ಶಾಂತಾ ಕುಂಟಿನಿ
ಮೇಲಿನಿಂದ ನೋಡಿದರೇ
ತಿಳಿದೀತೇ ಅವಗುಣವೂ
ಕೆಳಗಿಳಿದು ನೋಡಿದಾಗ
ಒಳಗೆಲ್ಲ ಅಪಸ್ವರವೂ//೧//
ಹೊರಗೆಲ್ಲಾ ನಗುಮೊಗವು
ಒಳಗೆಲ್ಲಾ ಬೈಗುಳವೂ
ಅರಿತಾಗಲೆ ಮನಸುಗಳ
ಆಂತರ್ಯ ಕಾಣುವವೂ//
ಕಣ್ಣಿದ್ದರು ಕುರುಡರಂತೆ
ನಮ್ಮದೆಲ್ಲ ವರ್ತನೆಯೂ
ಇದು ಎಲ್ಲವು ನಮಗೇಕೆ
ಅನ್ನುಂತಹ ಶೈಲಿಯೂ
ನಿರ್ಮಲದ ಮನಸುಗಳ
ಹುಡುಕಾಟವು ದುರ್ಲಭವು
ಏನಿದ್ದರು ಇಲ್ಲಿ ಎಲ್ಲವು
ಹೊಳಹುಗಳೇ ತೇಲಿದವು//
*************
ಅದೆ ಸತ್ಯ ಎಂದಂದೂ
ನಂಬಿರುವಾ ಜನರಿರಹರೂ
ಪರದೆಯನು ನೀ ಸರಿಸಲು
ಕಂಡಿಹುದೇ ಕೆಸರೂ//
ನಾಟಕವನೆ ಮಾಡುತಲೀ
ವೇಷವನ್ನೇ ತೊಡುವರೂ
ನಂಬಿ ನೀನು ಹೋದರಲ್ಲಿ
ಹಳ್ಳವನೇ ತೋಡುವರೂ//