ಗಝಲ್
ಕೆ.ಮಹದೇವನಾಯಕ
ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ
ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ
ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ
ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ
ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು
ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ
ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ
ಮನದ ಒಲುಮೆ ತೊರೆಯು ಮೊರೆದು ಸರಿ ಸರಿಗೆ ಸರಿದಿದೆ ನಗುತ
ಇದು ಇರುಳೋ ಹಗಲೋ ಕಾಡೋ ಬಾನೋ ಭುವಿಯೋ ನಾನರಿಯೇ
ನೀ ಬಂದು ಎಚ್ಚರಿಸು ‘ಪ್ರಜ್ಯೋಮ’ನ ಒಳ ಮನಸ ನಗುತ
*******