Month: July 2020

ಸ್ವಾತ್ಮಗತ

ಸುಭಾಷ್ ಪಾಳೇಕರರ ‘ಸಹಜ ಕೃಷಿ ಪದ್ದತಿ’ಯೂ..! ಮೈಸೂರಿನ ಆರ್.ಸ್ವಾಮಿ.ಆನಂದರ ‘ಸುಭಾಷ್ ಪಾಳೇಕರರ ಸಹಜ ಕೃಷಿ’ ಪುಸ್ತಕವೂ.!! ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ’ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. […]

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ ಪ್ರಜ್ಞಾ ಮತ್ತಿಹಳ್ಳಿ            ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ   ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ ಕಾಣುತ್ತಿದ್ದವು. ಹಕ್ಕಿಯೊಂದು ಮೊಟ್ಟೆಯಿಡಲು ಮರದ ಕಾಂಡದಲ್ಲಿ ಹುಡುಕಿಕೊಂಡ ಡೊಗರಿನ ಹಾಗೆ ಎಲುಬುಗಳ ನಡುವೆ ಖಾಲಿ ಜಾಗ ಎದ್ದು ಕಾಣುತ್ತಿತ್ತು.  ಬದುಕಿನ ನಲವತ್ತು ವರ್ಷ ಜೊತೆಗಿದ್ದ ಅಸ್ತಮಾ ಅವಳ ಉಸಿರಾಟದ ರೀತಿಯನ್ನೇ […]

ಜುಮುರು ಮಳೆ

ಫಾಲ್ಗುಣ ಗೌಡ ಅಚವೆ. ನಿನ್ನ ಕೆನ್ನೆ ಹೊಳಪಿಗೆಮೋಡನಕ್ಕಿತು ಬೆಳ್ಳಕ್ಕಿಗಳುದಂಡೆಗೆ ಬಂದುಪಟ್ಟಾಂಗಹೊಡೆದಿವೆ.! ಮಗು ಎದ್ದುನಕ್ಕಾಗಬೆಳಕಾಯಿ ದಿನವಿಡೀ ನಕ್ಕಹೂ ಬಾಡಿಮೊಗ್ಗಾಯಿತು ಮಣ್ಣ ಗಂಧಕುಡಿದುಮಿಂಚಿದೆನೆಲ ಸಂಪಿಗೆ ಬಾಡುವಹಂಗಿಲ್ಲದಗುಲ್ ಮೋಹರ್ಮನಮೋಹಕ! ನಿನ್ನ ತುಟಿಯಲ್ಲಿನಕ್ಕ ಮಳೆನನ್ನ ಕಣ್ಣಲ್ಲಿಹೊಳೆ! ಇಡೀ ರಾತ್ರಿಮೋಡನಿನ್ನ ಮನೆಸುತ್ತುತ್ತಿದ ನಿನ್ನ ಹಾಡುಕೇಳಲುಬೆಳದಿಂಗಳುಕಾದಿದ ನಿನ್ನ ಹುಬ್ಬಿಗೆನಾಚಿದೆಮಳೆಬಿಲ್ಲು ಮುಳ್ಳುಮರೆಮಾಚಿಗುಲಾಬಿನಿನಗೆ ಕಳಿಸಿದೆ ಲಂಗರುತಗೆದ ಹಡಗುದಂಡೆಯಲ್ಲಿಹೊರಟಿದೆ!

ಜೈಲು ಶಿಕ್ಷೆ

ಅನುವಾದಿತ ಕವಿತೆ ವಿಯೆಟ್ನಾ೦ ಮೂಲ: ಹೋ ಚಿ ಮಿನ್ ಇ೦ಗ್ಲಿಶ್ ನಿ೦ದ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (೧೯೪೫ ರಿ೦ದ ೧೯೬೯ ರ ವರೆಗೆ ವಿಯೆಟ್ನಾ೦ ನ ಜನಪ್ರಿಯ ಅಧ್ಯಕ್ಷರಾಗಿದ್ದ ಹೊ ಚಿ ಮಿನ್ ವಿಯೆಟ್ನಾ೦ ನ ಸ್ವಾಯತ್ತತೆಗಾಗಿ ಹೋರಾಡಿದ ಧುರೀಣ. ಚೀನಾ ದೊ೦ದಿಗೆ ವಿಯೆಟ್ನಾ೦ ಬಗ್ಗೆ ಮಾತು ಕತೆ ಗಾಗಿ ಬ೦ದ ಹೊ ಚಿ ಮಿನ್ ರನ್ನು ಚೀನಾ ಸರ್ಕಾರ ೨೯ – ೦೮ – ೧೯೪೨ ರ೦ದು ಗೂಢ ಚರ್ಯೆಯ ಆರೋಪದ ಮೆಲೆ ಬ೦ಧಿಸಿ ೧೦-೦೯- […]

ಭಾವ ಚಿತ್ರ

ಶಾಂತಾ ಕುಂಟಿನಿ ಮೇಲಿನಿಂದ ನೋಡಿದರೇತಿಳಿದೀತೇ ಅವಗುಣವೂಕೆಳಗಿಳಿದು ನೋಡಿದಾಗಒಳಗೆಲ್ಲ ಅಪಸ್ವರವೂ//೧// ಹೊರಗೆಲ್ಲಾ ನಗುಮೊಗವುಒಳಗೆಲ್ಲಾ ಬೈಗುಳವೂಅರಿತಾಗಲೆ ಮನಸುಗಳಆಂತರ್ಯ ಕಾಣುವವೂ// ಕಣ್ಣಿದ್ದರು ಕುರುಡರಂತೆನಮ್ಮದೆಲ್ಲ ವರ್ತನೆಯೂಇದು ಎಲ್ಲವು ನಮಗೇಕೆಅನ್ನುಂತಹ ಶೈಲಿಯೂ ನಿರ್ಮಲದ ಮನಸುಗಳಹುಡುಕಾಟವು ದುರ್ಲಭವುಏನಿದ್ದರು ಇಲ್ಲಿ ಎಲ್ಲವುಹೊಳಹುಗಳೇ ತೇಲಿದವು// ************* ಅದೆ ಸತ್ಯ ಎಂದಂದೂನಂಬಿರುವಾ ಜನರಿರಹರೂಪರದೆಯನು ನೀ ಸರಿಸಲುಕಂಡಿಹುದೇ ಕೆಸರೂ// ನಾಟಕವನೆ ಮಾಡುತಲೀವೇಷವನ್ನೇ ತೊಡುವರೂನಂಬಿ ನೀನು ಹೋದರಲ್ಲಿಹಳ್ಳವನೇ ತೋಡುವರೂ//

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ […]

ಗಝಲ್

ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ‌‌ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ […]

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

ಅನುಭವ ಕಥನ ಕಾಡಿನಲ್ಲಿ ಓದು ವಿಜಯಶ್ರೀ ಹಾಲಾಡಿ  ವಿಜಿ ಮತ್ತು ಅವಳಂತಹ ಆಗಿನ ಕಾಲದ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದುಬಿದ್ದು ಓದುವುದೆಲ್ಲ ಏನೂ  ಇರಲಿಲ್ಲ. ಮನೆಕೆಲಸ, ಆಟ, ಹಾಡಿ-ಗುಡ್ಡಗಳ ಸುತ್ತಾಟ,   ಎಲ್ಲದರ ನಡುವೆ ಶಾಲೆಗೂ ಹೋಗಿಬರುತ್ತಿದ್ದರು!  ಪರೀಕ್ಷೆ ಬಂದಾಗ ಅಲ್ಪಸ್ವಲ್ಪ ಓದಿಕೊಳ್ಳುತ್ತಿದ್ದರು. ಹಾಗಂತ ಶಾಲೆಗೆ ಹೋಗುವುದು ಅವರಿಗೆ ಸುಲಭವೇನೂ ಆಗಿರಲಿಲ್ಲ.  ಗದ್ದೆ, ತೋಡು, ಕಾಡುಗಳಲ್ಲಿ ಮೈಲಿಗಟ್ಟಲೆ ನಡೆದು ಹೋಗಿಬರಬೇಕಿತ್ತು . ಆದರೆ ‘ಓದಿ ಓದಿ’ ಎಂದು ಶಾಲೆಯಲ್ಲೂ ಮನೆಯಲ್ಲೂ ಯಾರೂ ಅವರ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಮನಸ್ಸಾದರೆ […]

ಮನುಜ ಮತ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಲ್ಲ ಬೇಕಿದೆ ಕ್ಷಣ ಕ್ಷಣಕ್ಷಣಕೂಹೊಸ ಅವತಾರದಿದಂದ ಮರಳುಮಾಡುವಹನಿ ವಿಷಕೂ ಹೆಣದ ಹೊಳೆಹರಿಸುವಅಂತರಂಗದ ಯುದ್ದವ ನೆಡ ಬೇಕಿದ ಮಾನವೀಯತೆ ಸಸಿಯಬೆಳಸಿ ಉಳಿಸ ಬೇಕಿದೆ ಮನದರಹದಾರಿಯತುಂಬಾ ಪ್ರೀತಿಯನೆರಳ ಪಡೆಯಲು ಬದುಕಿನಲ್ಲಿ ಒತ್ತರಿಸಿ ಬರುವ ದುಃಖ ವ ಹತ್ತಿಕುವಬದಲು ಒರೆಸುವ ನೊಂದ ಕಣ್ಣುಗಳನುಮರೆಯುವ ನಮ್ಮೊಡಲ ಬೇನೆಯನುನಿಸ್ವಾರ್ಥ ದ ತೊಡೆತಟ್ಟಿ ಆಖಾಡಕೆಇಳಿಯುವ “ನಾನು “ಎಂಬ ಅಹಂಗೆಲ್ಲುತ ಸಾಗುವ ಬಾಳ ಪಯಣವ ಊರು ಯಾವುದಾದರೇನು ದಾರಿಯಾವುದಾದರೇನು ನಾನು ನನ್ನೋಳಗೆ ಇರುವ ನೀವು ಒಂದೇ ಅಲ್ಲವೇನು?ನಾಲಿಗೆಯ ಬಂದೂಕು ಮಾಡಿಬದುಕಿದರೆ ಮನುಷ್ಯ ತ್ವ ಉಳಿಯುವದೇನು? […]

ಗಝಲ್

ಗಝಲ್ ನೂರ್ ಸಾಘರ್ ಹಾದಿಗಳಿಂದ ಹಾದಿಗಳು ಹಾಯಿದಷ್ಟು ಕೈಮರಗಳಿವೆ ಇಲ್ಲಿ ಸಖಿಬೀದಿಗಳಿಂದ ಬೀದಿಗೆ ಬದುಕುಗಳು ಬೆತ್ತಲಾಗಿವೆ ಇಲ್ಲಿ ಸಖಿ ಜಗದ ಒಡಲು ಮನದ ಕಡಲುತಟ್ಟದಿದ್ದರೂ ಮುಟ್ಟದಿದ್ದರೂ ಔರ್ವ ಸ್ಪರ್ಶದಲೆಗಳಿವೆ ಇಲ್ಲಿ ಸಖಿ ಒಂದೇ ಒಂದು ಮಾತಿನ ಶಬ್ದಗಳು ಬಯಲಲಿ ಬಯಲಾಯಿತುಅರಿತು ಅರಿಯದ ಮರೆತು ಮರೆಯದ ಪುರಾವೆಗಳಿವೆ ಇಲ್ಲಿ ಸಖಿ ಬಾಳು ಬಿಕ್ಕಳಿಕೆಯ ಕಥೆಗಳಿವೆ ನೂರಾರು ಅನಾಥದ್ದು ಅನಾತ್ಮದ್ದು ಇನ್ನು…ತಡೆದರೂ ತಡೆಯದ ಪಡೆದರೂ ಪಡೆಯದ ನೋವುಗಳಿವೆ ಇಲ್ಲಿ ಸಖಿ ಕದವಿಲ್ಲದ ಎದೆಯನು ಪದಗಳಿಂದ ಆವರಿಸಲಾಗದುತಬಿದ ತಬ್ಬದ ಬಾಹುಗಳನು ಕಲ್ಪಿಸಲು […]

Back To Top