Month: April 2020

ಕಾವ್ಯಯಾನ

ಗೆರೆಗಳು ಎನ್.ಆರ್.ರೂಪಶ್ರೀ, ಬದುಕಿನ ಗೆರೆಗಳು ಒಂದೊಂದಾಗಿ ಮೂಡುತ್ತಲೇ ಹೋಗುತ್ತವೆ ಅಳಿಸಲಾಗದ ಗೆರೆಗಳು ಅಳಿಸಿದರೂ ಅಳಿಸಲಾಗದ ಗೆರೆಗಳು ಗೆರೆಗಳು ಗೆರೆಗಳಾಗಿಯೇ ಇರಬೇಕಾದ್ದು ಇರದೇ ಇರುವುದು ಗೆರೆಗಳ ನಡುನಡುವೆ ಚುಕ್ಕಿಚಿತ್ತಾರಗಳು ಜೀವನದ ಗೆರೆಗಳಲ್ಲಿ ಎಲ್ಲವೂ ಎಲ್ಲರದ್ದಾಗಿದ್ದರೂ ಯಾರದ್ದು ಯಾವುದು ಆಗಿರುವುದಿಲ್ಲ. ಗೆರೆಗಳೇ ಹಾಗೆ ಬದುಕಿನಲ್ಲಿ ಎಳೆಎಳೆಯಾಗಿ ಬಂದು ಎಳೆಯುತ್ತವೆ ಗೆರೆಗಳಿಲ್ಲದ ಬದುಕು ಬದುಕು ಅಲ್ಲ ಬದುಕಿನಲ್ಲಿ ಗೆರೆಗಳು ಇರಬೇಕೆಂದೇನಿಲ್ಲ ಬದುಕು ಬದುಕೇ ಗೆರೆಗಳು ಗೆರೆಗಳೇ ತಾನೇ. ******

ಕಾವ್ಯಯಾನ

ಬಂಧಿ ಎನಿಸಿಲ್ಲ ಬಂಧನದಲ್ಲಿ ಜಿ.ಲೋಕೇಶ್ ನಿನ್ನ ನೆನಪುಗಳಲ್ಲಿ ಬಂಧಿಯಾದ ನನಗೆ ಗೃಹ ಬಂಧನವು ಕಷ್ಟವೇನು ಅನಿಸುತ್ತಿಲ್ಲ ಏಳಿ, ಮಲಗಲು,.ನಾಲಿಗೆ ಎದೆಯ ಹೆಸರನ್ನು ಸಾರಿ ಸಾರಿ ಹೇಳುವಾಗ ಬಂಧನವು ಬಂಧಿ ಎನಿಸಿಲ್ಲ ಪ್ರತಿ ಮೂಲೆ ಮೂಲೆಯಲ್ಲಿ ನಿನ್ನೂರಿನ ನೆನಪುಗಳು ಜೊತೆಯಿರುವಾಗ ಬಂಧನವು ಬಂಧಿ ಎನಿಸಿಲ್ಲ ***** ಕೊಡಿಸಿದ ಅಷ್ಟು ವಸ್ತುಗಳು ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ ಬಂಧನವು ಬಂಧಿ ಎನಿಸಿಲ್ಲ ಎಷ್ಟೋ ಭಾವಗಳನ್ನು ಪದಗಳಲ್ಲಿ ಕವಿತೆಯಾಗಲು ಪೋಣಿಸುತಿರುವಾಗ ಬಂಧನವು ಬಂಧಿ ಎನಿಸಿಲ್ಲ ****

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-3 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಅರಿವು ವಿಸ್ತರಿಸಲಿ.. ಮನೆ ಬಾಗಿಲು ದಾಟಬೇಡಿ.. ಮನೆಯೊಳಗೇ ಸುರಕ್ಷಿತವಾಗಿರಿ ಎಂದಕೂಡಲೇ ಮನಸ್ಸು ತರಾವರಿ ಚಿಂತಿಸುತ್ತದೆ. ಇಷ್ಟಪಟ್ಟು ಸಾಲ ತೆಗೆದು, ಕಷ್ಟಬಿದ್ದು ಕಟ್ಟಿಸಿದ ನಮ್ಮ ಮನೆಯೂ ನಮಗೆಸೆರೆಮನೆಯೆನಿಸುತ್ತದೆ. ಯಾಕೆ ಹೀಗೆ? ಯಾವುದು ಬೇಡ ಎಂದು ಹೇಳುತ್ತಾರೆಯೋ ಅದನ್ನು ಮೀರುವುದು ಸಾಹಸ… ಆದರೆ ಈಗ ಅದು ದುಃಸ್ಸಾಹಸ. ವಿವೇಚನೆ ಇಲ್ಲದ ನಡೆ. ಸುರಕ್ಷಿತತೆಯ ಪ್ರಶ್ನೆ ಎದ್ದಾಗ ಅದಕ್ಕೇ ನಮ್ಮ ಮೊದಲ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ […]

ಕವಿತೆ ಕಾರ್ನರ್

ಇರುಳ ಹೊಕ್ಕುಳ ಸೀಳಿ ಸುಡುಕೆಂಡದ ಪಾದಗಳ ಮೆಲ್ಲನೂರಿ ಅಂಬೆಗಾಲಿಟ್ಟವನ ಸ್ವಾಗತಕೆ ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ ಹಸಿದ ನಾಯಿಗಳು ಊಳಿಟ್ಟು ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ ಊರೂರೇ ತೆರೆದ ಮಶಾಣದಂತೆ ಬಾಸವಾಗಲು ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ತರಾತುರಿಯಲ್ಲಿ ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ ಬೆಳಕೊಂದು ಮೂಡಿದಂತಾಗಿ ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ ಸಾಲುಗಟ್ಟಿನಿಂತ […]

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನನ್ನೆದೆಯ ಒಳಗ ನೋವು ತಂದಿರುವೆ ಹೇಳಿ ಹೋಗುಕಾರಣ ಸತ್ತ ಕನಸುಗಳ ಹೊತ್ತು ಹರದಾರಿ ನಡೆದಿರುವೆ ಹೇಳಿಹೋಗುಕಾರಣ ಜೀವ ಪ್ರೀತಿಯ ಒಡಲೊಳಗೆ ತುಂಬಿಕೊಂಡಿದ್ದೆನೆ ಗಂಜಿಯಾದರು ಕುಡಿದು ಬದುಕಿಸುವೆ ಹೇಳಿ ಹೋಗುಕಾರಣ ಸಂದುಕದಲ್ಲಿದ್ದ ಒಂಕಿ ಡಾಬು ಜೂಲ್ಪಿಹೂ ತೋಳ್ ಬಂದಿ ತೊಡಿಸಿರುವೆ ರೇಶ್ಮಿ ಇಳಕಲ್ಲ ಜರತಾರಿ ಸಿರೆ ಉಡಿಸಿರುವೆ ಹೇಳಿ ಹೋಗುಕಾರಣ ನನ್ನೊಂದಿಗೆ ಒಮ್ಮೆಯೂ ಮಾತನಾಡಲಿಲ್ಲ ಮೌನ ಮುರಿದು ನಿನ್ನೊಳಗೆ ಎನು ತುಂಬಿಕೊಂಡಿರುವೆ ಹೇಳಿ ಹೋಗುಕಾರಣ ಅನುಮಾನಗಳಿದ್ದರೆ ಬಿಡು ಅಗ್ನಿ ಪರಿಕ್ಷೆಯ ನೇಪ ಮಾತ್ರ ಬೇಡ […]

ಕಾವ್ಯಯಾನ

ಪ್ರಕೃತಿ ಆಚರಿಸುತಿದೆ ಹಬ್ಬ ಶಾಲಿನಿ ಆರ್. ಮಾನವನ ತಗ್ಗು ದಿಬ್ಬಗಳ ಲೀಲೆಗೆ, ನಲಿದಿದೆ  ಪ್ರಕೃತಿ ಈ ಸೋಜಿಗೆ, ಹಲವು ಜೀವನವ ಕಸಿದ ಕರೋನಾ, ಪ್ರಕೃತಿಗೆ ಇದುವೇ ವರವಾಯಿತೇನಾ? ಮನುಜನ ವಿಪರೀತಗಳನ್ನೆಲ್ಲ ಅಳಿಸಿ ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ, ಹಾಡುವ ಹಕ್ಕಿಗಳೆಲ್ಲ ಹಾರುತಿವೆ ಮನಸಾರೆ ಖುಷಿಯಾಗಿ, ನಭದ ನೀಲಿಯಲಿ ನೀಲವಾಗಿ, ಬೀಸುವ ತಂಪೆಲರಿಗು ಬಂದಿದೆ ಅಭಿಮಾನ, ನಾ ನಾಗಿಹೆನೆಂಬ ಸಮ್ಮಾನ, ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ, ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ ಸಡಗರಿಸುತಿಹದಂತೆ, ಪ್ರಾಣಿ […]

ಕಾವ್ಯಯಾನ

ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******

ಮಕ್ಕಳ ವಿಭಾಗ

ಗುಬ್ಬಚ್ಚಿ ಮಲಿಕಜಾನ್ ಶೇಖ್  ಒಂದು ಸುಂದರ ಕಾಡು. ಅಲ್ಲೊಂದು ಸಿಹಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿ ಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು. ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು.            ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛತೆ ಬಹಳ ಇಷ್ಟ. ಅರುಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, […]

ಕಾವ್ಯಯಾನ

ಗಝಲ್ ಕೆ.ಮಹದೇವನಾಯಕ ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ […]

Back To Top