದಾ ಎಷ್ಟು ತಿಂಗಳು ಮಗುವಿಗೆ
ಐದು ತಿಂಗಳು ಮಿಸ್
ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ ನೋಡಲು ಬರುತ್ತೇನೆ.
ಪಾಪುಗೆ ಏಳು ತಿಂಗಳಾದಾಗ ಊರಿಗೆ ಬರ್ತಿನಿ ಮಿಸ್
ಅಜ್ಜಿಗೆ ಆಗುವುದಿಲ್ಲ. ಕಷ್ಟ ಆಗುತ್ತೆ. ಬೇಡ ಅಂದ್ರು ಅತ್ತೆ
ಹೌದಲ್ವಾ ನಿಮ್ಮತ್ತೆ ಹೇಳೋದು ಸರಿಯಾಗೇ ಇದೆ
ಹೌದು ಮಿಸ್ ನಮ್ಮತ್ತೆ ತುಂಬಾ ಒಳ್ಳೆಯವರು
ಹೇಮಾ ನೀನು ಊರಿಗೆ ಬಂದಾಗ ಫೋನ್ ಮಾಡು
ಆಯ್ತು ಮಿಸ್ . ಮಗು ಅಳುವ ಧ್ವನಿ ಕೇಳಿಸಿತು.
ಸರಿ ಈಗ ಮಗುವನ್ನು ನೋಡು ಹೇಮಾ ಎಂದು ಹೇಳಿ ವಿಜಯಾ ಫೋನಿಟ್ಟರು. ಆದರೂ ಹೇಮಾಳ ಗುಂಗು ಮನದಲ್ಲಿ ಉಳಿಯಿತು.
ಹೇಮಾ ವಿಜಯಾಳ ಶಿಷ್ಯೆ. ಅವಳು ಪ್ರೌಢಶಾಲೆಯಲ್ಲಿ
ಓದುತ್ತಿದ್ದ ಕಾಲದಿಂದಲೂ ಅವಳ ನಡೆನುಡಿಗಳು ಇಷ್ಟ
ಮಧ್ಯಮ ವರ್ಗಕ್ಕೆ ಸೇರಿದ ಹೇಮಾ ಚುರುಕು ಹುಡುಗಿ ಹೆತ್ತತಾಯಿಯಿಲ್ಲದೆ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದ
ಸಂಕೋಚ ಸ್ವಭಾವದ ಅವಳು ಓದಿನಲ್ಲಿ ಜಾಣೆ. ಒಮ್ಮೆ
ಅವರ ಅಜ್ಜಿ ಪೋಷಕರ ಸಭೆಗೆ ಬಂದಾಗ ಅವರ ಆಜ್ಜಿ
ಹೇಳಿದ್ದು ಅವರು ನೆನಪಿಗೆ ಬಂತು. ಅವಳ ತಾಯಿಯು
ಹೇಮಾಳ ತಮ್ಮನಿಗೆ ಜನ್ಟ ಕೊಟ್ಟ ನಂತರ ತೀರಿಕೊಂಡ
ದುರ್ದೈವಿ. ಹೆರಿಗೆಗಾಗಿ ತವರು ಮನೆಗೆ ಬಂದಿದ್ದರಿಂದ
ಮಕ್ಕಳು ಇಲ್ಲೇ ಉಳಿದವು. ಹೇಮಾಳ ತಂದೆಯ ತಾಯಿ
ತಂದೆಯರೂ ಇಲ್ಲದ ಕಾರಣ ಆ ಮಕ್ಕಳನ್ನು ಸಲಹಲು ಯಾರೂ ಮುಂದೆ ಬರಲಿಲ್ಲ. ಹೇಮಾಳ ತಾಯಿ ಒಬ್ಬಳೆ
ಪ್ರೀತಿಯ ಮಗಳಾದ್ದರಿಂದ ಅವಳ ಮಕ್ಕಳಿಬ್ಬರು ಅನಾಥ ತಬ್ಬಲಿಗಳಂತೆ ಬೆಳೆಯುವುದು ಬೇಡವೆಂದು ಮಕ್ಕಳನ್ನು
ತಾವೇ ಸಾಕಲು ನಿರ್ಧರಿಸಿದರು. ಹೇಮಾಳ ಇಬ್ಬರು
ಸೋದರ ಮಾವಂದಿರು ಸಹ ಒಪ್ಪಿದರು. ಉದ್ಯೋಗದ
ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಸಹಾ ತಾವು
ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೇಮಾಳ
ತಾತ ಚಿಕ್ಕ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮೊದಲಿಗೆ ಹೇಮಾಳ ತಂದೆಯು ತಿಂಗಳಿಗೊಮ್ಮೆ ಬರುತ್ತಿದ್ದವರು
ಎರಡನೆ ಮದುವೆಯಾದ ನಂತರ ಆರು ತಿಂಗಳಿಗೊಮ್ಮೆ
ಬಂದಾಗ ಮಕ್ಕಳಿಗೆ ಒಂದಿಷ್ಟು ಬಟ್ಟೆಗಳನ್ನು ಕೊಡಿಸಿ ಅವರ ಕೈಯಲ್ಲಿಷ್ಟು ಹಣ ಕೊಟ್ಟರೆ ತನ್ನ ಜವಾಬ್ದಾರಿಯು
ಮುಗಿಯಿತೆಂದು ಭಾವಿಸಿದ್ದ ಮಹಾನುಭಾವ. ತಾಯಿ
ಸತ್ತ ಮೇಲೆ ತಂದೆ ಚಿಕ್ಕಪ್ಪ ಎಂಬ ಗಾದೆಗೆ ತಕ್ಕಂತಿದ್ದರು.
ಮಗಳ ಮಕ್ಕಳು ಓದಿನಲ್ಲಿ ಮುಂದಿರುವುದು ಹೇಮಾಳ
ಅಜ್ಜಿ ತಾತನಿಗೆ ನೆಮ್ಮದಿ. ಹೇಮಾಳಂತೂ ಅವಳಮ್ಮನ ಪಡಿಯಚ್ಚು. ಮಗಳ ಸಾವಿನ ಸಂಕಟವನ್ನು ಇಬ್ಬರು ಮೊಮ್ಮಕ್ಕಳ ಆಟ ಪಾಠಗಳು ಮರೆಸಿದ್ದವು. ಇಬ್ಬರೂ ಸೋದರ ಮಾವಂದಿರಿಗೂ ತಂಗಿಯ ಮಕ್ಕಳನ್ನು ಕಂಡರೆ ಬಲು ಅಕ್ಕರೆ. ತನ್ನ ಪ್ರೀತಿಯ ಅಜ್ಜಿಯನ್ನು ಬಿಟ್ಟು ಒಂದು ದಿನವೂ ಇರಲಾರಳು ಹೇಮಾ. ಶಾಲೆಗೆ ರಜೆ ಬಂದಾಗ
ಮಾವಂದಿರು “ಬಾ ಪುಟ್ಟಿ ನಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಬರುವೆಯಂತೆ”ಎಂದು ಕರೆದರೆ ಅಜ್ಜಿ ಬಂದ್ರೆ ಮಾತ್ರ ಬರ್ತಿನಿ’ ಎಂದು ಮುದ್ದಾಗಿ ಹೇಳಿದರೆ ಅಜ್ಜಿಗೆ ಪ್ರೀತಿಯುಕ್ಕಿ ಬರಸೆಳೆದು ಮುತ್ತಿಡುತ್ತಿದ್ದರು. ಹೇಮಾಳಿಗೆ ತಮ್ಮನನ್ನು ಕಂಡರೆ ಬಲು ಪ್ರೀತಿ. ಯಾವುದನ್ನೇ ಆಗಲಿ ತಮ್ಮನೊಡನೆ ಹಂಚಿಕೊಂಡು ತಿಂದರೆ ಮಾತ್ರ ಅವಳಿಗೆ ಸಮಾಧಾನ. ಹೇಮಾಳ ಅಜ್ಮಿ ಹೇಳಿದ ಒಂದು ಪ್ರಸಂಗ
ನೆನಪಿಗೆ ಬಂತು. ಆ ಸಂಗತಿಯನ್ನು ಹೇಳುತ್ತಾ ಕಣ್ತುಂಬಿ
ಕೊಂಡಿದ್ದರು. ಒಮ್ಮೆ ಅವರ ಮನೆಯಿದ್ದ ಬೀದಿಯ ಮನೆ
ಒಂದರಲ್ಲಿ ನಡೆದಿದ್ದು. ಚಿಕ್ಕ ಮಗುವಿನ ತಾಯಿಯೊಬ್ಬಳು ಏನೋ ಖಾಯಿಲೆಯಿಂದ ತೀರಿಕೊಂಡಿದ್ದರು. ಅದನ್ನು
ಕಂಡ ಜನರು ಆ ತಬ್ಬಲಿ ಮಗುವಿನ ಬಗ್ಗೆ ಅನುಕಂಪದ
ಮಾತುಗಳನ್ನಾಡುವುದನ್ನು ಕೇಳಿದ ಹೇಮಾ ‘ಅಜ್ಜಿ ಆ
ಪಾಪುಗೆ ಇನ್ಮುಂದೆ ಎಷ್ಟು ಕಷ್ಟ ಆಗುತ್ತಲ್ವ ‘ಎಂದು ಕೇಳಿ
ಕಣ್ಣೀರು ಹಾಕಿದ್ದಳಂತೆ. ರಾತ್ರಿ ಮಲಗುವಾಗ ಅಜ್ಜಿಯನ್ನು ತಬ್ಬಿಕೊಂಡು ‘ಅಮ್ಮ ಇಲ್ಲದಿದ್ರೂ ನೀನು ನಮ್ಮನ್ನು ಸಾಕಿ ನೋಡಿಕೊಂಡಂಗೆ ಅವರಜ್ಜಿನೂ ಹಾಕ್ತಾರೆ ಅಲ್ವಾ ಅಜ್ಜಿ’ ಎಂದು ಕೇಳಿದ್ದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ನಾವಿಲ್ಲದಿದ್ರೆ ಈ ಮಕ್ಕಳ ಗತಿ ಏನಾಗ್ತಿತ್ತೋ ಎನ್ನುತ್ತಾ
ಸಂಕಟ ಪಟ್ಟಿದ್ದರು. ಅವರಿಬ್ಬರು ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ನೆಲೆ ಕಂಡರೆ ಸಾಕೆಂಬ ಹಾರೈಕೆ ಅವರದು ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರವೂ ಸಹ ಹೇಮಾ
ಆಗಾಗ್ಗೆ ವಿಜಯಾ ಟೀಚರ್ ಗೆ ಫೋನ್ ಮಾಡುವುದು ಹಾಗೂ ಸಲಹೆಗಳನ್ನು ಕೇಳುತ್ತಾ ಸಂಪರ್ಕದಲ್ಲಿದ್ದಳು . ಹೇಮಾ ಈಗ ಎರಡನೆ ವರ್ಷದ ಪದವಿ ಓದುತ್ತಿದ್ದಳು. ಅವಳ ತಮ್ಮ ಹತ್ತನೆ ತರಗತಿಯಲ್ಲಿದ್ದ. ಅಕ್ಕತಮ್ಮಂದಿರು ವಿಜಯಾ ಟೀಚರ್ ಶಿಷ್ಯರೆ. ಇತ್ತೀಚೆಗೆ ಅವಳು ಫೋನ್ ಮಾಡಿ ಮಾತನಾಡುತ್ತ ಅವರ ಅಜ್ಜಿಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ತಾನು ಅವರಿಗೆ ಈಗ ಮೊದಲಿಗಿಂತ ಹೆಚ್ಚು ಸಹಾಯ ಮಾಡುತ್ತಿರುವೆ ಎಂದು ಹೇಳಿ ತಮ್ಮನ ಓದಿನ ಬಗ್ಗೆ ವಿಚಾರಿಸುತ್ತಾ ತಾನೆ ಅವನಿಗೆ ಗಣಿತವನ್ನು ಹೇಳಿಕೊಡುತ್ತಿದ್ದೇನೆ ಎಂದಿದ್ದಳು. ವಾರದ ಹಿಂದೆ ಅವಳ ತಮ್ಮ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಏಕೆ ಎಂದು ಕೇಳಲು ಅವರ ತಾತ ಜಾರಿ ಬಿದ್ದು ಫ್ರಾಕ್ಚರ್ ಆಗಿದ್ದು ಹಾಸ್ಪಟಲ್ ಗೆ ಸೇರಿಸಿದ್ದರು. ಹಾಗಾಗಿ ಬರಲು ಆಗಲಿಲ್ಲ ಎಂದು ಹೇಳಿದ. ಹೇಮಾಳಿಗೆ ಫೋನ್ ಮಾಡಿ ಕೇಳಿದಾಗ ಈಗ ಮನೆಗೆ ಕರೆದುಕೊಂಡು ಬಂದಿದ್ದೇವೆ. ಮಾವಂದಿರೆ ಇಲ್ಲೇ ಇದ್ದು ಎಲ್ಲವನ್ನು ನೋಡುತ್ತಿದ್ದಾರೆ ಎಂದಳು. ಆವರ ತಾತ ಮನೆಯಿಂದ ಹೊರಗೆ ಎಲ್ಲೂ ಹೋಗದೆ ಮನೆಯ ಮಟ್ಟಿಗೆ ಓಡಾಡಿಕೊಂಡಿದ್ದರು. ಗಿರಣಿಯ ಮೇಲ್ವಿಚಾರಣೆ ನಡೆಸುವುದು ಕಷ್ಟವಾದರೂ ವಿಧಿಯಿರಲಿಲ್ಲ. ಆದರೂ ಅಜ್ಜಿಯ ಸಹಾಯದಿಂದ ಹೇಗೋ ನಿಭಾಯಿಸುತ್ತಿದ್ದರು. ಇತ್ತೀಚೆಗೆ ಹೇಮಾಳ ಮದುವೆಯ ಮಾತನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದರು.. ಇದರಿಂದ ಓದುವ ಆಸೆ ಬಲವಾಗಿ ಇಟ್ಟುಕೊಂಡಿದ್ದ ಹೇಮಳಿಗೆ ಆತಂಕವು ಶುರುವಾಯಿತು. ಕಾಲೇಜ್ ನ್ನು
ಮುಗಿಸಿ ಮನೆಗೆ ಹೋಗುವಾಗ ವಿಜಯಾ ಟೀಚರ್
ಮನೆಗೆ ಬಂದು ತಮ್ಮ ತಾತ ತನಗೆ ಮದುವೆ ಮಾಡಲು
ಆತುರ ಮಾಡುತ್ತಿದ್ದಾರೆಂದು ಹೇಳಿದಳು. ಇರಲಿ ಬಿಡು ಮದುವೆ ಎಂದು ಹೇಳಿದಾಕ್ಷಣ ಆಗುತ್ತಾ .ನೀನು ಮಾತ್ರ
ಚೆನ್ನಾಗಿ ಓದು ಎಂದು ಸಮಾಧಾನ ಹೇಳಿದರು.ವಿಜಯ
ಟೀಚರ್ ರಾತ್ರಿ ಊಟ ಮಾಡಿ ಅಡುಗೆಮನೆ ಕೆಲಸವನ್ನು ಮುಗಿಸಿ ವಾರ ಪತ್ರಿಕೆಯನ್ನು ಓದುತ್ತಿದ್ದಾಗ ಮೊಬೈಲ್ ರಿಂಗ್ ಆಯಿತು. ನೋಡಿದರೆ ಹೇಮಾಳದು. ಅತ್ತಲಿಂದ
“ಮೇಡಂ . . ಬಿಕ್ಕಿ ಬಿಕ್ಕಿ ಅಳುವ ಸದ್ದು. “ಹಲೋ, ಹೇಮ
. . . ಹಲೋ”ಎಂದರೆ ಮಾತಿಲ್ಲ ಸುಮ್ಮನೇ ಅಳುವುದು
ಹಾಗೇ ಫೋನ್ ಕಟ್ ಆಯ್ತು. ಹತ್ತು ನಿಮಿಷದ ನಂತರ
ಮತ್ತೆ ಫೋನ್. ಅವಳು ಫೋನ್ ಮಾಡುವಾಗ ಯಾರೊ
ಬಂದಿರಬೇಕು.ಅದಕ್ಕೆ ಫೋನ್ ಕಟ್ ಆಗಿದೆಯೆನಿಸಿತು.
ಮತ್ತೆ ಫೋನ್ ಬಂದಾಗ “ಹಲೋ ಹೇಮಾ,ಯಾಕಮ್ಮ ಏನಾಯ್ತು” ಮತ್ತೆ ಅಳು. ” ಹಲೋ,ಹೇಮಾ ನಾಳೆ ನಮ್ಮ ಮನೆಗೆ ಬಾ. ಅಳಬೇಡ ಸುಮ್ನೆ ಮಲಗು” ಎನ್ನುತ್ತಿದ್ದಂತೆ ಫೋನ್ ಕಟ್. ಮತ್ತೆ ಫೋನ್ ಬರಲಿಲ್ಲ. ಯಾರೋ ಪಕ್ಕದಲ್ಲಿರಬೇಕೆನ್ನಿಸಿತು ನಾನು ಫೋನ್ ಮಾಡಲಿಲ್ಲ.
ಮಾರನೆಯ ದಿನ ಭಾನುವಾರ ಸಂಜೆ ನಾಲ್ಕಕ್ಕೆ ಹೇಮಾ
ಬಂದಳು. ತುಂಬಾ ಡಲ್ ಆಗಿದ್ದಳು. ಕಾಫಿ ಕುಡಿಯುತ್ತಾ
ವಿಜಯಾ ಕೇಳಿದರು. “ಏನಾಯ್ತು ಹೇಳು ಹೇಮಾ”
ಮೇಡಂ, ತಿಂಗಳು ಹಿಂದೆ ನಮ್ಮ ತಾತನಿಗೆ ಲೋ ಬಿ.ಪಿ. ಆಗಿ ಮತ್ತೆ ಹಾಸ್ಪಿಟಲ್ ಗೆ ಸೇರಿಸಿದ್ವಿ. ಹಾಸ್ಪಿಟಲ್ ನಿಂದ
ಬಂದ ದಿನದಿಂದ ಒಂದೇ ಮಾತು ಮೇಡಂ ಹೇಮಾಳ ಮದುವೆ ಬೇಗ ಮಾಡ್ಬೇಕು. ನಾನು ಹೆಚ್ಚು ದಿನ ಬದುಕಲ್ಲ ನಾನಿರುವಾಗಲೇ ಅವಳಿಗೆ ಒಂದು ನೆಲೆ ಕಾಣಿಸಬೇಕು
ಅದೊಂದು ಜವಾಬ್ದಾರಿಮುಗಿದ್ರೆ ನೆಮ್ಮದಿಯಾಗಿ ಪ್ರಾಣ
ಬಿಡ್ತೀನಿ ಎಂದು ಹಠ ಮಾಡಿ ನಮ್ಮ ಮಾವಂದಿರನ್ನು ಒಪ್ಪಿಸಿದ್ದಾರೆ ನಂತರ ನಮ್ಮ ತಂದೆಗೂ ಫೋನ್ ಮಾಡಿ ವಿಷಯ ತಿಳಿಸಿ ಬರಲು ಹೇಳಿದ್ದಾರೆ. ಇನ್ನು ಒಂದೂವರೆ ವರ್ಷ ತಡೆದರೆ ನನ್ನ ಗ್ರಾಜುಯೇಷನ್ ಕಂಪ್ಲೀಟಾಗ್ತಿತ್ತು . ನನಗೆ ಈಗಲೆ ಮದುವೆ ಬೇಡ ಎಂದರೆ ನೀನಿನ್ನು ಚಿಕ್ಕ ಹುಡುಗಿ ಸುಮ್ನಿರಮ್ಮ ನಿನಗಿದೆಲ್ಲ ಅರ್ಥ ಆಗೋದಿಲ್ಲ ಎನ್ನುತ್ತಾರೆ..ಅಜ್ಜಿನೂ ಸಹಾ ನಿಮ್ಮ ತಾತ ಹೇಳಿದ ಹಾಗೆ ಕೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು ಅಂತಾರೆ .
ನನಗೇನಾದ್ರೂ ಹೆಚ್ಚು ಕಡಿಮೆ ಆದರೆ ನಿನ್ನನ್ನು ನೋಡಿ ಕೊಳ್ಳೋದು ಯಾರು? ನಿಮ್ಮಪ್ಪ ಬಂದು ಕರ್ಕೊಂಡು ಹೋಗಿ ನಿನ್ನನ್ನು ಸಾಕ್ತಾನಾ ಹೇಳು. ಆ ನಂಬಿಕೆ ನಿನಗೆ ಇದ್ಯಾ. ಒಂದು ವೇಳೆ ಕರೆದುಕೊಂಡು ಹೋದ್ರು ನಿನ್ನ ಸ್ಥಿತಿ ಎಷ್ಟರಮಟ್ಟಿಗೆ ಇರುತ್ತೆ ಅಂತ ಯೋಚನೆ ಮಾಡು ನಾವ್ಯಾರು ಶ್ರೀಮಂತರಲ್ಲ. ಅವರವರ ಸಂಸಾರಗಳೇ ಅವರಿಗೆ ಭಾರ ಆಗಿರೋ ಕಾಲದಲ್ಲಿ ನಿನ್ನನ್ನ ಒಂದು ನೆಲೆ ಮುಟ್ಟಿಸೋ ಜವಾಬ್ದಾರಿ ನನ್ನದು. ಅದನ್ನು ಮಾಡದಿದ್ರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ ಸಾಕಿ ಸಲಹಿದ್ದಕ್ಕೆ ಏನು ಪ್ರಯೋಜನ ? ನೀನೇ ಹೇಳು. ಇನ್ನು ನಿನ್ನ ತಮ್ಮ
ರಾಘು ಗಂಡು ಹುಡುಗ ಹೇಗೋ ಆಗುತ್ತೆ . ಅವನ ಬಗ್ಗೆ
ಯೋಚನೆ ಮಾಡ್ಬೇಡ. ಜಾಣ ಹುಡುಗ ಚೆನ್ನಾಗಿ ಓದ್ಬಿಟ್ಟು ಕೆಲಸಕ್ಕೆ ಸೇರಿದರೆ ಮುಗೀತು. ನಮಗೆ ನಿನ್ನದೆ ಚಿಂತೆ . ಈ ಮನೆ ಬಿಟ್ರೆ ನಿನಗೆ ಎಲ್ಲೂ ಸರಿಯಾದ ಜಾಗ ಇಲ್ಲಮ್ಮ.
ನೀನು ಚೆನ್ನಾಗಿದ್ರೆ ನಮಗೆ ನೆಮ್ಮದಿ ಎಂದು ಅಜ್ಜಿ ತಾತ
ಹೇಳ್ತಾರೆ ಮೇಡಂ ಎಂದು ಕಣ್ಣೀರುಹಾಕಿದಳು.ನೀವಾದ್ರು
ಒಂದು ಮಾತು ಹೇಳಿ ಮೇಡಂ. ನಾನು ಇನ್ನೂ ಓದ್ಬೇಕು ಮೇಡಂ. ನಾನು ಬಿ.ಇಡಿ. ಮಾಡೋ ಆಸೆಯಿದೆ. ಮದ್ವೆ ಆದ ಮೇಲೆ ಯಾರು ಓದಿಸ್ತಾರೆ ಮೇಡಂ. ಪ್ರೀತಿಯಿಂದ ಸಾಕಿದ ಅಜ್ಜಿ ತಾತನಿಗೆ ಹೇಗೆ ಹೇಳಿ ಒಪ್ಪಿಸಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳುತ್ತ ಬೇಸರ ಪಟ್ಟಳು. ಜಾಣೆ ಯಾಗಿದ್ದು ಅವಳಲ್ಲಿ ಓದುವ ಆಸೆ ಅದಮ್ಯವಾಗಿತ್ತು.
ಆದರೆ ಅವರ ಅಜ್ಜಿ ತಾತ ಹೇಳೋ ಮಾತಿನಲ್ಲಿ ಸತ್ಯಾಂಶ
ಇದ್ದಿದ್ದರಿಂದ” ಹೌದು ಹೇಮಾ ಅವರು ಹೇಳಿರುವುದೆಲ್ಲಾ ಸರಿಯಾಗಿದೆ. ಯೋಚನೆ ಮಾಡು. ನೀನು ಮದುವೆ ಆದ
ಮೇಲೆ ನಿನ್ನ ಗಂಡನನ್ನು ಒಪ್ಪಿಸಿ ಓದಬಹುದಲ್ವ. ನಿಮ್ಮ
ತಾತನಿಗೂ ಹೇಳು ಮದುವೆಯ ನಂತರವು ನೀನು ಓದು
ಮುಂದುವರಿಸಲು ಅವಕಾಶ ಕೊಡಿರಿ ಎಂದು ಕೇಳಲು.
ನೋಡೋಣ. ಇನ್ನೂ ಗಂಡು ಸಿಕ್ಕಿ ಮದುವೆಯಾಗುವ
ವೇಳೆಗೆ ಪದವಿಯ ಎರಡನೆ ವರ್ಷಮುಗಿಯುತ್ತೆ. ನೀನು
ಅಜ್ಜಿ ತಾತ ಹೇಳಿದಂತೆ ಕೇಳು. ಒಳ್ಳೆಯದಾಗುತ್ತೆ.ಓದಿನ
ಕಡೆ ಗಮನ ಕೊಡು ಎಂದು ಸಮಾಧಾನಪಡಿಸಿದರು.
ಮನೆಗೆ ಬಂದ ಹೇಮಾ ಆ ದಿನ ರಾತ್ರಿ ಮಲಗಿದ್ದ ತಾತನ ಕಾಲನ್ನು ಒತ್ತುತ್ತಾ ” ತಾತ, ನಾನೊಂದು ಮಾತು ಹೇಳ್ತಿನಿ
ಸಿಟ್ಟು ಮಾಡ್ಕೋಬಾರದು”ಎಂದಳು. ಅದೇನು ಹೇಳಮ್ಮ
ಎಂದಾಗ ” ಆಯ್ತು ತಾತ ಮದುವೆ ಆಗ್ತೀನಿ. ಮದುವೆ
ಸೆಟ್ ಆದರೆ ಮದುವೆ ಆದ ಮೇಲೆ ಒಂದು ವರ್ಷ ಓದಕ್ಕೆ
ಅವಕಾಶ ಕೊಟ್ರೆ ಡಿಗ್ರಿ ಆಗೋಗುತ್ತೆ ತಾತ.ಇದನ್ನು ನೀನು ಗಂಡಿನವರಿಗೆ ಹೇಳಿ ಒಪ್ಪಿಸು.” ಎಂದು ಕೇಳಿಕೊಂಡಾಗ ಅವಳಿಗೆ ನಿರಾಶೆ ಮಾಡಬಾರದೆಂದು ಯೋಚಿಸುತ್ತಲೆ “ಆಯ್ತು, ದೈವಿಚ್ಛೆ ಎಂಗಿದೆಯೋ ನೋಡೋಣ”ಎಂದರು ಆಗ ಅಜ್ಜಿಯು ಸಹಾ ಓದಕ್ಕೆ ಒಪ್ಪುವಂಥ ಗಂಡನೇ ನನ್ನ
ಮೊಮ್ಮಗಳಿಗೆ ಸಿಗಲಪ್ಪ ದೇವರೇ ಎಂದು ಮನಪೂರ್ವಕ ಕೇಳಿಕೊಂಡರು. ಮೊಮ್ಮಗಳಿಗೆ ಗಂಡು ನೋಡಲು ತಮ್ಮ
ಇಬ್ಬರುಗಂಡು ಮಕ್ಕಳಿಗೆ ಒತ್ತಾಯ ಮಾಡಿದಲ್ಲದೆ ತಾವೇ
ಹೇಮಾಳ ತಂದೆಗೆ ಫೋನ್ ಮಾಡಿ ಕರೆಸಿಕೊಂಡು ತಮ್ಮ
ಆರೋಗ್ಯ ಸರಿಯಿಲ್ಲದ್ದರಿಂದ ಆದಷ್ಟು ಬೇಗನೆ ಹೇಮಳ ಮದುವೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ
ಹೇಮಾಳ ತಂದೆ ನೀವು ಮಕ್ಕಳನ್ನು ಸಾಕಿ ಬೆಳೆಸಿದ್ದೀರಿ.
ನಿಮ್ಮಿಷ್ಟದಂತೆ ಆಗಲಿ. ನನ್ನ ಮಕ್ಕಳನ್ನು ಸಾಕಿ ಬೆಳೆಸಿ ದೊಡ್ಡ ಉಪಕಾರ ಮಾಡಿರುವಿರಿ. ನಾನೂ ಸಹಾ ನನ್ನ ಕೈಲಾದಷ್ಟು ಹಣದ ಸಹಾಯ ಮಾಡುವೆ. ಗಂಡು ನೋಡಿ ಮದುವೆ ನಿಶ್ಚಯಿಸಿ. ನನಗೆ ತಿಳಿದಿರುವ ಕಡೆಯಲ್ಲಿ ಹೇಳಿ
ನೋಡುತ್ತೇನೆ ಎಂದು ಹೇಳುವ ಮೂಲಕ ಮದುವೆಯ
ಎಲ್ಲಾ ಜವಾಬ್ದಾರಿಯನ್ನು ಹೇಮಾಳ ತಾತನ ಹೆಗಲಿಗೇ
ವರ್ಗಾಯಿಸಿದರು. ಅವರಿಂದ ಯಾರು ಸಹ ಯಾವುದರ ನಿರೀಕ್ಷೆಯನ್ನೂ ಇಟ್ಕೊಂಡಿರಲಿಲ್ಲ. ಗಂಡುಗಳ ಕುರಿತಾದ ಮಾತುಕತೆಗಳು, ಜಾತಕಗಳ ಪ್ರಸ್ತಾಪಗಳ ನಡುವೆಯೇ
ಒಂದೆರಡು ಗಂಡುಗಳು ಬಂದು ನೋಡಿ ಹೋದರೂ
ದುಡ್ಡು ಕಾಸಿನ ವಿಚಾರವಾಗಿ ಹೊಂದಾಣಿಕೆಯಾಗದೆ ನಿಂತು ಹೋಗುತ್ತಿತ್ತು. ಅವಳನ್ನು ನೋಡಲು ಬಂದಂಥ
ಮೂರನೆ ಗಂಡೇ ಮಂಜುನಾಥ.ಅವನು ಹೇಮಾಳನ್ನು ನೋಡಿ ಒಪ್ಪಿ ಯಾವುದೇ ದುಡ್ಡುಕಾಸು ಕೇಳದೆ ಮದುವೆ
ಆಗಲು ಒಪ್ಪಿದ್ದನು. ಅವನು B.Sc. ಪದವೀಧರನಾಗಿದ್ದ. ಐದೆಕರೆ ಅಡಿಕೆ ತೋಟವಿದ್ದು ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದರು. ಈಗಿನ ಕಾಲಕ್ಕೆ ತಕ್ಕಂತೆ ಒಂದು ಹೊಸ ಮನೆಯನ್ನು ಕಟ್ಟಿದ್ದರು.ಅವನ ತಂದೆ ಮೂರು ವರ್ಷದ ಹಿಂದೆ ತೀರಿಕೊಂಡಿದ್ದರು. ಇದ್ದ ಒಬ್ಬಳೇ ಮಗಳಿಗಾಗಲೇ ಮದುವೆಯಾಗಿದೆ. ಮಂಜುನಾಥ ಒಬ್ಬನೇ ಮಗ.ಅವನೆ ಅಂಗಡಿ ಹಾಗೂ ತೋಟವನ್ನು ನೋಡಿ ಕೊಳ್ಳುತ್ತಿದ್ದನು.
ಅಂತಿಮವಾಗಿ ಮಾತುಕತೆಯ ಕೊನೆಯಲ್ಲಿ ಹೇಮಾಳ
ತಾತ ಕೇಳುವುದೆ ಅಥವಾ ಬೇಡವೇ ಎಂಬ ಯೋಚನೆ ಮಾಡುತ್ತಾ ತಾಯಿಲ್ಲದ ಹುಡುಗಿಗೊಂದು ಆಸೆ. ನೀವು
ಮನಸ್ಸು ಮಾಡಿದ್ರೆ ದೊಡ್ಡದೇನೊ ಅಲ್ಲ.ಹೇಗೂ ಮದ್ವೆ
ವೇಳೆಗೆ ಎರಡನೆ ವರ್ಷದ ಪರೀಕ್ಷೆ ಮುಗಿದಿರುತ್ತೆ. ನಂತರ
ನೀವು ದೊಡ್ಡ ಮನಸ್ಸು ಮಾಡಿ ಒಂದು ವರ್ಷ ಅವಳಿಗೆ ಓದಕ್ಕೆ ಅವಕಾಶ ಮಾಡಿಕೊಡಿರಿ ಎಂದು ಕೇಳಿಕೊಂಡರು
ಆಗ ತಾಯಿ ಮಗ ಇಬ್ಬರೂ ಹೊರಗಡೆ ಹೋಗಿ ಸ್ವಲ್ಪ
ಹೊತ್ತು ಮಾತಾಡಿ ಕೊಂಡು ಬರಲು ಹೋದರು. ತಾತ
ಮಾತ್ರ ಅವರು ಇದಕ್ಕೆ ಒಪ್ಪದಿದ್ದರೂ ಸಹಾ ಇಂತಹ
ಒಳ್ಳೆಯ ಸಂಬಂಧ ಬಿಟ್ಟುಕೊಡಲು ತಯಾರಿಲ್ಲವೆಂದು
ಅವರ ಮನಸ್ಥಿತಿಯೇ ಹೇಳುತ್ತಿತ್ತು. ಆದರೆ ಹೇಮಾಳು
ಮಾತ್ರ ಗಂಡಿನವರು ಒಪ್ಪುವಂತೆ ಮಾಡಪ್ಪ ದೇವರೇ
ಎಂದು ದೇವರಲ್ಲಿ ಕೇಳಿಕೊಂಡಿದ್ದೆ ಆಯ್ತು. ಗಂಡಿನ ತಾಯಿಯು ಆಯ್ತು ತಮ್ಮದೇನೂ ಅಭ್ಯಂತರವಿಲ್ಲ ಎಂದ ತಕ್ಷಣ ಆ ಖುಷಿಯಲ್ಲಿ ಹೇಮಾಳಿಗೇ ಕಣ್ಣಲ್ಲಿ ನೀರೇ ಬಂದುಬಿಡ್ತು. ಎಲ್ಲವೂ ಅಂದುಕೊಂಡಂತೆಯೇ ಹೂವೆತ್ತಿದಂತೆ ಸರಾಗವಾಗಿ ಆಯ್ತೆಂದು ಅಜ್ಜಿ ತಾತ ಹಾಗೂ ಮಾವಂದಿರಂತು ತುಂಬಾ ಖುಷಿ ಪಟ್ಟರು. ಆ
ವಿಷಯ ತಿಳಿಸಲು ಹೇಮಾ ವಿಜಯಾ ಟೀಚರ್ ಮನೆಗೆ ಬಂದಾಗ ಅವಳ ಮುಖದಲ್ಲಿ ಉಲ್ಲಾಸ ತುಳುಕುತ್ತಿತ್ತು ಒಳಗೆ ಬಂದ ತಕ್ಷಣ “ಮೇಡಂ ಸ್ಟೀಟ್ಸ್ ತಗೊಳಿ” ಎಂದು ನಂದಿನಿ ಫೇಡ ಬಾಕ್ಸ್ ಕೊಟ್ಟಳು. “ಯಾಕಮ್ಮಸ್ವೀಟ್ಸ್”
ಎಂದಾಗ ಮುಖವರಳಿಸುತ್ತ “ನನ್ನ ಮದ್ವೆ ಫಿಕ್ಸ್ ಆಯ್ತು
ಮೇಡಂ”ಎಂದು ನಾಚಿದಳು. “ಮದ್ವೆನೇ ಬೇಡ ಅಂತಿದ್ದೆ
ಈಗ ನೋಡು ಎಷ್ಟು ನಾಚ್ಕೆ” ಇಲ್ಲಾ ಮೇಡಂ, ನೀವು ಹೇಳಿದ ಹಾಗೆ ಅವರು ಮದ್ವೆ ಆದ ಮೇಲೆ ಒಂದು ವರ್ಷ
ಓದಕ್ಕೆ ಒಪ್ಕೊಂಡ್ರು ಮಿಸ್. ಅದಕ್ಕೆ ನಂಗೆ ಖುಷಿ ಆಗಿದೆ
ಎಂದಾಗ ನನಗೂ ಖುಷಿ ಆಯ್ತು ದೇವರು ಒಳ್ಳೇದು ಮಾಡಲಿ ಎಂದು ವಿಜಯ ಮೇಡಂ ಹಾರೈಸಿದರು. ಆಗ ಮೊಬೈಲ್ನಲ್ಲಿದ್ದ ಅವಳ ಹುಡುಗನ ಪೋಟೋ ತೋರಿಸಿ ಖುಷಿ ಪಟ್ಟಳು. ಹುಡುಗ ಲಕ್ಷಣವಾಗಿದ್ದ. ಹೇಮಾಳ ತಾಯಿಯ ಒಡವೆಗಳೊಂದಿಗೆ ಹೊಸದಾಗಿ ಅಜ್ಜಿತಾತ ನಕ್ಲೇಸ್ ಮಾಡಿಸುತ್ತಿದ್ದಾರೆಂದೂ ಹೇಮಾಳ ತಂದೆಯೂ ಈಗಲೂ ಹಣದ ಸಹಾಯ ಮಾಡಿಲ್ಲ ಎಂದೂ ಬೇಸರ ಪಟ್ಟುಕೊಂಡಳು. ಅವಳ ಮಾವಂದಿರು ಸಹ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದಳು. “ಬಿಡು ಅದನ್ನೆಲ್ಲಾ ಚಿಂತೆ ಮಾಡದೆ ಖುಷಿಯಾಗಿರು” ಎಂದು ಸಮಾಧಾನ ಹೇಳಿದಾಗ ಮದುವೆಗೆ ಖಂಡಿತ ಬರಬೇಕು ಎಂದು ಹೇಳಿ ಹೊರಟಳು. ತಂದೆಯಿದ್ದು ಇಲ್ಲದಂತಿರುವ ತಾಯಿಲ್ಲದ ಈ ಹುಡುಗಿ ಸದಾ ಖುಷಿಯಾಗಿರುವಂತಹ ಬಾಳನ್ನೇ ಕೊಡಪ್ಪಾ ಎಂದು ದೇವರಲ್ಲಿ ವಿಜಯಾ ಟೀಚರ್ ಕೇಳಿ
ಕೇಳಿಕೊಂಡರು. ಅವಳ ಮದುವೆಗೆ ಹೋದಾಗ ಅವಳು
ಅಜ್ಜಿ ಬೇಡವೆಂದರೂ ಬಲವಂತ ಮಾಡಿ ಸೀರೆಯ ಜೊತೆ
ಮದ್ವೆ ತಿಂಡಿಗಳನ್ನು ಕೊಟ್ಟಾಗ ಅವರ ಪ್ರೀತಿಗೆ ಮಣಿಯ
ಬೇಕಾಯಿತು. ಅಜ್ಜಿಯ ಮನೆಯಲ್ಲಿದ್ದುಕೊಂಡೆ ಕೊನೆ
ವರ್ಷದ ಪದವಿಯನ್ನು ಉತ್ತಮ ಅಂಕಗಳನ್ನು ಪಡೆದು
ಉತ್ತೀರ್ಣಳಾದದ್ದು ಎಲ್ಲರಿಗೂ ಖುಷಿ ತಂದಿತ್ತು. ಗಂಡನ
ಮನೆಗೆ ಹೋದ ಮೇಲೂ ಅಂಚೆ ಶಿಕ್ಷಣದ ಮೂಲಕವೇ
ಓದಿ M.Sc.ಯನ್ನುಮುಗಿಸಿದಳು. ಗಂಡು ಮಗುವಿನ
ತಾಯಿಯಾಗಿರುವ ಹೇಮಾ ಸಂತೃಪ್ತ ಗೃಹಿಣಿ
********************