ಗಝಲ್

ಗಝಲ್

ನೂರ್ ಸಾಘರ್

ಹಾದಿಗಳಿಂದ ಹಾದಿಗಳು ಹಾಯಿದಷ್ಟು ಕೈಮರಗಳಿವೆ ಇಲ್ಲಿ ಸಖಿ
ಬೀದಿಗಳಿಂದ ಬೀದಿಗೆ ಬದುಕುಗಳು ಬೆತ್ತಲಾಗಿವೆ ಇಲ್ಲಿ ಸಖಿ

ಜಗದ ಒಡಲು ಮನದ ಕಡಲು
ತಟ್ಟದಿದ್ದರೂ ಮುಟ್ಟದಿದ್ದರೂ ಔರ್ವ ಸ್ಪರ್ಶದಲೆಗಳಿವೆ ಇಲ್ಲಿ ಸಖಿ

ಒಂದೇ ಒಂದು ಮಾತಿನ ಶಬ್ದಗಳು ಬಯಲಲಿ ಬಯಲಾಯಿತು
ಅರಿತು ಅರಿಯದ ಮರೆತು ಮರೆಯದ ಪುರಾವೆಗಳಿವೆ ಇಲ್ಲಿ ಸಖಿ

ಬಾಳು ಬಿಕ್ಕಳಿಕೆಯ ಕಥೆಗಳಿವೆ ನೂರಾರು ಅನಾಥದ್ದು ಅನಾತ್ಮದ್ದು ಇನ್ನು…
ತಡೆದರೂ ತಡೆಯದ ಪಡೆದರೂ ಪಡೆಯದ ನೋವುಗಳಿವೆ ಇಲ್ಲಿ ಸಖಿ

ಕದವಿಲ್ಲದ ಎದೆಯನು ಪದಗಳಿಂದ ಆವರಿಸಲಾಗದು
ತಬಿದ ತಬ್ಬದ ಬಾಹುಗಳನು ಕಲ್ಪಿಸಲು ಖಾಲಿ ಕನಸುಗಳಿವೆ ಇಲ್ಲಿ ಸಖಿ

*************

4 thoughts on “ಗಝಲ್

Leave a Reply

Back To Top