ಫಾಲ್ಗುಣ ಗೌಡ ಅಚವೆ.
ನಿನ್ನ ಕೆನ್ನೆ ಹೊಳಪಿಗೆ
ಮೋಡ
ನಕ್ಕಿತು
ಬೆಳ್ಳಕ್ಕಿಗಳು
ದಂಡೆಗೆ ಬಂದು
ಪಟ್ಟಾಂಗ
ಹೊಡೆದಿವೆ.!
ಮಗು ಎದ್ದು
ನಕ್ಕಾಗ
ಬೆಳಕಾಯಿ
ದಿನವಿಡೀ ನಕ್ಕ
ಹೂ ಬಾಡಿ
ಮೊಗ್ಗಾಯಿತು
ಮಣ್ಣ ಗಂಧ
ಕುಡಿದು
ಮಿಂಚಿದೆ
ನೆಲ ಸಂಪಿಗೆ
ಬಾಡುವ
ಹಂಗಿಲ್ಲದ
ಗುಲ್ ಮೋಹರ್
ಮನಮೋಹಕ!
ನಿನ್ನ ತುಟಿಯಲ್ಲಿ
ನಕ್ಕ ಮಳೆ
ನನ್ನ ಕಣ್ಣಲ್ಲಿ
ಹೊಳೆ!
ಇಡೀ ರಾತ್ರಿ
ಮೋಡ
ನಿನ್ನ ಮನೆ
ಸುತ್ತುತ್ತಿದ
ನಿನ್ನ ಹಾಡು
ಕೇಳಲು
ಬೆಳದಿಂಗಳು
ಕಾದಿದ
ನಿನ್ನ ಹುಬ್ಬಿಗೆ
ನಾಚಿದೆ
ಮಳೆಬಿಲ್ಲು
ಮುಳ್ಳು
ಮರೆಮಾಚಿ
ಗುಲಾಬಿ
ನಿನಗೆ ಕಳಿಸಿದೆ
ಲಂಗರು
ತಗೆದ ಹಡಗು
ದಂಡೆಯಲ್ಲಿ
ಹೊರಟಿದೆ!
ಚೆಂದ ಹನಿಗಳು
ಭೂಮಿಗೆ ಬಿದ್ದ ನಕ್ಷತ್ರಗಳು….
ಥ್ಯಾಂಕ್ ಯು ಸರ್