ಕವಿತೆ
ರೇಶ್ಮಾಗುಳೇದಗುಡ್ಡಾಕರ್
ಗೆಲ್ಲ ಬೇಕಿದೆ ಕ್ಷಣ ಕ್ಷಣಕ್ಷಣಕೂ
ಹೊಸ ಅವತಾರದಿದಂದ ಮರಳುಮಾಡುವ
ಹನಿ ವಿಷಕೂ ಹೆಣದ ಹೊಳೆಹರಿಸುವ
ಅಂತರಂಗದ ಯುದ್ದವ
ನೆಡ ಬೇಕಿದ ಮಾನವೀಯತೆ ಸಸಿಯ
ಬೆಳಸಿ ಉಳಿಸ ಬೇಕಿದೆ ಮನದ
ರಹದಾರಿಯತುಂಬಾ ಪ್ರೀತಿಯ
ನೆರಳ ಪಡೆಯಲು ಬದುಕಿನಲ್ಲಿ
ಒತ್ತರಿಸಿ ಬರುವ ದುಃಖ ವ ಹತ್ತಿಕುವ
ಬದಲು ಒರೆಸುವ ನೊಂದ ಕಣ್ಣುಗಳನು
ಮರೆಯುವ ನಮ್ಮೊಡಲ ಬೇನೆಯನು
ನಿಸ್ವಾರ್ಥ ದ ತೊಡೆತಟ್ಟಿ ಆಖಾಡಕೆ
ಇಳಿಯುವ “ನಾನು “ಎಂಬ ಅಹಂ
ಗೆಲ್ಲುತ ಸಾಗುವ ಬಾಳ ಪಯಣವ
ಊರು ಯಾವುದಾದರೇನು ದಾರಿ
ಯಾವುದಾದರೇನು ನಾನು ನನ್ನೋಳ
ಗೆ ಇರುವ ನೀವು ಒಂದೇ ಅಲ್ಲವೇನು?
ನಾಲಿಗೆಯ ಬಂದೂಕು ಮಾಡಿ
ಬದುಕಿದರೆ ಮನುಷ್ಯ ತ್ವ ಉಳಿಯುವದೇನು?
***********************
ಅದ್ಭುತ