ಕವಿತೆ
ನೆನಪು
ಡಾ. ರೇಣುಕಾ ಅರುಣ ಕಠಾರಿ
ಮಾಸಿ ಹೋದ ಕಾಗದ
ಅದರ ಮೇಲೆ ಅಪ್ಪ ಬರೆದಿದ್ದ ಅಕ್ಷರ
ಮಡಿಕೆಗಳ ತವರೂರೆ ಆಗಿ ನಿಂತಿತ್ತು.
ಏಷ್ಟೋ ಅಕ್ಷರಗಳು ಆ ಮಡಿಚಿಟ್ಟ ರೇಖೆಯೊಳಗೆ
ಸೇರಿಕೊಂಡು ಕಾಣಲು ಕಾಡಿಸುತ್ತಿದ್ದವು.
ಎನು ಬರೆದಿರಬಹುದು! ಇದರಲ್ಲಿ ಎಂಬ
ಕುತೂಹಲ ಮತ್ತು ತವಕ ಹೆಚ್ಚಾದವು.
ಉಬ್ಬಿದ ಕಾಗದ ಅಲ್ಲಿ ಅಲ್ಲಿ ಚಲ್ಲಿದ ಶಾಹಿ
ಅದರ ಬಣ್ಣೋ ವಿಕಾರಕ್ಕೆ ತಿರುಗಿತ್ತು
ಅಕ್ಷರಗಳಿಗೆ ಸ್ವಲ್ಪವೂ ನಗು ಇರಲಿಲ್ಲ
ಕೆಳಗಿಂದ ಮೇಲೆಕ್ಕೆ
ಮತ್ತು ಮೇಲ್ಲಿಂದ ಕೆಳಕ್ಕೆ
ಏನೋ ಸಣ್ಣ ಸಣ್ಣ ಸಂಕೇತಗಳು
ಅಯೋ! ಒಂದು ತಿಳಿತಿಲ್ವಾಲ್ಲ ?
ಅಂತ
ಹಿಂದೆ ಮುಂದೆ ಕಾಗದದ ಅಕ್ಕ ಪಕ್ಕ
ನೋಡುತ್ತಿದ್ದಾಗ,..
ಜೋಪಾನವೇ ತುಂಡಾಗಿತು
ಎಂದು ಮೃದು ಮನಸಿನ ಮೆಲು ದನಿ
ನನ್ನನ್ನು ಥಟ್ಟ ಅಂತ ಎಚ್ಚರ ಮಾಡಿತು.
ನನ್ನ ಪಾಲಿಗೆ ನೆನಪಾಗಿ ಇವತ್ತಿನವರೆಗೂ
ಉಳಿದಿರುವುದು ಅದೊಂದೆ!
ಅಂದ್ಲೂ ಅಜ್ಜಿ
ನೆನಪು ಹೀಗೆ ಅಲ್ವವೇ?
ಯಾವಾಗಲಾದರೂ, ಎಲ್ಲಿಯಾದರೂ
ಯಾರಲ್ಲಾದರೂ
ಮತ್ತೆ ಮತ್ತೆ
ಕಣ್ಮಂದೆ ಮಾಸದೆ ಬಂದು ನಿಲ್ಲುತ್ತವೆ.
ಸರಿ ಅಜ್ಜಿ ಎಂದು ಉತ್ತರಿಸಿದೆ.
ಆದರೆ,.
ಆ ಕಾಗದದಲ್ಲಿ ಏನಿದೆ
ಎಂಬ ವಿಚಾರ ಮಾತ್ರ ನನಗೆ ತಿಳಿಯಲಿಲ್ಲ?
ನನ್ನ ಮನಸಿನ ಕಣ್ಣಿಗೆ ಮಾತ್ರ ಕಾಣಲಿಲ್ಲವೋ?
ನನ್ನ ಅರಿವುಗೆ ಬರಲಿಲ್ಲವೋ?
ಗೊತ್ತಾಗಲಿಲ್ಲ.
ನಿನ್ನ ಅಪ್ಪನ ಕೊನೆಯ ಕಾಗದವಿದು
ನನಗೆ ಕಳಸುವ ಮುನ್ನವೇ ಅವನು ಹೊರಟ.
ಯುಗ ಉರಳಿದರು ನನಗೆ ಇದು
ಇವತ್ತಿಗೂ ಹೊಸ ಕಾಗದ.
ಅಕ್ಷರ ಮಾಸಿರಬಹುದು,
ಶಾಹಿ ತನ್ನ ಬಣ್ಣ ಕಳದುಕೊಂಡಿರಬಹುದು
ಆದರೆ,
ಅವನು ಬರೆದಿರುವ ಒಂದೊಂದು ಪದವು
ಚೈತನ್ಯ ನೀಡುತಿವೆ, ಮತ್ತೆ ಮತ್ತೆ
ನನ್ನ ಮಡಿಲಲ್ಲ ಜೋಗುಳದ ಲಾಲಿ
ಮರುಕಳಿಸುತ್ತೆ
ನನ್ನ ಆ ತಾಯಿತನ ಜೀವಂತವಾಗುವುದು
ಆ ಪದಗಳ ಸ್ಪರ್ಶದಿಂದ ಆದರೆ,
ನಾನ ಮಾತ್ರ ಅಮೃತಳಾಗಿಹೆನು
***************************************.